Asianet Suvarna News Asianet Suvarna News

ಶನಿಯಿಂದ ಈ ಏಳು ರಾಶಿಯವರ ಸಂಕಷ್ಟ ದೂರ; 2025ರವರೆಗೆ ನಿಮ್ಮ ಬೆಳವಣಿಗೆ ಪ್ರಗತಿ..!

ಶನಿ ಗೋಚರದಿಂದ 2025ರವರೆಗೆ ಅನೇಕ ರಾಶಿಯವರು ಪ್ರಯೋಜನಗಳನ್ನು ಪಡೆಯುತ್ತಾರೆ. ಏಳು ರಾಶಿಯವರಿಗೆ ಶನಿದೇವನ ಆಶೀರ್ವಾದ ಇರಲಿದೆ. ಇವರ ಕಷ್ಟಗಳು ದೂರವಾಗಲಿವೆ. ಈ ಕುರಿತು ಇಲ್ಲಿದೆ ಮಾಹಿತಿ.

shani in aquarius till the year 2025 blessings on zodiac signs suh
Author
First Published Aug 22, 2023, 1:02 PM IST

ಶನಿ ಗೋಚರದಿಂದ 2025ರವರೆಗೆ ಅನೇಕ ರಾಶಿಯವರು ಪ್ರಯೋಜನಗಳನ್ನು ಪಡೆಯುತ್ತಾರೆ. ಏಳು ರಾಶಿಯವರಿಗೆ ಶನಿದೇವನ ಆಶೀರ್ವಾದ ಇರಲಿದೆ. ಇವರ ಕಷ್ಟಗಳು ದೂರವಾಗಲಿವೆ. ಈ ಕುರಿತು ಇಲ್ಲಿದೆ ಮಾಹಿತಿ.

ಶನಿಯನ್ನು ಗ್ರಹಗಳ ನ್ಯಾಯಾಧೀಶ ಎಂದು ಪರಿಗಣಿಸಲಾಗಿದೆ. ಶನಿಯು ಪ್ರತಿಯೊಬ್ಬ ವ್ಯಕ್ತಿಗೆ ಅವನ ಕಾರ್ಯಗಳಿಗೆ ಅನುಗುಣವಾಗಿ ಫಲಿತಾಂಶವನ್ನು ನೀಡುತ್ತಾನೆ. ಶನಿಯು ಕೆಟ್ಟ ಕಾರ್ಯಗಳಲ್ಲಿ ತೊಡಗುವವರನ್ನು ಶಿಕ್ಷಿಸುತ್ತಾನೆ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತಾನೆ. ಆದರೆ ಶನಿದೇವನು ಒಳ್ಳೆಯ ಕಾರ್ಯಗಳನ್ನು ಮಾಡುವ ಜನರಿಗೆ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಪ್ರಸ್ತುತ ಶನಿದೇವನು ಕುಂಭ ರಾಶಿಯಲ್ಲಿದ್ದಾನೆ. ಇದರಿಂದ ಕೆಲವು ರಾಶಿಚಕ್ರ ಚಿಹ್ನೆಗಳ ಜನರಿಗೆ ಶುಭ ಫಲಿತಾಂಶಗಳು ಸಿಗಲಿವೆ.

ಮೇಷ ರಾಶಿ (Aries) 

ಮೇಷ ರಾಶಿಯವರಿಗೆ ಕುಂಭ ರಾಶಿಯಲ್ಲಿ ಶನಿಯ ಉಪಸ್ಥಿತಿಯು ಶುಭ ಸುದ್ದಿಯನ್ನು ತರುತ್ತದೆ. ಇದು ಆರ್ಥಿಕ ಬೆಳವಣಿಗೆ, ವ್ಯಾಪಾರ ಯಶಸ್ಸು ಮತ್ತು ಜೀವನದ ಅಂಶಗಳಲ್ಲಿ ಬೆಳವಣಿಗೆಯನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ನಿಮ್ಮ ಪ್ರಯತ್ನಗಳು ಶುಭ ಫಲಿತಾಂಶಗಳನ್ನು ನೀಡುತ್ತವೆ ಮತ್ತು ಸಮಾಜದಲ್ಲಿ ನಿಮ್ಮ ಗೌರವು ಹೆಚ್ಚಾಗುತ್ತದೆ. 

ವೃಷಭ ರಾಶಿ (Taurus) 

ವೃಷಭ ರಾಶಿಯವರಿಗೆ ಕುಂಭ ರಾಶಿಯಲ್ಲಿ ಶನಿಯ ಸಂಕ್ರಮಣದ ಶುಭ ಪರಿಣಾಮಗಳು ಉಂಟಾಗುತ್ತದೆ. ಈ ಅವಧಿಯು ವೃತ್ತಿ ಬೆಳವಣಿಗೆ, ಆರ್ಥಿಕ ಸುಧಾರಣೆಗಳು ಮತ್ತು ಯಶಸ್ವಿ ಉದ್ಯಮಗಳಿಗೆ ಅವಕಾಶಗಳನ್ನು ತರುತ್ತದೆ.

