ಕೈ ನೋಡಿಯೇ ಹೇಳಬಹುದು ಯಾರು ತಪ್ಪು ನಿರ್ಧಾರ ತೆಗೆದುಕೊಳ್ಳುವವರೆಂದು! ನಿಮ್ಮ ಕೈ ಹೀಗಿದೆಯೇ?
ಜೀವನದಲ್ಲಿ ಒಳ್ಳೆ ಸಮಯ ಮತ್ತು ಕೆಟ್ಟ ಸಮಯ ಎಂಬುವು ಬೇಡವೆಂದರ ಎದುರಾಗುತ್ತವೆ. ಇವೆರಡಕ್ಕೂ ಬಹುತೇಕ ಬಾರಿ ನಾವು ತೆಗೆದುಕೊಂಡ ನಿರ್ಧಾರಗಳೇ ಕಾರಣವಾಗಿರುತ್ತವೆ. ನಮ್ಮ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಗ್ರಹಗಳು ಯಾವುವು, ತಪ್ಪು ನಿರ್ಧಾರವಾಗದಂತೆ ಏನು ಕ್ರಮ ಕೈಗೊಳ್ಳಬೇಕು?
ಒಳ್ಳೆ ಗಳಿಗೆ ಹಾಗೂ ಕೆಟ್ಟ ಗಳಿಗೆಗಳು ಎಲ್ಲರ ಜೀವನದಲ್ಲೂ ಬರುತ್ತವೆ. ತಪ್ಪು ನಿರ್ಧಾರ(wrong decision)ಗಳಿಂದ ಇವು ಬರುವುದು ಒಂದೆಡೆಯಾದರೆ, ಇಂಥ ಸಂದರ್ಭದಲ್ಲಿ ಸರಿಯಾದ ನಿರ್ಧಾರ(right decision) ತೆಗೆದುಕೊಳ್ಳುವುದರಿಂದ ಸನ್ನಿವೇಶ ಸರಿ ಪಡಿಸಲು ಸಾಧ್ಯವಾಗುತ್ತದೆ. ಆದರೆ, ಕೆಲವೊಮ್ಮೆ ಎಷ್ಟೇ ಯೋಚಿಸಿದರೂ ತೆಗೆದುಕೊಳ್ಳುವ ನಿರ್ಧಾರ ತಪ್ಪಾಗಿ ಬಿಡುತ್ತದೆ. ನಂತರ ಕೊರಗುತ್ತಾ ಕೂರುವಂತಾಗುತ್ತದೆ. ಹಾಗಿದ್ದರೆ ಇದಕ್ಕೆ ಜ್ಯೋತಿಷ್ಯ ನೀಡುವ ಕಾರಣವೇನು, ಇಂಥ ಸನ್ನಿವೇಶ ಸರಿ ಪಡಿಸುವ ವಿಧಾನಗಳೇನು.. ಎಲ್ಲವನ್ನೂ ವಿವರವಾಗಿ ನೋಡೋಣ ಬನ್ನಿ.
ಜೀವನದಲ್ಲಿ ಯಶಸ್ಸನ್ನು ಪಡೆಯಲು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯ. ಏಕೆಂದರೆ, ಒಂದೇ ಒಂದು ತಪ್ಪು ನಿರ್ಧಾರವೂ ಬದುಕನ್ನೇ ತಲೆ ಕೆಳಗು ಮಾಡಿಬಿಡಬಹುದು.
ಆದರೆ, ಬಹಳಷ್ಟು ಬಾರಿ, ನಮ್ಮ ಜಾತಕದಲ್ಲಿ ಗ್ರಹಗಳ ಸಂಯೋಜನೆ ಹೇಗಿರುತ್ತದೆಂದರೆ ಅವು ನಮ್ಮನ್ನು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಬಿಡುವುದೇ ಇಲ್ಲ. ಅವುಗಳ ಪ್ರಭಾವದ ಕಾರಣದಿಂದಲೇ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದನ್ನೇ ಅಲ್ಲವೇ ಹಣೆಬರಹ ಎನ್ನುವುದು. ಯಾವೆಲ್ಲ ಸಂದರ್ಭಗಳಲ್ಲಿ ಯಾವ ಗ್ರಹದ ಕಾರಣಗಳಿಂದ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತೇವೆ ತಿಳಿಸುತ್ತೇವೆ.
