Asianet Suvarna News Asianet Suvarna News

Vastu Tips : ಮನೆಯಲ್ಲಿ ಮನಃಶಾಂತಿ ಇಲ್ಲವೆಂದ್ರೆ ಹೀಗ್ ಮಾಡಿ

ಹೊರಗಿನ ಎಲ್ಲ ಜಂಜಾಟ ಮುಗಿಸಿ ಮನೆಗೆ ಬಂದಾಗ ನೆಮ್ಮದಿ ಸಿಗ್ಬೇಕು. ಮನೆಯಲ್ಲಿ ಶಾಂತಿ ಇಲ್ಲವೆಂದ್ರೆ ಜೀವನದಲ್ಲಿ ಸುಖ ಸಿಗೋದು ಕಷ್ಟ. ಸಣ್ಣ ಸಣ್ಣ ವಿಷ್ಯಕ್ಕೂ ಮನೆಯಲ್ಲಿ ಜಗಳವಾಗ್ತಿದೆ ಅಂದ್ರೆ ಕೆಲ ವಾಸ್ತು ಟಿಪ್ಸ್ ನಿಮಗೆ ಪರಿಹಾರ ನೀಡಬಲ್ಲದು.
 

How To Avoid Fighting At Home According To Vastu
Author
First Published May 10, 2023, 3:00 PM IST | Last Updated May 10, 2023, 3:00 PM IST

ಮನೆ ಅಂದ್ಮೇಲೆ ಸಣ್ಣಪುಟ್ಟ ಗಲಾಟೆ ಸಾಮಾನ್ಯ. ಪ್ರತಿ ದಿನ ಗಲಾಟೆ ನಡೆಯುತ್ತಿದ್ದರೆ, ಮಾನಸಿಕ ಶಾಂತಿಯನ್ನು ಇದು ಕಸಿದುಕೊಂಡಿದ್ದರೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಮನೆಯಲ್ಲಿ ವಿವಾಹ, ಜಗಳವಾಗಲು ಅನೇಕ ಕಾರಣವಿರುತ್ತದೆ. ಅದ್ರಲ್ಲಿ ವಾಸ್ತುದೋಷ ಕೂಡ ಒಂದು. ಮನೆಯಲ್ಲಿರುವ ವಾಸ್ತು ದೋಷಗಳನ್ನು ಸಣ್ಣ ಉಪಾಯದ ಮೂಲಕ ಪರಿಹರಿಸಬಹುದು. 

ಮನೆ (House) ಯಲ್ಲಿರುವ ವಾಸ್ತು ದೋಷಕ್ಕೆ ಇಲ್ಲಿದೆ ಪರಿಹಾರ :

ಬುದ್ಧ (Buddha) ನ ವಿಗ್ರಹ ಮನೆಯಲ್ಲಿಡಿ : ಬುದ್ಧನು ಶಾಂತಿ ಮತ್ತು ಸೌಹಾರ್ದತೆ ಪ್ರತಿಕವಾಗಿದ್ದಾನೆ. ಅನೇಕರ ಮನೆಯಲ್ಲಿ ನೀವು ಬುದ್ಧನ ವಿಗ್ರಹ (Idol) ವನ್ನು ಕಾಣಬಹುದು. ಮನೆಯಲ್ಲಿ ಬುದ್ಧನ ವಿಗ್ರಹವಿದ್ರೆ ಅದು ಶಾಂತಿ ಕಾಪಾಡಲು ನೆರವಾಗುತ್ತದೆ. ನೀವು ಬುದ್ಧನ ವಿಗ್ರಹವನ್ನು ಮನೆಯ ಬಾಲ್ಕನಿ ಅಥವಾ ಜನರು ಸದಾ ಓಡಾಡುವ ಜಾಗದಲ್ಲಿ ಇಡಬೇಕು. ಮನೆಯಲ್ಲಿ ಬುದ್ಧನ ವಿಗ್ರಹವಿದ್ದರೆ ವಾಸ್ತು ಪ್ರಕಾರ ಅದನ್ನು ಸರಿಯಾದ ದಿಕ್ಕಿನಲ್ಲಿ ಇಡಿ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಹಾಗೆಯೇ ಕುಟುಂಬಸ್ಥರ ಮಧ್ಯೆ ಮನಸ್ತಾಪ ಕಡಿಮೆಯಾಗಿ, ಶಾಂತಿ, ನೆಮ್ಮದಿ ನೆಲೆಗೊಳ್ಳುತ್ತದೆ.

