ಕೈ ತುಂಬಾ ದುಡ್ಡಿರಲು ಕಪ್ಪು ಇರುವೆ ಕಾರಣ; ಶ್ರೀಮಂತರ ಮನೆ ರಹಸ್ಯ ಬಯಲು!
ಕೆಲವೊಮ್ಮೆ ಮನೆಯಲ್ಲಿ ಹೆಚ್ಚಾಗಿ ಇರುವೆಗಳು ಕಾಣಿಸಿಕೊಳ್ಳುತ್ತವೆ, ಇದರಿಂದ ನಮಗೆ ಕಿರಿಕಿರಿ ಆಗಬಹುದು. ಆದರೆ ಮನೆಗೆ ಕಪ್ಪು ಇರುವೆಗಳ ಬರುವುದು ಮಂಗಳಕರವೆಂದು ಹೇಳುತ್ತಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ನಿಮ್ಮ ಮನೆಗೆ ಕಪ್ಪು ಇರುವೆಗಳು ಬರುತ್ತಿದ್ದರೆ, ನಿಮಗೆ ಸಂತೋಷ ಮತ್ತು ಐಶ್ವರ್ಯದ ಸಮಯ ಬರುತ್ತಿದೆ ಎಂದರ್ಥ. ಕೆಲವೇ ದಿನಗಳಲ್ಲಿ ನಿಮ್ಮ ಸಂಪತ್ತಿನ ಹೆಚ್ಚಳವನ್ನು ನೀವು ನೋಡುತ್ತೀರಿ.
ಮನೆಯಲ್ಲಿ ಪೂರ್ವದಿಂದ ಕಪ್ಪು ಇರುವೆಗಳು ಕಾಣಿಸಿಕೊಂಡರೆ, ಒಳ್ಳೆಯ ಸುದ್ದಿಗಳು ನಿಮ್ಮ ಕಿವಿಗೆ ಬೀಳುತ್ತವೆ ಎಂದರ್ಥ. ನಿಮ್ಮ ಮನಸ್ಸಿಗೆ ಖುಷಿ ನೀಡುವ ಸಂಗತಿ ಜರುಗಲಿದೆ ಎಂಬುದು ಇದರ ಅರ್ಥ.
ಮನೆಯಲ್ಲಿ ಬಂಗಾರ ಅಥವಾ ಬೆಳ್ಳಿ ಇಟ್ಟ ಸ್ಥಳದಲ್ಲಿ ಕಪ್ಪು ಇರುವೆ ಕಾಣಿಸಿಕೊಂಡರೆ, ಶೀಘ್ರದಲ್ಲೇ ನೀವು ಹೊಸ ಆಭರಣಗಳನ್ನು ಖರೀದಿಸುತ್ತೀರಿ ಎಂದರ್ಥ.
ಕಪ್ಪು ಇರುವೆಗಳು ಅಕ್ಕಿ ತುಂಬಿದ ಚೀಲ ಅಥವಾ ವಿವಿಧ ಸಾಮಾಗ್ರಿಗಳಿಂದ ಹೊರಬಂದರೆ ಇದು ತುಂಬಾ ಶುಭ. ಇದರಿಂ ನಿಮ್ಮ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ ಎಂದರ್ಥ.
ಕಪ್ಪು ಇರುವೆಗಳು ಉತ್ತರ ದಿಕ್ಕಿನಿಂದ ಮನೆಯೊಳಗೆ ಬಂದರೆ ಹಣದ ಲಾಭ ಮತ್ತು ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ ಎಂದರ್ಥ. ದಕ್ಷಿಣ ದಿಕ್ಕಿನಿಂದ ಬಂದರೂ ಕೂಡ ಅದು ಶುಭ ಸಂಕೇತ
ಕಪ್ಪು ಇರುವೆಗಳು ಪಶ್ಚಿಮ ಭಾಗದಿಂದ ಮನೆಗೆ ಪ್ರವೇಶಿಸಿದರೆ ನೀವು ಯಾವುದೋ ಸ್ಥಳಕ್ಕೆ ಪ್ರಯಾಣಿಸಬಹುದು ಎಂದರ್ಥ. ನೀವು ಶೀಘ್ರವೇ ಪ್ರವಾಸ ಕೈಗೊಳ್ಳುವ ಮುನ್ಸೂಚನೆ ಇದು.