Asianet Suvarna News Asianet Suvarna News

ಕೇತು ದೋಷದಿಂದ ಮುಕ್ತಿ ಪಡೆಯಲು ಹೀಗ್ ಮಾಡಿ ನೋಡಿ...

ಜಾತಕದಲ್ಲಿ ಗ್ರಹಗಳ ಸ್ಥಾನ ಮತ್ತು ಸ್ಥಿತಿಯ ಬದಲಾವಣೆ ಬಹಳ ಮುಖ್ಯವಾಗುತ್ತದೆ. ಇದರಿಂದ ಹಣೆಬರಹವೇ ವ್ಯತ್ಯಾಸವಾಗುತ್ತದೆ. ಗ್ರಹಗಳ ಸ್ಥಿತಿಗಳ ಮೇಲೆ ಲಾಭ-ನಷ್ಟಗಳು ನಿರ್ಧರಿತವಾಗುತ್ತವೆ. ಆದರೆ, ರಾಹು-ಕೇತುಗಳನ್ನು ನೀಚ ಗ್ರಹಗಳು ಎಂದೇ ಕರೆಯಲಾಗುತ್ತದೆ. ಈ ಗ್ರಹಗಳ ಸ್ಥಿತಿ ನೀಚವಾಗಿದ್ದರೆ ಅನೇಕ ತೊಂದರೆ ತಾಪತ್ರಯಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಕೇತುವಿನ ದೋಷವಿದ್ದರೆ ಏನು ಮಾಡಬೇಕು ಎಂಬುದನ್ನು ನೋಡೋಣ ಬನ್ನಿ…

If you have bad effect from Ketu then follow these steps
Author
Bangalore, First Published Sep 21, 2020, 6:06 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಮತ್ತು ಕೇತು ಗ್ರಹಗಳನ್ನು ಕ್ರೂರ ಗ್ರಹ ಎಂದೇ ಕರೆಯಲಾಗುತ್ತದೆ. ಈ ಎರಡೂ ಗ್ರಹಗಳಿಂದ ಅಶುಭ ಫಲಗಳು ಮಾತ್ರ ಲಭಿಸುತ್ತವೆ ಎಂಬ ನಂಬಿಕೆ ಬಹುತೇಕರದ್ದಾಗಿದೆ. ಆದರೆ, ಈ ಗ್ರಹಗಳು ಉಚ್ಛ ಸ್ಥಿತಿಯಲ್ಲಿದ್ದರೆ ಶುಭ ಫಲಗಳನ್ನೂ ನೀಡುತ್ತವೆ. ಇದು ಎಷ್ಟೋ ಮಂದಿಗೆ ತಿಳಿದಿರುವುದೇ ಇಲ್ಲ. ಸುಮ್ಮನೆ ಭಯ ಪಟ್ಟುಕೊಂಡು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಹೀಗಾಗಿ ಇಂತಹ ಕಲ್ಪನೆಯನ್ನು ದೂರ ಮಾಡಿಕೊಳ್ಳಬಹುದು.

"

ಕೇತು ಗ್ರಹವು ಮಾನಸಿಕ ಗುಣ, ತರ್ಕ ಮತ್ತು ಕಲ್ಪನೆಗಳ ಕಾರಕ ಗ್ರಹವಾಗಿದೆ. ಜಾತಕದಲ್ಲಿ ಕೇತು ಶುಭ ಸ್ಥಿತಿಯಲ್ಲಿದ್ದರೆ ಅಂಥವರಿಗೆ ಧನಲಾಭ ಹಾಗೂ ವೃತ್ತಿಯಲ್ಲಿ ಉನ್ನತಿ ಪ್ರಾಪ್ತಿಯಾಗುತ್ತದೆ. ಅದೇ ಅಶುಭ ಸ್ಥಿತಿಯಲ್ಲಿದ್ದರೆ ಉದ್ಯೋಗ ನಷ್ಟವಾಗುವ ಸಾಧ್ಯತೆ ದಟ್ಟವಾಗಿರುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ ಎಂದು ಚಿಂತಿಸಬೇಕಿಲ್ಲ. ಇಲ್ಲಿ ಎಲ್ಲವಕ್ಕೂ ಪರಿಹಾರೋಪಾಯಗಳು ಇದ್ದೇ ಇರುತ್ತವೆ. ಹೀಗಾಗಿ ಕೇತು ಗ್ರಹದ ಅಶುಭ ಪ್ರಭಾವದಿಂದ ಮುಕ್ತಿ ಪಡೆದು ಶುಭಫಲಗಳನ್ನು ಅನುಭವಿಸಬೇಕು ಎಂದಿದ್ದಲ್ಲಿ ಈ ಕ್ರಮಗಳನ್ನು ನೀವು ಅನುಸರಿಸಬೇಕು. 

