ಗಾಯತ್ರಿ ಮಂತ್ರದಿಂದ ಹೇಗೆ ಲಾಭ ಪಡ್ಕೋಬೇಕು ಗೊತ್ತಾ? ಇದನ್ನು ಹೇಳೋ ವಿಧಾನದ ಬಗ್ಗೆ ತಿಳ್ಕೊಳಿ
ಗಾಯತ್ರಿ ಮಂತ್ರವನ್ನು ದಿನವೂ ಪಠಿಸುವುದರಿಂದ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ಮನಸ್ಸಿನ ಸಂಕಲ್ಪ ಶಕ್ತಿ ಹೆಚ್ಚುತ್ತದೆ, ಬುದ್ಧಿವಂತಿಕೆ ವೃದ್ಧಿಯಾಗುತ್ತದೆ. ಏಕಾಗ್ರತೆ, ಸ್ವಯಂ ಅರಿವು ಮೂಡುತ್ತದೆ. ಸೂಕ್ತ ವಿಧಾನದಲ್ಲಿ ಮಂತ್ರ ಹೇಳುವುದು ಅಗತ್ಯ.

ಗಾಯತ್ರಿ ಮಂತ್ರದಲ್ಲಿ ಅಪೂರ್ವ ಶಕ್ತಿಯಿದೆ, ಇದನ್ನು ದಿನವೂ ಪಠಿಸುವುದರಿಂದ ವ್ಯಕ್ತಿಯ ಏಕಾಗ್ರತೆ ಸಾಮರ್ಥ್ಯ ಹೆಚ್ಚುವುದು ಸೇರಿದಂತೆ ಹಲವು ರೀತಿಯ ಪ್ರಯೋಜನಗಳು ಲಭಿಸುತ್ತವೆ ಎನ್ನುವ ಮಾತನ್ನು ಕೇಳಿದ್ದೇವೆ. ಕೇವಲ ದೈಹಿಕ, ಮಾನಸಿಕ ಆರೋಗ್ಯ ಮಾತ್ರವಲ್ಲ, ಆಧ್ಯಾತ್ಮಿಕ ಚೈತನ್ಯವೂ ಇದರಿಂದ ಉದ್ದೀಪನಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಇದನ್ನು ಹೇಗೆ ಪಠಿಸುವ ಮೂಲಕ ಲಾಭ ಪಡೆದುಕೊಳ್ಳಬಹುದು ಎನ್ನುವುದು ಹಲವರಿಗೆ ಗೊತ್ತಿಲ್ಲ. ಅತ್ಯಂತ ಪುರಾತನ ವೇದ ಮಂತ್ರವಾಗಿರುವ ಗಾಯತ್ರಿ ಮಂತ್ರವನ್ನು ದಿನವೂ ಪಠನ ಮಾಡುವುದರಿಂದ ಜೀವನದಲ್ಲಿ ಧನಾತ್ಮಕ ಬದಲಾವಣೆ ಬರುತ್ತದೆ. ಗಾಯತ್ರಿ ಮಂತ್ರದ ಪಠನವನ್ನು “ಜಪ’ ಎಂದು ಸಹ ಹೇಳಲಾಗುತ್ತದೆ. ಪ್ರಶಾಂತವಾದ, ಪವಿತ್ರವಾದ ಸ್ಥಳದಲ್ಲಿ ಕಣ್ಣುಗಳನ್ನು ಮುಚ್ಚಿಕೊಂಡು ಕೆಲವು ಕಾಲ ದೀರ್ಘ ಉಸಿರಾಟ ಮಾಡಿ. ಕಂಫರ್ಟ್ ಆಗಿ ಕುಳಿತುಕೊಳ್ಳುವುದು ಅತ್ಯಂತ ಅಗತ್ಯ. ಚೈತನ್ಯವನ್ನು ಗಮನದಲ್ಲಿ ಇಟ್ಟುಕೊಂಡು ಇದನ್ನು ಹೇಳಿಕೊಳ್ಳಬೇಕು. ಗಾಯತ್ರಿ ಮಂತ್ರವನ್ನು ಮಂತ್ರಗಳಲ್ಲೇ ಮಹಾಮಂತ್ರ ಎಂದು ಹೇಳಲಾಗುತ್ತದೆ. ವಿಶ್ವದ ಮೊದಲ ಪುಸ್ತಕ ಎಂದು ಪರಿಗಣಿಸಲ್ಪಟ್ಟಿರುವ ಋಗ್ವೇದದ ಆರಂಭದಲ್ಲೇ ಈ ಮಂತ್ರವಿದೆ. ಇದರಲ್ಲಿ ಒಟ್ಟು 24 ಅಕ್ಷರಗಳಿವೆ.
