ಅನ್ನಪೂರ್ಣೆ ಮುನಿಸಿಗೆ ಕಾರಣವಾಗುವ ಈ ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡಬೇಡಿ!

ಮನೆಯಲ್ಲಿ ಅಡುಗೆ ಮನೆ ಪ್ರಧಾನವಾಗಿರುತ್ತದೆ. ಕಾರಣ, ನಮ್ಮ ಹೊಟ್ಟೆ ತುಂಬುವುದು ಅಲ್ಲಿಂದಲೇ ಅಲ್ಲವೇ. ಕೆಲವರು ಅಡುಗೆ ಮನೆ ಹೀಗೆಯೇ ಇರಬೇಕು ಎಂದು ಕಟ್ಟಿಸಿಕೊಂಡಿರುತ್ತಾರೆ. ಇನ್ನು ಮನೆ ಕಟ್ಟಿಸುವವರಿಗೂ ಅಡುಗೆ ಮನೆ ಬಗ್ಗೆ ಅವರದೇ ಆದ ಕಲ್ಪನೆಗಳಿರುತ್ತವೆ. ಆದರೆ, ಹೀಗೆ ಕಟ್ಟಿಸಿಕೊಂಡ ಅಡುಗೆ ಮನೆಯಲ್ಲಿ ಏನೆಲ್ಲ ಇಡಬೇಕು, ಯಾವುದು ಇರಬಾರದು? ಯಾವುದು ಯಾವ ಜಾಗದಲ್ಲಿ ಇರಬೇಕು? ಎಂಬುದೂ ವಾಸ್ತು ಶಾಸ್ತ್ರದ ಪ್ರಕಾರ ಮುಖ್ಯವಾಗುತ್ತದೆ. ಹೀಗಾಗಿ ಎಲ್ಲೆಲ್ಲಿ ಏನಿಡಬೇಕು ಎಂಬುದರ ಬಗ್ಗೆ ನೋಡೋಣ ಬನ್ನಿ…

If you want Annapoorna devi blessings then do not keep these items at kitchen

ವಾಸ್ತು ಶಾಸ್ತ್ರದಲ್ಲಿ ಮನೆಯ ಚಿತ್ರಣ ಹೇಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ ಎಂಬ ಬಗ್ಗೆ ಮಾಹಿತಿ ಇರುತ್ತದೆ. ಮನೆಯ ಪ್ರತಿ ಮೂಲೆಯೂ ವಾಸ್ತುಗೆ ಸಂಬಂಧಿಸಿರುತ್ತದೆ. ಅದೇ ಪ್ರಕಾರವಾಗಿ ಮನೆ ನಿರ್ಮಿಸಿದರೆ ಒಳಿತೆನ್ನುತ್ತಾರೆ ವಾಸ್ತು ತಜ್ಞರು. ಹಾಗಾದರೆ, ಆ ಪ್ರಕಾರವಾಗಿ ಮನೆ ನಿರ್ಮಾಣ ಆಗದಿದ್ದರೆ ಬೀಳಿಸಿ ಮತ್ತೆ ಕಟ್ಟಲಾದೀತೇ? ಅಂಥಹ ದುಸ್ಸಾಹಸಕ್ಕೆ ಕೈಹಾಕುವುದೇನೂ ಬೇಡ. ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ಇರುವಂತೆ ಇದಕ್ಕೂ ಒಳ್ಳೇ ಮಾರ್ಗವಿದೆ.

ಮನೆ ಕಟ್ಟಿಯಾದ ಮೇಲೆ ವಾಸ್ತು ಸರಿ ಇಲ್ಲವೆಂಬುದು ಗಮನಕ್ಕೆ ಬರುತ್ತದೆ. ಆಗ ವಾಸ್ತು ಪ್ರಕಾರವಾಗಿ ಯಾವ ನಿಯಮಗಳನ್ನು ಪಾಲಿಸಿದರೆ ಮನೆಗೆ ಒಳಿತಾಗುತ್ತದೆ? ಪೂಜಾ ಗೃಹವನ್ನು ಹೇಗಿಟ್ಟುಕೊಳ್ಳಬೇಕು? ಯಾವ ಉಪಕರಣವನ್ನು ಯಾವ ದಿಕ್ಕಿಗೆ ಇಟ್ಟರೆ ಒಳ್ಳೆಯದು? ಹೀಗೆ ಅಡುಗೆ ಮನೆಯಲ್ಲಿ ಯಾವ ವಸ್ತುವನ್ನು ಇಡಬಾರದು ಎಂಬೆಲ್ಲ ವಿಚಾರಗಳು ವಾಸ್ತುಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.  

