Asianet Suvarna News Asianet Suvarna News

ಈ ನಾಲ್ಕು ರಾಶಿಯವರು ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿಗಳು!

ನಮ್ಮ ನಡುವೆ ಇರುವವರ ಸ್ವಭಾವಗಳು ಬೇರೆ ಬೇರೆಯಾಗಿರುತ್ತವೆ. ಸದಾ ಖುಷಿಯಿಂದ ಇರುವವರು ಕೆಲವರಾದರೆ, ಯಾವಾಗಲೂ ಬೇಸರದಿಂದ ಮತ್ತು ಖಿನ್ನತೆಯಿಂದ ಬದುಕು ಸಾಗಿಸುವವರು ಅನೇಕರು. ಇತರರ ಏಳಿಗೆಯನ್ನು ಕಂಡು ಹೊಟ್ಟೆಕಿಚ್ಚು ಪಟ್ಟುಕೊಳ್ಳುವ ಅವರು ನಮ್ಮ ನಡುವೆಯೇ ಇರುತ್ತಾರೆ. ಶಾಸ್ತ್ರದ ಪ್ರಕಾರ ಈ ನಾಲ್ಕು ರಾಶಿಯವರಿಗೆ ಹೊಟ್ಟೆಕಿಚ್ಚು ಹೆಚ್ಚಂತೆ. ಹಾಗಾದರೆ ಆ ರಾಶಿಗಳು ಯಾವುವು? ತಿಳಿಯೋಣ...

Aries Virgo Scorpio and Aquarius Zodiac signs people have Jealous mentality
Author
Bangalore, First Published Sep 24, 2021, 4:36 PM IST
  • Facebook
  • Twitter
  • Whatsapp

ಜೀವನದಲ್ಲಿ ಯಶಸ್ಸು (Success) ಯಾರಿಗೆ ಬೇಡ ಹೇಳಿ ..? ಎಲ್ಲರಿಗೂ ಬೇಕು ಹಾಗೆ ಯಶಸ್ಸು ಬಂದಾಗ ಹಿಗ್ಗುವುದು ಸರ್ವೇಸಾಮಾನ್ಯ.  ಅದರಲ್ಲೂ ನಮ್ಮ ಜತೆಗಿರುವವರಿಗೂ ಸಂತೋಷವಾಗುವುದು ಉಂಟು. ಆದರೆ ಈ ಸಂತೋಷ (Happy) ಎಲ್ಲರಿಗೂ ಆಗುತ್ತದೆಯೇ.? ಖಂಡಿತ ಇಲ್ಲ, ಕೆಲವರಿಗೆ ಹೊಟ್ಟೆ ಕಿಚ್ಚು (Jealous) ಸಹ ಆಗತ್ತೆ. 

ಇತರರ ಯಶಸ್ಸನ್ನು ಕಂಡು ಖುಷಿ ಪಡುವ ಜನರು ಕೆಲವರಾದರೆ, ಹೊಟ್ಟೆಕಿಚ್ಚು ಪಟ್ಟುಕೊಳ್ಳುವವರು ಹಲವರು. ಯಶಸ್ಸನ್ನು ಕಂಡು ಖುಷಿಯಿಂದ ಶುಭವಾಗಲಿ ಎನ್ನುವವರ ನಡುವೆಯೇ ಅಸೂಯೆಯಿಂದ ಮನಸ್ಥಿತಿ ಕೆಡಿಸಿಕೊಳ್ಳುವವರು ಇದ್ದಾರೆ. ಇತರರ ಜೀವನದ ಏಳಿಗೆಯನ್ನು ಕಂಡು, ಅದಕ್ಕೆ ತಮ್ಮ ಜೀವನವನ್ನು ಹೋಲಿಕೆ ಮಾಡಿಕೊಂಡು ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಾರೆ. ಇಂತಹ ಮನಸ್ಥಿತಿಯಿಂದಾಗಿ ಜೀವನದಲ್ಲಿ ಅಸುರಕ್ಷಿತ ಭಾವನೆ ಮತ್ತು ಅಸಂತೋಷ ಕಾಡುತ್ತದೆ.

ಇದನ್ನು ಓದಿ: ಹಸ್ತಾ, ಚಿತ್ತಾ, ಸ್ವಾತಿ, ವಿಶಾಖಾ ಮತ್ತು ಅನುರಾಧ ನಕ್ಷತ್ರದಲ್ಲಿ ಜನಿಸಿದವರ ಗುಣ ಹೇಗಿರುತ್ತೆ?