“ಓಂ ಭೂರ್ಭುವಃ ಸ್ವಃ ತತ್ ಸವಿತೃ ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್'' ಇದನ್ನು ಪಠಿಸುವ ಮುನ್ನ ಕೆಲವು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಅಗತ್ಯ.
ಶನಿಯಿಂದ ಈ ಏಳು ರಾಶಿಯವರ ಸಂಕಷ್ಟ ದೂರ; 2025ರವರೆಗೆ ನಿಮ್ಮ ಬೆಳವಣಿಗೆ ಪ್ರಗತಿ..!
• ಉಚ್ಚಾರಣೆ (Pronunciation)
ಬುದ್ಧಿ (Intellectual) ಮತ್ತು ಬುದ್ಧಿವಂತಿಕೆಯನ್ನು (Wisdom) ಆರಾಧಿಸುವ, ಪೂಜಿಸುವ ಗಾಯತ್ರಿ ಮಂತ್ರವನ್ನು (Gayatri Chant) ದಿನವೂ ಹೇಳುವುದರಿಂದ ಮಿದುಳಿನ (Brain) ಮೇಲೆ ಅತ್ಯುತ್ತಮ ಪರಿಣಾಮ ಬೀರುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿರುವ ಸಂಗತಿ. ಇದರ ಪರಿಣಾಮ ಸಕಾರಾತ್ಮಕವಾಗಿರಲು (Positive) ಸರಿಯಾದ ಉಚ್ಚಾರಣೆ ಮಾಡುವುದು ಅತಿ ಮುಖ್ಯ. ಸ್ಪಷ್ಟವಾದ ಉಚ್ಚಾರಣೆ ಇಲ್ಲವಾದರೆ ನಿರೀಕ್ಷಿತ ಪರಿಣಾಮ ಕಂಡುಬಾರದೇ ಇರಬಹುದು. ಹೀಗಾಗಿ, ಮೊದಲೆಲ್ಲ ದೀಕ್ಷೆ ಪಡೆದ ಬಳಿಕವೇ ಉಚ್ಚಾರ ಮಾಡಬೇಕು ಎನ್ನುವ ನಿಯಮ ಇದ್ದಿರಬಹುದು. ಉಚ್ಚಾರದ ಬಗ್ಗೆ ಸರಿಯಾದ ಅರಿವು ಮೂಡಿಸಿಕೊಂಡು ಪಠಿಸಬೇಕು.
• ಮಣಿಸರ (Bead)
ಗಾಯತ್ರಿ ಮಂತ್ರವನ್ನು 108 ಬಾರಿ ಪಠಿಸುವುದು ಅಗತ್ಯ. ಇವುಗಳ ಲೆಕ್ಕಾಚಾರಕ್ಕೆ 108 ಮಣಿಗಳಿರುವ ಸರವನ್ನು ಇಟ್ಟುಕೊಳ್ಳುವುದು ಪದ್ಧತಿ. ಸಾಮಾನ್ಯವಾಗಿ ರುದ್ರಾಕ್ಷಿ ಮಾಲೆಯನ್ನು ಬಳಕೆ ಮಾಡಲಾಗುತ್ತದೆ. ಪ್ರತಿಯೊಂದು ಬಾರಿ ಮಂತ್ರ ಹೇಳಿದಾಗಲೂ ಒಂದೊಂದೇ ಮಣಿಯನ್ನು ಲೆಕ್ಕ (Count) ಹಾಕುತ್ತ ಸಾಗಬೇಕು.