ಅನ್ನಪೂರ್ಣ ದೇವಿಯ ಕೃಪೆಯಿದ್ದರೆ ಮನೆ ಸಮೃದ್ಧವಾಗಿರುತ್ತದೆ. ಮನೆಯವರು ಹೆಚ್ಚು ಕಾಳಜಿ ತೋರಿಸಿ ನಿರ್ಮಿಸುವ ಕೋಣೆ ಎಂದರೆ ಒಂದು ಪೂಜಾಗೃಹ, ಇನ್ನೊಂದು ಅಡುಗೆ ಮನೆ. ಈ ಅಡುಗೆ ಮನೆಯಲ್ಲಿಯೇ ಮನೆಯ ನೆಮ್ಮದಿ ಮತ್ತು ಆರೋಗ್ಯ ಅಡಗಿರುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಜೊತೆಗೆ ಅನ್ನಪೂರ್ಣೆಯು ಪ್ರಸನ್ನಳಾಗಬೇಕೆಂದರೆ ಕೆಲವು ನಿಯಮಗಳನ್ನು ಪಾಲಿಸಬೇಕು. ಆ ನಿಯಮಗಳ ಬಗ್ಗೆ ತಿಳಿಯೋಣ.

ಇದನ್ನು ಓದಿ: ಶ್ರೀ ಮಹಾವಿಷ್ಣುವಿನ ವಿಶೇಷ ಕೃಪೆ ಹೊಂದಿದವರ ಹಸ್ತದಲ್ಲಿರುತ್ತೆ ಈ ಐದು ಚಿಹ್ನೆ!...

ಅಡುಗೆ ಮನೆ, ಅಡುಗೆ ಮನೆಯಾಗಿಯೇ ಇರಲಿ
ಅಡುಗೆ ಮಾಡುವ ಜಾಗವನ್ನು ಅಡುಗೆ ಮನೆ ಎನ್ನುತ್ತೇವೆ. ವಾಸ್ತುಶಾಸ್ತ್ರದಲ್ಲಿ ಅಡುಗೆ ಮನೆಗೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. ಬೇಡದ ವಸ್ತುಗಳನ್ನು ಇಡುವ ಸ್ಟೋರ್ ರೂಮ್ ಇದಾಗಬಾರದು. ಜಾಗದ ಅಭಾವದಿಂದಲೋ ಇಲ್ಲ ಮತ್ಯಾವುದೋ ಕಾರಣದಿಂದ ಅಗತ್ಯವಿಲ್ಲದ ವಸ್ತುಗಳನ್ನು ಅಡುಗೆ ಮನೆಗೆ ಸೇರಿಸುವುದರಿಂದ ವಾಸ್ತು ದೋಷ ಉಂಟಾಗುವುದಲ್ಲದೇ, ಅನ್ನಪೂರ್ಣೆಯ ಕೃಪೆಯು ಲಭಿಸುವುದಿಲ್ಲ.

