Asianet Suvarna News Asianet Suvarna News

ಮತ್ತೆ ಕೋಟ್ಯಾಧಿಪತಿಯಾದ ನಂಜನಗೂಡು ಶ್ರೀಕಂಠೇಶ್ವರ; ಹುಂಡಿಯಲ್ಲಿ ₹1.77 ಕೋಟಿ ಸಂಗ್ರಹ!

ದಕ್ಷಿಣಕಾಶಿ' ಪಟ್ಟಣದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ 34 ಹುಂಡಿಗಳಲ್ಲಿ 1.77 ಕೋಟಿ ಹಣ ಸಂಗ್ರಹವಾಗಿದೆ. ದೇವಾಲಯದ ದಾಸೋಹಭವನದಲ್ಲಿ ಬುಧವಾರ ಪೊಲೀಸರ ಭದ್ರತೆಯಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಕಾರ್ಯ ನಡೆಯಿತು. ನಗದು 1,77,08,710 ರು., 65 ಗ್ರಾಂ ಚಿನ್ನ, 3.5 ಕೆಜಿ ಬೆಳ್ಳಿ ಹಾಗೂ 64 ವಿದೇಶಿ ಕರೆನ್ಸಿಗಳು ದೊರೆತಿವೆ. 

hundi kanike collection in nanjanagudu shrikanteshwar temple mysuru rav
Author
First Published Jul 13, 2023, 9:38 AM IST | Last Updated Jul 13, 2023, 9:38 AM IST

ನಂಜನಗೂಡು (ಜು.13) : 'ದಕ್ಷಿಣಕಾಶಿ' ಪಟ್ಟಣದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ 34 ಹುಂಡಿಗಳಲ್ಲಿ 1.77 ಕೋಟಿ ಹಣ ಸಂಗ್ರಹವಾಗಿದೆ. ದೇವಾಲಯದ ದಾಸೋಹಭವನದಲ್ಲಿ ಬುಧವಾರ ಪೊಲೀಸರ ಭದ್ರತೆಯಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಕಾರ್ಯ ನಡೆಯಿತು. ನಗದು 1,77,08,710 ರು., 65 ಗ್ರಾಂ ಚಿನ್ನ, 3.5 ಕೆಜಿ ಬೆಳ್ಳಿ ಹಾಗೂ 64 ವಿದೇಶಿ ಕರೆನ್ಸಿಗಳು ದೊರೆತಿವೆ. 

ಕೆನರಾಬ್ಯಾಂಕ್‌ ಹಾಗೂ ದೇವಾಲಯದ ಸಿಬ್ಬಂದಿ, ನೂರಕ್ಕೂ ಹೆಚ್ಚು ಸ್ವಸಹಾಯ ಸಂಘದ ಮಹಿಳಾ ಸದಸ್ಯೆಯರು ಹುಂಡಿಯ ಹಣ ಎಣಿಕೆಯಲ್ಲಿ ಭಾಗಿಯಾಗಿದ್ದರು. ದೇವಾಲಯದ ಇಒ ಜಗದೀಶ್‌ ಕುಮಾರ್‌, ಲೆಕ್ಕಾಧಿಕಾರಿ ಗುರುಮಲ್ಲಯ್ಯ, ಕೆನರಾ ಬ್ಯಾಂಕ್‌ ವ್ಯವಸ್ಥಾಪಕಿ ಲಕ್ಷ್ಮಿ ಇದ್ದರು.

ರಾಯರ ಹುಂಡಿಯಲ್ಲಿ ದಾಖಲೆ ₹3 ಕೋಟಿ 53 ಲಕ್ಷ ಕಾಣಿಕೆ ಸಂಗ್ರ​ಹ!

ಕನ್ನಂಬಾಡಮ್ಮದೇವಿ ಪೂಜೆಗೆ ಮುಡಿಪು ಸಂಗ್ರಹಣೆ

ಕಿಕ್ಕೇರಿ: ಮಳೆ, ಬೆಳೆ ಸುಭೀಕ್ಷೆಯಾಗಿ ಲಭಿಸಲು ರೈತರು ಕನ್ನಂಬಾಡಮ್ಮ ದೇವಿಗೆ ಪೂಜೆ ಸಲ್ಲಿಸಲು ಮುಡಿಪು ಸಂಗ್ರಹಣೆ ಮಾಡಿದರು.