• ಮುಂಜಾನೆ (Morning) ಸಮಯ ಸೂಕ್ತ
ಗಾಯತ್ರಿ ಮಂತ್ರವನ್ನು ಬೆಳಗಿನ ಜಾವದಲ್ಲಿ ಪಠಿಸುವುದರಿಂದ ಅತ್ಯುತ್ತಮ ಪರಿಣಾಮ ಕಾಣಬಹುದು. ಬೆಳಗಿನ ಜಾವ 3ರಿಂದ 6 ಗಂಟೆಯವರೆಗಿನ ಅವಧಿಯನ್ನು ಬ್ರಾಹ್ಮಿ ಸಮಯ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಸಕಾರಾತ್ಮಕ ಸಂಕಲ್ಪಗಳನ್ನು ಮಾಡಿದರೆ ಖಂಡಿತವಾಗಿ ಸಾಕಾರಗೊಳ್ಲುತ್ತದೆ ಎಂದು ಹೇಳಲಾಗುತ್ತದೆ.
• ಏಕಾಗ್ರತೆ (Concentration), ಬದ್ಧತೆ
ಏಕಾಗ್ರ ಚಿತ್ತದಿಂದ ಗಾಯತ್ರಿ ಮಂತ್ರವನ್ನು ಜಪಿಸಬೇಕು. ಆಧ್ಯಾತ್ಮಿಕ ಚೈತನ್ಯ (Energy) ಉದ್ದೀಪಿಸಲು ಧ್ಯಾನವನ್ನೂ ಜತೆಗೆ ಮಾಡಬೇಕು.
ಮನೆಯ ಈ ದಿಕ್ಕಿನಿಂದ ಕಪ್ಪು ಇರುವೆ ಬಂದ್ರೆ ಹಣವೋ ಹಣ; ನಿಮ್ಮ ಬಡತನ ದೂರಾಗುತ್ತೆ..!
ಹೇಗೆಲ್ಲ ಪರಿಣಾಮ?
• ದಿನವನ್ನು ಆರಂಭಿಸುವ ಮುನ್ನ ಧನಾತ್ಮಕ ಉದ್ದೇಶವಿದ್ದಾಗ ಇಡೀ ದಿನಕ್ಕೆ ಉತ್ತಮ ಚಾಲನೆ ದೊರೆಯುತ್ತದೆ. ಅಂದುಕೊಂಡಿರುವ ಕಾರ್ಯಗಳು ಸಫಲವಾಗುತ್ತವೆ.
• ದಿನವೂ ಗಾಯತ್ರಿ ಮಂತ್ರವನ್ನು ಜಪ ಮಾಡುವುದರಿಂದ ಆಂತರಿಕ ಸಾಮರಸ್ಯ (Inner Harmony) ವೃದ್ಧಿಯಾಗುತ್ತದೆ. ಒತ್ತಡ (Stress) ಮತ್ತು ಆತಂಕ (Anxiety) ದೂರವಾಗುತ್ತದೆ.
• ಆಧ್ಯಾತ್ಮಿಕ (Spiritual) ಜೀವನವನ್ನು ಉತ್ತಮ ಪಡಿಸಿಕೊಳ್ಳುವ ಜತೆಗೆ, ನಿಮ್ಮನ್ನು ನೀವು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಮಂತ್ರದ ಪಠನೆಯಿಂದ ನಿಮ್ಮಲ್ಲಿ ಅಗಾಧ ಪರಿವರ್ತನೆ (Change) ಕಾಣಬಹುದು.
• ಪವಿತ್ರ ಬೆಳಕಿನ ಪ್ರಾರ್ಥನೆಯಾಗಿರುವ ಗಾಯತ್ರಿ ಮಂತ್ರದಿಂದ ಬುದ್ಧಿವಂತಿಕೆ, ಶಾಂತಿ, ಸ್ವ ಅರಿವು ಹೆಚ್ಚುವುದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ.