Asianet Suvarna News Asianet Suvarna News

ಮಲಯಾಳಂನ 51 ವರ್ಣಮಾಲೆಯಿಂದ 51 ದೇವತೆಗಳಿಗೆ ಹೆಸರಿಟ್ಟ ದೇವಾಲಯ!

ಕೇರಳದ ತಿರುವನಂತಪುರಂ ಜಿಲ್ಲೆಯ ವಿಝಿಂಜಮ್‌ನಲ್ಲೊಂದು ವಿಶಿಷ್ಠ ದೇವಾಲಯವಿದೆ. ಇಲ್ಲಿ ಮಲೆಯಾಳಂನ 51 ವರ್ಣಮಾಲೆಗಳನ್ನು ಬಳಸಿಕೊಂಡು 51 ದೇವತೆಗಳ ವಿಗ್ರಹಗಳನ್ನು ರಚಿಸಿ, ಪ್ರತಿಷ್ಠಾಪಿಸಲಾಗಿದೆ.

Indias first temple of 51 goddesses named after 51 Malayalam alphabets in Kerala skr
Author
Bangalore, First Published Jun 4, 2022, 1:27 PM IST

ಒಂದೇ ದೇವಾಲಯದಲ್ಲಿ 50-100 ದೇವತೆಗಳಿರುವುದು ಭಾರತದಲ್ಲಿ ವಿಶೇಷತೆಯಲ್ಲ. ಆದರೆ, ಈ ದೇವಾಲಯದ ವಿಶೇಷತೆ ಎಂದರೆ, ಇಲ್ಲಿನ 51 ದೇವತೆಗಳಿಗೆ ಮಲೆಯಾಳಂನ 51 ವರ್ಣಮಾಲೆಗಳಿಂದ ಹೆಸರನ್ನಿಡಲಾಗಿದೆ. ಕೇರಳದ ತಿರುವನಂತಪುರಂನ ವಿಝಿಂಜಮ್‌ನಲ್ಲಿರುವ ಪೌರ್ಣಮಿಕಾವು ದೇವಾಲಯ(Pournamikavu Temple)ದಲ್ಲಿ 51 ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. 

ಭಾಷೆ ಯಾವುದೇ ಆಗಿರಲಿ, ವೇದಗಳ ಪ್ರಕಾರ, ಅಕ್ಷರಗಳಿಗೆ ವಿಶೇಷ ಶಕ್ತಿಗಳಿವೆ. ಅಕ್ಷರಗಳ ಶಕ್ತಿಯನ್ನು ಅರಿತು, ಪ್ರತಿ ಮಲಯಾಳಂ ವರ್ಣಮಾಲೆ(alphabets)ಯ ಹಿಂದಿನ ದೇವತೆಗಳನ್ನು ಋಗ್ವೇದ, ಶಿವ ಸಂಹಿತೆ, ದೇವಿ ಭಾಗವತಂ, ಹರಿ ನಾಮ ಕೀರ್ತನಂ ಮತ್ತು ಆದಿ ಶಂಕರರ ಕೃತಿಗಳು ಸೇರಿದಂತೆ ವೈದಿಕ ಗ್ರಂಥಗಳಿಂದ ಕಂಡುಕೊಳ್ಳಲಾಗಿದೆ. ದೇವತೆಗಳ ಅಂತಿಮ ರೂಪವನ್ನು ನಿರ್ಧರಿಸುವ ಮೊದಲು, ತಜ್ಞರು ದಶಕಗಳ ಕಾಲ ಸಂಶೋಧನೆ ಮತ್ತು ಚರ್ಚೆಗಳನ್ನು ನಡೆಸಿ, ವರ್ಣಮಾಲೆಗಳು ಮತ್ತು ಪದಗಳ ಶಕ್ತಿಯನ್ನು ಅರಿತುಕೊಂಡು, ಅದನ್ನು ಅನ್ವಯಿಸಿ ಇಲ್ಲಿನ ದೇವತೆಗಳ(deities) ವಿಗ್ರಹಗಳನ್ನು ತಯಾರಿಸಲಾಗಿದೆ. 

ಪಾಶ್ಚಿಮಾತ್ಯ ದೇಶಗಳಲ್ಲಿನ ಆಧುನಿಕ ಶ್ರೇಷ್ಠತೆಗಳ ಕೇಂದ್ರಗಳು ಮತ್ತು ಪ್ರಸಿದ್ಧ ವಿಶ್ವವಿದ್ಯಾಲಯಗಳು ಸಹ ಮಂತ್ರಗಳ ಶಕ್ತಿಯನ್ನು ಅಧ್ಯಯನ ಮಾಡಿ ವಿಶ್ಲೇಷಿಸಿವೆ. ಅಂತೆಯೇ ಇಲ್ಲಿ ಶಿಲ್ಪಿಗಳು ಮತ್ತು ಸಂಶೋಧಕರು ಸಹ ಸಂಶೋಧನಾ ಅಧ್ಯಯನಗಳ ಮೂಲಕ ಈ ಮಲಯಾಳಂ ಅಕ್ಷರಗಳ ಹಿಂದಿರುವ ಎಲ್ಲ 'ಸ್ತ್ರೀಲಿಂಗ' ದೇವರನ್ನು ಗುರುತಿಸಿದರು. ನಂತರ 51 ಮಲಯಾಳಂ ವರ್ಣಮಾಲೆಗಳಿಗೆ 51 ದೇವತೆಗಳನ್ನು ಗುರುತಿಸಿದರು. ನಂತರ ಮೈಲಾಡಿಯ ಮಹಾನ್ ಶಿಲ್ಪಿಗಳು ಕಲ್ಲಿನ ಶಿಲ್ಪದಲ್ಲಿ ಅವುಗಳಿಗೆ ಅಂತಿಮ ರೂಪ ನೀಡಿದ್ದಾರೆ. ಪ್ರತಿ ಶಿಲ್ಪದ ಕೆಳಭಾಗದಲ್ಲಿ, ಅವರು ವರ್ಣಮಾಲೆಯನ್ನು ಅತ್ಯಂತ ಆಕರ್ಷಕವಾಗಿ ಕೆತ್ತಿರುವುದು ವಿಶೇಷವಾಗಿದೆ. ಈ 51ರಲ್ಲಿ ಪ್ರತಿಯೊಂದು ವಿಗ್ರಹಗಳೂ ಪ್ರತ್ಯೇಕವಾದ ಉಡುಪು, ಆಭರಣ, ಆಯುಧ ಮತ್ತು ವಾಹನವನ್ನು ಹೊಂದಿವೆ.

Saturn Retrograde 2022: ಶನಿಯ ಹಿಮ್ಮುಖ ಚಲನೆ ನಿಮ್ಮ ರಾಶಿಗೆ ಲಾಭವೋ, ನಷ್ಟವೋ?

ಅಕ್ಷರ ದೇವತೆಗಳು
ಈ ಅಕ್ಷರ ದೇವತೆಗಳ ಉಲ್ಲೇಖವನ್ನು ಮಲಯಾಳಂ ಭಾಷೆಯ ಪಿತಾಮಹ ಎಝುತಾಚನ್ ಅವರು 'ಹರಿನಾಮ ಕೀರ್ತನಂ'ನ ಶ್ಲೋಕ ಸಂಖ್ಯೆ 14ರಿಂದ 16ರಲ್ಲಿ ಉಲ್ಲೇಖಿಸಿದ್ದಾರೆ. ಸರಸ್ವತಿ ದೇವಿಯನ್ನು ಅಕ್ಷರಗಳ ದೇವತೆ ಎಂದು ಪರಿಗಣಿಸಲಾಗಿದ್ದರೂ, ಅವಳು ಕೇವಲ ಒಂದು ಮಲಯಾಳಂ ವರ್ಣಮಾಲೆಯ 'ತಾ' ದ ದೇವತೆ. ಆಕೆಗೆ ಥಮಸ್ಯಾದೇವಿ ಎಂಬ ಇನ್ನೊಂದು ಹೆಸರಿದೆ, ಅಂದರೆ ಕತ್ತಲೆಯನ್ನು ಹೋಗಲಾಡಿಸುವವಳು. ವೇದಗಳು ಮತ್ತು ಪುರಾಣಗಳಲ್ಲಿ, ಕಾಳಿ ದೇವಿಯನ್ನು 51 ತಲೆಬುರುಡೆಗಳ ಮಾಲೆಯನ್ನು ಧರಿಸಿರುವಂತೆ ಚಿತ್ರಿಸಲಾಗಿದೆ ಮತ್ತು ಪ್ರತಿಯೊಂದೂ ತಲೆಬುರುಡೆಯು ವೇದಗಳು ಮತ್ತು ಪುರಾಣಗಳಲ್ಲಿ ವರ್ಣಮಾಲೆಗಳನ್ನು ಪ್ರತಿನಿಧಿಸುತ್ತದೆ ಎಂದು ಗಮನಿಸಬಹುದು. 

31 ಶಿಲ್ಪಿಗಳು ಭಾಗಿ
ತರಬೇತಿ ಪಡೆದ ಶಿಲ್ಪಿಗಳು ಮೂರ್ತಿ ತಯಾರಿಕೆಗೆ ನಾಮಕ್ಕಲ್, ದಿಂಡುಗಲ್‌ನಿಂದ ಶಿಲ್ಪಕಲೆಗೆ ಸೂಕ್ತವಾದ  ಕೃಷ್ಣ ಶಿಲಾವನ್ನು ಆಯ್ಕೆ ಮಾಡಿದರು. 15 ಅಡಿ ಉದ್ದ ಮತ್ತು 10 ಅಡಿ ಅಗಲದ ಪ್ರತಿ ಕಲ್ಲನ್ನು ದೇವತೆಗಳ ಕೆತ್ತನೆಗೆ ಬಳಸಲಾಗಿದೆ. ಈ ಕೆಲಸದಲ್ಲಿ 31 ಶಿಲ್ಪಿಗಳು ಭಾಗಿಯಾಗಿದ್ದರು.

ಈ ರಾಶಿಯವರು ಯಾವತ್ತೂ ತಕ್ಷಣ ರಿಪ್ಲೈ ಮಾಡಲ್ಲ, ತಮ್ಮ ಲವರ್‌ನೇ ಇಗ್ನೋರ್ ಮಾಡ್ತಾರೆ!

ಪೌರ್ಣಮಿಕಾವು ದೇವಾಲಯದ ವಿಶೇಷ
ಕೇರಳದ ವಿಝಿಂಜಂನಲ್ಲಿರುವ ಪೌರ್ಣಮಿಕಾವು ದೇವಿ ದೇವಾಲಯದ ವಿಶೇಷತೆಯೆಂದರೆ, ಇದು ಪ್ರತಿ ತಿಂಗಳ ಹುಣ್ಣಿಮೆಯ ದಿನ ಮಾತ್ರ ತೆರೆಯುತ್ತದೆ. ತಿರುವನಂತಪುರಂನಿಂದ 17 ಕಿ.ಮೀ ದೂರದಲ್ಲಿರುವ ಈ ದೇವಾಲಯದಲ್ಲಿ ಭಾರತದ ಅತಿದೊಡ್ಡ ಪಂಜಮುಖ ಗಣಪತಿ ವಿಗ್ರಹವನ್ನು ಕಾಣಬಹುದು. ಇದನ್ನು 'ಕೃಷ್ಣಶಿಲಾ'ದಿಂದ ಒಂದೇ ಕಲ್ಲಿನಲ್ಲಿ ಕೆತ್ತಲಾಗಿದೆ. ಇತಿಹಾಸದ ಪ್ರಕಾರ, ಪೌರ್ಣಮಿ ದೇವಿಯನ್ನು ಆಯ್ ರಾಜವಂಶದವರು ತಮ್ಮ ಯುದ್ಧ-ದೇವತೆಯಾಗಿ ಪೂಜಿಸುತ್ತಾರೆ. ಆಯ್ ಸಾಮ್ರಾಜ್ಯವನ್ನು ಮಧ್ಯಕಾಲೀನ ಅವಧಿಯಲ್ಲಿ ಪ್ರಬಲ ಪಾಂಡ್ಯರು/ಚೋಳರು (ತಮಿಳುನಾಡು) ಮತ್ತು ಚೇರರು (ಕೇರಳ) ಆಳಿದ್ದರು.
ವಿಝಿಂಜಂ ಆಯ್ ಸಾಮ್ರಾಜ್ಯದ ಆಡಳಿತ ರಾಜಧಾನಿಯಾಗಿತ್ತು.
 

Follow Us:
Download App:
  • android
  • ios