Asianet Suvarna News Asianet Suvarna News

Strong Women: ರಾಮಾಯಣದ ಐದು ಅಸಾಧಾರಣ ಮಹಿಳಾಮಣಿಗಳಿವರು

ರಾಮಾಯಣದಲ್ಲಿ ಮಹಿಳೆಯರನ್ನು ಮಾನಸಿಕವಾಗಿ ಹೆಚ್ಚು ಸದೃಢರಾಗಿ ಚಿತ್ರಿಸಲಾಗಿದೆ. ರಾಮಾಯಣದ ಐದು ಸ್ಟ್ರಾಂಗ್ ಮಹಿಳಾಮಣಿಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

Important Female Characters of Ramayana skr
Author
Bangalore, First Published Jan 17, 2022, 7:32 PM IST

24,000 ಪದ್ಯಗಳನ್ನೊಳಗೊಂಡ ಮಹಾಕಾವ್ಯ ರಾಮಾಯಣ(Ramayana) ಸರ್ವಕಾಲಕ್ಕೂ ಸಲ್ಲುವುದು. ವಿಷ್ಣುವಿನ 7ನೇ ಅವತಾರ ರಾಮನ ಕುರಿತ ಕತೆ ಇದಾಗಿದ್ದು ಆದಿ ಕವಿ ವಾಲ್ಮೀಕಿ ಇದನ್ನು ರಚಿಸಿದ್ದಾರೆ. ರಾಮಾಯಣವು ತನ್ನ ಆದರ್ಶ ಪಾತ್ರಗಳಿಗಾಗಿ ಹೆಸರು ಮಾಡಿದೆ. ಇಂದಿಗೂ ಕೂಡಾ ಆದರ್ಶ ಪುತ್ರ ಎಂದರೆ ರಾಮ(Lord Rama)ನೇ, ಆದರ್ಶ ಪತ್ನಿ ಸೀತೆಯೇ. ಆದರ್ಶ ಸಹೋದರ ಎಂದರೆ ನೆನಪಾಗುವುದು ಲಕ್ಷ್ಮಣ ಹಾಗೂ ಆದರ್ಶ ಭಕ್ತ ಎಂದರೆ ಆಂಜನೇಯ(Lord Hanuman)ನೇ. ಇದೆಲ್ಲದರ ಹೊರತಾಗಿ ರಾಮಾಯಣದಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವಿದೆ. ಅದೆಂದರೆ, ಇದರಲ್ಲಿ ಬರುವ ಮಹಿಳಾ ಪಾತ್ರೆಗಳೆಲ್ಲ ಮಾನಸಿಕವಾಗಿ ಸದೃಢರು. 

ರಾಮಾಯಣದ ಮಹಿಳಾ ಪಾತ್ರಗಳು ಕೂಡಾ ಎಲ್ಲ ಮಹಿಳೆಯರಂತೆ ತಮ್ಮ ಸೌಂದರ್ಯಕ್ಕಾಗಿ, ಗುಣಕ್ಕಾಗಿ, ಅಭಿಪ್ರಾಯ ಹೇಳಿಕೊಂಡಿದ್ದಕ್ಕಾಗಿ ವಿರೋಧ ಎದುರಿಸಿದ್ದಾರೆ. ಆದರೆ, ತಮ್ಮ ವ್ಯಕ್ತಿತ್ವಕ್ಕೆ ಬದ್ಧರಾಗಿ ಉಳಿದು, ತಾವು ನಂಬಿದ ಮೌಲ್ಯಗಳನ್ನು ಅನುಸರಿಸಿ, ಅದಕ್ಕಾಗಿ ಎಲ್ಲ ಕಷ್ಟನಷ್ಟಗಳನ್ನು ಅನುಭವಿಸಿ ಕಡೆಗೂ ತಾವೇನಾಗಿದ್ದರೋ ಅದಕ್ಕಾಗಿಯೇ ಗೌರವ(respect) ಸಂಪಾದಿಸುವಲ್ಲಿ ಗೆದ್ದಿದ್ದಾರೆ. ಅಂಥ ಐದು ಸ್ಟ್ರಾಂಗ್ ಮಹಿಳಾ ಪಾತ್ರಗಳ ಬಗ್ಗೆ ಇಲ್ಲಿ ಕೊಡಲಾಗಿದೆ. 

ಸೀತಾ ದೇವಿ(Devi Sita)
ರಾಮಾಯಣದ ಮುಖ್ಯ ಪಾತ್ರ ಸೀತೆಯು ಲಕ್ಷ್ಮೀ ದೇವಿಯ ಅವತಾರ ಎನ್ನತಾಗುತ್ತದೆ. ಜನಕ ರಾಜ(King Janaka)ನಿಗೆ ಭೂಮಿಯಲ್ಲಿ ಸಿಕ್ಕ ಆಕೆಯೇ ಭೂದೇವಿ ಎಂದು ಕೂಡಾ ಹೇಳಲಾಗುತ್ತದೆ. ಆಕೆಯ ಸ್ವಭಾವ ಎಷ್ಟು ಅತ್ಯುನ್ನತವಾಗಿತ್ತು ಎಂದರೆ ಇಂದಿಗೂ ಆದರ್ಶ ಮಹಿಳೆ ಎಂದರೆ ಸೀತೆಯೇ ನೆನಪಾಗುವುದು. 

ಆಕೆ ಶಿವಧನಸ್ಸನ್ನು ಬಾಲ್ಯದಲ್ಲಿಯೇ ಎತ್ತುವಷ್ಟು ದೈಹಿಕ ಸಾಮರ್ಥ್ಯ ಹೊಂದಿದ್ದಳು. ಆದರೂ ಆಕೆಯನ್ನು ಹೆಚ್ಚಾಗಿ ಭಾವನಾತ್ಮಕವಾಗಿ ಹಾಗೂ ಮಾನಸಿಕವಾಗಿ ಸದೃಢ ಎನ್ನುವಂತೆ ಬಿಂಬಿಸಲಾಗಿದೆ. ಎಂಥ ಕಷ್ಟದ ಸಮಯದಲ್ಲೂ ಆಕೆ ಗಂಡನ ಜೊತೆ ಕಲ್ಲಿನಂತೆ ಗಟ್ಟಿಯಾಗಿ ನಿಂತಿದ್ದಳು ಹಾಗೂ ಯಾವುದೇ ಸವಾಲು(challenge), ಸಮಸ್ಯೆಗೆ ಬೆನ್ನು ಹಾಕದೆ ಅವನ್ನು ಧೈರ್ಯವಾಗಿ ಎದುರಿಸಿದಳು. 
ಆಕೆಗೆ ವನವಾಸ ಕಷ್ಟವೆನಿಸಲಿಲ್ಲ. ಆದರೆ, ಲಂಕಾಧಿಪತಿ ರಾವಣ ಅಪಹರಿಸಿದಾಗ ಮಾತ್ರ ಆಕೆಯ ಬದುಕು ಅಸಹನೀಯವಾಗಿತ್ತು. ಆತ ಎಷ್ಟೇ ಬಲವಂತ ಪಡಿಸಲಿ, ಹೆದರಿಸಿ ಬೆದರಿಸಲಿ, ಅದಕ್ಯಾವುದಕ್ಕೂ ಬಗ್ಗದೆ, ಬೆದರದೆ ನಿಂತ ಸೀತೆ, ಅಂದಿನ ಕಷ್ಟದ ಸ್ಥಿತಿಯಲ್ಲೂ ದೇಶವನ್ನೇ ದಾಟಿಯಾದರೂ ಸರಿ, ಪತಿ ಬರುತ್ತಾನೆಂದು ತಾಳ್ಮೆಯಿಂದ ಕಾದಳೆಂದಳೆ ಅವಳ ಧೈರ್ಯ, ಬದ್ಧತೆ, ನಂಬಿಕೆ, ಮನಸ್ಸಿನ ಸ್ವಚ್ಚತೆ ಅದೆಷ್ಟು ವಿಶೇಷವಾದದ್ದಾಗಿರಬೇಕು? ಅಷ್ಟೆಲ್ಲ ಕಷ್ಟ ಪಟ್ಟರೂ ರಾವಣನನ್ನು ರಾಮ ಸೋಲಿಸಿದರೂ ಪತ್ನಿಯ ಶೀಲದ ಬಗ್ಗೆ ಆತ ಹಾಗೂ ಸಮಾಜವೇ ಅನುಮಾನ ಪಡುವಾಗಲೂ ಸಮಾಧಾನದಿಂದ ಅಗ್ನಿ ಪರೀಕ್ಷೆ ಎದುರಿಸಿದ ಸೀತೆಯ ಮಾನಸಿಕ ಸದೃಢತೆ ಅಚ್ಚರಿ ಹುಟ್ಟಿಸುವಂಥದ್ದು. ಎಷ್ಟೇ ಕಷ್ಟ ಬಂದರೂ ನಂಬಿಕೆ ಕಳೆದುಕೊಳ್ಳದೆ ಸವಾಲನ್ನು ಹೇಗೆ ಸಮಾಧಾನವಾಗಿ ಎದುರಿಸಬೇಕೆಂಬುದಕ್ಕೆ ಆಕೆಯೇ ಜ್ವಲಂತ ಉದಾಹರಣೆ. 

