Asianet Suvarna News Asianet Suvarna News

Vaastu Tips: ನಿದ್ದೆನೇ ಬರ್ತಿಲ್ಲ ಅಂದ್ರೆ ಹೀಗ್ ಮಾಡಿ ನೋಡಿ..

ಫೋನ್, ಲ್ಯಾಪ್‌ಟಾಪ್‌ಗಳೆಲ್ಲ ಚಾರ್ಜ್ ಆಗುವಂತೆ ನಮ್ಮ ದೇಹ ಕೂಡಾ ನಿದ್ರೆಯಿಂದ ಚಾರ್ಜ್ ಆಗುತ್ತಿರುತ್ತದೆ. ನಿದ್ರೆ, ಆಹಾರ ಸರಿಯಾಗಿಲ್ಲವೆಂದರೆ ದೇಹದ ಬ್ಯಾಟರಿ ಡೌನ್ ಆಗೋದು ಗ್ಯಾರಂಟಿ. ಚೆನ್ನಾಗಿ ನಿದ್ರಿಸಲು ವಾಸ್ತುವಿನಲ್ಲಿವೆ ಪರಿಹಾರ.

Vaastu tips for a sound sleep skr
Author
Bangalore, First Published Jan 4, 2022, 11:07 AM IST

ನಿದ್ದೆ ಕಾಣದ ರಾತ್ರಿಗಳು ಗುಡ್ ನೈಟ್ ಹೇಗಾದಾವು? ನಿದ್ರೆಯೇ ಬರದೇ ರಾತ್ರಿಯಿಡೀ ಹೊರಳಾಡುತ್ತಿರುವುದಕ್ಕೆ ಚಿಂತೆ, ನೋವು, ಆತಂಕ, ದೈಹಿಕ ಸಮಸ್ಯೆಗಳು ಕಾರಣವಿರಬಹುದು. ಆದರೆ ಹೀಗೆ ನಿದ್ರೆಗೆಡುವುದು ಒಳ್ಳೆಯದಲ್ಲ, ನೀವಂದಕೊಂಡಷ್ಟು ಸರಳ ಸಮಸ್ಯೆಯೂ ಇದಲ್ಲ. ನಿದ್ರೆ(sleep)ಯಾಗಿಲ್ಲವೆಂದರೆ ದೇಹ ಯಾವ ಕೆಲಸಕ್ಕೂ ಸಹಕಾರ ನೀಡುವುದಿಲ್ಲ, ಮನಸ್ಸು ಏಕಾಗ್ರತೆ ಸಾಧಿಸುವುದಿಲ್ಲ. ಮೆದುಳು ಸರಿಯಾದ ಒಂದು ನಿರ್ಧಾರವನ್ನೂ ತೆಗೆದುಕೊಳ್ಳಲಾರದೆ ಗೊಂದಲಕ್ಕೀಡಾಗುತ್ತದೆ. ಒಟ್ಟಿನಲ್ಲಿ ನಿದ್ರೆಯ ಕೊರತೆಯು ನಿಧಾನವಾಗಿ ಇಡೀ ಜೀವನವನ್ನೇ ಬುಡಮೇಲು ಮಾಡಬಲ್ಲದು. ಹಾಗಂಥ ನಿದ್ರೆಗಾಗಿ ಪ್ರತಿ ದಿನ ಮಾತ್ರೆ ಸೇವಿಸುವುದು ಒಳ್ಳೆಯದಲ್ಲ. ಮೊದಲು ವಾಸ್ತು(Vaastu)ವಿನಲ್ಲಿ ಉತ್ತಮ ನಿದ್ರೆಗಾಗಿ ಹೇಳಿರುವ ಈ ಸಲಹೆಗಳನ್ನು ಪಾಲಿಸಿ ನೋಡಿ. 

