Asianet Suvarna News Asianet Suvarna News

ಎಂಥದ್ದೇ ಸನ್ನಿವೇಶದಲ್ಲೂ ಸಂಗಾತಿಗೆ ಸಾಥ್ ನೀಡ್ತಾರೆ ಈ ರಾಶಿಯವ್ರು

ಕಷ್ಟಕಾಲದಲ್ಲಿ ಬೆಂಬಲ ನೀಡುವಂತಹ ಸಂಗಾತಿ ಇರಬೇಕು ಎನ್ನುವುದು ಎಲ್ಲರ ಆಸೆ. ಆದರೆ, ಎಲ್ಲ ಜನರೂ ತಮ್ಮ ಸಂಗಾತಿಗೆ ಬೆಂಬಲ ನೀಡುವುದಿಲ್ಲ. ಅವರೊಂದಿಗೆ ನಿಂತು ಜಗತ್ತಿನ ವಿರುದ್ಧ ಹೋರಾಡುವುದಿಲ್ಲ. ಈ ಗುಣ ಕೆಲವೇ ರಾಶಿಗಳ ಜನರಲ್ಲಿ ಕಂಡುಬರುತ್ತದೆ. 
 

These zodiac signs support their spouse in any situation
Author
First Published May 7, 2023, 3:49 PM IST | Last Updated May 7, 2023, 3:49 PM IST

ದಾಂಪತ್ಯವೆಂದರೆ ಕಿರಿಕಿರಿಯೇ ಹೆಚ್ಚು ಎನ್ನುವ ಭಾವನೆ ಇತ್ತೀಚೆಗೆ ಎಲ್ಲರಲ್ಲೂ ಮನೆ ಮಾಡುತ್ತಿದೆ. ಇದು ಸತ್ಯಕ್ಕೆ ದೂರವಾಗಿರುವ ಮಾತು. ಆದರೆ, ದಾಂಪತ್ಯದಲ್ಲಿ ಖಂಡಿತವಾಗಿ ಬರೀ ಸುಖದ, ನೆಮ್ಮದಿಯ ಸನ್ನಿವೇಶಗಳೇ ಎದುರಾಗುವುದಿಲ್ಲ. ಒತ್ತಡದ ಸಮಯಗಳಿರುತ್ತವೆ, ಕಷ್ಟಕರ ಸನ್ನಿವೇಶಗಳು ನಿರ್ಮಾಣವಾಗುತ್ತವೆ. ಮಾನಸಿಕ ಧೈರ್ಯವನ್ನು ಪರೀಕ್ಷಿಸುವ ಸಂದರ್ಭಗಳಿರುತ್ತವೆ. ಅಂತಹ ಸಮಯದಲ್ಲಿ ಪತಿ-ಪತ್ನಿ ಒಬ್ಬರಿಗೆ ಒಬ್ಬರು ಒತ್ತಾಸೆಯಾಗಿ ನಿಂತರೆ ಅವುಗಳನ್ನು ಎದುರಿಸುವುದು ಸುಲಭವೆನಿಸಬಹುದು. ಆದರೆ, ಎಲ್ಲ ದಾಂಪತ್ಯಗಳೂ ಹೀಗಿರುವುದಿಲ್ಲ. ಒತ್ತಡದ ಸಮಯದಲ್ಲಿ ಒಬ್ಬರಿಗೊಬ್ಬರು ದೂರುತ್ತ, ಆರೋಪಿಸುತ್ತ ಮನೆಯ ವಾತಾವರಣ ಹಾಳು ಮಾಡುವ ದಂಪತಿಗಳೇ ಹೆಚ್ಚು ಸಂಖ್ಯೆಯಲ್ಲಿ ಕಾಣುತ್ತಾರೆ. ಆದರೆ, ಎಲ್ಲೋ ಅಪರೂಪಕ್ಕೆ ಕೆಲವು ಮನೆಗಳಲ್ಲಿ ಬೇರೆಯದೇ ವಾತಾವರಣ ಇರುತ್ತದೆ. ದಂಪತಿ ಪರಸ್ಪರ ಅರ್ಥೈಸಿಕೊಂಡು, ಕಷ್ಟದ ಸಮಯದಲ್ಲೂ ತಾಳ್ಮೆಯಿಂದ ವರ್ತಿಸುವುದು ಕಂಡುಬರುತ್ತದೆ. ಪತಿಯಾಗಲೀ, ಪತ್ನಿಯಾಗಲೀ ತಮ್ಮ ಸಂಗಾತಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಇಂತಹ ಗುಣ ಕೆಲವೇ ರಾಶಿಗಳ ಜನರಲ್ಲಿ ಗಮನಾರ್ಹವಾಗಿ ಕಂಡುಬರುತ್ತದೆ. ಈ ರಾಶಿಗಳ ಜನರನ್ನು ಸಂಗಾತಿಯಾಗಿ ಪಡೆದವರೇ ಅದೃಷ್ಟವಂತರು ಎನ್ನಬಹುದು. ಏಕೆಂದರೆ, ಇವರು ಯಾವುದೇ ಸನ್ನಿವೇಶದಲ್ಲೂ ತಮ್ಮ ಸಂಗಾತಿಯನ್ನು ಬಿಟ್ಟುಕೊಡುವುದಿಲ್ಲ. ಅವರ ನಿರ್ಧಾರ ಕುಟುಂಬಕ್ಕೆ ವಿರುದ್ಧವೇ ಆಗಿದ್ದರೂ ಅವರನ್ನು ಸಮರ್ಥಿಸಿಕೊಳ್ಳುತ್ತಾರೆ. 