ಇದನ್ನು ಓದಿ : ತುಲಾ ರಾಶಿ ಪ್ರವೇಶಿಸುತ್ತಿರುವ ಬುಧ, ಯಾವ ರಾಶಿಯವರಿಗೆ ಯಾವ ಶುಭ ಫಲ..! 

ಗೋಗ್ರಾಸ – ಗೋವಿಗೆ ಆಹಾರ
ಕೇತು ಗ್ರಹವು ಭೌತಿಕ ಸ್ವರೂಪವಲ್ಲ, ಇದಕ್ಕೆ ಛಾಯಾ ಗ್ರಹ ಎಂದು ಹೇಳುತ್ತಾರೆ. ಹೀಗಾಗಿ ನಿಮ್ಮ ಜಾತಕದಲ್ಲಿ ಕೇತು ಅಶುಭ ಸ್ಥಿತಿಯಲ್ಲಿದ್ದರೆ ಅಂತ ಅಶುಭ ಸ್ಥಿತಿಯನ್ನು ದೂರ ಮಾಡಿಕೊಳ್ಳಲೇ ಬೇಕು. ಹೀಗಿದ್ದಾಗ ಎರಡು ಬಣ್ಣದ ಗೋವುಗಳಿಗೆ ಗೋಗ್ರಾಸ (ಅಕ್ಕಿ-ಬೆಲ್ಲದ ಜೊತೆ ಕುಂಕುಮ ಅರಿಶಿಣವನ್ನು ಹಚ್ಚುವುದು) ಕೊಡುವುದು, ಜೊತೆಗೆ ಗೋವಿಗೆ ಆಹಾರ ಕೊಡುವುದನ್ನು ಮಾಡಬೇಕು. ಇದರ ಜೊತೆಗೆ ಶ್ವಾನಕ್ಕೂ ಆಹಾರವನ್ನು ಕೊಡಲಾಗುತ್ತದೆ. 

ನೀರಿಗೆ ಮಸಿಕೆಂಡ (ಇದ್ದಿಲು)
ಕೇತುವಿನ ಅಶುಭ ಸ್ಥಿತಿಯಿಂದ ಮುಕ್ತಿ ಪಡೆಯಬೇಕು ಎಂದರೆ ಮಸಿಕೆಂಡವನ್ನು 8 ಭಾಗಗಳಾಗಿ ಮಾಡಿ ಹರಿಯುವ ನೀರಿನಲ್ಲಿ ಬಿಡಬೇಕು. ಜೊತೆಗೆ ಕೆಂಪು ಇರುವೆಗೆ ಆಹಾರವನ್ನು ನೀಡಬೇಕು. ಜೊತೆಗೆ ಅಂಕವಿಕಲಿಗೆ ಬೇರೆ ಬೇರೆ ಬಣ್ಣಗಳ ವಸ್ತ್ರಗಳನ್ನು ದಾನ ಮಾಡಬೇಕು. 

If you have bad effect from Ketu then follow these steps

ಭೈರವನಾಥನ ಉಪಾಸನೆ
ಕೇತುವಿನ ಕೆಟ್ಟ ದೃಷ್ಟಿ ನಿಮ್ಮ ಜಾತಕದ ಮೇಲಿದ್ದರೆ ಭೈರವನಾಥನ ಉಪಾಸನೆ ಮಾಡಬೇಕು. ಅಂದರೆ ಬಾಳೆ ಎಲೆ ಮೇಲೆ ಅಕ್ಕಿಯನ್ನಿಟ್ಟು ನೈವೇದ್ಯ ಮಾಡಬೇಕು. ಬಳಿಕ ಅಶ್ವತ್ಥ ಮರದ ಪ್ರದಕ್ಷಿಣೆ ಮಾಡುವುದಲ್ಲದೆ, ನಾಗರಮೂರ್ತಿಯ ಪೂಜೆ ಮಾಡಬೇಕು, ಅಲ್ಲದೆ, ಸಾಧ್ಯವಾದರೆ ಯಾವಾಗಲೂ ಹಸಿರುಬಣ್ಣದ ಕರವಸ್ತ್ರವನ್ನು ಜೊತೆಯಲ್ಲಿಟ್ಟುಕೊಳ್ಳಬೇಕು. 