ಮಲಗುವ ದಿಕ್ಕು
ಯಾವತ್ತೂ ಉತ್ತರ(North) ದಿಕ್ಕಿಗೆ ತಲೆಯಿಟ್ಟು ಮಲಗಬೇಡಿ. ಈ ದಿಕ್ಕಿನಲ್ಲಿ ಭೂಮಿಯ ಅಯಸ್ಕಾಂತೀಯ(gravitation) ವಲಯವಿರುವುದರಿಂದ ಈ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದಾಗ ರಕ್ತವು ಹೆಚ್ಚಾಗಿ ನಿಮ್ಮ ತಲೆಯತ್ತ ಹರಿಯಲಾರಂಭಿಸುತ್ತದೆ. ಏಕೆಂದರೆ ರಕ್ತದಲ್ಲಿರುವ ಐರನ್‌ನ್ನು ಮ್ಯಾಗ್ನೆಟ್ ಸೆಳೆಯತೊಡಗುತ್ತದೆ. ಇದರಿಂದ ರಕ್ತದ ಹರಿವು ಅಚಾನಕ್ ಹೆಚ್ಚಾಗಿ ಹ್ಯಾಮರೇಜ್ ಇಲ್ಲವೇ ಸ್ಟ್ರೋಕ್ ಆಗುವ ಸಾಧ್ಯತೆಗಳಿರುತ್ತದೆ. ಅಲ್ಲದೆ, ಸರಿಯಾಗಿ ನಿದ್ದೆ ಬಾರದಿರುವುದು, ಕೆಟ್ಟ ಕನಸುಗಳು ಬೀಳುವುದು ಮುಂತಾದ ಸಮಸ್ಯೆಗಳು ಕಂಡುಬರುತ್ತವೆ.

ಬಲ್ಬ್ ಕೆಳಗೆ ಬೇಡ
ಉರಿಯುವ ಬಲ್ಬ್‌(bulb)ನ ಕೆಳಗೆ ಮಲಗಬೇಡಿ. ಅದು ನಿಮ್ಮ ಮಾನಸಿಕ ಸಮತೋಲನವನ್ನು ಹಾಳು ಮಾಡುತ್ತದೆ.

ಮೇಷಕ್ಕೆ Coffee Addiction, ನಿಮ್ಮ ರಾಶಿಯ ವ್ಯಸನ ಏನು ನೋಡಿ..

ಕನ್ನಡಿಗಳು(Mirrors)
ಮಲಗುವ ಕೋಣೆಯಲ್ಲಿ ಕನ್ನಡಿಗಳನ್ನು ಇರಿಸಬೇಡಿ. ಒಂದು ವೇಳೆ ಇದ್ದರೂ, ಹಾಸಿಗೆಯಿಂದ ಕಾಣಿಸುವಂತಿರಬಾರದು. ರಾತ್ರಿ ಮಲಗುವಾಗ ಅವನ್ನು ಬಟ್ಟೆಯಿಂದ ಮುಚ್ಚಿಬಿಡಿ. ಬೆಡ್‌ರೂಂನಲ್ಲಿ ಕನ್ನಡಿ ಇದ್ದರೆ ಅದು ನೀವು ಹಳೆಯದಕ್ಕೇ ಜೋತು ಬೀಳುವಂತೆ ಮಾಡುತ್ತದೆ. ಭವಿಷ್ಯವನ್ನು ಯೋಜಿಸಲು ಬಿಡುವುದಿಲ್ಲ.