ಈ ಹೊಟ್ಟೆಕಿಚ್ಚಿನ ಮನೋಭಾವ ಹೇಗೆ ಬರುತ್ತದೆ? ಬೆಳೆದು ಬಂದ ವಾತಾವರಣದಿಂದಲೂ ಬರಬಹುದು. ಆದರೆ ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಆ ವ್ಯಕ್ತಿಯ ಹುಟ್ಟಿದ ಘಳಿಗೆಯ ಆಧಾರದಲ್ಲೇ ಬರುವ ರಾಶಿ ನಕ್ಷತ್ರಗಳ (Zodiac Signs) ಅನುಸಾರವಾಗಿಯೂ ಇಂಥ ಮನೋಭಾವನೆಗಳು ಉಂಟಾಗುತ್ತವೆ. 

ಎಂಥವರಿಗಾದರೂ ಸಹ ಸಣ್ಣ ಮಟ್ಟಿನ ಹೊಟ್ಟೆಕಿಚ್ಚು ಉಂಟಾಗುವುದು ಸಹಜ. ಆದರೆ ಪ್ರಮುಖವಾಗಿ ಈ ನಾಲ್ಕು ರಾಶಿಯವರಿಗೆ ಅತಿಯಾದ ಹೊಟ್ಟೆಕಿಚ್ಚು ಎಂದು ಹೇಳಲಾಗುತ್ತದೆ. ಹಾಗಾಗಿ ಇವರನ್ನು ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿಗಳೆಂತಲೂ ಕರೆಯಬಹುದು. 

ಈ ಹೊಟ್ಟೆಕಿಚ್ಚು ಹೊಂದಿರುವ ರಾಶಿಯವರು ಯಾರ್ಯಾರು? ಅವರು ಯಾವ ಕಾರಣಕ್ಕಾಗಿ ಹೊಟ್ಟೆಕಿಚ್ಚನ್ನು ಕೊಡುತ್ತಾರೆ ಎಂಬ ಬಗ್ಗೆ ನೋಡೋಣ ...

ಇದನ್ನು ಓದಿ: ಈ ನಾಲ್ಕು ರಾಶಿಯವರು ಮಿತವ್ಯಯಿಗಳು..

ಮೇಷ ರಾಶಿ 
ಮೇಷ ರಾಶಿಯ (Aries) ವ್ಯಕ್ತಿಗಳು ಪೈಪೋಟಿಯನ್ನು ಇಷ್ಟಪಡುವ ಸ್ವಭಾವದವರು. ಈ ರಾಶಿಯವರಿಗೆ ಸ್ಪರ್ಧಿಸಿರುವುದು ಗೆಲುವು ಸಾಧಿಸುವುದು ಎಂದರೆ ಬಹುಪ್ರೀತಿ. ಹೆಚ್ಚಿನ ಆತ್ಮವಿಶ್ವಾಸವನ್ನು ಹೊಂದಿರುವ ಈ ವ್ಯಕ್ತಿಗಳಿಗೆ ಇತರರು ಯಶಸ್ಸನ್ನು ಗಳಿಸಿದರೆ ಹೆಚ್ಚಿನ ಸಂತೋಷ ಆಗುವುದಿಲ್ಲ. ಎಲ್ಲರಿಗಿಂತ ಮೊದಲು ಗೆಲ್ಲಬೇಕು ಎಂಬ ಆಶಯ ಇವರಿಗಿರುತ್ತದೆ. ಅದೇ ಯಶಸ್ಸನ್ನು ಇತರರು ಸಾಧಿಸಿದಾಗ ಇವರಿಗೆ ಅಸೂಯೆ ಭಾವನೆ ಮೂಡುತ್ತದೆ. 

ಕನ್ಯಾ ರಾಶಿ 
ಕನ್ಯಾ ರಾಶಿಯವರನ್ನು (Libra) ವಿಚಿತ್ರವಾದ ಸ್ವಭಾವ. ಇತರರು ಯಶಸ್ವಿಯಾದರೆ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಂತ ಅದರ ಬಗ್ಗೆ ಯೋಚಿಸದೆ ಸುಮ್ಮನಿರುವುದೂ ಇಲ್ಲ. ಅವರನ್ನು ಹಿಂದಿಕ್ಕುವ ಬಗ್ಗೆ ಯೋಜನೆ ರೂಪಿಸುತ್ತಾರೆ. ಅದು ಸಾಧ್ಯವಾಗದಿದ್ದ ಪಕ್ಷದಲ್ಲಿ ಯಶಸ್ಸು ಗಳಿಸಿದವರ ಮನಸ್ಸು ನೋಯಿಸಲು ಪ್ರಯತ್ನಿಸುತ್ತಾರೆ. ಅವರ ಜೀವನದ ಬಗ್ಗೆ ಅವರಿಗೆ ಜಿಗುಪ್ಸೆ ಮೂಡುವಂತೆ ಮಾಡುವುದು ಈ ರಾಶಿಯವರ ಸ್ವಭಾವವಾಗಿರುತ್ತದೆ. ಈ ರೀತಿ ತಮ್ಮ ಅಸೂಯೆಯನ್ನು ವ್ಯಕ್ತಪಡಿಸುತ್ತಾರೆ. 
Aries Virgo Scorpio and Aquarius Zodiac signs people have Jealous mentality

