ಕನಸು ಸರ್ವೇ ಸಾಮಾನ್ಯವಾಗಿ ಬೀಳುತ್ತಿರುತ್ತದೆ. ಕೆಲವು ನೆನಪಿನಲ್ಲಿ ಉಳಿದರೆ ಇನ್ನು ಕೆಲವು ಕನಸು ಮಸುಕಾಗಿ ಕಾಡುತ್ತದೆ. ಕೆಲವು ರೀತಿಯ ಕನಸುಗಳು ಖುಷಿ ಕೊಟ್ಟರೆ, ಮತ್ತೆ ಕೆಲವು ಗಾಬರಿಗೊಳಿಸುತ್ತದೆ. ಅರ್ಥವಾಗದೇ ಕಾಡುವ ಕನಸು ಹಲವಾರು, , ಇದರ ಅರ್ಥ ಅಥವಾ ಸಂಕೇತ ಏನಿರಬಹುದು? ಎಂದು ಚಿಂತಿಸುತ್ತಾ ಕೂರುತ್ತೇವೆ. ಧಾರ್ಮಿಕ ಮತ್ತು ಜ್ಯೋತಿಷ್ಯದಲ್ಲಿ ಯಾವ ರೀತಿಯ ಕನಸು ಬಿದ್ದರೆ ಯಾವುದರ ಸಂಕೇತ ಎಂಬ ಬಗ್ಗೆ ಹೇಳಲಾಗಿದೆ. ಸ್ವಪ್ನಶಾಸ್ತ್ರವು ಕನಸು ಭವಿಷ್ಯದ ವಿಚಾರಗಳನ್ನು ಮೊದಲೇ ತಿಳಿಸುವ ಸಂಕೇತ ಎಂದು ಹೇಳುತ್ತದೆ.

ಹಲವಾರು ತರದ ಕನಸು ಅರ್ಥವೇ ಆಗುವುದಿಲ್ಲ,ಅದರಲ್ಲೂ ಕೆಲವರಿಗೆ ಕಾಮನಬಿಲ್ಲು ಕನಸಿನಲ್ಲಿ ಆಗಾಗ ಕಾಣಿಸುತ್ತದೆ. ಕಾಮನಬಿಲ್ಲಿನ ಕನಸಿನಲ್ಲೂ ಹಲವು ಬಗೆ, ಆ ಎಲ್ಲ ಕನಸುಗಳು ಯಾವುದಕ್ಕೆ ಸಂಬಂಧಿಸಿದ್ದು, ಅದು ಯಾವುದರ ಸಂಕೇತ ಎಂಬಿತ್ಯಾದಿ ಅಂಶಗಳನ್ನು ತಿಳಿಯೋಣ.

ಕಾಮನಬಿಲ್ಲು ಕನಸಿನಲ್ಲಿ ಕಂಡರೆ
ಕನಸಿನಲ್ಲಿ ಕಾಮನಬಿಲ್ಲು ಕಂಡರೆ ಜೀವನದಲ್ಲಿ ಸುಖ-ಸಮೃದ್ಧಿಯು ಸಿಗುತ್ತದೆ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ. ವ್ಯಕ್ತಿಯ ಪ್ರತಿಷ್ಠೆ, ಮತ್ತು ಪ್ರಸಿದ್ಧಿಯನ್ನು ಹೆಚ್ಚಿಸುತ್ತದೆ. ಕೆಲಸದಲ್ಲಿ ಏಳಿಗೆ, ಭೂಮಿ ಖರೀದಿಸುವ ಇಚ್ಛೆ ಇದ್ದಲ್ಲಿ, ಅದೆಲ್ಲದರಲ್ಲೂ ಸಫಲತೆ ಲಭಿಸುತ್ತದೆ ಎಂದು ಈ ಕನಸು ಸೂಚಿಸುತ್ತದೆ.

ಇದನ್ನು ಓದಿ: ಅನ್ನಪೂರ್ಣೆ ಮುನಿಸಿಗೆ ಕಾರಣವಾಗುವ ಈ ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡಬೇಡಿ!...

ಎರಡು ಬಿಂದುವನ್ನು ಜೋಡಿಸುವ ಕಾಮನಬಿಲ್ಲು
ಒಂದು ಕಡೆ ತಾಕಿ ಶುರುವಾದ ಕಾಮನಬಿಲ್ಲು ಇನ್ನೊಂದು ಬಿಂದುವಿಗೆ ತಾಕಿದ ಹಾಗೆ ಸ್ಪಷ್ಟವಾಗಿ ಕನಸು ಬಿದ್ದರೆ, ಅದರ ಅರ್ಥ ಎತ್ತರದಲ್ಲಿದ್ದರೂ  ಭೂಮಿಯ ಜೊತೆಯನ್ನು ಬಿಡಬಾರದೆಂಬಂತೆ. ಜಾತಕದಲ್ಲಿ ಸಫಲತೆಯನ್ನು ಕಾಣಬೇಕೆಂದರೆ ಅದಕ್ಕೆ ತಕ್ಕಂತೆ ಪರಿಶ್ರಮ ಮತ್ತು ದೇವರ ಕೃಪೆ ಪಡೆದುಕೊಳ್ಳಬೇಕೆಂದು ಹೇಳುತ್ತದೆ. ಅಲ್ಲದೇ ಈ ಕನಸು ಸಂಬಂಧಗಳಲ್ಲಿ ಮುಂಬರುವ ಖುಷಿಯ ಸಂಕೇತವೂ ಆಗಿರುತ್ತದೆ.

