ಹೋಳಿಯನ್ನು ಯಾವ ರಾಶಿ ಹೇಗೆ ಆಚರಿಸುತ್ತದೆ ನೋಡಿ..

ಪ್ರತಿ ರಾಶಿಯವರೂ ವಿಭಿನ್ನ ಸ್ವಭಾವದವರು. ಪ್ರತಿಯೊಂದು ವಿಷಯವನ್ನೂ ಒಬ್ಬೊಬ್ಬರು ಎಂಜಾಯ್ ಮಾಡುವ ರೀತಿಯೂ ವಿಭಿನ್ನವಾಗಿರುತ್ತದೆ. ಅಂತೆಯೇ ಹೋಳಿಯನ್ನು ಯಾವ ರಾಶಿಯವರು ಹೇಗೆ ಆಚರಿಸುತ್ತಾರೆ ನೋಡೋಣ. 

How each zodiac sign will behave on Holi skr

ಹೋಳಿ ಹಬ್ಬ ಇಂದು ರಾತ್ರಿಯಿಂದಲೇ ಶುರು. ನಾಳೆ ಬಣ್ಣಗಳ ಎರಚಾಟ. ಬೇರೆಲ್ಲ ಹಬ್ಬಗಳಿಗಿಂತ ಹೆಚ್ಚು ಉತ್ಸಾಹ ಉಕ್ಕಿಸುವಂಥ ಆಚರಣೆ ಹೋಳಿಯದು. ಎಲ್ಲ ಹಬ್ಬಗಳನ್ನೂ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಎಂಜಾಯ್ ಮಾಡುತ್ತಾರೆ. ಹೋಳಿಯನ್ನು ಯಾವ ರಾಶಿಯವರು ಹೇಗೆ ಆಚರಿಸುತ್ತಾರೆ ನೋಡೋಣ.

ಮೇಷ(Aries): ತಮ್ಮ ಗೆಳೆಯರನ್ನು ಮೊದಲು ಒಗ್ಗೂಡಿಸುವುದೇ ಇವರು. ಹೋಳಿಯ ಬಣ್ಣಗಳನ್ನು ತೆಗೆದುಕೊಂಡು ಗೆಳೆಯರ ಮನೆಗೆ ಹೋಗಿ ಸರ್ಪ್ರೈಸ್ ಆಗಿ ಬಣ್ಣ ಎರಚಿ ಅವರನ್ನೂ ಓಕುಳಿಯಾಟಕ್ಕೆ ಎಳೆದು ಸಂಭ್ರಮದ ವಾತಾವರಣ ಸೃಷ್ಟಿ ಮಾಡುವ ಸ್ವಭಾವ ಇವರದು. ಇವರಿಂದಾಗಿ ಇಡೀ ಸ್ನೇಹಿತರ ತಂಡ ಬಹಳಷ್ಟು ಮಜವಾಗಿ ಹೋಳಿ ಸಂಭ್ರಮಿಸುತ್ತದೆ. 

ವೃಷಭ(Taurus): ಭಾಂಗ್ ವಿಷಯದಲ್ಲಿ ಎಚ್ಚರ ತಪ್ಪಿಯಾರು. ಸ್ವಲ್ಪ ಜಾಗ್ರತೆಯಾಗಿರಲು ಹೇಳಬೇಕು. ಅದು ಬಿಟ್ಟರೆ ಹೋಳಿ ಹಬ್ಬವನ್ನು ಎಲ್ಲರೊಳಗೊಂದಾಗಿ ಆಚರಿಸುವವರಿವರು. ಯಾವುದೂ ಅತಿಯಾಗದಂತೆ ಎಚ್ಚರ ವಹಿಸುತ್ತಾರೆ.