ಇದನ್ನು ಓದಿ : ಅಧಿಕ ಮಾಸದಲ್ಲಿ ಈ ಕಾರ್ಯಗಳನ್ನು ಮಾಡಿ, ಅದೃಷ್ಟವಂತರಾಗಿ..! 

ಎಳ್ಳಿನ ಉಂಡೆ 
ಕೇತು ಗ್ರಹದ ಶಾಂತಿಗೆ ಈ ಪರಿಹಾರೋಪಾಯವನ್ನು ಮಾಡಿಕೊಳ್ಳಬಹುದು. ಮುತ್ತೈದೆ ಮಹಿಳೆಯರಿಗೆ ಈ ಎಳ್ಳಿನ ಉಂಡೆಗಳನ್ನು ನೀಡಬೇಕು. ಮತ್ತು ಎಳ್ಳನ್ನು ದಾನ ಮಾಡಬೇಕು. ಭಾನುವಾರದಂದು ಕನ್ಯೆಯರಿಗೆ ಸಿಹಿ ಮೊಸರು ಹಾಗೂ ಸಿಹಿ ಪದಾರ್ಥವನ್ನು ನೀಡಬೇಕು. ಇದರಿಂದ ಕೇತುವಿನ ಕೆಟ್ಟ ಪ್ರಭಾವ ತಗ್ಗುತ್ತದೆ. 

"

ತುಪ್ಪದ ದೀಪ ಹಚ್ಚಿ
ಜಾತಕದಲ್ಲಿ ಕೇತು ದೋಷವುಳ್ಳವರು ಕೊನೇ ಪಕ್ಷ ದೇವಸ್ಥಾನಗಳಿಗೆ ಭೇಟಿ ನೀಡಿ ಭಕ್ತಿಯಿಂದ ತುಪ್ಪದ ದೀಪವನ್ನು ಹಚ್ಚಿ ಪ್ರಾರ್ಥಿಸಿಕೊಳ್ಳಬೇಕು. ಈ ಕೇತುದೋಷದಿಂದ ಮುಕ್ತಿ ಬೇಕು ಎಂದು ಶ್ರದ್ಧೆಯಿಂದ ಪ್ರಾರ್ಥನೆ ಮಾಡಿಕೊಂಡಾಗ ಫಲ ಪ್ರಾಪ್ತಿಯಾಗುತ್ತದೆ.

ಗಣೇಶ ದ್ವಾದಶ ನಾಮ ಸ್ತೋತ್ರ
ಪ್ರತಿದಿನ ಗಣಪತಿ ಪೂಜೆ ಮಾಡಿ, ನಂತರ ಗಣೇಶ ದ್ವಾದಶ ನಾಮ ಸ್ತೋತ್ರವನ್ನು ಪಠಿಸಬೇಕು. ಹೀಗೆ ಪಠಿಸುವುದರಿಂದ ಕೇತುವಿನ ಅಶುಭ ಪ್ರಭಾವವನ್ನು ಭಗವಂತನಾದ ವಿಘ್ನವಿನಾಶಕ ತಗ್ಗಿಸುತ್ತಾನೆ. ಹೀಗಾಗಿ ಭಗವಂತನ ಕೃಪೆಗೂ ನೀವು ಪಾತ್ರರಾಗಬಹುದಾಗಿದೆ. 

ಇದನ್ನು ಓದಿ : ರಾಹು ರಾಶಿ ಪರಿವರ್ತನೆಯಿಂದ ರಾಶಿಗಳ ಮೇಲಾಗುವ ಶುಭಾಶುಭ ಫಲಗಳ ಬಗ್ಗೆ ತಿಳಿಯೋಣ..! 

ಈ ದಾನಗಳ ಮಾಡಿ
ಲೋಹ, ಎಳ್ಳು, ಎಣ್ಣೆ, ತೆಂಗಿನ ಕಾಯಿ, ಉದ್ದು, ಕಂದು ಬಣ್ಣದ ಗೋವು ಸೇರಿದಂತೆ ಮುಂತಾದವುಗಳನ್ನು ದಾನ ಮಾಡುವುದರಿಂದ ಕೇತು ಪ್ರಸನ್ನವಾಗಿ ಉಳ್ಳೆಯ ದಿನಗಳನ್ನು ಆಶೀರ್ವದಿಸುತ್ತಾನೆ. 

Follow Us:
Download App:
  • android
  • ios