ಎರಡು ಅಥವಾ ಮೂರು ಕಾಮನಬಿಲ್ಲು ಕಂಡರೆ
ಈ ಕನಸು ಜಾತಕದ ಪ್ರಕಾರ ಇವರ ಗಂಭೀರತೆ ಮತ್ತು ಸದ್ಭಾವನೆಯನ್ನು ತೋರಿಸುತ್ತದೆ. ಮೂರು ಕಾಮನಬಿಲ್ಲು ಕನಸಿನಲ್ಲಿ ಕಂಡರೆ ಖುಷಿ ಲಭಿಸುತ್ತದೆ, ಅಲ್ಲದೇ ಈ ವ್ಯಕ್ತಿಗಳ ಆಪ್ತರಿಗೂ ಖುಷಿ ಸಿಗಲಿದೆ ಎಂಬ ಸಂಕೇತವನ್ನು ಸೂಚಿಸುತ್ತದೆ. ಕನಸು ಬಿದ್ದವರಿಗೂ ಮತ್ತು ಅವರ ಆಪ್ತರಿಗೂ ಭಾಗ್ಯದ ಬಾಗಿಲು ತೆರೆಯುತ್ತದೆ. ಉತ್ತಮ ಕೆಲಸ ಸಿಗುವ ಸಂಕೇತವೂ ಇದಾಗಿದೆ ಎಂದು ಹೇಳುತ್ತದೆ ಸ್ವಪ್ನಶಾಸ್ತ್ರ.

ಇದನ್ನು ಓದಿ: ಶ್ರೀ ಮಹಾವಿಷ್ಣುವಿನ ವಿಶೇಷ ಕೃಪೆ ಹೊಂದಿದವರ ಹಸ್ತದಲ್ಲಿರುತ್ತೆ ಈ ಐದು ಚಿಹ್ನೆ!...

ಸಮಸ್ಯೆಗಳು ದೂರವಾಗುವ ಲಕ್ಷಣ ಹೇಳುತ್ತದೆ ಈ ಕಾಮನಬಿಲ್ಲು
ಕನಸಿನಲ್ಲಿ ರಾತ್ರಿಯ ಕಪ್ಪು ಕತ್ತಲೆಯಲ್ಲಿ ಕಾಮನಬಿಲ್ಲು ಕಂಡರೆ ತೊಂದರೆಗಳು ದೂರವಾಗುವ ಸಂಕೇತವನ್ನು ಇದು ಹೇಳುತ್ತದೆ. ಕತ್ತಲಿನಲ್ಲಿ ಬೆಳಕು ಕಂಡಂತೆ, ಸಮಸ್ಯೆಯ ಅಂಧಕಾರದಲ್ಲಿರುವವರಿಗೆ ಪರಿಹಾರದ ಬೆಳಕು ಕಾಣಲಿದೆ ಎಂಬ ಸಂಕೇತವನ್ನು ಇದು ಹೇಳುತ್ತದೆ. ದೇವರ ಕಡೆಯಿಂದ ಬಂದ ಶುಭಸಂಕೇತ ಇದಾಗಿದೆ ಎಂಬ ನಂಬಿಕೆಯೂ ಇದೆ.

ಇದನ್ನು ಓದಿ: ನೌಕರಿ ಖಾತರಿ-ಕಿರಿಕಿರಿ ಎಲ್ಲವಕ್ಕೂ ಇಲ್ಲಿ ಉತ್ತರ ಸಿಗುತ್ತೆ ಕಣ್ರೀ!...

ಈ ಕನಸಿನಿಂದ ಧನಲಾಭ
ಕಾಮನಬಿಲ್ಲಿನ ಜೊತೆ ಬಂಗಾರದ ವಸ್ತುವು ಕನಸಿನಲ್ಲಿ ಕಂಡರೆ ಅದು ಧನಲಾಭದ ಸಂಕೇತ ಎಂದು ಹೇಳಲಾಗುತ್ತದೆ. ಈ ವ್ಯಕ್ತಿಗಳ ಪರಿಶ್ರಮಕ್ಕೆ ತಕ್ಕಂತೆ ಭಾಗ್ಯವು ಇವರ ಜೊತೆಗೂಡಿ ಹಣಸಂಪತ್ತನ್ನು ಪಡೆಯುವ ಸಂಕೇತ ಇದಾಗಿದೆ. ಅಚಾನಕ್ ಆಗಿ ಆರ್ಥಿಕ ಲಾಭ ತರುವ ಕನಸು ಇದಾಗಿದೆ.