ಹಸ್ತದಲ್ಲಿರುವ ರೇಖೆಗಳಂತೆಯೇ, ಹಲವು ಅರ್ಥವಾಗದ ಚಿಹ್ನೆಗಳಿರುತ್ತವೆ. ಅವುಗಳಿಂದಲೂ ಜೀವನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ತಿಳಿಯಲು ಸಾಧ್ಯವಿದೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ರೇಖೆಗಳನ್ನು ನೋಡಿ ಭೂತ-ಭವಿಷ್ಯತ್‌ ಅನ್ನು ಹೇಳುತ್ತಾರೆ. ಹಾಗೆಯೇ ಚಿಹ್ನೆಗಳನ್ನು ನೋಡಿಯೂ  ಜೀವನದ ಅದೃಷ್ಟ ಬಗ್ಗೆ, ಸಂಪತ್ತು, ಆರ್ಥಿಕಸ್ಥಿತಿಯ ವಿಚಾರಗಳನ್ನು ತಿಳಿಯಬಹುದಾಗಿದೆ.

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಕೇವಲ ರೇಖೆಗಳಿಂದ ಅಷ್ಟೇ ಅಲ್ಲ ಹಸ್ತದಲ್ಲಿರುವ ಚಿಹ್ನೆಗಳಿಂದಲೂ ಭವಿಷ್ಯದ ಕೆಲವು ಪ್ರಧಾನ ಅಂಶಗಳ ತಿಳಿವಳಿಕೆ ಸಾಧ್ಯ. ಜ್ಯೋತಿಷ್ಯ ಶಾಸ್ತ್ರದಿಂದ ಭವಿಷ್ಯವನ್ನು ತಿಳಿದುಕೊಳ್ಳಬಹುದು. ಹಾಗೆಯೇ ಹಸ್ತವನ್ನು ನೋಡಿಯೂ ಭವಿಷ್ಯದ ಬಗ್ಗೆ ಅರಿಯಬಹುದು. ಹಸ್ತರೇಖೆಯು ವ್ಯಕ್ತಿಯ ಭವಿಷ್ಯದ ಬಗ್ಗೆ ತಿಳಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮಾನವನ ಶರೀರದ ಮೇಲಿರುವ ಹಲವು ಚಿಹ್ನೆಗಳು ಜೀವನದ ಹಲವು ವಿಷಯವನ್ನು ತಿಳಿಸುತ್ತದೆ. ಪುರಾಣ ಮತ್ತು ಶಾಸ್ತ್ರಗಳಲ್ಲಿ ಉಲ್ಲೇಖವಿರುವಂತೆ ಶರೀರದ ಮೇಲಿರುವ ಚಿಹ್ನೆಗಳನ್ನು ಗಮನಿಸಿಯೇ ವ್ಯಕ್ತಿಯ ಭೂತ, ಭವಿಷ್ಯ ಮತ್ತು ವರ್ತಮಾನದ ಹಲವು ವಿಷಯಗಳನ್ನು ತಿಳಿಯಬಹುದೆಂದು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred



ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಹಸ್ತದಲ್ಲಿರುವ ಕೆಲವು ವಿಶೇಷ ಚಿಹ್ನೆಗಳು ಭವಿಷ್ಯ ಮತ್ತು ಭಾಗ್ಯದ ಬಗ್ಗೆ ತಿಳಿಸುವಲ್ಲಿ ಸಹಾಯಕವಾಗುತ್ತವೆ. ಭವಿಷ್ಯದಲ್ಲಿ ಬರುವ ಸುಖ-ದುಃಖಗಳ ಬಗ್ಗೆ ತಿಳಿಯಬಹುದಾಗಿದೆ. ಹಸ್ತದಲ್ಲಿರುವ ಈ ವಿಶೇಷ ರೇಖೆ ಅಥವಾ ಚಿಹ್ನೆಗಳ ಬಗ್ಗೆ ತಿಳಿದುಕೊಂಡರೆ ನಿಮ್ಮ ಭವಿಷ್ಯದ ಬಗೆಗಿನ ಕೆಲವು ವಿಷಯಗಳನ್ನು ಅರಿಯುವುದು ಸರಳವಾಗುತ್ತದೆ.

ಇದನ್ನು ಓದಿ: ನೌಕರಿ ಖಾತರಿ-ಕಿರಿಕಿರಿ ಎಲ್ಲವಕ್ಕೂ ಇಲ್ಲಿ ಉತ್ತರ ಸಿಗುತ್ತೆ ಕಣ್ರೀ!

ಬೆರಳಿನಲ್ಲಿರುವ ಚಕ್ರ ಚಿಹ್ನೆಯ ಮಹತ್ವ
ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವಂತೆ ಕೈ ಬೆರಳುಗಳಲ್ಲಿ ಚಕ್ರ ಆಕಾರದ ಚಿಹ್ನೆಯಿರುವವರು ಜೀವನದಲ್ಲಿ ಎಲ್ಲವನ್ನು ಪಡೆಯುವ ಕ್ಷಮತೆಯನ್ನು ಹೊಂದಿರುತ್ತಾರೆ. ಯಾರ ಹತ್ತೂ ಕೈ ಬೆರಳುಗಳ ಮೇಲಿನ ಭಾಗದಲ್ಲಿ ಚಕ್ರದ ಚಿಹ್ನೆ ಇರುತ್ತದೆಯೋ ಅಂತಹವರ ರಾಜರಾಗುತ್ತಾರೆ. ಅಂದರೆ ವರ್ತಮಾನದಲ್ಲಿ ಇಂಥ ವ್ಯಕ್ತಿಗಳು ಪ್ರಸಿದ್ಧಿ ಮತ್ತು ಖ್ಯಾತಿಯನ್ನು ಪಡೆಯುತ್ತಾರೆ. ಮತ್ತು ಅವರ ಮನೋಭಿಲಾಷೆಗಳೆಲ್ಲ ಪೂರ್ಣವಾಗುತ್ತವೆ. ಈ ವ್ಯಕ್ತಿಗಳಿಗೆ ಸರ್ಕಾರದಿಂದ ಗೌರವ ಸನ್ಮಾನಗಳು ಪ್ರಾಪ್ತವಾಗುವುದಲ್ಲದೇ, ದೇಶ-ವಿದೇಶಗಳಲ್ಲೂ ಸಹ ಪ್ರಸಿದ್ಧಿ ಮತ್ತು ಯಶಸ್ಸನ್ನು ಪಡೆಯುತ್ತಾರೆ. ಕೈ ಬೆರಳುಗಳಲ್ಲಿ ಚಕ್ರದ ಚಿಹ್ನೆ ಹೊಂದಿದವರು ಬುದ್ಧಿವಂತರು ಮತ್ತು ವಿವೇಕವುಳ್ಳವರಾಗಿರುತ್ತಾರೆ.