Asianet Suvarna News Asianet Suvarna News

ಮೇಷಕ್ಕೆ Coffee Addiction, ನಿಮ್ಮ ರಾಶಿಯ ವ್ಯಸನ ಏನು ನೋಡಿ..

ಒಬ್ಬೊಬ್ಬರಿಗೆ ಒಂದೊಂದು ವ್ಯಸನವಿರುತ್ತದೆ. ಕೆಲವರು ಪದೇ ಪದೆ ಕಾಫಿ ಕುಡಿಯುವ ಅಭ್ಯಾಸ ಹೊಂದಿದ್ದರೆ ಮತ್ತೆ ಕೆಲವರಿಗೆ ಗಳಿಗೆಗೊಮ್ಮೆ ಸೋಷ್ಯಲ್ ಮೀಡಿಯಾ ತಡಕಾಡುವ ಚಟ. ರಾಶಿ ಪ್ರಕಾರ ನೋಡಿದಾಗ, ಯಾವ ರಾಶಿಗೆ ಯಾವ ವ್ಯಸನವಿರುತ್ತದೆ ಗೊತ್ತಾ?

Check out what each zodiac sign is addicted to skr
Author
Bangalore, First Published Jan 3, 2022, 5:05 PM IST
  • Facebook
  • Twitter
  • Whatsapp

ಜೀವನದಲ್ಲಿ ಟೈಂ ಪಾಸ್‌ಗೆಂದೋ, ಬೋರ್ಡಂ ಕಳೆಯಲೋ, ಇಷ್ಟವೆಂದೋ ಮತ್ತಾವುದೋ ಕಾರಣಕ್ಕೆ ಕೆಲವು ಅಭ್ಯಾಸಗಳು ನಮಗೆ ಜೊತೆಗೂಡಿರುತ್ತವೆ. ಬರಬರುತ್ತಾ ಅವು ಚಟದಂತೆ ಅಂಟಿಕೊಳ್ಳುತ್ತವೆ. ಕೆಲವರಿಗೆ ಕಾಫಿ(coffee)ಯ ಚಟ, ಮತ್ತೆ ಕೆಲವರಿಗೆ ಎಷ್ಟು ತಿರುಗಿದರೂ ಸಾಲದೆಂಬಂತೆ ಪ್ರವಾಸದ ಚಟ, ಇನ್ನೂ ಕೆಲವರಿಗೆ ಪುಸ್ತಕದ ವ್ಯಸನ.. ಈಗಿಗಂತೂ ಹಲವರಿಗೆ ಸೋಷ್ಯಲ್ ಮೀಡಿಯಾ(social media) ಚೆಕ್ ಮಾಡೋ ಚಟ.. ಒಟ್ನಲ್ಲಿ ವ್ಯಸನ(addiction)ವಿಲ್ಲದವರು ಯಾರೂ ಇಲ್ಲ. ಈ ವ್ಯಸನವನ್ನು ರಾಶಿಗನುಗುಣವಾಗಿ ನೋಡಿದಾಗ ಕೆಲ ರಾಶಿಯವರಿಗೆ ಕೆಲ ವ್ಯಸನಗಳು ಹೆಚ್ಚಿರುತ್ತವೆ. ಇದಕ್ಕೆ ಆಯಾ ರಾಶಿಯ ಹುಟ್ಟು ಸ್ವಭಾವಗಳು ಕಾರಣವಾಗುತ್ತವೆ. ಯಾವ ರಾಶಿಗೆ ಯಾವುದರ ಅಡಿಕ್ಷನ್ ನೋಡೋಣ. 

ಮೇಷ(Aries): ಇಡೀ ದಿನ ಬೇಕಾದರೂ ಟಿವಿ ನೋಡುತ್ತಾ ಕೂರಬಲ್ಲರಿವರು. ಅದರೊಂದಿಗೆ ದಿನಕ್ಕೆ 10 ಲೋಟ ಕಾಫಿ ಕುಡಿದರೂ ತಣಿಯದವರು. ವೆಬ್ ಸಿರೀಸ್‌ಗಳು, ಟಿವಿ ಕಾರ್ಯಕ್ರಮಗಳನ್ನು ಎಡೆಬಿಡದೆ ನೋಡುವುದು ಇವರ ವ್ಯಸನ. ಹಾಗಂಥ ಸವಾಲುಗಳನ್ನು(challenges) ಎದುರಿಸುವಲ್ಲಿ, ಉದ್ಯೋಗರಂಗದಲ್ಲಿ ಸೋಮಾರಿಯಾಗಿ ಹಿಂದೆ ಬೀಳುವವರಲ್ಲ.

Check out what each zodiac sign is addicted to skr

ವೃಷಭ(Taurus): ಎಕ್ಸ್ಯಾಕ್ಟಾಗಿ ಹೇಳಬೇಕೆಂದರೆ ಈ ರಾಶಿಯವರಿಗೆ ಲಕ್ಷುರಿಯ ಅಡಿಕ್ಷನ್. ಸ್ಪಾ, ಮಸಾಜ್ ಮಾಡಿಸಿಕೊಳ್ಳುವುದು, ಪದೇ ಪದೇ ಪಾರ್ಲರ್‌ಗೆ ಹೋಗುವುದು ಇವರ ವ್ಯಸನ. ತಾಜಾ ಹೂವುಗಳು(fresh flowers) ಹಾಗೂ ಎಷ್ಟು ಮಾಡಿದರೂ ಸಾಲದ ಮುದ್ದು ಕೂಡಾ ಇವರ ಅಡಿಕ್ಷನ್. 

Overcoming Negativity: ಇಂಥ ಋಣಾತ್ಮಕತೆಗಳಿಂದ ದೂರವಿದ್ದರೆ ನಿಮ್ಮಷ್ಟು ಸುಖಿ ಯಾರಿಲ್ಲ..

ಮಿಥುನ(Gemini): ಯಾವಾಗ ನೋಡಿದರೂ ಆನ್‌ಲೈನ್ ಇರುವವರು ಮಿಥುನ ರಾಶಿಯವರು. ಇವರಿಗೆ ಸೋಷ್ಯಲ್ ಮೀಡಿಯಾ(social media) ಗೀಳು. ವಾಟ್ಸಾಪ್, ಫೇಸ್ಬುಕ್, ಇನ್ಸ್‌ಟಾಗ್ರಾಂ, ಟ್ವಿಟ್ಟರ್.. ಎಲ್ಲಡೆಯೂ ಇರುತ್ತಾರೆ. ಕೆಲವೊಮ್ಮೆ ಇಲ್ಲೆಲ್ಲ ಆ್ಯಕ್ಟಿವ್ ಆಗಿ ಕಾಣಿಸಿಕೊಳ್ಳದಿದ್ದರೂ ದಿನಕ್ಕೆ 50 ಬಾರಿ ಈ ಎಲ್ಲ ಮೀಡಿಯಾಗಳನ್ನೂ ಚೆಕ್ ಮಾಡುತ್ತಿರುತ್ತಾರೆ. 
Check out what each zodiac sign is addicted to skr

ಕಟಕ(Cancer): ಇವರಿಗೆ ಬೆಕ್ಕುಗಳೆಂದರೆ ವಿಪರೀತ ಇಷ್ಟ. ಮೂವಿಗಳನ್ನು ನೋಡುವುದು ವ್ಯಸನ. ಸಾಲದೆಂಬಂತೆ ಇವರ ಅರ್ಹತೆಗೆ ಕಡಿಮೆ ಇರುವವರಿಗೆ ಅಂಟಿಕೊಳ್ಳುವುದು ಕೂಡಾ ಇವರ ಚಟವೇ. ಸಂಬಂಧವಾಗಲೀ, ಏನೇ ವಿಷಯವಾಗಲೀ, ಯಾವಾಗಲೂ ಮುರಿದುದನ್ನು ಸರಿ ಪಡಿಸುವುದರಲ್ಲೇ ಇರುತ್ತಾರೆ. 

ಸಿಂಹ(Leo): ಇವರ ಮನೆ ಬಾಗಿಲಿಗೆ ಅದೆಷ್ಟು ಆನ್‌ಲೈನ್ ಡೆಲಿವರಿಗಳಾಗುತ್ತವೆಂದರೆ ಡೆಲಿವರಿ ಬಾಯ್ ಇರಿಗೆ ಚಿರ ಪರಿಚಿತನಾಗುವಷ್ಟು. ಏಕೆಂದರೆ ಇವರಿಗೆ ಫ್ಯಾಶನ್(fashion) ಚಟ. ಯಾವಾಗಲೂ ಟ್ರೆಂಡಿಯಾಗಿ ಕಾಣುವ ಹಂಬಲ. ಹಾಗಾಗಿ, ಸಿಕ್ಕ ಸಿಕ್ಕ ಫ್ಯಾಶನ್ ವೆಬ್‌ಸೈಟ್‌ಗಳಲ್ಲಿ ಕಂಡಕಂಡಿದ್ದನ್ನೆಲ್ಲ ಆರ್ಡರ್ ಮಾಡುತ್ತಲೇ ಇರುತ್ತಾರೆ. 

Zodiacs and Relationship: ರಾಶಿ ಪ್ರಕಾರ, ವಿವಾಹ ಜೀವನ ಸಿಹಿಯಾಗಿರಲು ನೀವೇನು ಮಾಡ್ಬೇಕು..?

ಕನ್ಯಾ(Virgo): ಇವರಿಗೆ ಪುಸ್ತಕಗಳು(books) ಹಾಗೂ ಟೀ ವ್ಯಸನ. ಇವೆರಡು ಒಟ್ಟಿಗೆ ಸಿಕ್ಕರೆ ಸ್ವರ್ಗ ಎಂದುಕೊಳ್ಳುವವರು. ಪದೇ ಪದೆ ಟೀ ಕುಡಿಯದೆ ಹೋದರೆ ಏನನ್ನೋ ಕಳೆದುಕೊಂಡ ಭಾವ ಇನರದು.
Check out what each zodiac sign is addicted to skr

ತುಲಾ(Libra): ತುಲಾ ರಾಶಿಯವರು ನೂರುಜನರ ಮಧ್ಯೆ ನಿಂತರೂ ಫೋನೊಳಗೆ ಮುಳುಗಿ ಹೋಗುವವರು. ಫೋನೇ ಇವರ ಚಟ. ಇವರ ಹತ್ತಿರದವರು ಫೋನ್ ಚಟ ನೋಡಿ ಸಾಕಷ್ಟು ಬಾರಿ ಬೇಸರಿಸಿಕೊಂಡು, ಜಗಳವಾಡಿ, ಸಿಟ್ಟು ಮಾಡುವುದಿರುತ್ತದೆ. ಆದರೂ ಇವರು ಫೋನ್ ಬಿಡಲಾರರು. 

ವೃಶ್ಚಿಕ(Scorpio): ಆಲ್ಕೋಹಾಲ್‌(alcohol)ಗೂ ವೃಶ್ಚಿಕಕ್ಕೂ ಬಾದರಾಯಣ ಸಂಬಂಧ. ಅವರು ಕಾಫಿಯಂತೆ ಮದ್ಯ ಸೇವನೆ ಮಾಡಬಲ್ಲರು. ಅದರ ಹೊರತಾಗಿ ಪ್ರೇಮಿಗೆ ಕಿಸ್ ನೀಡುವುದು ಹಾಗೂ ಕಿಸ್ ಪಡೆಯುವುದು ಕೂಡಾ ಇವರು ವ್ಯಸನವೆಂಬಷ್ಟು ಹೆಚ್ಚಾಗಿ ಮಾಡುವರು. 

ಧನುಸ್ಸು(Sagittarius): ತಿರುಗಾಟ(travelling) ಹಾಗೂ ಅಪಾಯ ಮೈಮೇಲೆಳೆದುಕೊಳ್ಳುವಲ್ಲಿ ಈ ಸಾಹಸಿ ಪ್ರವೃತ್ತಿಯವರು ನಿಸ್ಸೀಮರು. ಕಲೆ ಹಾಗೂ ಪ್ರವಾಸದ ಪ್ಲ್ಯಾನ್ ಮಾಡುವುದು ಕೂಡಾ ಇವರ ವ್ಯಸನ. 
Check out what each zodiac sign is addicted to skr

ಮಕರ(Capricorn): ಇವರಿಗೆ ಇಡೀ ದಿನ ಹಾಸಿಗೆ ಮೇಲಿರುವ ವ್ಯಸನ. ನಿದ್ದೆ ಮಾಡುತ್ತಾರೆಂದಲ್ಲ, ಕೂರುವುದು, ಮಲಗುವುದು, ಟಿವಿ ನೋಡುವುದು, ತಿನ್ನುವುದು ಎಲ್ಲಕ್ಕೂ ಬೆಡ್ ಮೇಲಿದ್ದರೆ ಕಂಫರ್ಟ್ ಎನ್ನುವವರಿವರು. ಇದಲ್ಲದೆ ಇವರಿಗೆ ಬರವಣಿಗೆ ಇಷ್ಟ. ಹಾಗಾಗಿ, ಪೆನ್ನುಗಳು ಹಾಗೂ ಬುಕ್‌ಗಳು ಕೂಡಾ ಇವರ ಸುತ್ತ ತುಂಬಿರುತ್ತವೆ. 

ಕುಂಭ(Aquarius): ಕುಂಭ ರಾಶಿಯವರಿಗೆ ನಾಯಿಗಳೆಂದರೆ ಜೀವ. ಅಷ್ಟೇ ಅಲ್ಲ, ಎಲ್ಲ ಪ್ರಾಣಿಗಳನ್ನೂ ಇಷ್ಟ ಪಡುವವರು. ಪ್ರಾಣಿಗಳನ್ನು ಸಾಕುತ್ತಾ ಮನೆಯನ್ನು ಝೂ ತರಾ ಇಟ್ಟುಕೊಳ್ಳಬೇಕೆಂದರೂ ಅಭ್ಯಂತರ ಇಲ್ಲವೆನ್ನುವವರು. 
Check out what each zodiac sign is addicted to skr

ಮೀನ(Pisces): ಇವರಿಗೆ ಕಲ್ಪನಾ ಲೋಕದಂತೆ ಲೈಟ್‌ಗಳು ಹಾಕಿದ್ದರೆ ಇಷ್ಟ. ಜೊತೆಗೆ ನಿದ್ರಿಸುವುದು ಎಲ್ಲಕ್ಕಿಂತ ಹೆಚ್ಚಿನ ವ್ಯಸನ. ಎಲ್ಲಿ ಬೇಕಾದರೂ, ಎಷ್ಟೊತ್ತಿಗೆ ಬೇಕಾದರೂ ನಿದ್ರಿಸಬಲ್ಲರು. 
 

Follow Us:
Download App:
  • android
  • ios