Asianet Suvarna News Asianet Suvarna News

Adipurush ಯಾರು? ಆದಿಪುರುಷ ಎಂದರೆ ಅರ್ಥವೇನು?

ಆದಿಪುರುಷ ಚಿತ್ರ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಯಾರನ್ನು ನಿಜವಾಗಿ ಆದಿಪುರುಷ ಎನ್ನಲಾಗುತ್ತದೆ ಎಂಬ ಪ್ರಶ್ನೆ ಕಾಡಬಹುದು. ನಮ್ಮ ಇತಿಹಾಸ, ಪುರಾಣಗಳನ್ನು ತೆಗೆದಾಗ ಯಾರು ನಿಜವಾದ ಆದಿಪುರುಷ ಗೊತ್ತಾ?

If you do not know the true meaning of Adipurush here it is skr
Author
First Published May 12, 2023, 3:25 PM IST | Last Updated May 12, 2023, 3:25 PM IST

ಆದಿಪುರುಷ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಜೂನ್ 16ರಂದು ಚಿತ್ರ 3ಡಿ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಮುನ್ನವೇ ಈ ಚಿತ್ರ ಸಾಕಷ್ಟು ಚರ್ಚೆಯಲ್ಲಿದೆ. ಆದಿಪುರುಷ ಚಿತ್ರವು ರಾಮಾಯಣ ಮಹಾಕಾವ್ಯದಿಂದ ಸ್ಫೂರ್ತಿ ಪಡೆದಿದೆ, ಅದಕ್ಕಾಗಿಯೇ ಜನರು ಈ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಆದಿಪುರುಷನ ಅರ್ಥವೇನು ಮತ್ತು ಇತಿಹಾಸದಲ್ಲಿ ಆದಿಪುರುಷರು ಯಾರು ಎಂದು ತಿಳಿಯೋಣ.

ಆದಿ ಪುರುಷ ಅರ್ಥ
ಆದಿಪುರುಷ 'ಆದಿ' ಮತ್ತು 'ಪುರುಷ' ಎಂಬ ಎರಡು ಪದಗಳಿಂದ ಮಾಡಲ್ಪಟ್ಟಿದೆ. ಆದಿಪುರುಷ ಎಂದರೆ ಮೂಲ ಮನುಷ್ಯ. ಅಂದರೆ, ಯಾವುದೇ ರಾಜವಂಶ ಅಥವಾ ಸಾಮ್ರಾಜ್ಯದ ಮೊದಲ ಕೊಂಡಿಯನ್ನು ಆದಿಪುರುಷ ಎಂದು ಕರೆಯಲಾಗುತ್ತದೆ. ರಾಜವಂಶವು ಆದಿಪುರುಷನಿಂದ ಪ್ರಾರಂಭವಾಯಿತು. ಇದರ ಎರಡನೆಯ ಅರ್ಥ ದೇವರು. ದೇವರು ಇಡೀ ಬ್ರಹ್ಮಾಂಡದ ಸೃಷ್ಟಿಕರ್ತ ಮತ್ತು ಎಲ್ಲರೂ ಅವನ ಮಕ್ಕಳು. ಆದ್ದರಿಂದಲೇ ಆದಿ ಪುರುಷನನ್ನು ದೇವರು ಎಂದೂ ಕರೆಯುತ್ತಾರೆ. ಅದು ಶಿವ ಅಥವಾ ವಿಷ್ಣು ಇರಬಹುದು. ಚಿತ್ರವು ರಾಮಾಯಣಕ್ಕೆ ಸಂಬಂಧಿಸಿದ್ದು, 'ರಾಮ' ಕೂಡಾ ವಿಷ್ಣುವಿನ ಅವತಾರವಾಗಿದ್ದಾನೆ.

ವೈಷ್ಣವರ ಪ್ರಕಾರ ವಿಷ್ಣು ಆದಿಪುರುಷನಾಗಿದ್ದರೆ, ಶೈವರ ಪ್ರಕಾರ ಶಿವನು ಆದಿಪುರುಷನಾಗಿದ್ದಾನೆ. ಅಚ್ಚರಿಯ ವಿಷಯವೆಂದರೆ ಶಿವ ಮತ್ತು ವಿಷ್ಣು ಪರಸ್ಪರ ಪೂಜಿಸಿಕೊಳ್ಳುತ್ತಾರೆ. ಒಬ್ಬರನ್ನು ಮತ್ತೊಬ್ಬರು ಆದಿಪುರುಷ ಎಂದು ನಂಬುತ್ತಾರೆ. ಒಮ್ಮೆ, ಪಾರ್ವತಿ ದೇವಿಯು ಸ್ವತಃ ಪರಮ ಶಕ್ತಿಯಾಗಿರುವ ಶಿವನು ಯಾರನ್ನು ಆರಾಧಿಸಬಹುದೆಂದು ಅಚ್ಚರಿಗೊಂಡಳು. ಪಾರ್ವತಿಯ ಪ್ರಶ್ನೆಗೆ ಉತ್ತರಿಸಿದ ಶಿವನು ತಾನು ವಿಷ್ಣುವನ್ನು ಧ್ಯಾನಿಸುತ್ತೇನೆ ಎಂದು ಹೇಳಿದನು. ಮತ್ತು ಭಗವಾನ್ ವಿಷ್ಣುವು ಭಗವಾನ್ ಶಿವನನ್ನು ಪರಮ ಶಕ್ತಿಯಾಗಿ ಪೂಜಿಸುತ್ತಾನೆ. ಈ ನಂಬಿಕೆಗೆ ಒಂದು ಶ್ರೇಷ್ಠ ಉದಾಹರಣೆಯೆಂದರೆ ರಾಮೇಶ್ವರಂ ದೇವಾಲಯ. ಇದು ಶಿವಲಿಂಗಕ್ಕೆ ಸಮರ್ಪಿತವಾದ ದೇವಾಲಯವಾಗಿದ್ದು, ಇದನ್ನು ಭಗವಾನ್ ಶ್ರೀರಾಮನು ಸ್ವತಃ ಮಾಡಿ ಪೂಜಿಸಿದನು ಮತ್ತು ಶ್ರೀರಾಮನು ವಿಷ್ಣುವಿನ ಏಳನೇ ಅವತಾರವಾಗಿದ್ದಾನೆ.  ದ್ವಾಪರ ಯುಗದಲ್ಲಿಯೂ ಸಹ ವಿಷ್ಣುವು ಶಿವನನ್ನು ಆರಾಧಿಸುತ್ತಿದ್ದನು.