Successful Zodiacs: ಈ ನಾಲ್ಕು ರಾಶಿಯವರು ಹುಟ್ಟಿರೋದೇ ಯಶಸ್ಸು ಕಾಣೋಕೆ!

ಶೂರ್ಪನಖಿ(Surpanakha)
ರಾಮ ರಾವಣರ ಯುದ್ಧಕ್ಕೆ ಮುನ್ನುಡಿ ಹಾಕಿದವಳೇ ಶೂರ್ಪನಖಿ. ವಾಲ್ಮೀಕಿ ರಾಮಾಯಣದಲ್ಲಿ ಅತಿ ಕುರೂಪಿ ಹೆಂಗಸು ಎಂದು ಬಿಂಬಿತವಾಗಿದ್ದರೂ, ಆಕೆಗೆ ತನ್ನ ರೂಪವನ್ನು ಬೇಕಾದಂತೆ ಬದಲಿಸಿಕೊಳ್ಳುವ ಶಕ್ತಿ ಇತ್ತು. ರಾವಣನ ಸಹೋದರಿ ಶೂರ್ಪನಖಿಯ ಪತಿಯನ್ನು ರಾವಣನೇ ಕೊಂದಿರುತ್ತಾನೆ. ರಾಮನನ್ನು ಮೋಹಿಸಿ ಕಡೆಗೆ ಲಕ್ಷ್ಮಣನಿಂದ ಮೂಗು ಕತ್ತರಿಸಿಕೊಂಡು ಅವಮಾನಿತಳಾಗುವ ಶೂರ್ಪನಖಿ, ಇದಕ್ಕೆ ಪ್ರತೀಕಾರವಾಗಿ ತನ್ನ ಅಣ್ಣನನ್ನು ರಾಮನ ವಿರುದ್ಧ ಯುದ್ಧಕ್ಕೆ ಎತ್ತಿ ಕಟ್ಟುತ್ತಾಳೆ. ರಾಮನ ಪತ್ನಿಯ ಅಪಹರಣಕ್ಕೆ ಕಾರಣಳಾಗುತ್ತಾಳೆ. ಶೂರ್ಪನಖಿಯು ರಾಕ್ಷಸಿಯಾದರೂ ಆಕೆಯ ಪಾತ್ರ ಬಹಳ ಸ್ಟ್ರಾಂಗಾಗಿದೆ. ತನ್ನ ಪತಿ ಕೊಂದ ಅಣ್ಣನ ಮೇಲೆ ಸೇಡು ತೀರಿಸಿಕೊಳ್ಳಲು ಶೂರ್ಪನಖಿ ಹೂಡಿದ ಮಸಲತ್ತು ಇವೆಲ್ಲ ಎಂಬ ವಾದಗಳೂ ಇವೆ. ಒಟ್ಟಿನಲ್ಲಿ ಮಾನಸಿಕವಾಗಿ ಆಕೆ ಬಹಳ ಸಬಲಳಾಗಿದ್ದಳು. 

