ಜೀವನದಲ್ಲಿ ಯಶಸ್ಸು ಪಡೆಯಲು ಭಗವಂತನನ್ನು ಹೀಗೆ ಆರಾಧಿಸಿ...

ಶ್ರದ್ಧೆ ಮತ್ತು ಭಕ್ತಿಯಿಂದ ಭಗವಂತನನ್ನು ಆರಾಧಿಸಿದರೆ ಕಷ್ಟಗಳು ದೂರಾಗುವುದು ಖಚಿತ. ವಿಶ್ವಾಸವಿಟ್ಟು ದೇವರ ಸ್ತುತಿಗಳನ್ನು, ಮಂತ್ರಗಳನ್ನು ಜಪಿಸಿದರೆ ಉತ್ತಮ ಫಲಸಿಗುತ್ತದೆ. ಸಕಾರಾತ್ಮಕ ಶಕ್ತಿಯನ್ನು ತುಂಬಿ ಯಶಸ್ಸಿನ ಹಾದಿಯತ್ತ ಕರೆದೊಯ್ಯುವ ಈ ಮಂತ್ರಗಳನ್ನು ಪ್ರತಿನಿತ್ಯ ಜಪಿಸಿದರೆ ಮನೋವಾಂಛಿತ ಸಿದ್ಧಿಸುತ್ತದೆ. ಪ್ರತಿ ಮಂತ್ರಕ್ಕೂ ಅದರದ್ದೇ ಆದ ಧ್ವನಿ ಮತ್ತು ತರಂಗಗಳಿರುತ್ತವೆ, ಇದನ್ನು ಉಚ್ಛಾರಣೆ ಮಾಡುವುದರಿಂದ ನಕಾರಾತ್ಮಕತೆ ದೂರಾಗುತ್ತದೆ, ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ. ಪರಿಣಾಮಕಾರಿ ಮಂತ್ರಗಳ ಬಗ್ಗೆ ಅರಿತು, ಜಪಿಸೋಣ.

Way of worshiping god chanting hymns to be succeeded in life

ಭಕ್ತಿಯಿಂದ ಭಗವಂತನನ್ನು ಸ್ಮರಿಸಿದರೆ ಕಷ್ಟಗಳು ಕಳೆದು ಸುಖ ಸಿಗುತ್ತದೆ ಎಂದು ಹೇಳುತ್ತದೆ ಪುರಾಣ. ಧಾರ್ಮಿಕವಾಗಿ ದೇವರನ್ನು ಭಜಿಸುವುದು, ಆರಾಧಿಸುವುದು, ಪೂಜಿಸಿ ಪ್ರಾರ್ಥಿಸುವುದು ನಮಗೆ ಕಷ್ಟಗಳನ್ನು ಎದುರಿಸುವ ಶಕ್ತಿಕೊಟ್ಟು ಕಾಪಾಡಲಿ ಎಂದು. ಕೆಲವರು ಧನ-ಧಾನ್ಯಕ್ಕಾಗಿ ದೇವರನ್ನು ಬೇಡಿದರೆ, ಮತ್ತೆ ಕೆಲವರು ಸಂಪತ್ತಿಗೆ, ಸಿರಿವಂತಿಕೆಗೆ, ಇನ್ನಷ್ಟು ಜನ ಯಶಸ್ಸು ಮತ್ತು ಏಳಿಗೆಗೆ. ಭಗವಂತನ ಧ್ಯಾನ-ಅನುಷ್ಟಾನಗಳಿಂದ ಎಲ್ಲವನ್ನೂ ಪಡೆಯಬಹುದು.

