ಕಾಗೆಗಳು ೧೭ ವರ್ಷಗಳವರೆಗೆ ದ್ವೇಷ ಸಾಧಿಸಬಲ್ಲವು ಎಂದು ಸಂಶೋಧನೆ ತೋರಿಸಿದೆ. ಹಾನಿ ಮಾಡಿದವರನ್ನು ಗುರುತಿಸಿ, ಸೇಡು ತೀರಿಸಿಕೊಳ್ಳುತ್ತವೆ. ಈ ದ್ವೇಷವನ್ನು ಇತರ ಕಾಗೆಗಳಿಗೂ ತಿಳಿಸಿ, ಸಂಘಟಿತ ದಾಳಿ ನಡೆಸುತ್ತವೆ. ಮುಖವಾಡ ಧರಿಸಿ ಕಾಗೆಗಳನ್ನು ಸೆರೆಹಿಡಿದ ಪ್ರಯೋಗದಲ್ಲಿ, ವರ್ಷಗಳ ಕಾಲ ಸಂಶೋಧಕರ ಮೇಲೆ ದಾಳಿ ನಡೆಸಿದವು. ಮೆದುಳಿನಲ್ಲಿ ಭಾವನೆಗಳನ್ನು ಸಂಸ್ಕರಿಸುವ ಭಾಗವಿದ್ದು, ಮಾನವ ಮುಖಗಳನ್ನು ಗುರುತಿಸಬಲ್ಲವು.
ಮನುಷ್ಯರಂತೆಯೇ ಮಾತನಾಡುವ ಕಾಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ. ಇದು ಕಾಗೆಯ ಬಗ್ಗೆ ಕುತೂಹಲವ ವಿಷ್ಯವಾದೀತು. ಆದರೆ ಇದೀಗ ಹೇಳ್ತಿರೋ ಇನ್ನೊಂದು ವಿಷ್ಯ ಮಾತ್ರ ಶಾಕಿಂಗ್ ಆಗಿದೆ. ಅದೇನೆಂದರೆ ಹಾವಿನ ದ್ವೇಷ 12 ವರುಷ... ನನ್ನ ದ್ವೇಷ 100 ವರುಷ... ಎನ್ನೋ ಹಾಡನ್ನಂತೂ ನೀವು ಕೇಳಿಯೇ ಇರುತ್ತೀರಿ. ಆದರೆ ಕಾಗೆಗಳ ದ್ವೇಷದ ಬಗ್ಗೆ ಯಾವುದೇ ಹಾಡು ಇದ್ದಂತಿಲ್ಲ. ಹೌದು! ಕಾಗೆಗೆ ನೀವಾದರೂ ಅನಾಹುತ ಮಾಡಿದ್ರೆ ಕಾಗೆಗಳು 17 ವರ್ಷಗಳವರೆಗೆ ದ್ವೇಷವನ್ನು ಇಟ್ಟುಕೊಳ್ಳುತ್ತದೆ. ಈ ಬಗ್ಗೆ ಸಂಶೋಧಕರು ಇದಾಗಲೇ ಅಧ್ಯಯನ ಮಾಡಿದ್ದು, 17 ವರ್ಷಗಳವರೆಗೆ ಕಾಗೆಗಳು ಮನುಷ್ಯನ ಮೇಲೆ ಹಗೆ ಸಾಧಿಸುತ್ತವೆ ಎಂದಿದ್ದಾರೆ. ತಮಗೆ ಹಾನಿ ಮಾಡಿದ ನಿರ್ದಿಷ್ಟ ವ್ಯಕ್ತಿಗಳನ್ನು ಗುರುತಿಸಿ ಇವು ಸೇಡು ತೀರಿಸಿಕೊಳ್ಳಬಹುದು ಮತ್ತು ಈ ದ್ವೇಷವನ್ನು ಇತರ ಕಾಗೆಗಳಿಗೆ ತಿಳಿಸಬಹುದು. ಒಂದು ವೇಳೆ ದ್ವೇಷ ತೀರಿಸಬಯಸಿದ ಕಾಗೆಗಳ ಸತ್ತು ಹೋದರೂ ಆ ದ್ವೇಷವನ್ನು ಬೇರೆ ಕಾಗೆಗಳಿಗೆ ತಿಳಿಹೇಳುವ ಕಾರಣ ಅವು ಹಗೆ ತೀರಿಸಿಕೊಳ್ಳಬಹುದು ಎನ್ನುವ ಅಂಶವೀಗ ಪತ್ತೆಯಾಗಿದೆ.
ಸೇಡು ತೀರಿಸಿಕೊಳ್ಳುವುದು ಕೇವಲ ಮಾನವನ ಗುಣವಲ್ಲ. ಕಾಗೆಗಳು ತಮಗೆ ಹಾನಿ ಮಾಡಿದವರನ್ನು ನೆನಪಿಸಿಕೊಳ್ಳುವ ಮತ್ತು ಸೇಡು ತೀರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನಿ ಪ್ರೊಫೆಸರ್ ಜಾನ್ ಮಾರ್ಜ್ಲಫ್ ನೇತೃತ್ವದ ಸಂಶೋಧನೆ ಹೇಳಿದೆ. ಕಾಗೆಗಳು 17 ವರ್ಷಗಳವರೆಗೆ ದ್ವೇಷವನ್ನು ಇಟ್ಟುಕೊಂಡು ಸೇಡು ತೀರಿಸಿಕೊಳ್ಳಬಹುದು ಎಂದಿದ್ದಾರೆ ಸಂಶೋಧಕರು. ಕಾಗೆಗಳ ಮನುಷ್ಯರ ಮೇಲೆ ಹಾನಿ ಮಾಡುತ್ತಿರುವ ಕೆಲವು ಘಟನೆಗಳ ಆಗಾಗ್ಗೆ ವರದಿಯಾಗುತ್ತಿರುವುದನ್ನು ಕಂಡ ಸಂಶೋಧಕರ ತಂಡವು ಮೊದಲ ಬಾರಿಗೆ 2006ರಲ್ಲಿ ಈ ಬಗ್ಗೆ ಅಧ್ಯಯನಕ್ಕೆ ತೊಡಗಿತ್ತು. 2006 ರಲ್ಲಿ ಪ್ರೊಫೆಸರ್ ಮಾರ್ಜ್ಲಫ್ ಕಾಗೆಗಳು ಪ್ರತೀಕಾರ ತೀರಿಸಿಕೊಳ್ಳುತ್ತವೆಯೇ ಎಂಬ ಬಗ್ಗೆ ಅಧ್ಯಯನ ಕೈಗೊಂಡರು. ಅದಕ್ಕಾಗಿ ಅವರು ಮಾಡಿದ್ದು ಮಾತ್ರ ಕುತೂಹಲವಾಗಿದೆ.
ಅಂಗಡಿಯ ಬೀಗ ಒಡೆದು ಕೇರಳಿಗರನ್ನು ಒಗ್ಗೂಡಿಸಿತು ಈ ಗುಬ್ಬಿ! ಅಬ್ಬಾ ಎನ್ನೋ ಘಟನೆ ಇದು
ಈ ಮೇಲಿನ ಚಿತ್ರ ಏನು ಎಂದು ನೋಡುವುದಾದರೆ, ಇದು ಪ್ರೊಫೆಸರ್ ಮಾರ್ಜ್ಲಫ್ ಅವರ ಅಧ್ಯಯನದ ಭಾಗ. ಅವರು ತಮ್ಮ ಅಧ್ಯಯನದ ಆರಂಭದಲ್ಲಿ, ರಾಕ್ಷಸ ಮುಖವಾಡ ಧರಿಸಿ ಏಳು ಕಾಗೆಗಳನ್ನು ಬಲೆಯಿಂದ ಸೆರೆಹಿಡಿಯುವ ಪ್ರಯೋಗವನ್ನು ನಡೆಸಿದರು. ತಾವು ಯಾವ ಕಾಗೆಗೆ ಹಾಗೆ ಮಾಡಿದ್ದು ಎಂದು ಗುರುತಿಸುವುದಕ್ಕಾಗಿ ಅವುಗಳ ರೆಕ್ಕೆಗಳಿಗೆ ಮಾರ್ಕ್ ಮಾಡಿ, ನಂತರ, ಅವರು ಅವುಗಳಿಗೆ ಯಾವುದೇ ಹಾನಿಯಾಗದಂತೆ ಬಿಡುಗಡೆ ಮಾಡಿದರು. ಗಮನಾರ್ಹವಾಗಿ, ಕಾಗೆಗಳು ಅವರ ಮೇಲೆ ಸೇಡು ಇಟ್ಟುಕೊಂಡಿದ್ದವು. ಪ್ರೊಫೆಸರ್ ಮಾರ್ಜ್ಲಫ್ ಮುಖವಾಡ ಧರಿಸಿ ಕ್ಯಾಂಪಸ್‌ನಲ್ಲಿ ಕಾಣಿಸಿಕೊಂಡಾಗಲೆಲ್ಲಾ, ಕಾಗೆಗಳು ದಾಳಿ ನಡೆಸಲು ಶುರು ಮಾಡಿದವು. ಇತರ ಕಾಗೆಗಳು ಕೂಡ ಈ ದಾಳಿಯಲ್ಲಿ ಸೇರಿಕೊಂಡವು.