Vastu tips: ಅಂದದ ಜೊತೆ ಅದೃಷ್ಟವನ್ನೂ ತರೋ ಈ ವಸ್ತುಗಳಿಂದ ಮನೆ ಅಲಂಕರಿಸಿ

ಕೈಕೇಯಿ(Kaikeyi)
ಶೂರ್ಪನಖಿಯಂತೆ ಕೈಕೇಯಿಯದೂ ನೆಗೆಟಿವ್ ಪಾತ್ರವಾದರೂ, ಆಯೋಧ್ಯೆಯ ರಾಜ ಕುಟುಂಬದ ಎಲ್ಲ ದುರದೃಷ್ಟಕ್ಕೂ ಅವಳೇ ಕಾರಣ. ರಾಮ ವನವಾಸಕ್ಕೆ ಹೋಗುವುದಕ್ಕೆ, ದಶರಥನ ಸಾವಿಗೆ ಕಾರಣವಾಗುವ ಕೈಕೇಯಿ ಎಂದರೆ ಇಡೀ ಅಯೋಧ್ಯೆಯ ಜನರಿಗೆ ಆಗುವುದಿಲ್ಲ. ಪರಿಸ್ಥಿತಿ ಅವಳನ್ನು ಹೀಗಾಡಿಸಿದರೂ, ಆಕೆ ಮುಂಚೆಯಿಂದಲೇ ಕೆಟ್ಟವಳೇನಲ್ಲ. ಆಕೆ ಯುದ್ಧ ಪರಿಣತೆ. ದಶರಥನ ಎರಡನೇ ಪತ್ನಿಯಾದರೂ ಅತಿ ಪ್ರೀತಿಯ ಹೆಂಡತಿ. ಅವಳಿಗೆ ಎರಡು ವರ ಕೇಳುವ ಹಕ್ಕನ್ನು ದಶರಥ ಕೊಟ್ಟಿರುತ್ತಾನೆ. ರಾಮನೆಂದರೆ ಆಕೆಗೆ ಎಲ್ಲಿಲ್ಲದ ಪ್ರೀತಿಯೇ. ಆದರೆ, ಆಕೆಯ ದಾಸಿ ಮಂಥರೆಯ ಮಾತು ಕೇಳಿ ಆಕೆ ರಾಮನನ್ನು ಕಾಡಿಗೆ ಅಟ್ಟುತ್ತಾಳೆ. ವಿಷ್ಣುವಿನ ರಾಮ ಅವತಾರವನ್ನು ಪೂರೈಸಲು ಆಕೆಯ ಪಾತ್ರ ನಿಮಿತ್ತ ಮಾತ್ರ. 

ಊರ್ಮಿಳಾ(Urmila)
ಊರ್ಮಿಳಾ ಸೀತೆಯ ಸಹೋದರಿಯೇ ಆಗಿದ್ದು ಲಕ್ಷ್ಮಣನನ್ನು ವಿವಾಹವಾಗುತ್ತಾಳೆ. ರಾಮ- ಸೀತೆಯ ವಿವಾಹ ದಿನವೇ ಲಕ್ಷ್ಣಣ- ಊರ್ಮಿಳಾಳ ವಿವಾಹವೂ ಆಗುತ್ತದೆ. ಈಕೆಯ ಬಗ್ಗೆ ರಾಮಾಯಣದಲ್ಲಿ ಹೆಚ್ಚಿಲ್ಲವಾದರೂ, ಈಕೆಯ ತ್ಯಾಗ ವಿವರಣೆಗೆ ನಿಲುಕದ್ದು. ಪತಿಯ ಜೊತೆ ಊರ್ಮಿಳೆಯೂ ಕಾಡಿಗೆ ಹೊರಟಳಾದರೂ ಆಕೆಗೆ ಅಯೋಧ್ಯೆಯಲ್ಲೇ ಇದ್ದು ಜನರ ಯೋಗಕ್ಷೇಮ ನೋಡಿಕೊಳ್ಳಲು ಹೇಳಲಾಗುತ್ತದೆ. ಮದುವೆಯಾದ ಕೆಲ ಸಮಯದಲ್ಲೇ ಪತಿಯನ್ನು ಬಿಟ್ಟು 14 ವರ್ಷ ಇರಬೇಕೆಂದರೆ ಅದೇನು ಸಣ್ಣಪುಟ್ಟ ಸಾಧನೆಯಲ್ಲ. ಸಾಮಾನ್ಯರಿಂದ ಆಗುವುದೂ ಅಲ್ಲ. 

ಮಂಡೋದರಿ(Mandodari)
ಮಂಡೋದರಿಯು ಸುಂದರಿಯಷ್ಟೇ ಅಲ್ಲ ಬುದ್ಧಿವಂತೆ ಕೂಡಾ. ತನ್ನ ಪತಿಯ ಎಲ್ಲ ಕೆಟ್ಟ ಗುಣಗಳ ಸಹಿತವೂ ಆತನನ್ನು ಸಂಪೂರ್ಣ ಮನಸ್ಸಿನಿಂದ ಪ್ರೀತಿಸುತ್ತಾಳೆ ಮಂಡೋದರಿ. ಅಷ್ಟೇ ಅಲ್ಲ, ತನ್ನಿಂದ ಸಾಧ್ಯವಾದಷ್ಟು ಆತನನ್ನು ಸರಿ ದಾರಿಯಲ್ಲಿ ನಡೆಸಲು ಪ್ರಯತ್ನ ಹಾಕುತ್ತಾಳೆ. ರಾಕ್ಷಸರ ನಡುವೆ ಇದ್ದೂ ಸಾಧ್ವಿಯಾಗಿರುವುದು ಸುಲಭದ ವಿಷಯವೇನಲ್ಲ. ಹಾಗಿರುವುದಕ್ಕೆ ಅವಳ ಬಲವಾದ ಮನಸ್ಸಿನಿಂದಷ್ಟೇ ಸಾಧ್ಯವಾಯಿತು. 

Follow Us:
Download App:
  • android
  • ios