ಭಗವಂತನ ಬಳಿ ಎಲ್ಲರಿಗೂ ಕೊಡಲು ಎಲ್ಲವೂ ಉಂಟು, ಕೇಳುವ ಬಗೆ ಮುಖ್ಯವಾಗುತ್ತದೆ. ಭಕ್ತಿಯಿಂದ ಮಾಡಿದ ಪೂಜೆ, ಮಂತ್ರೋಚ್ಛಾರಗಳು ಭಗವಂತನನ್ನು ತಲುಪುತ್ತದೆ. ಯಶಸ್ಸಿಗೆ ಭಗವಂತನನ್ನು ಸ್ತುತಿಸಲು   ಶಕ್ತಿಯುತ ಮಂತ್ರಗಳಿವೆ. ಅವುಗಳನ್ನು ಪಠಿಸಿ ಯಶಸ್ಸಿನ ಮೆಟ್ಟಿಲೇರಬಹುದು. ಈ ಮಂತ್ರಗಳನ್ನು ಪಠಿಸುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುವುದರಿಂದ ಎಂಥಹ ಕಠಿಣ ಸಂದರ್ಭಗಳನ್ನು ಎದುರಿಸುವ ಸಾಮರ್ಥ್ಯ ಬರುತ್ತದೆ. ಪರಿಣಾಮಕಾರಿ ಮತ್ತು ಶಕ್ತಿಯುತ ಮಂತ್ರವನ್ನು ಇಲ್ಲಿ ಹೇಳಲಾಗಿದ್ದು, ಇದನ್ನು ಪಠಿಸುವುದರಿಂದ ಜೀವನದ ಕಷ್ಟಗಳಿಂದ ಪಾರಾಗಿ ಯಶಸ್ಸನ್ನು ಪಡೆಯುವುದರ ಜೊತೆಗೆ ನೆಮ್ಮದಿ ಮತ್ತು ಸಂತೋಷವನ್ನು ಕಾಣಬಹುದಾಗಿದೆ.

ಶಕ್ತಿಯುತ  ಮಂತ್ರಗಳು ಮತ್ತು ಪಠಿಸುವ ವಿಧಾನವನ್ನು ತಿಳಿಯೋಣ

ಶಿವ ಮಂತ್ರವನ್ನು ಪಠಿಸಿ
ಬೇಡಿದ್ದನ್ನು ನೀಡುವ ವಿಷಯದಲ್ಲಿ ಶಿವನಿಗೆ ಬೇರೆ ಯಾರೂ ಸಾಟಿ ಇಲ್ಲ. ಶಿವನನ್ನು ಭಕ್ತಿಯಿಂದ ಬೇಡಿದರೆ ಕೇಳಿದ್ದನ್ನು ಕೊಡುತ್ತಾನೆ. “ಓಂ ಹಿಲೀ ಹಿಲೀ ಶೂಲಪಾಣಯೇ ನಮಃ” ಮಂತ್ರವನ್ನು ಜಪಿಸಬೇಕು. ಯಾವುದಾದರೂ ಸೋಮವಾರದಿಂದ ಈ ಮಂತ್ರವನ್ನು ಜಪಿಸುವುದಕ್ಕೆ ಪ್ರಾರಂಭಿಸಬೇಕು. ಮಂತ್ರ ಜಪಕ್ಕೆ ರುದ್ರಾಕ್ಷೀ ಮಾಲೆಯನ್ನು ಬಳಸಿ 108 ಬಾರಿ ಜಪಿಸಿದರೆ ಒಳಿತಾಗುವುದು. ಸಾಧ್ಯವಾದಲ್ಲಿ ಪ್ರತಿ ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿದರೆ ಒಳ್ಳೆಯದು.

ಇದನ್ನು ಓದಿ: ರಾಶಿ ಅನುಸಾರ ನಿಮ್ಮ ಈ ಅಂಗಗಳು ಆಕರ್ಷಕವಾಗಿರುತ್ತವೆ! 

ಯಶಸ್ಸು ಮತ್ತು ಸಂಪತ್ತಿಗೆ ಲಕ್ಷ್ಮೀ ಮಂತ್ರ
ಲಕ್ಷ್ಮೀ ದೇವಿಯು ಅದೃಷ್ಟ, ಐಶ್ವರ್ಯ,ಸಂಪತ್ತಿಗೆ ಅಧಿದೇವತೆ. ಲಕ್ಷ್ಮೀಯನ್ನು ಭಕ್ತಿಯಿಂದ ಆರಾಧಿಸಿ, “ಓಂ ಶ್ರೀ ಲಕ್ಷ್ಮೀ ಸಹೋದರಾಯ ನಮಃ” ಮಂತ್ರವನ್ನು ಜಪಿಸಿದರೆ, ಕಷ್ಟಗಳು ದೂರವಾಗಿ, ಆರ್ಥಿಕ ಸ್ಥಿತಿಯು ಅಭಿವೃದ್ಧಿಯಾಗುತ್ತದೆ. ಈ ಮಂತ್ರವನ್ನು ಪ್ರತಿದಿನ ಲಕ್ಷ್ಮೀ ಪ್ರತಿಮೆ ಅಥವಾ ಚಿತ್ರದ ಎದುರು ಜಪಿಸಬೇಕು. ಜಪಿಸುವಾಗ ಪೂರ್ವ ದಿಕ್ಕಿಗೆ ಮುಖಮಾಡಿ ಕುಳಿತುಕೊಳ್ಳಬೇಕು. ಸಾಧ್ಯವಾದಲ್ಲಿ ಕಮಲದ ಹೂವನ್ನು ಅರ್ಪಿಸಿ.

ಕಷ್ಟ ಕಳೆದು ಸುಖ ನೀಡುವ ಕೃಷ್ಣ ಮಂತ್ರ
ಶ್ರೀಕೃಷ್ಣನು ಮಹಾವಿಷ್ಣುವಿನ ಎಂಟನೇ ಅವತಾರ. ಕೃಷ್ಣನು ಬೇಡಿದ್ದನ್ನು ನೀಡುವ ಪರಮ ದಯಾಳು. ಕೃಷ್ಣನ “ಕೃಷ್ಣ ಕೃಷ್ಣ ಮಹಾಯೋಗಿನ್ ಭಕ್ತಾನಾಮ್ ಅಭಯಂಕರ ಗೋವಿಂದ ಪರಮಾನಂದ ಸರ್ವಮ್ ಮೇ ವಶಮ್ ಅನಯ” ಎಂಬ ಮಂತ್ರವನ್ನು ಜಪಿಸಬೇಕು. ಪ್ರತಿದಿನ ಸ್ನಾನದ ನಂತರ 108 ಬಾರಿ ಈ ಮಂತ್ರವನ್ನು ಜಪಿಸುವುದರಿಂದ ಸಂಕಷ್ಟಗಳನ್ನು ನಾಶಮಾಡಿ, ಆನಂದವನ್ನು ನೀಡುತ್ತಾನೆ. 

ಇದನ್ನು ಓದಿ: ಜ್ಯೋತಿಷ್ಯ ಪ್ರಕಾರ ಹೀಗೆ ಮಾಡಿದ್ರೆ, ಸಂತಾನ ಪ್ರಾಪ್ತಿ ಗ್ಯಾರಂಟಿ!

ಸಂಕಟ ಹರಣ ಹನುಮಂತನನ್ನು ಜಪಿಸಿ
ಅತ್ಯಂತ ಪ್ರಭಾವಶಾಲಿಯಾದ ಹನುಮಂತನ ಈ ಮಂತ್ರವನ್ನು ಜಪಿಸುವುದರಿಂದ ನೋವು ಮತ್ತು ಸಂಕಟ ನಾಶವಾಗುತ್ತದೆ. “ಓಂ ಹನುಮಂತ ವೀರ ರಖೋ ಹದ್ ಧೀರ್ ಕರೋ ಯೇ ಕಾಮ್ ವ್ಯಾಪಾರ್ ಬಡೇ ತಂತ್ರ ದೂರ್ ಹೋ ಟೋನಾ ಗ್ರಾಹಕ್ ಬಡೇ ಕಾರಜ್ ಸಿದ್ಧ್ ಹೋಯಾ ನ ಹೋಯಾ ತೋ ಅಜ್ಞಾನಿ ಕೀ ದುಹಾಯೀ” ಪ್ರತಿದಿನ ದಿನ ಶೂಚಿರ್ಭೂತರಾಗಿ ಶ್ರದ್ಧೆಯಿಂದ ಈ ಮಂತ್ರವನ್ನು ಜಪಿಸಿದರೆ ಮನೋಕಾಮನೆಗಳು ಬೇಗ ಈಡೇರುತ್ತದೆ.

ವಿಘ್ನನಿವಾರಕ ಗಣೇಶನನ್ನು ಸ್ತುತಿಸಿ
ಪ್ರಥಮ ಪೂಜಕ ಗಣೇಶನನ್ನು ಭಜಿಸಿದರೆ ಸಂಕಷ್ಟದಿಂದ ಪಾರು ಮಾಡುತ್ತಾನೆ. ವಿಘ್ನನಿವಾರಕನೆಂದೇ ಕರೆಸಿಕೊಳ್ಳುವ ಗಣೇಶನ ಈ ಮಂತ್ರವನ್ನು ಜಪಿಸಿದರೆ ತೊಂದರೆಗಳನ್ನು ಪರಿಹರಿಸುತ್ತಾನೆ. “ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ, ತನ್ನೋ ದಂತಿ ಪ್ರಚೋದಯಾತ್/ ಮಹಾಕರ್ಣಾಯ ವಿದ್ಮಹೇ, ವಕ್ರತುಂಡಾಯ ಧೀಮಹಿ, ತನ್ನೋ ದಂತಿ ಪ್ರಚೋದಯಾತ್/ ಗಜಾನನಾಯ ವಿದ್ಮಹೇ, ವಕ್ರತುಂಡಾಯ ಧೀಮಹಿ, ತನ್ನೋ ದಂತಿ ಪ್ರಚೋದಯಾತ್ ” ನಿತ್ಯವೂ ಪಠಿಸಿದರೆ ಯಶಸ್ಸು, ನೆಮ್ಮದಿ, ಅದೃಷ್ಟದ ಜೀವನ ನಿಮ್ಮದಾಗುತ್ತದೆ.

ಇದನ್ನು ಓದಿ: ಸಮಸ್ಯೆಗಳ ಪರಿಹಾರಕ್ಕೆ ಮಾಡಿ ಈ ವ್ರತ, ತಿಳಿಯಿರಿ ಇದರ ಲಾಭ!

ದಾರಿದ್ರ್ಯವನ್ನು ಕಳೆಯುವ ವಿಷ್ಣು ಮಂತ್ರ
ಜಗತ್ತನ್ನೇ ಕಾಯುವ ವಿಷ್ಣುವನ್ನು ಸ್ಮರಿಸಿದರೆ ಸಂಕಟವನ್ನು ದೂರಮಾಡಿ, ನೆಮ್ಮದಿಯನ್ನು ನೀಡುತ್ತಾನೆ. ಕೇಳಿದ್ದನ್ನು ಕರುಣಿಸುವ ವಿಷ್ಣುವಿನ ಈ ಮಂತ್ರವನ್ನು ಜಪಿಸಿದರೆ  ದುಷ್ಟಶಕ್ತಿಗಳನ್ನು ನಾಶಮಾಡಿ ಸಕಾರಾತ್ಮಕತೆ ಹೆಚ್ಚುವುದಲ್ಲದೇ ಅಂದುಕೊಂಡದ್ದು ಈಡೇರುವಂತೆ ಮಾಡುತ್ತಾನೆ ಶ್ರೀ ವಿಷ್ಣು. “ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಂ/ ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭಿರ್ದ್ಯಾನಗಮ್ಯಂ ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ//”

Latest Videos
Follow Us:
Download App:
  • android
  • ios