ಈ 4 ರಾಶಿಯವರಿಗೆ ಶಿವನ ಕೃಪೆ ಸದಾ ಇರಲಿದೆ!

ಭಕ್ತಿ ಶ್ರದ್ಧೆಯಿಂದ ಶಿವನನ್ನು ಆರಾಧಿಸುವುದರಿಂದ ಭಕ್ತರ ಬೇಡಿಕೆಗಳನ್ನು ಬಹುಬೇಗ ಈಡೇರಿಸುತ್ತಾನೆ. ಆದರೆ ಕೆಲವು ರಾಶಿಗಳಾಗಿ ಶಿವನ ವಿಶೇಷ ಕೃಪೆ ಪ್ರಾಪ್ತವಾಗಿರುತ್ತದೆ. ಅಂತಹ ರಾಶಿಯವರು ಶಿವನ ಆರಾಧನೆ ಮಾಡಿದರೆ ಸಕಲ ಸುಖ ಪ್ರಾಪ್ತವಾಗುತ್ತದೆ. ಆ ರಾಶಿಗಳ ಯಾವುವು ಎಂದು ತಿಳಿಯೋಣ...

4 zodiac signs people are get lord shivas blessings

ದೇವರ (God) ಅನುಗ್ರಹಕ್ಕಾಗಿ ನಾವು ಏನೆಲ್ಲ ಮಾಡುತ್ತೇವೆ, ಪೂಜೆ (Pooja) - ಪುರಸ್ಕಾರಗಳು, ಅನುಷ್ಠಾನಗಳು ಇತ್ಯಾದಿಗಳನ್ನು ಮಾಡುತ್ತಲೇ ಇರುತ್ತೇವೆ. ದೇವಸ್ಥಾನಗಳಿಗೆ (Temple) ಆಗಾಗ ಭೇಟಿ ಕೊಡುತ್ತಲೇ ಇರುತ್ತೇವೆ. ದೇವರ ಧ್ಯಾನದಲ್ಲಿ ನಿರತರಾಗಿರುತ್ತೇವೆ. ಇಷ್ಟಾದರೂ ಕೆಲವೊಮ್ಮೆ ಒಳ್ಳೆಯ ಫಲ ಲಭ್ಯವಾಗುತ್ತಿರುವುದಿಲ್ಲ. ಇದಕ್ಕೆ ಹಲವಾರು ಕಾರಣಗಳು ಇರುತ್ತವೆ.

ನಮ್ಮ ನಿತ್ಯ ಜೀವನದ ಮೇಲೆ ಗ್ರಹ (Planet) - ನಕ್ಷತ್ರಗಳ (Stars) ಪ್ರಭಾವ, ಪರಿಣಾಮಗಳು (Effect) ಬಹಳಷ್ಟು ಇರುತ್ತವೆ. ಇದು ಶುಭ ಅಥವಾ ಅಶುಭ ಫಲವನ್ನು ನೀಡುತ್ತವೆ. ಆದರೆ ಅದೇ ರೀತಿಯಾಗಿ ಇಷ್ಟ ದೇವರ ಕೃಪೆ ಸಹ ನಮ್ಮಲ್ಲಿದ್ದರೆ ಕೆಲವು ಅಡೆತಡೆಗಳು, ಸಮಸ್ಯೆಗಳು  ಬಹುಬೇಗ ನಿವಾರಣೆ ಆಗುತ್ತವೆ. ಒಂದೊಂದು ರಾಶಿಯವರ (Zodiac sign) ಮೇಲೆ ಒಂದೊಂದು ದೇವರ ಅಥವಾ ಹಲವು ರಾಶಿಯವರ ಮೇಲೆ ಒಂದೇ ದೇವರ ಕೃಪೆಯೋ ಇರುತ್ತದೆ. ಬೇಡಿದ್ದನ್ನು ಬೇಗ ದಯಪಾಲಿಸುವ ಪರಮಶಿವನ ಕೃಪೆಯನ್ನು ಎಲ್ಲರೂ ಬಯಸುತ್ತಾರೆ. ಹಾಗಾಗಿ ಸೋಮವಾರ (Monday) ಶಿವನ ಆರಾಧನೆಯನ್ನು ಮಾಡುತ್ತಾರೆ. ಹೀಗೆ ಮಾಡುವುದರಿಂದ ವಿಶೇಷ ಕೃಪೆ ಪ್ರಾಪ್ತವಾಗುತ್ತದೆ. ಜತೆಗೆ ಜೀವನದ ಎಲ್ಲ ಸಂಕಟಗಳಿಂದಲೂ ಮುಕ್ತಿ ಸಿಗುತ್ತದೆ. 

ಎಲ್ಲ ಭಕ್ತರ ಸಂಕಷ್ಟಗಳನ್ನು ನಿವಾರಿಸುವ ಶಿವನ (Lord Shiva) ಕೆಲವು ರಾಶಿಗಳ ಮೇಲೆ ವಿಶೇಷ ಕೃಪೆಯನ್ನು ಇಟ್ಟುಕೊಂಡಿರುತ್ತಾನೆ. ಅಂಥ 4 ರಾಶಿಗಳು ಶಿವನ ಕೃಪೆಗೆ ಒಳಗಾಗಿವೆ. ಅವುಗಳು ಯಾವುವು ಎಂಬುದನ್ನು ನೋಡೋಣ....

ನಾರದ ಮಹರ್ಷಿಗಳೇಕೆ ಸದಾ ಲೋಕ ಸಂಚಾರ ಮಾಡುತ್ತಾರೆ?