ಪೀಠೋಪಕರಣ(furniture)
ಅನಗತ್ಯ ಫರ್ನಿಚರ್‌ಗಳನ್ನು ಕೋಣೆಯಲ್ಲಿರಿಸಿಕೊಳ್ಳಬೇಡಿ. ಬೆಡ್‌ರೂಂನಾದ್ಯಂತ ಕಾಸ್ಮಿಕ್ ಎನರ್ಜಿ ಸರಾಗವಾಗಿ ಹರಿದಾಡುವುದಕ್ಕೆ ಈ ಅನಗತ್ಯ ಫರ್ನಿಚರ್‌ಗಳು ಅಡೆತಡೆಗಳಾಗುತ್ತವೆ. ಮಂಚವೊಂದಿದ್ದರೆ ಸಾಕಲ್ಲವೇ? ಮಂಚ ಕೂಡಾ ಮರದ್ದೇ ಆಗಿರಬೇಕು. ಮೆಟಲ್ ಮಂಚಗಳನ್ನು ಬಳಸಬೇಡಿ. ಮಂಚದ ಕೆಳಗೆ ಖಾಲಿ ಇರಬೇಕು. 

Vaastu Tips: ಮನೆಯಲ್ಲಿ ನವಿಲುಗರಿ ಇಟ್ಟರೆ ಧನಲಾಭ ಗ್ಯಾರಂಟಿ

ಹಾಸಿಗೆ(bed)
ಹಾಸಿಗೆಯ ಕೆಳಗೆ ಯಾವುದೇ ವಸ್ತುಗಳನ್ನು ಇಡಬೇಡಿ. ನಿಮ್ಮ ನೆನಪುಗಳನ್ನು ಕೆದಕುವಂಥ ವಸ್ತುಗಳು, ಹಣ, ಕೀಗಳು, ಚಾಕು ಇತ್ಯಾದಿಯನ್ನು ಹಾಸಿಗೆಯ ಕೆಳಗಿರಿಸುವುದು ಉಚಿತವಲ್ಲ. ಹಲವರು ಅಲಾರಾಂ ಗಡಿಯಾರವನ್ನು ದಿಂಬಿನ ಕೆಳಗಿಟ್ಟುಕೊಂಡು ಮಲಗುತ್ತಾರೆ. ಆದರೆ ಇದು ಅತ್ಯಂತ ಅಪಾಯಕಾರಿ ಅಭ್ಯಾಸವಾಗಿದ್ದು, ದಂಪತಿಯ ಮಧ್ಯೆ ಜಗಳ ತಂದಿಡುತ್ತದೆ. ಅಲಾರಾಂನ್ನು ಬೆಡ್‌ನ ಬಲ ಅಥವಾ ಎಡಕ್ಕೆ ಇರಿಸಿಕೊಳ್ಳಿ. ಮೊಬೈಲ್ ಫೋನನ್ನು ಬೆಡ್‌ರೂಂನಲ್ಲಿಟ್ಟುಕೊಳ್ಳದಿದ್ದರೆ ಉತ್ತಮ. ಇವುಗಳಿಂದ ಹೊಮ್ಮುವ ಎಲೆಕ್ಟ್ರಿಕ್ ಸಿಗ್ನಲ್‌ಗಳು ನಿದ್ದೆಯ ಮೇಲೆ ಪರಿಣಾಮ ಬೀರುತ್ತವೆ. ಹಾಸಿಗೆಗೆ ಹಾಸುವ ಬಟ್ಟೆ ಗಾಢ ಬಣ್ಣದ್ದಾಗಿರಲಿ ಹಾಗೂ ದಿಂಬಿನ ಕವರ್ ಬಣ್ಣ ಬಿಳಿ ಬಣ್ಣದ್ದಾಗಿರಲಿ.

ಅಕ್ವೇರಿಯಂ ಇಲ್ಲಿ ಬೇಡ
ವಾಸ್ತು ಶಾಸ್ತ್ರದಂತೆ ಅಕ್ವೇರಿಯಂ(aquarium), ಇನ್‌ಡೋರ್ ಪ್ಲ್ಯಾಂಟ್ಸ್ ಸೇರಿದಂತೆ ಯಾವುದೇ ಜೀವವಿರುವ ವಸ್ತುಗಳು ಮಲಗುವ ಕೋಣೆಯಲ್ಲಿರಬಾರದು. ಅವು ನಿದ್ದೆಗೆ ಭಂಗ ತರುತ್ತವೆ. ಚೂಪಾದ ಮೂಲೆಗೆ ತಾಗಿಸಿ ಮಂಚವನ್ನಿಡಬೇಡಿ.

ಸ್ವಚ್ಛತೆ(cleanliness)
ಬೆಡ್‌ರೂಂನ್ನು ಸಾಧ್ಯವಾದಷ್ಟು ಸ್ವಚ್ಛವಾಗಿರಿಸಿ. ಮೂಲೆ ಮೂಲೆಯೂ ಧೂಳು, ಬಲೆಗಳಿಂದ ಮುಕ್ತವಾಗಿರಬೇಕು. ಇದು ಮಲಗುವ ಕೋಣೆ(bed room)ಗೆ ಪಾಸಿಟಿವಿಟಿ ತರಲು ಮೊದಲ ಹೆಜ್ಜೆ. ಅಲ್ಲದೆ ಇದರಿಂದ ನಿದ್ರೆಗೆ ಭಂಗ ತರುವ ಸೊಳ್ಳೆ, ನುಸಿಗಳಂಥ ಕೀಟಗಳೂ ದೂರ ಉಳಿಯುತ್ತವೆ.

ವಾಲ್‌ಪೇಪರ್(wall paper)
ಮಲಗುವ ಕೋಣೆಯ ಗೋಡೆಗಳಿಗೆ ತಿಳಿ ಬಣ್ಣಗಳನ್ನು ಬಳಸಿರಬೇಕು. ಹಸಿರು, ಪಿಂಕ್, ನೀಲಿ ಅಥವಾ ಹಳದಿ ಬಣ್ಣವನ್ನು ಬಳಸಿ. ಸೂರ್ಯನ ಬೆಳಕನ್ನು ರಿಫ್ಲೆಕ್ಟ್ ಮಾಡುವಂತಿರಬೇಕು. ಅದು ಬೆಳಗ್ಗೆ ಕಣ್ಣು ಬಿಡುವಾಗ ನಿಮ್ಮ ಚೈತನ್ಯ ಹೆಚ್ಚಿಸುತ್ತದೆ. ಸಕಾರಾತ್ಮಕ ಸಂದೇಶ ಕೊಡುವ ವಾಲ್‌ಪೇಪರ್, ಫೋಟೋಗಳಷ್ಟೇ ಕೋಣೆಯಲ್ಲಿರಲಿ. ನೆಗೆಟಿವ್ ಶೇಡ್ ಇರುವ ಯಾವುದೇ ಚಿತ್ರವೂ ಕೋಣೆಯಲ್ಲಿರಕೂಡದು. ಇದು ನಿಮ್ಮ ಮನಸ್ಸನ್ನು ಕುಗ್ಗಿಸುತ್ತದೆ.

ಕಿಟಕಿ(window) ತೆರೆದಿಡಿ
ಮಲಗುವಾಗ ಬೆಡ್‌ರೂಂನ ಬಾಗಿಲತ್ತ ಕಾಲು ಹಾಕಬೇಡಿ. ಇದರಿಂದ ಕೆಟ್ಟ ಕನಸುಗಳು ಬೀಳುವುದನ್ನು ತಪ್ಪಿಸಬಹುದು. ಕೋಣೆಯ ಕಿಟಕಿಗಳನ್ನು ದಿನದಲ್ಲಿ ಕನಿಷ್ಠ 3-4 ಗಂಟೆಗಳ ಕಾಲವಾದರೂ ತೆರೆದಿಡಿ. ಸರಿಯಾದ ಗಾಳಿ ಬೆಳಕು ಕೋಣೆಗೆ ಪಾಸಿಟಿವಿಟಿ ಹೊತ್ತು ತರುತ್ತದೆ. ಅಡುಗೆಕೋಣೆಯ ಮೇಲೆ ಬೆಡ್ ರೂಂ ಕಟ್ಟಿಸಬೇಡಿ. 

Follow Us:
Download App:
  • android
  • ios