Baba Vanga Predictions 2023: ಮೂರು ಭವಿಷ್ಯವಾಣಿ ಸಾಬೀತು, ಭೀಕರವಾಗಿವೆ ಉಳಿದ ಭವಿಷ್ಯ

ಆದಿಪುರುಷ ಇತಿಹಾಸ
ಪುರಾಣಗಳ ಪ್ರಕಾರ, ಭಗವಾನ್ ಬ್ರಹ್ಮ ವಿಷ್ಣುವಿನ ಹೊಕ್ಕುಳಿಂದ ಕಾಣಿಸಿಕೊಂಡರು. ಬ್ರಹ್ಮ ದೇವರನ್ನು ಆದಿಪುರುಷ ಎಂದು ಗೌರವಿಸಬಹುದು. ಆದಿಪುರುಷನ ಅಕ್ಷರಶಃ ಅರ್ಥದಲ್ಲಿ, ಆದಿ ಎಂದರೆ 'ಮೊದಲು' ಮತ್ತು ಪುರುಷ ಎಂದರೆ 'ಮನುಷ್ಯ'. ಸೃಷ್ಟಿಯ ಆರಂಭದ ಮನುಷ್ಯ ಎಂದರ್ಥ. ಬ್ರಹ್ಮನು ಮೊದಲು ಜನಿಸಿದ ಕಾರಣ, ಅವನನ್ನು ಆದಿಪುರುಷ ಎಂದೂ ಕರೆಯಬಹುದು.

ಮತ್ತೊಂದೆಡೆ, ರಾಮಾಯಣವು ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ವಿವರಿಸುತ್ತದೆ. ಅಂದರೆ ಮಿತಿಯಲ್ಲಿ ಬದುಕುವುದು ಮತ್ತು ಪುರುಷರಲ್ಲಿ ಉತ್ತಮ ವ್ಯಕ್ತಿ. ಮತ್ತು ಪ್ರಾಚೀನ ಧರ್ಮಶಾಸ್ತ್ರವಾದ ಮನುಸ್ಮೃತಿಯಲ್ಲಿ, ಮನು ಮಹಾರಾಜನನ್ನು ಆದಿಪುರುಷ ಎಂದು ಕರೆಯಲಾಗುತ್ತದೆ. ಈ ಪ್ರಕಾರ ಮನುಷ್ಯ ಮನು ಮಹಾರಾಜನ ಮಗು ಮಾತ್ರ. ಮನುಸ್ಮೃತಿಯು ಅಂತಹ ಧರ್ಮಶಾಸ್ತ್ರವಾಗಿದ್ದು, ಅದರ ಮಾನ್ಯತೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ.

ಪುರುಷ ಭದ್ರಕೋಟೆಯನ್ನು ಬೇಧಿಸಿ ಪೌರೋಹಿತ್ಯಕ್ಕೆ ಕಾಲಿಟ್ಟ ತಾಯಿ ಮಗಳು!

ಭಾರತದಲ್ಲಿ ವೇದಗಳ ನಂತರ ಮನುಸ್ಮೃತಿಗೆ ಹೆಚ್ಚಿನ ಮನ್ನಣೆ ಸಿಕ್ಕಿದೆ. ಮನುಸ್ಮೃತಿಯಲ್ಲಿ, ನಾಲ್ಕು ವರ್ಣಗಳು, ನಾಲ್ಕು ಆಶ್ರಮಗಳು, ಹದಿನಾರು ಸಂಸ್ಕಾರಗಳು ಮತ್ತು ಸೃಷ್ಟಿಯ ಮೂಲ, ಮನುಷ್ಯರ ಜೀವನ, ರಾಜ್ಯ ವ್ಯವಸ್ಥೆ, ರಾಜನ ಮುಖ್ಯ ಕರ್ತವ್ಯಗಳು, ವಿವಿಧ ರೀತಿಯ ವಿವಾದಗಳು ಮತ್ತು ಎಲ್ಲಾ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios