Vastu tips: ಅಂದದ ಜೊತೆ ಅದೃಷ್ಟವನ್ನೂ ತರೋ ಈ ವಸ್ತುಗಳಿಂದ ಮನೆ ಅಲಂಕರಿಸಿ
ಹೊಸ ವರ್ಷ ಬಂದರೂ ಮನೆಯಲ್ಲಿ ಹೊಸ ಎನರ್ಜಿ ಉತ್ಸಾಹ ಇಲ್ಲ ಎನಿಸುತ್ತಿರಬಹುದು. ಹಾಗಿದ್ದರೆ ಮನೆಯ ಲುಕ್ ಬದಲಾಯಿಸುವ ಜೊತೆ ಅದೃಷ್ಟವನ್ನೂ ಬದಲಾಯಿಸುವತ್ತ ಗಮನ ಹರಿಸಿ. ಇದಕ್ಕಾಗಿ ವಾಸ್ತು ಕೆಲ ಸಲಹೆಗಳನ್ನು ನೀಡುತ್ತದೆ.
ಮನೆಗೆ ಹೊಸ ಲುಕ್ ಕೊಡೋ ಮೂಡಲ್ಲಿದ್ದೀರಿ. ಎಲ್ಲೆಲ್ಲಿ ಏನು ಬದಲಾವಣೆ ತರುವುದು ಎಂದು ಯೋಚಿಸುತ್ತಿದ್ದೀರಾದರೆ, ಈ ಸರಳ ಅಲಂಕಾರಿಕ ವಸ್ತುಗಳನ್ನು ಮನೆಗೆ ತನ್ನಿ. ಇವು ಮನೆಯ ಅಂದವನ್ನು ಹೆಚ್ಚಿಸುವ ಜೊತೆಗೆ ವಾಸ್ತುವಿನ ಪ್ರಕಾರ ಮನೆಯ ಅದೃಷ್ಟವನ್ನೂ ಹೆಚ್ಚಿಸಿ ಸಂಪತ್ತು, ಧನಾತ್ಮಕ ಶಕ್ತಿಯನ್ನು ಮನೆಯಲ್ಲಿ ಹೆಚ್ಚಿಸುವುವು.
ಸ್ವಸ್ತಿಕ್ ಚಿಹ್ನೆ(swastik)
ಮನೆ ಎದುರಿನ ಮುಖ್ಯ ದ್ವಾರದಲ್ಲಿ ಸ್ವಸ್ತಿಕ್ ಅಥವಾ ಓಂನಂಥ ಪವಿತ್ರ ಚಿಹ್ನೆ ಇದ್ದರೆ ಅದು ಶುಭ ತರಲಿದೆ. ಈ ಜಾಗದಲ್ಲಿ ದೇವರ ವಿಗ್ರಹ ಅಥವಾ ಗಣೇಶನ ಫೋಟೋವನ್ನು ಇಡಬೇಡಿ. ಏಕೆಂದರೆ ದೇವರ ಫೋಟೋಗಳು ಮನೆಯ ಹೊಸ್ತಿಲು ದಾಟಿದ ನಂತರದಲ್ಲಿರಬೇಕು. ಮನೆಯ ಸಂತೋಷ, ಸಂಪತ್ತು, ಯಶಸ್ಸಿಗೆ ತಡೆಯಾಗುವಂಥವನ್ನು ತಡೆಯಬೇಕೆಂದರೆ, ಮೇನ್ ಡೋರ್ ದಾಟಿದ ತಕ್ಷಣ ಒಳಬದಿಯಿಂದ ಮೇಲಕ್ಕೆ ಗಣೇಶನ ಫೋಟೋ ಹಾಕಿ.
ಶಾಂತಮೂರ್ತಿ ಬುದ್ಧ(Buddha)
ಮನೆಯ ಬಾಗಿಲನ್ನು ದಾಟಿ ಒಳ ಹೋಗುವಾಗ ಅಲ್ಲೊಬ್ಬ ಧ್ಯಾನಸ್ಥ ಬುದ್ಧನಿದ್ದರೆ ಅವನ ಶಾಂತ ಮುಖ ನೋಡಿಯೇ ಮನಸ್ಸಿಗೆ ಶಾಂತಿ(peace), ಆನಂದ ನಿಲುಕುವುದು. ಇದರಿಂದ ಮನೆ ಒಳಗೆ ಹೋಗುವಾಗ ಹೊರಗಿನ ಆತಂಕ, ಸುಸ್ತು, ಕೋಪಗಳೆಲ್ಲ ಅಲ್ಲಿಯೇ ಉಳಿದು ಒಳಗೆ ಹೋಗುವಾಗ ಮನಸ್ಸು ಪ್ರಸನ್ನವಾಗುವುದು. ಇದಕ್ಕಾಗಿ ಮನೆಯ ಬಾಗಿಲಿಗೆ ಅಭಿಮುಖವಾಗಿ ಧ್ಯಾನಸ್ಥ ಬುದ್ಧನನ್ನು ಕೂರಿಸಿ. ನೀರು ಸುರಿಯುತ್ತಿರುವ ಫೌಂಟೇನ್ ಇದರೊಂದಿಗಿದ್ದರೂ ಒಳ್ಳೆಯದೇ. ಪ್ರತಿ ದಿನ ಬುದ್ಧನ ಮುಂದೆ ದೀಪ ಹಚ್ಚುವ ಅಭ್ಯಾಸ ಮಾಡಿಕೊಳ್ಳಿ. ಟೈಲ್ಸ್‌ಗಳಲ್ಲಿ ಕೂಡಾ ದೊಡ್ಡ ಬುದ್ಧನನ್ನು ಕೂರಿಸಬಹುದು. ಇದನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಿ. ಇದು ಮನೆಯ ಪಾಸಿಟಿವ್ ಎನರ್ಜಿ(positive energy) ಹೆಚ್ಚಿಸುತ್ತದೆ. ಜೊತೆಗೆ, ಸಖತ್ ಲುಕ್ ಆಗಿಯೂ ಕಾಣಿಸುತ್ತದೆ.
Astro remedies: ಜನ್ಮಕುಂಡಲಿಯಲ್ಲಿ ಕುಜ ದೋಷವಿದ್ದರೆ ಈ ರೀತಿ ಪರಿಹಾರ ಮಾಡಿಕೊಳ್ಳಿ..
ತಾಜಾ ಹೂವುಗಳು(Fresh Flowers)
ತಾಜಾ ಹೂವುಗಳು ಎಲ್ಲಿದ್ದರೂ ಸೌಂದರ್ಯ ಹೆಚ್ಚಿಸಬಲ್ಲವು. ಅವುಗಳ ಸೌಂದರ್ಯ(beauty), ಸುಗಂಧ ಮನಸ್ಸಿಗೆ ಆಹ್ಲಾದ ತರುತ್ತವೆ. ಅಷ್ಟೇ ಅಲ್ಲ ಅವು ಪಾಸಿಟಿವ್ ಎನರ್ಜಿ ಹಾಗೂ ಶ್ರೀಮಂತಿಕೆಯನ್ನು ಆಕರ್ಷಿಸುತ್ತವೆ. ಹೂಕುಂಡದಲ್ಲಿ ಪ್ರತಿದಿನ ತಾಜಾ ಹೂವೂಗಳನ್ನಿಡುವ ಅಭ್ಯಾಸ ಮಾಡಿಕೊಳ್ಳಿ. ಇದನ್ನು ಟೇಬಲ್ ಮಧ್ಯೆ ಅಥವಾ ಹೆಚ್ಚು ಕಣ್ಣಿಗೆ ಬೀಳುವ ಸ್ಥಳದಲ್ಲಿ ಇಡಿ. ಇದರೊಂದಿಗೆ ಹೂವಿನ ದಳಗಳನ್ನು ಹಿತ್ತಾಳೆ ಪಾತ್ರೆಯಲ್ಲಿ ನೀರಿನ ಮೇಲೆ ಹರಡಿ ಇಡುವುದು ಕೂಡಾ ಉತ್ತಮವೇ.
ಪಿಗ್ಗೀ ಬ್ಯಾಂಕ್(piggie bank)
ಪಿಗ್ಗೀ ಬ್ಯಾಂಕ್ ಉಳಿತಾಯದ ಪ್ರತೀಕ. ಮಕ್ಕಳಿಗೆ ಉಳಿತಾಯ ಕಲಿಸಿಕೊಡುವ ಪಿಗ್ಗೀ ಬ್ಯಾಂಕ್‌ಗಳು ಮನೆಗೆ ಅದೃಷ್ಟ ತರುತ್ತವೆ. ನೋಡಲು ಕೂಡಾ ಕ್ಯೂಟ್ ಆಗಿರುತ್ತವೆ.
Navagraha And Health: ಆರೋಗ್ಯಕ್ಕೂ ನವಗ್ರಹಗಳಿಗೂ ಉಂಟು ಬಾದರಾಯಣ ಸಂಬಂಧ!
ಒಳಾಂಗಣ ಸಸ್ಯಗಳು(indoor plants)
ಹಸಿರು ಯಾವತ್ತೂ ಕಣ್ಣಿಗೂ ಮನಸ್ಸಿಗೂ ತಂಪು ನೀಡುವುದು. ಅದು ಹೊರಗಿದ್ದರೂ ಸರಿ, ಒಳಗಿದ್ದರೂ ಸರಿ ಹಸಿರೇ ಉಸಿರು. ಇಂಥ ಹಸಿರು ಮನೆಯೊಳಗಿದ್ದರೆ ಮನೆ ಹೆಚ್ಚು ಜೀವಂತವಾಗಿ ಕಾಣಿಸುತ್ತದೆ. ಪಾಮ್ ಟ್ರೀ, ಮನಿ ಪ್ಲ್ಯಾಂಟ್, ಲಕ್ಕಿ ಬ್ಯಾಂಬೂ(bamboo), ಸ್ನೇಕ್ ಪ್ಲ್ಯಾಂಟ್, ಜೇಡ್(jade), ಪಾಟೆಡ್ ಆರ್ಕಿಡ್ಸ್, ತುಳಸಿ, ಪೀಸ್ ಲಿಲ್ಲಿ ಹಾಗೂ ರಬ್ಬರ್ ಪ್ಲ್ಯಾಂಟ್ ಮುಂತಾದ ಸಸ್ಯಗಳು ಮನೆಯೊಳಗಿದ್ದರೆ ಅವು ಮನೆಗೆ ಅದೃಷ್ಟ ಹಾಗೂ ನೆಮ್ಮದಿ ತರುತ್ತವೆ
ಬಣ್ಣಗಳು(colours)
ಬಣ್ಣಗಳು ಮನೆಯನ್ನು ಯಾವಾಗಲೂ ವೈಬ್ರೆಂಟ್ ಆಗಿರಿಸುತ್ತವೆ. ಹಾಗಾಗಿ ಅವು ಪಾಸಿಟಿವ್ ಎನರ್ಜಿಯನ್ನು ಆಕರ್ಷಿಸುತ್ತವೆ. ಕೇವಲ ಮನೆಯ ಗೋಡೆ(wall)ಯಲ್ಲ, ಮನೆಯ ಅಲಂಕಾರಿಕ ವಸ್ತುಗಳು ಮತ್ತಿತರೆ ವಿಷಯಗಳಿಂದಲೂ ಮನೆಯನ್ನು ವರ್ಣರಂಜಿತವಾಗಿಸಬಹುದು.
ಕಿಟಕಿಗಳನ್ನು(windows) ತೆರೆದಿಡಿ
ಮನೆಯ ಕಿಟಕಿಗಳನ್ನು ತೆರೆದಿಟ್ಟು, ಸೂರ್ಯನ ಬೆಳಕನ್ನು ಆಹ್ವಾನಿಸಿ. ನ್ಯಾಚುರಲ್ ಸನ್‌ಲೈಟ್ ದೇಹದಲ್ಲಿ ವಿಟಮಿನ್ ಡಿ(vitamin D) ಉತ್ಪಾದಿಸಿ, ಮೂಡ್ ಚೆನ್ನಾಗಾಗಿಸುತ್ತದೆ. ಜೊತೆಗೆ, ಹಿತವಾದ ಗಾಳಿಯೂ ತೆರೆದ ಕಿಟಕಿ ಮೂಲಕ ಮನೆಗೆ ನುಗ್ಗಿ ಮನೆಯನ್ನು ಫ್ರೆಶ್ ಆಗಿರಿಸುತ್ತದೆ. ಕಿಟಕಿಗಳ ಗಾಜನ್ನು ಆಗಾಗ ಸ್ವಚ್ಛಗೊಳಿಸುವುದನ್ನು ಮರೆಯಬೇಡಿ.