ಮಲೆ ಮಹದೇಶ್ವರ ಹುಂಡಿ ಎಣಿಕೆ : ಒಂದೇ ತಿಂಗಳಲ್ಲಿ 2.53 ಕೋಟಿ ರು.ಸಂಗ್ರಹ!
- ಹನೂರು ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯಕ್ರಮ 2.53 ಕೋಟಿ ರು. ಸಂಗ್ರಹವಾಗಿದೆ. 32 ದಿನಗಳ ಅವಧಿಯಲ್ಲಿ 2,53,58,519 ರು., 65 ಗ್ರಾಂ ಚಿನ್ನ ಹಾಗೂ 3.358 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಹನೂರು (ಮೇ.31) : ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ನಡೆದ ಹುಂಡಿಗಳ ಎಣಿಕೆ ಕಾರ್ಯದಲ್ಲಿ 2.53 ಕೋಟಿ ರು. ಸಂಗ್ರಹವಾಗಿದೆ. ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಹಾಗೂ ಪೋಲಿಸ್ ಬಂದೋಬಸ್‌್ತನಲ್ಲಿ ಎಣಿಕೆ ಕಾರ್ಯ ಪ್ರಾರಂಭ ಮಾಡಲಾಯಿತು. ಎಣಿಕೆ ಕಾರ್ಯವು ರಾತ್ರಿ 10 ಗಂಟೆಯ ವರೆಗೂ ನಡೆಯಿತು.
ಈ ಬಾರಿ ಅಮಾವಾಸ್ಯೆ, ವಿಶೇಷ ದಿನಗಳಲ್ಲಿ, ಸರ್ಕಾರಿ ರಜಾ ದಿನಗಳಂದು ರಾಜ್ಯದ ವಿವಿಧೆಡೆಯಿಂದ ಸಾವಿರರು ಜನರು ಆಗಮಿಸಿದ್ದರು. ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಹಾಗೂ ವಿಧಾನಸಭಾ ಚುನಾವಣೆ ಹಿನ್ನೆಲೆ ಕಳೆದ 32 ದಿನಗಳ ಅವಧಿಯಲ್ಲಿ 2,53,58,519 ರು., 65 ಗ್ರಾಂ ಚಿನ್ನ ಹಾಗೂ 3.358 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಮಲೆ ಮಹದೇಶ್ವರಸ್ವಾಮಿ ಅಭಿವೃದ್ಧಿ ಪ್ರಾಧಿಕಾರ(Male Mahadeswaraswamy Development Authority)ದ ಕಾರ್ಯದರ್ಶಿ ಕಾತ್ಯಾಯಿನಿದೇವಿ, ಉಪಕಾರ್ಯದರ್ಶಿ ಬಸವರಾಜು, ದ್ವಿತೀಯ ದರ್ಜೆ ಸಹಾಯಕ ಸರಗೂರು ಮಹದೇವಸ್ವಾಮಿ, ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರು, ಬೆಟ್ಟದ ಪೊಲೀಸ್ ಸಿಬ್ಬಂದಿ ಸೇರಿದಂತೆ ಪ್ರಾಧಿಕಾರದ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಬೆಳ್ಳಿಗಟ್ಟಿನೀಡಿ ಹರಕೆ ತೀರಿಸಿದ ಕುಟುಂಬ: ಮಲೆ ಮಹದೇಶ್ವರ ಬೆಟ್ಟಕ್ಕೆ ಕಳೆದ ವಾರ ಬೆಂಗಳೂರು ಮಂಜುನಾಥ ನಗರದ ಲಕ್ಷ್ಮಯ್ಯ ಮತ್ತು ನಿರ್ಮಲ ದಂಪತಿ ಭಕ್ತ ಮಾದೇಶ್ವರನಿಗೆ ಬೆಳ್ಳಿ ಗಟ್ಟಿ2 ಕೆಜಿ 150 ಗ್ರಾಂ ದೇವಾಲಯಕ್ಕೆ ಸಮರ್ಪಿಸಿದರು. ಆರಾಧ್ಯದೈವ ಮಲೆ ಮಾದೇಶ್ವರನಿಗೆ ಹರಕೆ ಹೊತ್ತ ಕುಟುಂಬದಿಂದ ಬೆಳ್ಳಿ ಕಾಣಿಕೆ ನೀಡುವ ಮೂಲಕ ಕುಟುಂಬ ಸಮೇತ ತೆರಳಿ ಮಾದೇಶ್ವರನ ಬೆಟ್ಟದಲ್ಲಿ ದೇವಾಲಯದಲ್ಲಿ ಕುಟುಂಬದವರು ಹರಕೆ ಒಪ್ಪಿಸಿದರು.
ಹುಲಿಗೆಮ್ಮ ದೇಗುಲ ಹುಂಡಿಗೆ ಸಿದ್ದು ಅಭಿಮಾನಿ ವಿಶೇಷ ಕಾಣಿಕೆ; : 35 ದಿನದಲ್ಲಿ ಒಂದು ಕೋಟಿ ರೂ ಸಂಗ್ರಹ!