Asianet Suvarna News Asianet Suvarna News

Baby born in pitru paksh: ಪಿತೃ ಪಕ್ಷದಲ್ಲಿ ಮಗು ಹುಟ್ಟಿದ್ರೆ ಕೆಟ್ಟದ್ದಾ?

ಪಿತೃ ಪಕ್ಷ ಎಂದರೆ ಸತ್ತವರ ಸ್ಮರಣೆಯಲ್ಲಿ ಕಳೆವ 15 ದಿನಗಳಾಗಿವೆ. ಹಲವರಿಗೆ ಈ ಸಮಯ ಆತ್ಮಗಳ ಸಂಚಾರ ಹೆಚ್ಚಾದ್ದರಿಂದ ಈ ಸಮಯದಲ್ಲಿ ಮಗು ಜನಿಸಿದರೆ ಹೇಗೋ ಏನೋ ಎಂಬ ಆತಂಕ ಇರುತ್ತದೆ.  ಪಿತೃಪಕ್ಷದಲ್ಲಿ ಮಗು ಹುಟ್ಟಿದರೆ ಮಗುವಿನ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದೇ ಕೆಟ್ಟದ್ದೇ?

Is it good to have a baby in the month of Pitru Paksha skr
Author
First Published Sep 15, 2022, 3:36 PM IST

ಪಿತೃ ಪಕ್ಷವು ಸೆಪ್ಟೆಂಬರ್ 10 ರಿಂದ ಪ್ರಾರಂಭವಾಗಿದೆ ಅದು ಸೆಪ್ಟೆಂಬರ್ 25ರಂದು ಕೊನೆಗೊಳ್ಳುತ್ತದೆ. ಪಿತೃ ಪಕ್ಷದ ಮಾಸದಲ್ಲಿ ಜನರು ಪೂರ್ವಜರಿಗೆ ಶ್ರಾದ್ಧ, ತರ್ಪಣ, ಪಿಂಡದಾನ ಇತ್ಯಾದಿಗಳನ್ನು ಮಾಡುತ್ತಾರೆ. 15 ದಿನಗಳ ಪಿತೃ ಪಕ್ಷದಲ್ಲಿ ಜನರು ತಮ್ಮ ಪೂರ್ವಜರನ್ನು ಮೆಚ್ಚಿಸಲು ಬಡವರಿಗೆ, ಹಸುಗಳಿಗೆ, ಪಕ್ಷಿಗಳಿಗೆ ಮತ್ತು ನಾಯಿಗಳಿಗೆ ಆಹಾರವನ್ನು ನೀಡುತ್ತಾರೆ. ಈ ಸಮಯದಲ್ಲಿ, ಜನರು ಪೂರ್ವಜರನ್ನು ಸ್ಮರಿಸುತ್ತಾ ಕಾಲ ಕಳೆಯುತ್ತಾರೆ. ಪಿತೃ ಪಕ್ಷದಲ್ಲಿ ಜನರು ಮದುವೆ, ಮುಂಜಿ, ನಾಮಕರಣ ಇತ್ಯಾದಿಗಳನ್ನು ಮಾಡುವುದಿಲ್ಲ. ಹಾಗೆ ಮಾಡುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಪಿತೃ ಪಕ್ಷದಲ್ಲಿ ಪೂರ್ವಜರು ತಮ್ಮ ಮನೆಗೆ ಬರುತ್ತಾರೆ ಎಂಬುದು ಜನರ ನಂಬಿಕೆ. ಪೂರ್ವಜರು ಎಂದರೆ ಆತ್ಮಗಳು. ಬಹಳಷ್ಟು ಜನರಿಗೆ ಈ ಸಮಯವೆಂದರೆ ಭಯ ಹಾಗೂ ಭಕ್ತಿ ಕೂಡಾ. ಹಾಗಾಗಿ, ಈ ಸಮಯದಲ್ಲಿ ಸಂತಾನ ಪ್ರಾಪ್ತಿಯಾಗುವುದು ಒಳ್ಳೆಯದಲ್ಲ, ಅಶುಭ ಎಂದು ಕೆಲವರು ಪರಿಗಣಿಸುತ್ತಾರೆ. ಹಾಗಾಗಿ ಮಗುವಿನ ಜನನ ದಿನಾಂಕ ಈ ದಿನಗಳಲ್ಲಿದ್ದರೆ ಕೆಲವರು ಆತಂಕಗೊಳ್ಳುತ್ತಾರೆ. ಈ ತಿಂಗಳಲ್ಲಿ ಮಗು ಜನಿಸಿದರೆ ಅದು ಒಳ್ಳೆಯದಾ ಎಂಬ ಪ್ರಶ್ನೆಗಳು ಹಲವರನ್ನು ಕಾಡುತ್ತದೆ. ಈ ಬಗ್ಗೆ ಸರಿಯಾಗಿ ತಿಳಿಸುತ್ತೇವೆ ಕೇಳಿ..

ಮಗುವಿನ ಜನನವು ಶುಭವೋ ಅಶುಭವೋ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಿತೃ ಪಕ್ಷ ಮಾಸದಲ್ಲಿ ಮಕ್ಕಳು ಹುಟ್ಟುವುದು ತುಂಬಾ ಶುಭಕರ(Auspecious). ಜ್ಯೋತಿಷ್ಯದ ಪ್ರಕಾರ, ಈ ಮಗುವಿನ ಸ್ವಭಾವವು ತುಂಬಾ ಸೃಜನಶೀಲವಾಗಿರುತ್ತದೆ. ಅವರು ತಮ್ಮ ಸೃಜನಶೀಲತೆ(creativity)ಯ ಮೂಲಕ ಸಾಕಷ್ಟು ಖ್ಯಾತಿಯನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಜನಿಸಿದ ಮಗು ಪೂರ್ವಜರಿಂದ ಸಾಕಷ್ಟು ಆಶೀರ್ವಾದವನ್ನು ಪಡೆಯುತ್ತದೆ. ಅಂತಹ ಮಕ್ಕಳು ಕುಟುಂಬಕ್ಕೆ ತುಂಬಾ ಮಂಗಳಕರವೆಂದು ಸಾಬೀತುಪಡಿಸುತ್ತಾರೆ.