ಮೇಷ ರಾಶಿ (Aries)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯ ಅಧಿಪತಿ ಗ್ರಹವು ಮಂಗಳ ಗ್ರಹವಾಗಿದೆ. ಮಂಗಳ (Mars) ಗ್ರಹವನ್ನು ಶಿವನ ಅಂಶ ಎಂದೇ ಹೇಳಲಾಗುತ್ತದೆ. ಇದೇ ಕಾರಣದಿಂದ ಈ ರಾಶಿಯ ವ್ಯಕ್ತಿಗಳ ಮೇಲೆ ಶಿವನು ವಿಶೇಷ ಕೃಪೆಯನ್ನು ದಯಪಾಲಿಸುತ್ತಾನೆ. ಹೀಗಾಗಿ ಮೇಷ ರಾಶಿಯವರು ಪ್ರತಿ ಸೋಮವಾರದಂದು ಶಿವನ ದೇವಸ್ಥಾನಗಳಿಗೆ ಭೇಟಿ ನೀಡಬೇಕು. ಅಲ್ಲದೆ, ಶಿವನ ಆರಾಧನೆ ಮಾಡುವುದು, ಶಿವನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸುವ ಮೂಲಕ ಮತ್ತು ಶಿವನಿಗೆ ಅಭಿಷೇಕ ಮಾಡುವುದರಿಂದ ಶಿವನ ಕೃಪೆಗೆ ಪ್ರಾಪ್ತವಾಗಿ ಸಕಲ ಸಂಕಷ್ಟಗಳು ದೂರಾಗುತ್ತವೆ. 

ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಗೆ ಅಧಿಪತಿ ಗ್ರಹ ಮಂಗಳ ಗ್ರಹವಾಗಿದ್ದು, ಇದೇ ಕಾರಣಕ್ಕಾಗಿ ಈ ರಾಶಿಯವರ ಮೇಲೆ ಶಿವನ ವಿಶೇಷ ಕೃಪೆ ಪ್ರಾಪ್ತಿಯಾಗಿದೆ. ಈ ರಾಶಿಯ ವ್ಯಕ್ತಿಗಳು ಪ್ರತಿ ಸೋಮವಾರದಂದು ಶಿವಲಿಂಗಕ್ಕೆ ಜಲವನ್ನು (Water) ಅರ್ಪಿಸಬೇಕು.ಅಷ್ಟೆ ಅಲ್ಲದೆ ಯಾವುದೇ ಭಯವಿದ್ದರೂ ಅದರಿಂದ ಮುಕ್ತಿಯನ್ನು ಪಡೆಯ ಬಹುದಾಗಿದೆ. ಈ ರೀತಿ ಮಾಡುವುದರಿಂದ ಅವರ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ. 

ಮಕರ ರಾಶಿ (Capricorn)
ಶಿವನಿಗೆ ಪ್ರಿಯವಾದ ರಾಶಿಗಳಲ್ಲಿ ಮಕರ ರಾಶಿ ಒಂದಾಗಿದೆ. ಮಕರ ರಾಶಿಯ ಅಧಿಪತಿ ಶನಿ (Saturn) ದೇವನಾಗಿದ್ದಾನೆ. ಶಿವನಿಗೆ ಅತ್ಯಂತ ಪ್ರಿಯವಾದ ಭಕ್ತನು ಶನಿ ದೇವನಾಗಿದ್ದಾನೆ. ಈ ರಾಶಿಯ ವ್ಯಕ್ತಿಗಳು ಸೋಮವಾರದ ದಿನ ಶಿವನಿಗೆ ಬಿಲ್ವಪತ್ರೆ, ಗಂಗಾಜಲ ಮತ್ತು ಹಸುವಿನ ಹಾಲನ್ನು ಅರ್ಪಿಸಿದರೆ ಇವರ ಕಷ್ಟಗಳು ದೂರವಾಗುತ್ತವೆ. ಅಷ್ಟೆ ಅಲ್ಲದೆ ಎಲ್ಲ ಕೆಲಸಗಳಲ್ಲೂ ಸಫಲತೆಯು ದೊರಕುತ್ತದೆ.

ಈ ನಾಲ್ಕು ರಾಶಿಗಳನ್ನು ವಂಚಿಸೋದು ಸುಲಭ

ಕುಂಭ ರಾಶಿ (Aquarius)
ಕುಂಭ ರಾಶಿಯ ಅಧಿಪತಿ ದೇವರು ಸಹ ಶನಿ ಗ್ರಹವಾಗಿದೆ. ಹಾಗಾಗಿ ಶಿವನ ಕೃಪೆ ಈ ರಾಶಿಯವರ ಮೇಲೆ ಹೆಚ್ಚಾಗಿ ಇರುತ್ತದೆ. ಶನಿದೇವರು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ (Divine) ಶಿವನನ್ನು ಆರಾಧಿಸುವ ಕಾರಣ ಶಿವನಿಗೆ ಸದಾ ಪ್ರಿಯ. ಹಾಗಾಗಿ ಈ ರಾಶಿಯ ವ್ಯಕ್ತಿಗಳಿಗೆ ಶಿವನ ಆಶೀರ್ವಾದವಿರುತ್ತದೆ. ಈ ರಾಶಿಯ ವ್ಯಕ್ತಿಗಳು ಶಿವಲಿಂಗಕ್ಕೆ ಜಲವನ್ನು ಅರ್ಪಿಸುವುದರಿಂದ ಇವರ ಮನೋಕಾಮನೆಗಳು ಈಡೇರುತ್ತವೆ.

 

4 zodiac signs people are get lord shivas blessings

 

Latest Videos
Follow Us:
Download App:
  • android
  • ios