ಸಿಂಹ ರಾಶಿ (Leo) 

ಸಿಂಹ ರಾಶಿಯ ಜನರು 2025ರವರೆಗೆ ಶನಿಯ ಅನುಕೂಲಕರ ಪ್ರಭಾವವನ್ನು ನಿರೀಕ್ಷಿಸಬಹುದು. ಕುಂಭದಲ್ಲಿ ಶನಿಯ ಸಂಕ್ರಮಣದ ಅವಧಿಯು ವೈವಾಹಿಕ ಜೀವನದಲ್ಲಿ ಸ್ಥಿರತೆಯನ್ನು ನೀಡುತ್ತದೆ ಮತ್ತು 7ನೇ ಮನೆಯಲ್ಲಿ ಅದರ ಸ್ಥಾನವು ಜೀವನದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸನ್ನು ಸೂಚಿಸುತ್ತದೆ. ಹಣಕಾಸಿನ ಲಾಭವಾಗುತ್ತದೆ.

ಈ ದರಿದ್ರ ಕೆಲಸದಿಂದ ‘ಲಕ್ಷ್ಮಿ ದೇವಿ’ ಕೋಪಗೊಳ್ಳುವಳು; ಇವುಗಳನ್ನು ಇಂದೇ ನಿಲ್ಲಿಸಿ.!

 

ತುಲಾ ರಾಶಿ (Libra) 

ಕುಂಭ ರಾಶಿಯಲ್ಲಿ ಶನಿಯ ಉತ್ಕೃಷ್ಟ ಸ್ಥಾನವು ತುಲಾ ರಾಶಿಯವರಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಹತ್ತನೇ ಮನೆಯಲ್ಲಿ ಶನಿಯ ಉಪಸ್ಥಿತಿಯು ವೃತ್ತಿ ಪ್ರಗತಿ ಆರ್ಥಿಕ ಸಮೃದ್ಧಿ ಮತ್ತು ಯಶಸ್ವಿ ವ್ಯಾಪಾರ ಪ್ರಯತ್ನಗಳನ್ನು ಸೂಚಿಸುತ್ತದೆ. ಕುಂಭ ರಾಶಿಯಲ್ಲಿ ಶನಿಯ ಸಂಚಾರದ ಸಮಯದಲ್ಲಿ ಯೋಜನೆಗಳು ಅಭಿವೃದ್ಧಿ ಹೊಂದುತ್ತವೆ.

ವೃಶ್ಚಿಕ ರಾಶಿ (Scorpio) 

ವೃಶ್ಚಿಕ ರಾಶಿಯ ಸ್ಥಳೀಯರು ತಮ್ಮ ಜನ್ಮ ಕುಂಡಲಿಯಲ್ಲಿ 11ನೇ ಮನೆಯಲ್ಲಿ ಶನಿಯ ಉಪಸ್ಥಿತಿಯನ್ನು ಅನುಭವಿಸುತ್ತಾರೆ. ಆರ್ಥಿಕ ಬೆಳವಣಿಗೆ ಮತ್ತು ಜೀವನ ಪರಿಸ್ಥಿಗಳಲ್ಲಿ ಸುಧಾರಣೆಗೆ ಕಾರಣವಾಗುತ್ತದೆ. ಕುಂಭ ರಾಶಿಯಲ್ಲಿ ಶನಿಯ ಸಂಕ್ರಮಣದ ಅವಧಿಯು ಜೀವನದ ಅನೇಕ ಕ್ಷೇತ್ರಗಳಲ್ಲಿ ಯಶಸ್ಸು ಮತ್ತು ಪ್ರಗತಿಗೆ ಅನೇಕ ಅವಕಾಶಗಳನ್ನು ಒದಗಿಸುತ್ತದೆ.

ಮಕರ ರಾಶಿ (Capricorn) 

ಕುಂಭ ರಾಶಿಯಲ್ಲಿ ಶನಿಯ ಉಪಸ್ಥಿತಿಯು ಮಕರ ರಾಶಿಯವರಿಗೆ ಮಂಗಳಕರವಾಗಿದೆ. ಏಕೆಂದರೆ ಇದು ನಿಮ್ಮ ವೃತ್ತಿ ಮತ್ತು ಆರ್ಥಿಕ ಭವಿಷ್ಯಕ್ಕೆ ಸಂಬಂಧಿಸಿದ ಅನೇಕ ಪ್ರಯತ್ನಗಳಲ್ಲಿ ಯಶಸ್ಸು ಸೂಚಿಸುತ್ತದೆ.

ಮೀನ ರಾಶಿ (Pisces) 

ಮೀನ ರಾಶಿಯ ಜನರು ತಮ್ಮ ರಾಶಿಚಕ್ರದ ಎರಡನೇ ಮನೆಯಲ್ಲಿ ಶನಿಯು ಸಂಚಾರ ಮಾಡುವುದರಿಂದ ಕೆಲವು ಸವಾಲುಗಳನ್ನು ಎದುರಿಸಬೇಕಾಬಹುದು. ಆದ್ಯಾಗ್ಯೂ ಈ ಸವಾಲುಗಳು ವೈಯಕ್ತಿಕ ಬೆಳವಣಿಗೆ, ಕಲಿಕೆ ಮತ್ತು ಸಂಬಂಧಗಳ ಬಲವರ್ಧನೆಗೆ ಕಾರಣವಾಗುತ್ತದೆ.

Follow Us:
Download App:
  • android
  • ios