Best Cooks: ಈ 5 ರಾಶಿಯವರು ಅಡುಗೆಗೆ ನಿಂತರೆ ಭೀಮಸೇನ ನಳಮಹಾರಾಜರೇ!
ಯಾರ ಜಾತಕದಲ್ಲಿ ಅವರ ರಾಶಿಯ ಪ್ರಮುಖ ಗ್ರಹವೇ ದುರ್ಬಲವಾಗಿರುತ್ತದೆಯೋ, ಅಂಥವರಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಇನ್ನು ಯಾರ ಜಾತಕದಲ್ಲಿ ಚಂದ್ರ (moon) ದುರ್ಬಲನಾಗಿರುತ್ತಾನೋ, ಹಾನಿಕಾರಕನಾಗಿರುತ್ತಾನೋ ಅಂಥವರು ಕೂಡಾ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯಿಂದ ವಂಚಿತರಾಗುತ್ತಾರೆ. ಇಂಥವರಲ್ಲಿ ಆತ್ಮವಿಶ್ವಾಸ(self confidence)ದ ಕೊರತೆಯ ಜೊತೆಗೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇರುವುದಿಲ್ಲ.
ಹೀಗೆ ಚಂದ್ರ ಹಾನಿಕಾರಕ ಸ್ಥಾನದಲ್ಲಿದ್ದಾಗ ಆತ ಬೇಕೆಂದೇ ವ್ಯಕ್ತಿಯನ್ನು ತಪ್ಪು ನಿರ್ಧಾರ ತೆಗೆದುಕೊಳ್ಳುವ ಸನ್ನಿವೇಶಗಳಲ್ಲಿ ತೊಡಗಿಸುತ್ತಾನೆ. ವ್ಯಕ್ತಿಯು ನಿರ್ಧಾರ ತೆಗೆದುಕೊಳ್ಳುವಾಗ ಸಾಕಷ್ಟು ಒತ್ತಡ ಎದುರಿಸಬೇಕಾದ ಸಂದರ್ಭಗಳು ಸೃಷ್ಟಿಯಾಗುತ್ತವೆ. ಈ ಸಮಯದಲ್ಲಿ ಯಾರಾದರೂ ಸರಿಯಾದ ನಿರ್ಧಾರ ಕುರಿತ ಸಲಹೆ ನೀಡಿದರೂ ಅದನ್ನು ಕೇಳುವ ಪರಿಸ್ಥಿತಿಯಲ್ಲಿ ವ್ಯಕ್ತಿ ಇರುವುದಿಲ್ಲ. ಹಟಮಾರಿತನಕ್ಕೆ ಬೀಳುತ್ತಾನೆ. ಭಾವನೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾನೆ. ಜೊತೆಗೆ, ಪದೇ ಪದೆ ತನ್ನ ನಿರ್ಧಾರ ಬದಲಿಸುತ್ತಿರುತ್ತಾನೆ. ಅಂತಿಮವಾಗಿ ಅವನು ಜೀವನದಲ್ಲಿ ಬಹಳಷ್ಟು ತೊಂದರೆಗಳನ್ನು ತರುವಂತಹ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ.
ಕೈ ನೋಡಿ ತಿಳಿಯಬಹುದು..