ಕರ್ಕಾಟಕ (Cancer): ತಮ್ಮ ಮೇಧಾವಿತನಕ್ಕೆ (Wit) ಕರ್ಕಾಟಕ ರಾಶಿಯವರು ಹೆಸರುವಾಸಿ. ಮನೆ (Home) ಮತ್ತು ಕುಟುಂಬ (Family) ಇವರ ಹೃದಯದಲ್ಲಿ ವಿಶೇಷ ಮುಖ್ಯ ಸ್ಥಾನದಲ್ಲಿರುತ್ತವೆ. ಕರ್ಕಾಟಕ ರಾಶಿಯ ಜನರ ತಮ್ಮ ಸಂಗಾತಿಗೆ (Partner) ಅದ್ಭುತ ಸಾಂಗತ್ಯ ನೀಡಬಲ್ಲರು. ದೀರ್ಘಕಾಲದ ಸಾಂಗತ್ಯಕ್ಕೆ ಇವರು ಬದ್ಧರಾಗಿರುತ್ತಾರೆ. ಸಂಬಂಧ (Relation) ದೃಢವಾಗಲು ಇವರು ನಿರಂತರವಾಗಿ ಕೊಡುಗೆ ನೀಡುತ್ತಲೇ ಇರುತ್ತಾರೆ. ಸಂಗಾತಿಯ ಬೆಂಬಲಕ್ಕೆ ಸದಾ ಸಿದ್ಧರಾಗಿರುತ್ತಾರೆ. ತಮ್ಮ ಪಾಲಕರ ವಿರುದ್ಧವಾದರೂ ಸರಿ, ಸಂಗಾತಿಗೆ ಬೆಂಬಲ ನೀಡುತ್ತಾರೆ. ಕುಟುಂಬ ಮತ್ತು ಮಕ್ಕಳ ಜತೆಗಿರುವಾಗ ಇವರು ಭಾರೀ ಖುಷಿಯಾಗಿರುತ್ತಾರೆ. ವಾದಗಳಿಂದ ದೂರವಿರುಲು ಬಯಸುವುದರಿಂದ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಕಡಿಮೆಯಿರುತ್ತವೆ.

ಸುಳ್ಳು ಹೇಳೋರು ಯಾರಾದ್ರೂ ಇದ್ರೆ ಅವರದ್ದು ಇದೇ ರಾಶಿಯಾಗಿರುತ್ತೆ!

ಮೀನ (Pisces): ಮೀನ ರಾಶಿಯ ಜನ ಅದ್ಭುತ ಕಲ್ಪನಾಶಕ್ತಿ (Imagination) ಹೊಂದಿರುತ್ತಾರೆ. ಸ್ಥಿರ ಹಾಗೂ ಸದೃಢ ಸಂಗಾತಿಯನ್ನು ಬಯಸುತ್ತಾರೆ. ಕೆಲವೊಮ್ಮೆ ತಮ್ಮ ಅನಿಶ್ಚಿತ ನಿರ್ಧಾರಗಳಿಗೆ ಟೀಕೆಗೆ ಒಳಗಾಗುತ್ತಾರೆ. ಉತ್ತಮ ಸಂಗಾತಿ ದೊರೆತಾಗ ತಮ್ಮ ಆಯ್ಕೆಯ ಬಗ್ಗೆ ಯಾವುದೇ ಗೊಂದಲ ಇಟ್ಟುಕೊಳ್ಳದೆ ಅವರ ಬೆಂಬಲಕ್ಕೆ (Support) ನಿಲ್ಲುತ್ತಾರೆ. ಸ್ನೇಹಿತರು, ನೆಂಟರಿಷ್ಟರ ಮಾನ್ಯತೆ ಸಂಗಾತಿಗೆ ದೊರೆಯಬೇಕು ಎಂದು ಬಯಸುತ್ತಾರೆ. ಹೀಗಾಗಿ, ಯಾವುದೇ ಸನ್ನಿವೇಶದಲ್ಲೂ ಸಂಗಾತಿಗೆ ಸಾತ್ ನೀಡುತ್ತಾರೆ. ತಮ್ಮ ಸಂಗಾತಿಯ ಮನಸ್ಥಿತಿಯನ್ನು (Mentality) ತಕ್ಷಣಕ್ಕೆ ಗ್ರಹಿಸುತ್ತಾರೆ. ಇವರಲ್ಲಿ ರೋಮ್ಯಾಂಟಿಕ್ (Romantic) ಗುಣವೂ ಧಾರಾಳವಾಗಿರುತ್ತದೆ. 

ಕನ್ಯಾ (Virgo): ಪ್ಯಾಷನೇಟ್ (Passionate) ಮನಸ್ಥಿತಿ ಹೊಂದಿರುವ ಕನ್ಯಾ ರಾಶಿಯ ಜನ ತಮ್ಮ ಸಂಗಾತಿಯ ಬಗ್ಗೆ ಭಾರೀ ನಂಬಿಕೆ ಹೊಂದಿರುತ್ತಾರೆ. ಇವರು ಸಂಗಾತಿಯನ್ನು ಎಂದಿಗೂ ಅನುಮಾನಿಸುವುದಿಲ್ಲ (Doubt) ಹಾಗೂ ತಾವೂ ಅಷ್ಟೇ ನಿಷ್ಠೆ (Commit) ಹೊಂದಿರುತ್ತಾರೆ. ಒಂದು ರೀತಿಯಲ್ಲಿ ಸಂಗಾತಿಗೆ ರಕ್ಷಣಾತ್ಮಕವಾಗಿ ವರ್ತಿಸುತ್ತಾರೆ. ಸಂಗಾತಿಯಲ್ಲಿರುವ ಸಾಮರ್ಥ್ಯವನ್ನು ಬಹಿರಂಗಪಡಿಸಲು ಯತ್ನಿಸುತ್ತಾರೆ. ವೈವಾಹಿಕ ಜೀವನವನ್ನು ರೋಮಾಂಚಕವನ್ನಾಗಿಸಲು ಗರಿಷ್ಠ ಕೊಡುಗೆ ನೀಡುತ್ತಾರೆ.

Sex or Love: ಸೆಕ್ಸ್‌ಗಿಂತಲೂ ಪ್ರೀತಿ ಮೂಲಕವೇ ಹತ್ತಿರಾಗ್ತಾರೆ ಈ ರಾಶಿ ಗಂಡಸರು!

ಮಕರ (Capricorn): ಮಕರ ರಾಶಿಯವರು ತಮ್ಮ ಸಂಗಾತಿಯನ್ನು ಗುರುತಿಸಲು ಹೆಚ್ಚು ಸಮಯ ತೆಗೆದುಕೊಳ್ಳಬಲ್ಲರು. ಮದುವೆಯಾದ (Marriage) ಬಳಿಕವೂ ಸಂಗಾತಿಯೊಂದಿಗೆ ಆರಂಭದಲ್ಲಿ ಹೆಚ್ಚು ಆಪ್ತ ಸಂಬಂಧ ಹೊಂದದೆ ಇರಬಹುದು. ಆದರೆ, ಕ್ರಮೇಣ ಇವರು ಸಂಗಾತಿಗೆ ಭಾರೀ ಬದ್ಧರಾಗಿರುತ್ತಾರೆ. ಜೀವಮಾನದ ಸಾಂಗತ್ಯ (Lifetime Relation) ಹೊಂದುತ್ತಾರೆ. ಗಂಡ-ಹೆಂಡತಿ ಎನ್ನುವುದಕ್ಕಿಂತ ಹೆಚ್ಚಾಗಿ ಇವರು ಉತ್ತಮ ಸ್ನೇಹಿತರಂತೆ ವರ್ತಿಸುತ್ತಾರೆ. ಸಂಗಾತಿಗೆ ಸಾಕಷ್ಟು ಸ್ವಾತಂತ್ರ್ಯ ನೀಡುತ್ತಾರೆ. ಸಂಗಾತಿಯನ್ನು ಖುಷಿಯಾಗಿಡಲು (Happy) ಯತ್ನಿಸುತ್ತಾರೆ. ಯಾವುದೇ ಸನ್ನಿವೇಶದಲ್ಲೂ ಅವರೊಂದಿಗೆ ನಿಲ್ಲುತ್ತಾರೆ. 

Latest Videos
Follow Us:
Download App:
  • android
  • ios