ಧನು, ಕರ್ಕಾಟಕ ರಾಶಿಯವರು ಮದುವೆಯಾದರೆ ದಾಂಪತ್ಯ ಜೀವನ ಹೇಗಿರುತ್ತೆ?

ಮನೆಯಲ್ಲಿರಲಿ ಕನ್ನಡಿ (Mirror) : ಕನ್ನಡಿ ಬರೀ ನಿಮ್ಮ ಸೌಂದರ್ಯ ನೋಡಿಕೊಳ್ಳಲು ಮಾತ್ರ ಬರೋದಿಲ್ಲ. ನಿಮ್ಮ ಮನೆಯ ವಾಸ್ತು ದೋಷವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ. ಕನ್ನಡಿ ವೈಯಕ್ತಿಕ ಜೀವನವನ್ನು ಮಾಂತ್ರಿಕವಾಗಿ ಬದಲಾಯಿಸುತ್ತದೆ. ಮನೆಯಲ್ಲಿ ಹೆಚ್ಚು ಹೆಚ್ಚು ಕನ್ನಡಿಯನ್ನು ಇಡಿ. ಮನೆಯಲ್ಲಿ ಕನ್ನಡಿ ಇಡೋದ್ರಿಂದ ಅದು ನಿಮ್ಮ ಮನೆಯನ್ನು ಸುಂದರಗೊಳಿಸುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.  ಮನೆಯಲ್ಲಿ ಕನ್ನಡಿಯಿದ್ರೆ ಕುಟುಂಬ ಸದಸ್ಯರ ಮಧ್ಯೆ ಯಾವುದೇ ಗಲಾಟೆ ನಡೆಯೋದಿಲ್ಲ. ಕನ್ನಡಿ ಇಡುವ ದಿಕ್ಕು ಯಾವಾಗ್ಲೂ ಉತ್ತರ ಮೂಲೆಯಾಗಿರಬೇಕು. ಬೆಡ್ ರೂಮಿನಲ್ಲಿ ಇಲ್ಲವೆ ಶೌಚಾಲಯದಲ್ಲಿ ಕನ್ನಡಿ ಇಡುವ ವೇಳೆ ಯಾವ ದಿಕ್ಕಿನಲ್ಲಿ ಹಾಗೂ ಯಾವ ಆಕಾರದಲ್ಲಿ ಕನ್ನಡಿ ಇಡಬೇಕು ಎಂಬುದನ್ನು ನೀವು ತಿಳಿದಿರಬೇಕು. 

ಕಲ್ಲು ಉಪ್ಪಿನ ಬಳಕೆ ಮಾಡಿ :  ಮನೆಯಲ್ಲಿ ವೈಮನಸ್ಸು ಮತ್ತು ತೊಂದರೆ ಕಾಣಿಸಿಕೊಳ್ತಿದ್ದರೆ ನೀವು ಕಲ್ಲು ಉಪ್ಪನ್ನು ಬಳಕೆ ಮಾಡಿ.  ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಕೆಲಸವನ್ನು ಉಪ್ಪು ಮಾಡುತ್ತದೆ. ನಿಮ್ಮ ಮನೆಯ ಪ್ರತಿಯೊಂದು ಕೊಠಡಿಯಲ್ಲೂ ನೀವು ಕಲ್ಲು ಉಪ್ಪನ್ನು ಸ್ವಲ್ಪ ಹಾಕಿಡಿ. ಮನಸ್ಸಿನಲ್ಲಿರುವ ನಕಾರಾತ್ಮಕತೆ ದೂರ ಮಾಡಿ, ಸಕಾರಾತ್ಮಕತೆ ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಒಂದು ತಿಂಗಳಿಗೊಮ್ಮೆ ನೀವು ಉಪ್ಪನ್ನು ಬದಲಿಸಬೇಕು. ಒಂದು ಪೇಪರ್ ನಲ್ಲಿ ಉಪ್ಪನ್ನು ಕಟ್ಟಿ ಇಡಬೇಕು. ಆಗಾಗ ಉಪ್ಪನ್ನು ಬದಲಿಸಬೇಕು. 

ಎಂಥದ್ದೇ ಸನ್ನಿವೇಶದಲ್ಲೂ ಸಂಗಾತಿಗೆ ಸಾಥ್ ನೀಡ್ತಾರೆ ಈ ರಾಶಿಯವ್ರು

ವಿಂಡ್ ಚೈನ್ ಹಾಕಿ : ಮನೆಯಲ್ಲಿ ಅನಾವಶ್ಯಕ ಗಲಾಟೆಯಾಗ್ತಿದೆ ಅಂದ್ರೆ ನೀವು ಮನೆಗೆ ವಿಂಡ್ ಚೈನ್ ಹಾಕಬೇಕು. ಕಿಟಕಿಗೆ ಸ್ಪಟಿಕ ವಿಂಡ್ ಚೈನ್ ಹಾಕಿ. ಮನೆಗೆ ಇದು ಸಮೃದ್ಧಿ ತರುತ್ತದೆ. ಹಾಗೆಯೇ ಅದ್ರಿಂದ ಬರುವ ಶಬ್ಧ ನಿಮ್ಮ ಮನಸ್ಸನ್ನು ಶಾಂತಗೊಳಿಸುವು ಜೊತೆಗೆ ಮನೆಯಲ್ಲಿರುವ ಕೀಟಾಣು, ನಕಾರಾತ್ಮಕತೆಯನ್ನು ಹೋಗಲಾಡಿಸುತ್ತದೆ.

ಇದನ್ನು ಮಾಡೋಕೆ ಮರೆಯಬೇಡಿ : ಮನೆಯಲ್ಲಿ ವೈಮನಸ್ಸು ಮೂಡ್ತಿದ್ದರೆ ಈಶಾನ್ಯ ಭಾಗವನ್ನು ಯಾವಾಗ್ಲೂ ಸ್ವಚ್ಛವಾಗಿಡಿ. ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಲೀವಿಂಗ್ ರೂಮಿನಲ್ಲಿ ಚೂಪಾದ ಪೀಠೋಪಕರಣಗಳನ್ನು ಇಡಬಾರದು. ಮನೆಯ ಬಾಗಿಲು ಅಥವಾ ಕಿಟಕಿ ಬಾಗಿಲು ಶಬ್ಧ ಬರದಂತೆ ನೋಡಿಕೊಳ್ಳಿ. ಯಾವುದೇ ಒಡೆದ, ಹಾಳಾದ, ಮುರಿದ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ. ಮನೆಯೊಳಗೆ ಗಾಳಿ, ಬೆಳಕು ಸರಿಯಾಗಿ ಬರುವಂತೆ ನೋಡಿಕೊಳ್ಳಿ. ಮನೆಯ ಮಧ್ಯಭಾಗ ಕೂಡ ಸ್ವಚ್ಛವಾಗಿರಬೇಕು. ಅಲ್ಲಿ ಅನಗತ್ಯ ವಸ್ತುಗಳನ್ನು ಇಡಬಾರದು. 

Latest Videos
Follow Us:
Download App:
  • android
  • ios