ಗ್ರಹಗಳ ಕಾರಣದ ಬಗ್ಗೆ ನೋಡಿದೆವು. ಈಗ ಕೈಯನ್ನು ನೋಡಿ ತಪ್ಪು ನಿರ್ಧಾರ ತೆಗೆದುಕೊಳ್ಳುವವರನ್ನು ಹೇಗೆ ಕಂಡುಹಿಡಿಯಬಹುದು ಎಂಬುದರ ಕುರಿತು ಮಾತನಾಡೋಣ. ಯಾರ ಬೆರಳುಗಳು(fingers) ಅವರ ಅಂಗೈ(palm)ಗಿಂತ ಉದ್ದವಾಗಿರುತ್ತವೆಯೋ, ದೊಡ್ಡದೆನಿಸುತ್ತವೆಯೋ ಅಂತ ಜನರು ತುಂಬಾ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅಲ್ಲದೆ, ಒಬ್ಬ ವ್ಯಕ್ತಿಯ ಹೆಬ್ಬೆರಳು(Thumb) ಚಿಕ್ಕದಾಗಿದ್ದರೆ ಅಥವಾ ಮುಂದಕ್ಕೆ ಬಾಗಿದ್ದರೆ, ಅಂಥ ಜನರು ಸಹ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
Holi 2022: ಹೋಳಿಯ ಉತ್ಸಾಹ ಹೆಚ್ಚಿಸುವ ಭಾಂಗ್
ಸರಿ ನಿರ್ಧಾರ ತೆಗೆದುಕೊಳ್ಳುವುದು ಹೇಗೆ?
ನಿಮ್ಮ ಜಾತಕದಲ್ಲೂ ಚಂದ್ರ ಹಾಗೂ ರಾಶಿಯ ಗ್ರಹ ದುರ್ಬಲವಾಗಿದ್ದರೆ, ಅಥವಾ ನಿಮ್ಮ ಕೈ ಆಕಾರ ಮೇಲೆ ಹೇಳಿದಂತೆ ಇದ್ದರೆ ಆಗ ನೀವು ಸರಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಕ್ರಮಗಳನ್ನು ಅನುಸರಿಸಿ.
- ಯಾರ ಜಾತಕದಲ್ಲಿ ಚಂದ್ರ ಅಥವಾ ಗುರು(Moon or Jupiter) ಬಲವಾಗಿರುತ್ತಾರೋ ಅಂಥವರಲ್ಲಿ ನಿರ್ಧಾರದ ಕುರಿತು ಸಲಹೆ ಕೇಳಿ. ಇಲ್ಲವೇ ಗುರುಗಳ ಸಹಾಯ ಪಡೆದುಕೊಳ್ಳಿ.
- ಇನ್ನು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಸರಿಯಾದ ರೀತಿಯಲ್ಲಿ ಯೋಚಿಸಲು ಧ್ಯಾನ ಸಹಾಯಕ್ಕೆ ಬರುತ್ತದೆ. ಹಾಗಾಗಿ, ಪ್ರತಿದಿನ ಧ್ಯಾನ(Meditation) ಅಭ್ಯಾಸ ಮಾಡಿ. ಈಶಾನ್ಯ ದಿಕ್ಕಿ(North-East direction)ಗೆ ಅಭಿಮುಖವಾಗಿ ಕುಳಿತು ಓಂ ನಾಮ ಜಪ ಮಾಡುವುದರಿಂದ ಗೊಂದಲ ಕಳೆದುಕೊಳ್ಳಬಹುದು.
- ಎಲ್ಲಕ್ಕಿಂತ ಉತ್ತಮ ಪರಿಹಾರವೆಂದರೆ ನೀವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ದೇವರನ್ನು ಸಂಪೂರ್ಣ ಆರಾಧಿಸಿ, ಆಥನ ಮೇಲೆ ಭಾರ ಹಾಕಿ ನಿರ್ಧಾರ ತೆಗೆದುಕೊಳ್ಳುವುದು.
- ನಿರ್ಧಾರ ತೆಗೆದುಕೊಳ್ಳುವಾಗ ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ, ಕೋಪ ಮತ್ತು ಅಸಹನೆಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
- ಮೇಷ, ಮಿಥುನ, ಕನ್ಯಾ ಅಥವಾ ಮೀನ ಲಗ್ನದಲ್ಲಿ ಏನನ್ನೂ ನಿರ್ಧರಿಸಬೇಡಿ.