ವೃಶ್ಚಿಕ ರಾಶಿ 
ಈ ರಾಶಿಯ ವ್ಯಕ್ತಿಗಳು ಇತರರ ಸಂತೋಷವನ್ನು ಕಂಡು ಖುಷಿಪಡುವ ಮನಸ್ಥಿತಿಯನ್ನು ಹೊಂದಿರುವುದಿಲ್ಲ. ತಾವು ಮಾತ್ರ ಖುಷಿಯಾಗಿರಬೇಕು ಎಂಬ ಸ್ವಾರ್ಥ ಮನೋಭಾವವನ್ನು ಈ ರಾಶಿಯವರು ಹೊಂದಿರುತ್ತಾರೆ. ಅದಕ್ಕೆ ತಕ್ಕಂತೆ ಐಷಾರಾಮಿಯಾಗಿ ಜೀವಿಸಲು ಬಯಸುತ್ತಾರೆ. ಇತರರು ಹಾಗೆ ಜೀವನ ನಡೆಸುವುದನ್ನು ಕಂಡು ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಾರೆ. ಬೇರೆ ವ್ಯಕ್ತಿಗಳು ಏನನ್ನಾದರು ಸಾಧಿಸಿದಾಗ ಅಥವಾ ಒಳ್ಳೆಯದಾದಾಗ ವೃಶ್ಚಿಕ ರಾಶಿ (Scorpio)ಯ ವ್ಯಕ್ತಿಗಳು ಸಹಿಸುವುದಿಲ್ಲ. ತಮಗೆ ಸಿಗದ  ಯಶಸ್ಸು ಬೇರೆಯವರಿಗೆ ಲಭಿಸಿದಾಗ ಅದನ್ನು ಕಂಡು ಮರುಗುವುದು ಮತ್ತು ಅಸೂಯೆ ಪಡುವುದು ಇವರ ಸ್ವಭಾವವಾಗಿರುತ್ತದೆ. ಅಷ್ಟೇ  ಅಲ್ಲದೆ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ ಮತ್ತು ಅಸೂಯೆಯ ಅಸಮಾಧಾನವನ್ನು ಅವರಿಗೆ ತಿಳಿಯುವಂತೆ ಹೊರಹಾಕುತ್ತಾರೆ.

ಇದನ್ನು ಓದಿ: ಈ ಮೂರು ರಾಶಿಯವರಿಗೆ ಕಷ್ಟದ ಕೆಲಸ ಇಷ್ಟವಿಲ್ಲ!!!

ಕುಂಭ ರಾಶಿ 
ಕುಂಭ ರಾಶಿಯ(Aquarius) ವ್ಯಕ್ತಿಗಳು ಇತರರ ಕೆಲಸದಲ್ಲಿ ಮೂಗು ತೂರಿಸುವುದಿಲ್ಲ. ತಮಗೆ ಗೆಲುವು ಸಿಗುವವರೆಗೆ ಇತರರ ಬಗ್ಗೆ ಯೋಚಿಸುವುದಿಲ್ಲ. ಯಶಸ್ಸು ಲಭಿಸದಿದ್ದಲ್ಲಿ ಜೀವನದ ಬಗ್ಗೆ ಅಸುರಕ್ಷಿತ ಭಾವನೆ (Insecur Feeling)ಯನ್ನು ಹೊಂದಿರುತ್ತಾರೆ. ಹಾಗೆಯೇ ಇತರರ ಯಶಸ್ಸು ಕಂಡು ಅಸೂಯೆಯನ್ನು ಪಡುತ್ತಾರೆ. ಇತರರ ಜೀವನಕ್ಕೆ ಹೋಲಿಕೆ ಮಾಡಿಕೊಂಡು ಇನ್ನಷ್ಟು ಖಿನ್ನರಾಗುತ್ತಾರೆ. 

Follow Us:
Download App:
  • android
  • ios