ಮಹಾಲಯದಲ್ಲಿ ಮನೆಗೆ ಬರ್ತಾರೆ ಪೂರ್ವಜರು!

ಪಿತೃಪಕ್ಷ ಮಾಸದಲ್ಲಿ ಪೂರ್ವಜರು(Ancestors) ತಮ್ಮ ಮನೆಗೆ ಬರುತ್ತಾರೆ ಎಂಬುದು ಜನರ ನಂಬಿಕೆ. ಹಸು, ನಾಯಿ, ಬೆಕ್ಕು, ಕಾಗೆ ಮುಂತಾದ ಯಾವುದೇ ರೂಪದಲ್ಲಿ ಪೂರ್ವಜರು ತಮ್ಮ ಕುಟುಂಬವನ್ನು ಭೇಟಿಯಾಗಲು ಬರಬಹುದು ಎಂದು ನಂಬಲಾಗಿದೆ. ಆದ್ದರಿಂದ, ಪಿತೃ ಪಕ್ಷದ ಮಾಸದಲ್ಲಿ, ಜನರು ತಮ್ಮ ಮನೆಯಿಂದ ಯಾರನ್ನೂ ಖಾಲಿ ಕೈಯಲ್ಲಿ ಹಿಂದಿರುಗಿಸುವುದಿಲ್ಲ. ಈ ಕಾರಣಕ್ಕಾಗಿ ಪಿತೃ ಪಕ್ಷ ಮಾಸದಲ್ಲಿ ಮನೆಯ ಸುಖ-ಸಮೃದ್ಧಿಗಾಗಿ ಪಿಂಡದಾನ, ಶ್ರಾದ್ಧ ಇತ್ಯಾದಿಗಳನ್ನು ಮಾಡುತ್ತಾರೆ.

ಹಿರಿಯರ ಆಶೀರ್ವಾದ(Blessings of Ancestors)
ಸಾಮಾನ್ಯವಾಗಿ ಮಕ್ಕಳು ಜನಿಸಿದಾಗ ಆ ಮಗುವಿನ ಪೋಷಕರು ತಮ್ಮ ಪೋಷಕರು, ಅಜ್ಜಅಜ್ಜಿಯರ ಆಶೀರ್ವಾದ ಆ ಮಗುವಿನ ಮೇಲಿರಲೆಂದು ಬೇಡಿಕೊಳ್ಳುತ್ತಾರೆ. ಅವರು ಭೂಲೋಕದಲ್ಲಿ ಇಲ್ಲದಿದ್ದರೂ ಕೂಡಾ ಅವರ ಪೋಟೋದ ಮುಂದೆ ನಿಂತು ಮಗುವನ್ನು ಕಾಯುವಂತೆ ಕೇಳಿಕೊಳ್ಳುತ್ತಾರೆ. ಇನ್ನು ಪಿತೃಪಕ್ಷದಲ್ಲಿ ಪೂರ್ವಜರು ಮನೆಗೆಯೇ ಬಂದು ತಮ್ಮ ನಂತರದ ತಲೆಮಾರಿನವರು ಹೇಗಿದ್ದಾರೆ, ಅವರು ತಮ್ಮನ್ನು ಸ್ಮರಿಸುತ್ತಾರೆಯೇ, ಕುಟುಂಬಕ್ಕೆ ತಮ್ಮ ಶ್ರಮಕ್ಕಾಗಿ ಕೃತಜ್ಞರಾಗಿದ್ದಾರೆಯೇ ಎಂದೆಲ್ಲ ನೋಡುತ್ತಾರೆ. ಇಂಥ ಸಂದರ್ಭದಲ್ಲಿ ಕುಟುಂಬದಲ್ಲಿ ಹೊಸ ಸಂತತಿ ಇದೆ ಎಂದರೆ ಅವರು ಬಹಳ ಖುಷಿ ಪಡುತ್ತಾರೆ. ತಮ್ಮ ತಲೆಮಾರು ಬೆಳೆಯುತ್ತಿರುವುದು ಅವರ ಸಂತಸವನ್ನು ಇಮ್ಮಡಿಯಾಗಿಸುತ್ತದೆ. ಅವರು ಆ ಮಗುವಿಗೆ ಆಶೀರ್ವಾದ ನೀಡಿ ಹರಸುತ್ತಾರೆ. ಇದರಿಂದಾಗಿ ಹುಟ್ಟಿದ ಮಗು ಸದಾ ಸಂತೋಷದಿಂದಿರುತ್ತದೆ. ಹೆಚ್ಚು ಬುದ್ಧಿವಂತಿಕೆಯಿಂದಲೂ, ಸೃಜನಶೀಲತೆಯಿಂದಲೂ ಕೂಡಿರುತ್ತದೆ.

Vivah Muhurat 2022: ಈ ವರ್ಷ ಮದುವೆಗೆ ಪ್ರಶಸ್ತ ಮುಹೂರ್ತಗಳು ಯಾವಾಗಿವೆ?

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios