Asianet Suvarna News Asianet Suvarna News

Astrology Tips: ಒತ್ತಡ ಹೆಚ್ಚಿಸುವ ಈ ರಾಹುವಿನಿಂದ ಮುಕ್ತಿ ಹೇಗೆ?

ಜಾತಕದಲ್ಲಿ ರಾಹು ದೋಷವಿದೆ ಎಂದಾಗ್ಲೇ ಅನೇಕರು ಭಯಗೊಳ್ತಾರೆ. ಯಾಕೆಂದ್ರೆ ರಾಹು ಮಾಡುವ ಕೆಲಸ ಅಂತಿಂತದ್ದಲ್ಲ. ಅವನಿಂದ ಪಾರಾಗಿ ಬರಲು ನಾನಾ ಉಪಾಯಗಳನ್ನು ಹುಡುಕುವ ಜನರಿಗೆ ಸರಳ ಟಿಪ್ಸ್ ಇಲ್ಲಿದೆ. 
 

How To Make Rahu Strong roo
Author
First Published Jun 21, 2023, 3:18 PM IST | Last Updated Jun 21, 2023, 3:18 PM IST

ಹಿಂದೂ ಧರ್ಮದಲ್ಲಿ ನವಗ್ರಹಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ನವಗ್ರಹದ ಪೂಜೆ, ಹೋಮ, ಹವನಗಳು ನಡೆಯುತ್ತದೆ. ಓಂ ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯ ಚ, ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ || ಎಂಬ ನವಗ್ರಹ ಸ್ತೋತ್ರ ಜಪಿಸುವ ಮೂಲಕ ನವಗ್ರಹಗಳನ್ನು ಶಾಂತಗೊಳಿಸುವ ಪ್ರಯತ್ನ ಮಾಡಲಾಗುತ್ತದೆ. ಈ ಗ್ರಹಗಳು ನಮ್ಮ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತವೆ. ಯಾವುದೇ ಗ್ರಹದಲ್ಲಿ ಏರುಪೇರಾದ್ರೂ ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ರಾಹು ಹಾಗೂ ಕೇತುವಿನ ದೃಷ್ಟಿಗೆ ಬಿದ್ರೆ ಕಥೆ ಮುಗಿದಂತೆ. 

ಶಾಸ್ತ್ರಗಳಲ್ಲಿ ರಾಹು (Rahu) ವನ್ನು ದೋಷಪೂರಿತ ಗ್ರಹ (Planet) ವೆಂದು ಪರಿಗಣಿಸಲಾಗುತ್ತದೆ. ತಮ್ಮ ಜಾತಕ (Horoscope) ದಲ್ಲಿ ರಾಹು ಕೆಟ್ಟ ಸ್ಥಾನದಲ್ಲಿದ್ದರೆ ಜೀವನದಲ್ಲಿ ಪಡಬಾರದ ಬಾಧೆಯನ್ನು ಅನುಭವಿಸಬೇಕಾಗುತ್ತದೆ. ಜೀವನದ ಸುಖವನ್ನು ರಾಹು ಸಂಪೂರ್ಣವಾಗಿ ಹಾಳು ಮಾಡ್ತಾನೆ.  ವೈವಾಹಿಕ (Marital) ಜೀವನದ ಸಂತೋಷ (Happiness) ನಾಶವಾಗುತ್ತದೆ. ಉದ್ಯೋಗದಲ್ಲಿ ನಷ್ಟ, ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ವ್ಯಾಪಾರದಲ್ಲಿ ನಾನಾ ಸಮಸ್ಯೆ ಕಾಡುವುದಲ್ಲದೆ ಅನಾರೋಗ್ಯ (Illness) ಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಜಾತಕದಲ್ಲಿ ರಾಹು ಉಚ್ಛ ಸ್ಥಾನದಲ್ಲಿರಬೇಕು, ಯಾವುದೇ ಸಮಸ್ಯೆ ನಮ್ಮನ್ನು ಕಾಡಬಾರದು ಎಂದಾದ್ರೆ ನಾವು ಕೆಲ ಉಪಾಯಗಳನ್ನು ಪಾಲನೆ ಮಾಡಬೇಕು. ನಾವಿಂದು ರಾಹುವನ್ನು ಶಾಂತಗೊಳಿಸಲು ಏನೆಲ್ಲ ಮಾಡ್ಬೇಕು ಎಂಬುದನ್ನು ನಿಮಗೆ ಹೇಳ್ತೇವೆ.

ಶಾಸ್ತ್ರಗಳ ಪ್ರಕಾರ ನಿದ್ರೆಗೂ ನಿಯಮಗಳಿವೆ: ಯಾವ ಸಮಯದಲ್ಲಿ ಮಲಗಿದರೆ ಸಮೃದ್ಧಿ ಸಿಗಲಿದೆ ....

ರಾಹು ಗ್ರಹ ಶಾಂತವಾಗಲು ಹೀಗೆ ಮಾಡಿ :
• ರಾಹುವನ್ನು ಬಲಪಡಿಸಲು ನೀವು, ರಾಹು ದೇವಾಲಯಕ್ಕೆ ಹೋಗಿ ಧಾರ್ಮಿಕ ಕ್ರಿಯೆಗಳನ್ನು ಮಾಡಬೇಕು. ಇಲ್ಲವೆ ರಾಹುವಿನ ಹೆಸರನ್ನು 108 ಬಾರಿ ಜಪಿಸಿದ್ರೆ ಸಾಕು. ನಿಯಮಿತವಾಗಿ ಇದನ್ನು ಮಾಡಿದ್ರೆ ರಾಹುವಿನ ಕಾಟದಿಂದ ನಿಮಗೆ ಮುಕ್ತಿ ಸಿಗುತ್ತದೆ.
• ಜಾತಕದಲ್ಲಿ ರಾಹುವಿನ ಸ್ಥಾನವನ್ನು ಬಲಪಡಿಸಲು, ರಾಹು ಸ್ತೋತ್ರ ಅಥವಾ ರಾಹು ಕವಚವನ್ನು ಪಠಿಸಬೇಕು.
• ರಾಹುವನ್ನು ಬಲಪಡಿಸಲು ಮನೆಯ ವಾಯುವ್ಯ ದಿಕ್ಕಿಗೆ ಕೆಂಪು ಧ್ವಜ ಹಾಕಬೇಕು.

ಈ ರಾಶಿಯವರ ಜತೆ ಹುಷಾರಾಗಿರಿ; ಗಾಸಿಪ್‌ ಮಾಡುವುದೇ ಇವರ ಚಾಳಿ

• ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡುವ ಮೂಲಕ ನೀವು ರಾಹುವನ್ನು ಬಲಪಡಿಸಬಹುದು. ನೀವು ನಿಯಮಿತವಾಗಿ ಪಕ್ಷಿಗಳು, ಕಪ್ಪು ಕಾಗೆಗಳು ಮತ್ತು ಪಾರಿವಾಳಗಳು ಇತ್ಯಾದಿಗಳಿಗೆ 7 ವಿಧದ ಧಾನ್ಯಗಳನ್ನು ಮಿಶ್ರಣ ಮಾಡಿ ನೀಡಬೇಕು. 
• ಮನೆಯ ಸ್ವಚ್ಛತೆ ಬಗ್ಗೆಯೂ ಗಮನ ನೀಡಿ. ಮನೆಯಲ್ಲಿರುವ ಸ್ಟೀಲ್ ಪಾತ್ರೆಗಳು ಧೂಳಿನಿಂದ ಕೂಡಿರದಂತೆ ನೋಡಿಕೊಳ್ಳಿ. ಸ್ಟೀಲ್ ಪಾತ್ರೆಗಳು ಸ್ವಚ್ಛವಾಗಿದ್ದರೆ ರಾಹು ಸಂತೋಷಗೊಳ್ಳುತ್ತಾನೆ.
• ನೀವು ಅಮವಾಸ್ಯೆ ದಿನ ಮುಸ್ಸಂಜೆ ಅಥವಾ ಮಧ್ಯರಾಥ್ರಿ 12 ಗಂಟೆ ಸುಮಾರಿಗೆ ಅಶ್ವತ್ಥ ಮರದ ಕೆಳಗೆ ದೀಪವನ್ನು ಹಚ್ಚಿದ್ರೆ ರಾಹು ದೋಷದಿಂದ ಮುಕ್ತಿ ಪಡೆಯಬಹುದು.
• ರಾಹು ನಿಮಗೆ ಶಾಂತಿ, ನೆಮ್ಮದಿ ನೀಡಬೇಕು ಎಂದಾದ್ರೆ ನೀವು 41 ದಿನಗಳ ಕಾಲ, ಪ್ರತಿ ದಿನ ಕೆಂಪು ಬಟ್ಟೆಯಲ್ಲಿ ಒಂದು ರೂಪಾಯಿ ನಾಣ್ಯವನ್ನು ಕಟ್ಟಿ, ಅದನ್ನು ಬಡವರಿಗೆ ದಾನ ಮಾಡಿ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
• ಮನೆಯಲ್ಲಿ ನೀವು ರಾಹು ಯಂತ್ರವನ್ನು ಸ್ಥಾಪನೆ ಮಾಡುವ ಜೊತೆಗೆ ಪ್ರತಿ ದಿನ ರಾಹು ಮಂತ್ರವನ್ನು ಪಠಿಸುತ್ತ ಬಂದ್ರೆ ನೆಮ್ಮದಿ ಸಿಗುತ್ತದೆ.
• ಒಂದು ಕಪ್ಪು ಬಟ್ಟೆಯಲ್ಲಿ ಕಪ್ಪು ಎಳ್ಳನ್ನು ಹಾಕಿ, ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಅದನ್ನು ಸುಡಬೇಕು. ಹೀಗೆ ಮಾಡಿದ್ರೆ ರಾಹು ಬಲಗೊಳ್ಳುತ್ತಾನೆ.
• ಕಪ್ಪು ನಾಯಿಗೆ ಪ್ರತಿ ದಿನ ನೀವು ಆಹಾರವನ್ನು ನೀಡುತ್ತ ಬಂದ್ರೆ ಕೂಡ ನಿಮ್ಮ ಸಮಸ್ಯೆ ಕಡಿಮೆಯಾಗಿ, ಜೀವನದಲ್ಲಿ ಸಂತೋಷ ಪ್ರಾಪ್ತಿಯಾಗುತ್ತದೆ.

Latest Videos
Follow Us:
Download App:
  • android
  • ios