ಹಳಸಿದ್ದಿಟ್ಟರೆ ರಾಹು-ಕೇತು, ಶನಿ ಆಹ್ವಾನಿಸಿದಂತೆ
ಅಡುಗೆ ಮನೆಯಲ್ಲಿ ಹಳಸಿದ ಪದಾರ್ಥಗಳನ್ನು ಇಡಬಾರದು. ಇದರಿಂದ ಮನೆಯವರ ಸ್ವಾಸ್ಥ್ಯವೂ ಕೆಡುತ್ತದೆ. ವಾಸ್ತು ಪ್ರಕಾರವೂ ಇದು ಒಳ್ಳೆಯ ಲಕ್ಷಣವಲ್ಲ. ಹಾಳಾದ ಪದಾರ್ಥಗಳನ್ನು ಫ್ರಿಡ್ಜ್‌ನಲ್ಲಿ, ಅಡುಗೆ ಕೋಣೆಯಲ್ಲಿ ಇಡುವುದು ರಾಹು-ಕೇತು ಮತ್ತು ಶನಿ ಅಶುಭ ದೆಶೆಯನ್ನು ಆಹ್ವಾನಿಸಿದಂತೆ ಎನ್ನುತ್ತಾರೆ ತಜ್ಞರು. ಆರೋಗ್ಯಕ್ಕೆ ಹಾನಿ ಉಂಟುಮಾಡುವಂಥ ಆಹಾರಗಳನ್ನು ಇಡದೇ ಇರುವುದೇ ಒಳ್ಳೆಯದು.

ಇದನ್ನು ಓದಿ: ನೌಕರಿ ಖಾತರಿ-ಕಿರಿಕಿರಿ ಎಲ್ಲವಕ್ಕೂ ಇಲ್ಲಿ ಉತ್ತರ ಸಿಗುತ್ತೆ ಕಣ್ರೀ!...

ಔಷಧಿಯ ಇಡಬೇಡಿ
ಕೆಲವರ ಮನೆಯಲ್ಲಿ ಔಷಧಿ, ಮಾತ್ರೆಗಳನ್ನು ಅಡುಗೆ ಮನೆಯಲ್ಲಿಯೇ ಒಂದು ಕಡೆ ಇಡುವ ರೂಢಿ ಇರುತ್ತದೆ. ಆದರೆ ಈ ರೂಢಿ ಉತ್ತಮವಲ್ಲ. ಇದು ಮನೆಯ ಸದಸ್ಯರ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಯಾರ ಮನೆಯಲ್ಲಿ ಔಷಧಿಗಳನ್ನು ಅಡುಗೆ ಮನೆಯಲ್ಲಿ ಇಡುತ್ತಾರೋ ಅಂಥವರ ಮನೆಯಲ್ಲಿ ಯಾರಾದೊಬ್ಬರು ಯಾವಾಗಲೂ ಅನಾರೋಗ್ಯವನ್ನು ಹೊಂದಿರುತ್ತಾರೆ. ಹಾಗಾಗಿ ಔಷಧಿಗಳನ್ನು ಅಡುಗೆ ಮಾಡುವ ಕೋಣೆಯಲ್ಲಿ ಇಡದಿರುವುದು ಒಳ್ಳೆಯದು.

ಅಡುಗೆ ಕೋಣೆಗೆ ಕನ್ನಡಿ ಬೇಡ
ಅಡುಗೆ ಮಾಡುವ ಕೋಣೆಯಲ್ಲಿ ಕನ್ನಡಿಯನ್ನು ಇಡುವುದು ಶುಭವಲ್ಲ. ಮನೆಯ ಆರ್ಥಿಕ ಸ್ಥಿತಿಯಿಂದ ಹಿಡಿದು ಮನೆಯವರ ಸ್ವಾಸ್ಥ್ಯಕ್ಕೂ ತೊಂದರೆಯಾಗುತ್ತದೆ. ವಾಸ್ತುಶಾಸ್ತ್ರದಲ್ಲಿ ಹೇಳಿರುವಂತೆ ಕನ್ನಡಿಯಲ್ಲಿ ಕಾಣುವ ಅಗ್ನಿಯ ಪ್ರತಿಬಿಂಬ ಅಶುಭವಾಗಿದ್ದು ಮನೆಯ ಕೆಡುಕಿಗೆ ಕಾರಣವಾಗುತ್ತದೆ.

