Asianet Suvarna News Asianet Suvarna News

Baba Vanga Predictions 2023: ಮೂರು ಭವಿಷ್ಯವಾಣಿ ಸಾಬೀತು, ಭೀಕರವಾಗಿವೆ ಉಳಿದ ಭವಿಷ್ಯ

ಬಾಬಾ ವಂಗಾ 2023 ವರ್ಷಕ್ಕೆ ಸಂಬಂಧಿಸಿದಂತೆ ಅನೇಕ ಭೀಕರ ಭವಿಷ್ಯವಾಣಿಗಳನ್ನು ನುಡಿದಿದ್ದರು. ಅವುಗಳಲ್ಲಿ ಹಲವು ಭವಿಷ್ಯವಾಣಿಗಳು ಮೇ ತಿಂಗಳ ಹೊತ್ತಿಗಾಗಲೇ ನಿಜವಾಗಿರುವುದು ನೋಡಿದರೆ ಈ ವರ್ಷದ ಉಳಿದ ಭವಿಷ್ಯಗಳು ಮತ್ತಷ್ಟು ಭಯ ಹುಟ್ಟಿಸುತ್ತವೆ. 

Predictions made by Baba Vanga for 2023 proving to be true skr
Author
First Published May 12, 2023, 11:04 AM IST

ಪ್ರಪಂಚದಾದ್ಯಂತ ಅನೇಕ ಭವಿಷ್ಯಕಾರರಿದ್ದಾರೆ. ಅವರ ಭವಿಷ್ಯವಾಣಿಯನ್ನು ದೇಶ ಮತ್ತು ಪ್ರಪಂಚದ ಜನರು ನಂಬುತ್ತಾರೆ. ಎಲ್ಲಾ ಅತೀಂದ್ರಿಯ ಶಕ್ತಿ ಉಳ್ಳವರಲ್ಲಿ, ನಾಸ್ಟ್ರಾಡಾಮಸ್ ಮತ್ತು ಬಾಬಾ ವಂಗಾ ಅವರ ಭವಿಷ್ಯವಾಣಿಗಳನ್ನು ವ್ಯಾಪಕವಾಗಿ ಚರ್ಚಿಸಲಾಗುತ್ತದೆ. ಇದಕ್ಕೆ ಕಾರಣ ಅವರ ಭವಿಷ್ಯವಾಣಿಗಳು ಹಲವು ಬಾರಿ ನಿಜವೆಂದು ಸಾಬೀತಾಗಿದೆ.

ಟೆಕ್ನಾಲಜಿ ಮತ್ತೊಂದು ಅಭಿವೃದ್ಧಿ ಏನೂ ಇಲ್ಲದ ನೂರಾರು ವರ್ಷಗಳ ಹಿಂದೆಯೇ ಅವರು ಪ್ರಣಾಳ ಶಿಶು, ಏಲಿಯನ್ಸ್, ಆಧುನಿಕ ತಂತ್ರಜ್ಞಾನಗಳ ಕುರಿತಾಗಿ ಭವಿಷ್ಯ ನುಡಿದಿದ್ದು ಬಹಳ ಅಚ್ಚರಿಯ ಸಂಗತಿಯೇ ಸರಿ. ಅದಕ್ಕೂ ಹೆಚ್ಚು ಅಚ್ಚರಿ ಎಂದರೆ ಅವರು ನುಡಿದ ವಾಣಿಗಳು ಇಂದಿನ ದಿನಕ್ಕೂ ಸತ್ಯವಾಗುತ್ತಿರುವುದು! ಮುಂದಿನ ನೂರಾರು ವರ್ಷಗಳಿಗೆ ವಾರ್ಷಿಕ ಭವಿಷ್ಯವನ್ನು ಇವರು ನುಡಿದಿದ್ದಾರೆ. 

ಪ್ರತಿ ವರ್ಷ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ನಿಜವಾಗುತ್ತವೆ. 2023ನೇ ವರ್ಷಕ್ಕೆ ಸಂಬಂಧಿಸಿದಂತೆ ಮಾತನಾಡುವುದಾದರೆ, ಬಾಬಾ ವಂಗಾ ಅವರು ಈ ವರ್ಷಕ್ಕೆ ಅನೇಕ ಭೀಕರ ಭವಿಷ್ಯವಾಣಿಗಳನ್ನು ನುಡಿದಿದ್ದರು. ಅವುಗಳಲ್ಲಿ ಹಲವು ಮೇ ತಿಂಗಳವರೆಗೆ ನಿಜವೆಂದು ಸಾಬೀತುಪಡಿಸುತ್ತಿವೆ. ಇದರಿಂದಾಗಿ ಈ ವರ್ಷದ ಇನ್ನುಳಿದ ವಂಗಾ ಭವಿಷ್ಯವಾಣಿಯ ಬಗ್ಗೆ ದಿಗಿಲು ಹುಟ್ಟಲಾರಂಭಿಸಿದೆ. ಏಕೆಂದರೆ ಅವೆಲ್ಲವೂ ಭಯಾನಕವಾಗಿವೆ. 

ಈ ವಾಸ್ತು ಟಿಪ್ಸ್ ಪಾಲಿಸಿದ್ರೆ, ನಿಮ್ಮ ತಿಜೋರಿ ಹಣದಿಂದ ತುಂಬಲಿದೆ!

ನಿಜವಾದ 2023ರ ಭವಿಷ್ಯವಾಣಿಗಳು
2023ರ ಪ್ರಾರಂಭದ ನಂತರ, ಇಲ್ಲಿಯವರೆಗೆ 4 ತಿಂಗಳು ಕಳೆದಿವೆ ಮತ್ತು ಪ್ರಸ್ತುತ ಮೇ ತಿಂಗಳು ನಡೆಯುತ್ತಿದೆ. ಆದರೆ ಇಷ್ಟು ಕಡಿಮೆ ಸಮಯದಲ್ಲಿ, ಬಾಬಾ ವಂಗಾ ಅವರ ಅನೇಕ ಭವಿಷ್ಯವಾಣಿಗಳಲ್ಲಿ, ಮೂರು ಭವಿಷ್ಯವಾಣಿಗಳು ನಿಜವೆಂದು ಸಾಬೀತಾಗಿದೆ. ಈ ಮುನ್ಸೂಚನೆಗಳ ಬಗ್ಗೆ ತಿಳಿಯಿರಿ.

ಸೌರ ಚಂಡಮಾರುತ: 2023ರಲ್ಲಿ, ಬಾಬಾ ವಂಗಾ ಸೌರ ಸುನಾಮಿ ಮುನ್ಸೂಚನೆ ನೀಡಿದ್ದರು. ಕೆಲ ದಿನಗಳ ಹಿಂದೆ ಅವರ ಈ ಭವಿಷ್ಯ ನಿಜವೂ ಆಗಿತ್ತು. ಇತ್ತೀಚೆಗೆ, ವಿಜ್ಞಾನಿಗಳು ಸೂರ್ಯನಲ್ಲಿ ಭೂಮಿಗಿಂತ ಸುಮಾರು 20 ಪಟ್ಟು ದೊಡ್ಡ ರಂಧ್ರವನ್ನು ಕಂಡು ಹಿಡಿದಿದ್ದಾರೆ ಮತ್ತು ಅದರಿಂದ ಹೊರಹೊಮ್ಮುವ ವಿಕಿರಣದ ಪರಿಣಾಮವು ಭಾರತದಲ್ಲಿಯೂ ಗೋಚರಿಸಿತು.

ಟರ್ಕಿ ಭೂಕಂಪ: ಬಾಬಾ ವಂಗಾ ಅವರು 2023ರಲ್ಲಿ ಟರ್ಕಿಯಲ್ಲಿ ವಿನಾಶಕಾರಿ ಭೂಕಂಪ ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದರು ಮತ್ತು ಬಾಬಾ ವಂಗಾ ಅವರ ಈ ಭವಿಷ್ಯವನ್ನು ಸಹ ದೃಢಪಡಿಸಲಾಗಿದೆ. ಈ ವರ್ಷದಲ್ಲಿ, ಟರ್ಕಿ ಮತ್ತು ಸಿರಿಯಾದಲ್ಲಿ ಅಪಾಯಕಾರಿ ಭೂಕಂಪ ಸಂಭವಿಸಿದೆ, ಇದರಿಂದಾಗಿ 50-55 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಅಕಾಲಿಕ ಮಳೆ: ಈ ವರ್ಷ ಅಕಾಲಿಕ ಮಳೆಯಾಗಲಿದೆ ಮತ್ತು ಮರುಭೂಮಿಯಲ್ಲೂ ಪ್ರವಾಹದಂಥ ಪರಿಸ್ಥಿತಿ ಕಾಣಿಸಿಕೊಳ್ಳಲು ಪ್ರಾರಂಭವಾಗುವಂಥ ಮಳೆಯಾಗಲಿದೆ ಎಂದು ಬಾಬಾ ವಂಗಾ ಭಾರತಕ್ಕೆ ಭವಿಷ್ಯ ನುಡಿದಿದ್ದರು, ಇದರ ಪರಿಣಾಮ ಭಾರತದಲ್ಲಿ ಕಂಡುಬರುತ್ತಿದೆ. ಈ ವರ್ಷ ಬೇಸಿಗೆಯ ಆರಂಭದಲ್ಲಿ ಸಾಕಷ್ಟು ಮಳೆಯಾಗಿದೆ. ಏಪ್ರಿಲ್‌ನಲ್ಲಿ ಮುಂಗಾರು ಮಳೆಯಂತೆ ಸುರಿದು ಮೇ ಮೊದಲ ವಾರದವರೆಗೂ ತುಂತುರು ಮಳೆಯಾಗಿತ್ತು. ಇದರಿಂದಾಗಿ ಬೇಸಿಗೆಯಲ್ಲೂ ತಾಪಮಾನದಲ್ಲಿ ಇಳಿಕೆ ಕಂಡುಬಂದಿದೆ. ದಶಕಗಳ ನಂತರ ಭಾರತದಲ್ಲಿ ಇಂತಹ ಅಕಾಲಿಕ ಮಳೆ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಅಕಾಲಿಕ ಮಳೆಯಾಗುವ ಮುನ್ಸೂಚನೆಯೂ ಇದೆ. ಬಾಬಾ ವಂಗಾ ಅವರ ಈ ಭವಿಷ್ಯ ನಿಜವಾಗಿದ್ದರಿಂದ ಜನರೂ ಅಚ್ಚರಿಗೊಂಡಿದ್ದಾರೆ.

ಮನೆಯಲ್ಲಿ ಪದೇ ಪದೇ ಹೀಗಾಗ್ತಿದ್ರೆ ಪಿತೃ ದೋಷವೇ ಕಾರಣ

2023ಕ್ಕೆ ಬಾಬಾ ವಂಗಾ ಇತರ ಭವಿಷ್ಯವಾಣಿಗಳು

  • ಭೂಮಿಯ ಕಕ್ಷೆಯು 2023ರಲ್ಲಿ ಬದಲಾಗಬಹುದು, ಇದರಿಂದ ತೀವ್ರವಾದ ಪರಿಸರ ಪರಿಣಾಮಗಳನ್ನು ಉಂಟು ಮಾಡುತ್ತದೆ. ಕ್ಷುದ್ರಗ್ರಹದ ಪ್ರಭಾವವು ಆಮೂಲಾಗ್ರ ಬದಲಾವಣೆಯ ಪರಿಣಾಮಗಳನ್ನು ಹದಗೆಡಿಸಬಹುದು.
  • ಒಂದು ದೊಡ್ಡ ದೇಶವು 2023ರಲ್ಲಿ ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ನಡೆಸುತ್ತದೆ. ಸಂಭಾವ್ಯ ಲ್ಯಾಬ್ ಸೋರಿಕೆ ಮತ್ತು ಜೈವಿಕ ಶಸ್ತ್ರಾಸ್ತ್ರಗಳ ಬಿಡುಗಡೆಯಿಂದ ಇದು ಜಾಗತಿಕವಾಗಿ ಸಮಸ್ಯೆಯಾಗಲಿದೆ. 
  • 2023ರಲ್ಲಿ ಅನ್ಯಲೋಕದ ಆಕ್ರಮಣವಾಗಲಿದೆ ಮತ್ತು ಇದು  ಲಕ್ಷಾಂತರ ಜನರ ಸಾವಿಗೆ  ಕಾರಣವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
  • ಪರಮಾಣು ವಿದ್ಯುತ್ ಸ್ಥಾವರದಲ್ಲಿನ ಸ್ಫೋಟದಿಂದ ವಿಷಕಾರಿ ಮೋಡಗಳು ಏಷ್ಯಾವನ್ನು ಆವರಿಸುತ್ತದೆ ಮತ್ತು ಇತರ ದೇಶಗಳಿಗೆ ಹರಡುತ್ತದೆ, ಇದು ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದವರು ಹೇಳಿದ್ದಾರೆ.

ಬಾಬಾ ವಂಗಾ ಯಾರು?
ಬಾಬಾ ವಂಗಾ ಪ್ರಪಂಚದ ಪ್ರವಾದಿಗಳಲ್ಲಿ ಒಬ್ಬರು. ಆಕೆಯ ಮೂಲ ಹೆಸರು ವಂಜೆಲಿಯಾ ಪಾಂಡೆವಾ ಗುಷ್ಟರೋವಾ. ಅವರು ಬಲ್ಗೇರಿಯನ್ ಅತೀಂದ್ರಿಯ ಮಹಿಳೆಯಾಗಿದ್ದು, ಬಲ್ಗೇರಿಯಾದ ಕೊಝುಹ್ ಪರ್ವತಗಳ ರುಪೈಟ್ ಪ್ರದೇಶದಲ್ಲಿ ತಮ್ಮ ಜೀವನವನ್ನು ಕಳೆದರು. ನಂತರ ಅವರು ಅತೀಂದ್ರಿಯ ಶಕ್ತಿಯಿಂದಾಗಿ ಬಾಬಾ ವಂಗಾ ಎಂದು ಪ್ರಸಿದ್ಧರಾದರು. ಅವರು 1911ರಲ್ಲಿ ಜನಿಸಿದರು. ಆದರೆ ಕೇವಲ 12 ನೇ ವಯಸ್ಸಿನಲ್ಲಿ ಅವರ ದೃಷ್ಟಿ ದೂರವಾಯಿತು ಮತ್ತು ಅವರು 1996ರಲ್ಲಿ 86ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಸಾಯುವ ಮೊದಲು, ಬಾಬಾ ವಂಗಾ ಅವರು ಪ್ರಪಂಚದ ಬಗ್ಗೆ 5079 ರವರೆಗೆ ಭವಿಷ್ಯ ನುಡಿದಿದ್ದರು.

Follow Us:
Download App:
  • android
  • ios