ಸುಮಾರು ಏಳು ವರ್ಷಗಳ ಕಾಲ ಆಕ್ರಮಣಶೀಲತೆಯನ್ನು ಪ್ರದರ್ಶಿಸಿದವು. 2013 ರ ನಂತರ, ಈ ದಾಳಿಗಳ ಪ್ರಭಾವ ಕಡಿಮೆಯಾಗಲು ಪ್ರಾರಂಭಿಸಿತು. ಆರಂಭಿಕ ಪ್ರಯೋಗದ 17 ವರ್ಷಗಳ ನಂತರ, ಕಳೆದ ಸೆಪ್ಟೆಂಬರ್‌ನಲ್ಲಿ, ಪ್ರೊಫೆಸರ್ ಮಾರ್ಜ್‌ಲಫ್ ಮತ್ತೆ ಮುಖವಾಡವನ್ನು ಧರಿಸಿದರು, ಆದರೆ ಮೊದಲ ಬಾರಿಗೆ ಕಾಗೆಗಳು ದಾಳಿ ಮಾಡಲಿಲ್ಲ ಎಂದು ಕಂಡುಕೊಂಡರು. ಇವರು ತಮ್ಮ ದೀರ್ಘಕಾಲೀನ ಅಧ್ಯಯನದ ಫಲಿತಾಂಶಗಳನ್ನು ವಿವರಿಸುವ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಕಾಗೆಗಳು ಸಸ್ತನಿಗಳಲ್ಲಿನ ಅಮಿಗ್ಡಾಲಾವನ್ನು ಹೋಲುವ ಮೆದುಳಿನ ಪ್ರದೇಶವನ್ನು ಹೊಂದಿವೆ ಎಂದು ಅವರ ಸಂಶೋಧನೆಯು ಬಹಿರಂಗಪಡಿಸಿದೆ. ಇದು ಭಾವನೆಗಳನ್ನು ಸಂಸ್ಕರಿಸುವಲ್ಲಿ ತೊಡಗಿಸಿಕೊಂಡಿದೆ. ಕಾಗೆಗಳು ಮಾನವ ನಡವಳಿಕೆಯನ್ನು ಗಮನಿಸುವಲ್ಲಿ ಪ್ರವೀಣವಾಗಿವೆ ಮತ್ತು ವೈಯಕ್ತಿಕ ಮಾನವ ಮುಖಗಳನ್ನು ಗುರುತಿಸಬಲ್ಲವು. ಅವು ತಮಗೆ ಹಾನಿ ಉಂಟು ಮಾಡುವ ಮನುಷ್ಯರನ್ನು ಗುರುತಿಸಲು ಮತ್ತು ನೆನಪಿಟ್ಟುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳುತ್ತಾರೆ. ಇದಲ್ಲದೆ, ಕಾಗೆಗಳು ತಮ್ಮ ಹಿಂಡಿನಲ್ಲಿರುವ ಇತರರಿಗೆ ಈ ದ್ವೇಷದ ಬಗ್ಗೆ ತಿಳಿಸುತ್ತವೆ. ಇದು ಅವರು ವಿರೋಧಿಗಳೆಂದು ಪರಿಗಣಿಸುವ ವ್ಯಕ್ತಿಗಳ ವಿರುದ್ಧ ಸಂಘಟಿತ ದಾಳಿಗೆ ಅವಕಾಶ ನೀಡುತ್ತದೆ ಎಂದು ಮಾರ್ಜ್ಲಫ್ ವಿವರಿಸುತ್ತಾರೆ.
ಮನೆಗೆ ತಂದ ಟೊಮ್ಯಾಟೋ ಗರ್ಭಿಣಿ: ವೈರಲ್ ವಿಡಿಯೋ ನೋಡಿ ಫ್ರಿಜ್ ಬಳಿ ಓಡ್ತಿರೋ ಮಹಿಳೆಯರು!