ಕೋಟೆಗಣಪತಿ, ಬಸವೇಶ್ವರಗುಡಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಮುಖಂಡರು ತಮಟೆ ವಾದ್ಯದೊಂದಿಗೆ ಕೆ.ಎಸ್‌, ನರಸಿಂಹಸ್ವಾಮಿ ಬೀದಿ, ರಥಬೀದಿ, ಹೊಸಬೀದಿ, ಮಂದಗೆರೆರಸ್ತೆ ಮತ್ತಿತರ ಪ್ರಮುಖ ಬೀದಿಯಲ್ಲಿ ಸಾಗಿ ದೇವಿಯ ಕಾಣಿಕೆ ಹುಂಡಿ ಹಿಡಿದು ಮುಡಿಪು ಸಂಗ್ರಹಿಸಿದರು.

ವರ್ತಕರು, ಭಕ್ತರು ದೇವಿಯ ಕಾಣಿಕೆ ಹುಂಡಿಗೆ ಹಣವನ್ನು ಭಕ್ತಿಯಿಂದ ಸಮರ್ಪಿಸಿ ನಮಿಸಿದರು. ಮುಡಿಪು ಸಂಗ್ರಹವಾದ ನಂತರ ಬಂದ ಹಣದಿಂದ ಕನ್ನಂಬಾಡಿ ಗ್ರಾಮಕ್ಕೆ ತೆರಳಲಾಗುವುದು. ದೇವಿಗೆ ಸೀರೆ, ಬಳೆಯಂತಹ ಹಲವು ವಸ್ತುಗಳನ್ನು ಅರ್ಪಿಸಿ ಮಡಿಲಕ್ಕಿ, ತೆಂಗಿನ ಕಾಯಿ, ಬಾಳೆಹಣ್ಣು ಸಮೇತ ಬಾಗಿನದ ಹುಡಿ, ನೈವೇದ್ಯ ಸಮರ್ಪಿಸಲಾಗುವುದು.

 

ಮಲೆ ಮಹದೇಶ್ವರ ಹುಂಡಿ ಎಣಿಕೆ : ಒಂದೇ ತಿಂಗಳಲ್ಲಿ 2.53 ಕೋಟಿ ರು.ಸಂಗ್ರಹ!

ಮೂಲಗುಡಿಯಿಂದ ಪ್ರಸಾದವನ್ನು ಭಕ್ತಿಯಿಂದ ಪಟ್ಟಣಕ್ಕೆ ತಂದು ಪ್ರಸಾದದಿಂದ ದೇವಿ ಗದ್ದುಗೆ ನಿರ್ಮಿಸಿ ಗ್ರಾಮದ ಜನತೆ ಒಗ್ಗೂಡಿ ಸಾಮೂಹಿಕವಾಗಿ ಪೂಜಿಸಿ ದೇವಿಗೆ ಕುರಿ, ಕೋಳಿ ಅರ್ಪಿಸಲಾಗುವುದು. ಭಕ್ತರಿಗೆ ಸಾಮೂಹಿಕ ಭೋಜನ, ಪ್ರಸಾದ ನೀಡಲಾಗುವುದು ಎಂದು ಗ್ರಾಮ ಮುಖಂಡರು ಕನ್ನಂಬಾಡಮ್ಮನ ಹಬ್ಬದ ಮಾಹಿತಿ ನೀಡಿದರು.

ಮುಖಂಡರಾದ ಕಾಯಿ ಮಂಜೇಗೌಡ, ನಾಗೇಗೌಡ, ಸತ್ಯ, ಮಂಜೇಗೌಡ, ಸುರೇಶ್‌, ಕೆ.ಎನ…. ಪುಟ್ಟೇಗೌಡ, ಶಿವರಾಂ ಹಲವರು ಇದ್ದರು.

Latest Videos
Follow Us:
Download App:
  • android
  • ios