ಅಡುಗೆ ಮನೆಯಲ್ಲಿ ದಿಕ್ಕುಗಳ ಮಹತ್ವ
- ಅಡುಗೆ ಕೋಣೆಯನ್ನು ನಿರ್ಮಿಸುವಾಗ ಅದರ ಬಾಗಿಲನ್ನು ದಕ್ಷಿಣ ದಿಕ್ಕಿಗೆ ಇಡಬಾರದು. 
- ಇಂಡಕ್ಷನ್ ಮತ್ತು ಮೈಕ್ರೋವೇವ್‌ಗಳನ್ನು ಆಗ್ನೇಯ ಮೂಲೆಯಲ್ಲಿ ಇಡಬೇಕು. 
- ಅಡುಗೆ ಮನೆಯ ಕಿಟಕಿ ಅಥವಾ ಬಲ್ಬ್‌ ಅನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡುವುದು ಒಳ್ಳೆಯದು.
- ಫ್ರಿಡ್ಜ್‌ ಅನ್ನು ಅಡುಗೆ ಮನೆಯ ವಾಯವ್ಯ ದಿಕ್ಕಿನಲ್ಲಿ ಇಟ್ಟರೆ ಉತ್ತಮ.
- ಅಡುಗೆ ಕೋಣೆಯಲ್ಲಿ ಓಲೆಯನ್ನು ಉತ್ತರ ಮತ್ತು ದಕ್ಷಿಣ ದಿಕ್ಕಿಗೆ ಮುಖಮಾಡಿ ಇಡಬಾರದು. ಉತ್ತರ ದಿಕ್ಕು ಕುಬೇರನ ದಿಕ್ಕಾಗಿರುವ ಕಾರಣ ಅಗ್ನಿಗೂ ಕುಬೇರನಿಗೂ ಆಗಿಬರುವುದಿಲ್ಲ. ಓಲೆಯನ್ನು ಗೋಡೆಗೆ ತಾಕಿಸಿ ಇಡಬಾರದು.
- ಅಡುಗೆ ಮನೆಯ ನೆಲಕ್ಕೆ ಹಸಿರು ಅಥವಾ ಕಪ್ಪು ಬಣ್ಣದ ಕಲ್ಲನ್ನು ಹಾಕಬಾರದು. ಕೆಂಪು ಬಣ್ಣದ್ದಾದರೆ ಹೆಚ್ಚು ಉತ್ತಮ.

ಇದನ್ನು ಓದಿ: ಜೀವನದಲ್ಲಿ ಯಶಸ್ಸು ಪಡೆಯಲು ಭಗವಂತನನ್ನು ಹೀಗೆ ಆರಾಧಿಸಿ.

ಕೊನೇ ಪಕ್ಷ ಹೀಗಾದರೂ ಮಾಡಿ
ಕೆಲವು ನಿಯಮಗಳನ್ನು ಹಲವಾರು ಕಾರಣಗಳಿಂದ ಪಾಲಿಸುವುದು ಕಷ್ಟಕರವಾಗುತ್ತದೆ. ಅಂದರೆ ಮನೆ ಚಿಕ್ಕದಾಗಿರುವುದು, ಜಾಗದ ಸಮಸ್ಯೆಯಿಂದ ಎಲ್ಲವನ್ನೂ ದಿಕ್ಕು ನೋಡಿಯೇ ಇಡಲಾಗುವುದಿಲ್ಲ ಎಂಬಿತ್ಯಾದಿ ಸಮಸ್ಯೆಗಳಿವೆ ಎಂದಾದರೆ ಅದಕ್ಕೂ ಒಂದು ಪರಿಹಾರವಿದೆ. ಸಣ್ಣ ತಾಮ್ರದ ತಂಬಿಗೆಯಲ್ಲಿ ಕಲ್ಲು ಉಪ್ಪನ್ನು ತುಂಬಿ ಪೂರ್ವ ದಿಕ್ಕಿಗೆ ಮುಖಮಾಡಿ ಅಡುಗೆ ಕೋಣೆಯಲ್ಲಿಯೇ ಇಡಬೇಕು. ಇದರಿಂದ ವಾಸ್ತುವಿಗೆ ಸಂಬಂಧಪಟ್ಟ ದೋಷವಿದ್ದರೆ ನಿವಾರಣೆಯಾಗುತ್ತದೆ.

Latest Videos
Follow Us:
Download App:
  • android
  • ios