Asianet Suvarna News Asianet Suvarna News

Janmashtami 2022 : ಜನ್ಮಾಷ್ಟಮಿಯಂದು ತಾಯಿ ಲಕ್ಷ್ಮಿಯನ್ನು ಒಲಿಸಿಕೊಳ್ಳೋದು ಹೇಗೆ?

ಜನ್ಮಾಷ್ಟಮಿಯ ಸಂಭ್ರಮ ಎಲ್ಲೆಡೆ ಮನೆ ಮಾಡ್ತಿದೆ. ಕೃಷ್ಣನ ಆರಾಧನೆಗೆ ತಯಾರಿ ಜೋರಾಗಿ ನಡೆದಿದೆ. ಬಾಲ ಗೋಪಾಲನಿಗೆ ಬೆಣ್ಣೆ ಅರ್ಪಿಸುವ ಮೂಲಕ ಕೃಷ್ಣಾಷ್ಟಮಿ ಆಚರಣೆ ಮಾಡೋದು ವಿಶೇಷ. ಈ ಸಂದರ್ಭದಲ್ಲಿ ತಾಯಿ ಲಕ್ಷ್ಮಿ ಪೂಜೆ ಮಾಡಿದ್ರೆ ಮತ್ತಷ್ಟು ಸುಖ, ಸಂಪತ್ತು ಪ್ರಾಪ್ತಿಯಾಗುತ್ತದೆ.
 

Janmashtami Vrat 2022 how to please goddess lakshmi on krishna festival
Author
Bangalore, First Published Aug 17, 2022, 3:58 PM IST

 ಕೃಷ್ಣ ಜನ್ಮಾಷ್ಟಮಿಯನ್ನು ಈ ಬಾರಿ ಆಗಸ್ಟ್ 18 ರಂದು ಆಚರಿಸಲಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಗಾಗಿ ಮಥುರಾ-ವೃಂದಾವನ ಸೇರಿದಂತೆ ಭಾರತದ ಪ್ರತಿ ಮನೆಗಳಲ್ಲೂ ಸಿದ್ಧತೆಗಳು ನಡೆಯುತ್ತಿವೆ. ಶ್ರೀಕೃಷ್ಣನ ಆಶೀರ್ವಾದ ಪಡೆಯಲು ಜನ್ಮಾಷ್ಟಮಿಯ ದಿನದಂದು ಉಪವಾಸವನ್ನು ಆಚರಿಸಲಾಗುತ್ತದೆ. ಈ ಉಪವಾಸವನ್ನು ಇತರ ಉಪವಾಸಗಳಿಗಿಂತ ಹೆಚ್ಚು ಕಷ್ಟಕರವೆಂದು ಪರಿಗಣಿಸಲಾಗಿದೆ. ಈ ದಿನದಂದು ಬಾಲ ಕೃಷ್ಣನನ್ನು ಪೂಜಿಸಲಾಗುತ್ತದೆ. ಜೊತೆಗೆ  ತಾಯಿ ಲಕ್ಷ್ಮಿಯನ್ನು ಪೂಜಿಸುವ ಪದ್ಧತಿಯಿದೆ. ನೀವು ಜನ್ಮಾಷ್ಟಮಿ ಆಚರಣೆ ಮಾಡ್ತಿದ್ದರೆ ಬಾಲ ಗೋಪಾಲನ ಆರಾಧನೆ ಜೊತೆಗೆ ತಾಯಿ ಲಕ್ಷ್ಮಿಯನ್ನು ಪೂಜೆ ಮಾಡಿ. ಜನ್ಮಾಷ್ಟಮಿಯಂದು ಲಕ್ಷ್ಮಿ ದೇವಿಯನ್ನು ಪ್ರಸನ್ನಗೊಳಿಸಬೇಕಾದ ಯಾವ ನಿಯಮಗಳನ್ನು ಪಾಲನೆ ಮಾಡ್ಬೇಕು ಎಂಬುದರ ವಿವರ ಇಲ್ಲಿದೆ. 

ಕೃಷ್ಣ (Krishna)ನ ವಿಷ್ಣು (Vishnu) ವಿನ ಅವತಾರಕ್ಕೆ ಮಾಡಿ ಪೂಜೆ (Worship) : ಶ್ರೀಕೃಷ್ಣನನ್ನು ವಿಷ್ಣುವಿನ ಮಾನವ ಅವತಾರವೆಂದು ಪರಿಗಣಿಸಲಾಗಿದೆ. ಹಾಗಿರುವಾಗ ಜನ್ಮಾಷ್ಟಮಿಯಂದು ವಿಶೇಷವಾದ ಪುಣ್ಯವನ್ನು ಪಡೆಯಲು ನೀವು ಬಯಸಿದರೆ  ಆ ದಿನ ಭಗವಂತ ವಿಷ್ಣುವನ್ನು ಪೂಜಿಸಬೇಕು. ವಿಷ್ಣುವಿಗೆ ಎಳ್ಳನ್ನು ಅರ್ಪಿಸಬೇಕು. ಮಧ್ಯಾಹ್ನ ಎಳ್ಳನ್ನು ನೀರಿನಲ್ಲಿ ಬೆರೆಸಿ ನಂತರ ಆ ನೀರಿನಲ್ಲಿ ಸ್ನಾನ (Bath)  ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. ಕಂಸನ ಸೆರೆಮನೆಯಲ್ಲಿ ಬಂಧಿಯಾಗಿದ್ದ ತಾಯಿ ದೇವಕಿಗೆ ಮಧ್ಯಾಹ್ನದ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತು ಮತ್ತು ರಾತ್ರಿ ಶ್ರೀ ಕೃಷ್ಣನ ಜನನವಾಗಿತ್ತು ಎಂದು ನಂಬಲಾಗಿದೆ. ಆದ್ದರಿಂದ ಮಧ್ಯಾಹ್ನ ಎಳ್ಳಿನ ನೀರಿನಿಂದ ಸ್ನಾನ ಮಾಡುವುದರಿಂದ ವಿಶೇಷ ಲಾಭ ದೊರೆಯುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. 

ಜನ್ಮಾಷ್ಟಮಿಯಂದು ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ : 
ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರೀ ಕೃಷ್ಣ ಜನ್ಮಾಷ್ಟಮಿಯಂದು  ನೀವು ಬ್ರಹ್ಮ ಮುಹೂರ್ತದಲ್ಲಿ ಅಂದರೆ ಬೆಳಿಗ್ಗೆ 4 ಗಂಟೆಗೆ ಏಳಬೇಕು ಮತ್ತು ನಿತ್ಯ ಕರ್ಮಗಳನ್ನು ಮುಗಿಸಿದ ನಂತ್ರ ಸ್ನಾನ ಮಾಡಬೇಕು.  ಗಂಗಾಜಲ ಮತ್ತು  ತುಳತಿ ಎಲೆಗಳನ್ನು ಕೈಯಲ್ಲಿ ಹಿಡಿದುಕೊಂಡು ದೇವರಿಗೆ ಕ್ಷಮೆ ಕೇಳಬೇಕು. ಹಗಲಿನಲ್ಲಿ ಜನ್ಮಾಷ್ಟಮಿ ಉಪವಾಸದ ಸಮಯದಲ್ಲಿ ಯಾವುದೇ ತಪ್ಪು ಸಂಭವಿಸಿದರೆ ಕ್ಷಮಿಸು ಎಂದು  ಮುಂಚಿತವಾಗಿಯೇ  ದೇವರಲ್ಲಿ ಕ್ಷಮೆಯಾಚಿಸಬೇಕು.

JANMASHTAMI 2022: ಸಂಪತ್ತು, ಸಮೃದ್ಧಿಗಾಗಿ ಈ ದಿನ ಮನೆಗೆ ತರಲೇಬೇಕಾದ ವಸ್ತುಗಳಿವು..

ಜನ್ಮಾಷ್ಟಮಿ ಉಪವಾಸ : ಮೊದಲೇ ಹೇಳಿದಂತೆ ಜನ್ಮಾಷ್ಟಮಿ ಉಪವಾಸ ಮಾಡುವುದು ಸ್ವಲ್ಪ ಕಠಿಣ. ಯಾಕೆಂದ್ರೆ ಜನ್ಮಾಷ್ಟಮಿಯ ಉಪವಾಸವು 24 ಗಂಟೆಗಳ ಕಾಲ ಇರುತ್ತದೆ. ಈ ಬಾರಿ ಆಗಸ್ಟ್ 17ರ ರಾತ್ರಿ 12 ಗಂಟೆಗೆ ಈ ವ್ರತ ಆರಂಭವಾಗಲಿದ್ದು, ಆಗಸ್ಟ್ 18ರ ರಾತ್ರಿ ಚಂದ್ರದರ್ಶನದ ನಂತರ ಉದ್ಯಾಪನವಾಗಲಿದೆ. ಕಠಿಣ ವೃತ ಪಾಲನೆ ಮಾಡುವವರು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಏನನ್ನೂ ತಿನ್ನಬಾರದು ಮತ್ತು ಕುಡಿಯಬಾರದು. 

ಕೃಷ್ಣನಿಗೆ ತುಳಸಿ ಎಲೆ ಅರ್ಪಿಸಿ : ಜನ್ಮಾಷ್ಟಮಿ ಹಬ್ಬವು ಭಗವಂತ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಸಂತೋಷಪಡಿಸುವ ಉತ್ತಮ ಸಂದರ್ಭವೆಂದು ಪರಿಗಣಿಸಲಾಗಿದೆ. ಏಕೆಂದರೆ ತಾಯಿ ಲಕ್ಷ್ಮಿಗೆ ತುಳಸಿ ತುಂಬಾ ಪ್ರಿಯ. ಹಾಗಾಗಿ ತುಳಸಿಗೆ ಮಹತ್ವದ ಸ್ಥಾನವಿದೆ. ರಾತ್ರಿ ಉಪವಾಸವನ್ನು ಮುರಿಯುವಾಗ , ಕೃಷ್ಣನಿಗೆ ನೈವೇದ್ಯ ಅರ್ಪಿಸುವಾಗ ಅದರ ಮೇಲೆ ತುಳಸಿ ಎಲೆ ಇಡಬೇಕು. 

Vastu Tips : ಸಣ್ಣ ಕೊಳಲು ಬದಲಿಸುತ್ತೆ ನಿಮ್ಮ ಅದೃಷ್ಟ

ವಿಷ್ಣು  ಮತ್ತು ತಾಯಿ ಲಕ್ಷ್ಮಿ ಪೂಜೆ : ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಜನ್ಮಾಷ್ಟಮಿಯಂದು ಬಾಲ ಕೃಷ್ಣನ  ರೂಪದೊಂದಿಗೆ ಪೂಜಿಸಬೇಕು. ಕಮಲದ ಹೂವುಗಳು ವಿಷ್ಣುವಿಗೆ ಬಹಳ ಪ್ರಿಯವೆಂದು ನಂಬಲಾಗಿದೆ. ಆದ್ದರಿಂದ  ಮನೆಯ ಬಾಗಿಲುಗಳನ್ನು ಕಮಲದ ಹೂವುಗಳಿಂದ ಅಲಂಕರಿಸಬೇಕು ಮತ್ತು  ಪೂಜೆಯಲ್ಲೂ  ಈ ಹೂವುಗಳನ್ನು ಅರ್ಪಿಸಬೇಕು. ಇದ್ರಿಂದ ವಿಷ್ಣು ಮತ್ತು ತಾಯಿ ಲಕ್ಷ್ಮಿ ಸಂತುಷ್ಟರಾಗುತ್ತಾರೆ ಮತ್ತು ಭಕ್ತರ ಮನೆಯನ್ನು ಸದಾ ನೆಲೆಸ್ತಾರೆ ಎಂದು ನಂಬಲಾಗಿದೆ. 
 

Follow Us:
Download App:
  • android
  • ios