ಮಿಥುನ(Gemini): ಹಬ್ಬಗಳೆಂದರೆ ನೆಂಟರಿಷ್ಟರು ಸಿಗುತ್ತಾರೆ, ಜನರನ್ನು ಭೇಟಿಯಾಗಬಹುದೆಂಬ ಸಂಭ್ರಮ ಇವರದು. ಯಾರೊಂದಿಗೆ ಆಚರಿಸಿದರೆ ಹೆಚ್ಚು ಮಜವಾಗಿರುತ್ತದೆ ಎಂದು ಯೋಚಿಸಿ ಅವರೊಂದಿಗೆ ಹೋಳಿಯನ್ನು ವಿಶಿಷ್ಠವಾಗಿ ಆಚರಿಸಲು ಯೋಜನೆ ರೂಪಿಸುತ್ತಾರೆ. 

ಈ 5 ರಾಶಿಯವರು ಸಂಗಾತಿಯಾಗಿ ಸಿಕ್ಕರೆ ನಿಮ್ಮ ಅದೃಷ್ಟ ಎಂದುಕೊಳ್ಳಿ..

ಕಟಕ(Cancer): ಗಲಾಟೆ ಕಡಿಮೆ ಇರುವವರೆಗೂ ಹಬ್ಬವನ್ನು ಬಹಳಷ್ಟು ಎಂಜಾಯ್ ಮಾಡುವವರಿವರು. ಆಗಾಗ ತಮ್ಮತ್ತ ಎಲ್ಲರ ಗಮನ ಹರಿಯುವುದನ್ನು ಎಂಜಾಯ್ ಮಾಡುತ್ತಾರೆ. ಗಲಾಟೆ ಹೆಚ್ಚಾದರೆ ಮಾತ್ರ ಎಲ್ಲದರೂ ತಣ್ಣಗೆ ಕೂರೋಣ ಎಂದು ಸ್ಥಳಕ್ಕಾಗಿ ಹುಡುಕುತ್ತಾರೆ.

ಸಿಂಹ(Leo): ಎಲ್ಲರ ಗಮನದ ಕೇಂದ್ರ ಬಿಂದುವಾಗಲು ಈ ರಾಶಿಯವರಿಗೆ ಹಬ್ಬವೆಂದರೆ ಒಂದು ಅವಕಾಶ. ತಮಾಷೆಯಾಗಿ ಜೋಕ್ ಮಾಡಿಕೊಂಡು ಎಲ್ಲರ ನಡುವೆ ಗಮನ ಸೆಳೆಯುತ್ತಾ ಜೋರಾಗಿ ಮಾತಾಡುತ್ತಾ ಸಂತೋಷವಾಗಿರತ್ತಾರೆ. 

ಕನ್ಯಾ(Virgo): ಬಹಳ ಸರಳವಾದ ಆಚರಣೆ ಬಯಸುವವರಿವರು. ಬಹಳ ಆಪ್ತರೊಂದಿಗೆ, ಕೆಲವೇ ಜನರೊಂದಿಗೆ ಗದ್ದಲವಿಲ್ಲದೆ ಹಬ್ಬ ಆಚರಿಸಿ ಚೆಂದದ ಊಟ ಮಾಡಲು ಇವರಿಷ್ಟ ಪಡುತ್ತಾರೆ. 

ತುಲಾ(Libra): ಹೋಳಿಯನ್ನು ವಿಶೇಷವಾಗಿಸಲು, ಮಜವಾಗಿಸಲು ಸಾಕಷ್ಟು ಹೊಸ ಹೊಸ ಐಡಿಯಾಗಳನ್ನಿವರು ಹುಡುಕುತ್ತಾರೆ. ಅಡುಗೆಯನ್ನು ವಿಶೇಷವಾಗಿಸಿ, ಭೂರಿ ಭೋಜನ ತಯಾರಿ ಮಾಡಿ ಹಂಚುತ್ತಾರೆ. 

ವೃಶ್ಚಿಕ(Scorpio): ಇವರು ಬಹಳ ಮೂಡಿಯಾಗಿದ್ದು, ತಾವು ಇಷ್ಟೆಲ್ಲ ಸಂಭ್ರಮ ಪಟ್ಟು ರೆಡಿಯಾಗುವ ಅಗತ್ಯವಿರಲಿಲ್ಲ ಎಂದುಕೊಳ್ಳುತ್ತಾರೆ. ಅಥವಾ ಮೂಡಿಲ್ಲದೆ, ಏನೂ ತಯಾರಿ ಮಾಡಿಕೊಳ್ಳದಿದ್ದರೆ ಸಡನ್ ಎಕ್ಸೈಟ್‌ಮೆಂಟ್ ಶುರುವಾಗಿ ತಾವು ಸರಿಯಾದ ತಯಾರಿ ಮಾಡಿಕೊಳ್ಳಬೇಕಿತ್ತು ಎಂದುಕೊಳ್ಳುತ್ತಾರೆ. 

ಇಷ್ಟಾರ್ಥ ಸಿದ್ಧಿ ಆಗ್ಬೇಕಂದ್ರೆ ದೇವರ ಕೋಣೆಯಿಂದ ಈ ವಸ್ತು ತೆಗೆಯಿರಿ

ಧನುಸ್ಸು(Sagittarius): ಇವರಿಗೆ ಎಲ್ಲ ರೀತಿಯ ಜನರನ್ನು ಭೇಟಿಯಾಗಲು ಇಷ್ಟ. ಹಾಗಾಗಿ, ಈ ಹೋಳಿ ಹಬ್ಬವನ್ನು ಸಮುದಾಯದೊಂದಿಗೆ ಬೆರೆತು ಆಚರಿಸುತ್ತಾರೆ. ಮಕ್ಕಳು, ಹಿರಿಯರು ಎನ್ನದೆ ಎಲ್ಲರೂ ಹೋಳಿ ಸಂಭ್ರಮಕ್ಕೆ ಎಳೆದುಕೊಳ್ಳುತ್ತಾರೆ. 

ಮಕರ(Capricorn): ಇವರು ಹಬ್ಬಕ್ಕಾಗಿ ವಿಶೇಷವಾಗಿ ಏನೂ ಮಾಡುವುದಿಲ್ಲ, ಆಚರಣೆಯೂ ಮಾಡುವುದಿಲ್ಲ. ಹಾಗಂಥ ಇನ್ನೊಬ್ಬರ ಆಚರಣೆಗೆ ಅಡ್ಡಿ ಬರುವುದೂ ಇಲ್ಲ. ಇತರರು ಎಂಜಾಯ್ ಮಾಡುವುದನ್ನು ನೋಡಿ ಖುಷಿ ಪಡುತ್ತಾರೆ. 

ಕುಂಭ(Aquarius): ಇವರು ಹೋಳಿಯನ್ನು ಸಿಕ್ಕಾಪಟ್ಟೆ ಸಂಭ್ರಮಿಸುತ್ತಾರೆ. ತಮ್ಮ ಸುತ್ತಲಿರುವವರೆಲ್ಲರನ್ನೂ ಒಳಗೊಳ್ಳಲು ಬಯಸುತ್ತಾರೆ. ಉತ್ಸಾಹ ತಲೆಗೇರಿದಾಗ ನಿಜವಾಗಿ ಇದು ಇವರೇನಾ ಎಂದು ಎಲ್ಲರೂ ಅಚ್ಚರಿ ಪಡುವಷ್ಟು ಸಂಭ್ರಮದಿಂದಿರುತ್ತಾರೆ.

ಮೀನ(Pisces): ಇವರ ಮೂಡ್ ಯಾರೂ ಹಾಳು ಮಾಡಲಿಲ್ಲವೆಂದರೆ ಸಿಕ್ಕಾಪಟ್ಟೆ ಬಣ್ಣದೋಕುಳಿಯಲ್ಲಿ ಮಿಂದೆದ್ದು ಸಂಭ್ರಮಿಸುತ್ತಾರೆ. ಮೂಡ್ ಆಫ್ ಆದರೆ ಮಾತ್ರ  ಸುಮ್ಮನೆ ಕೋಣೆಯೊಳಗೆ ಮುದುಡಿ ಕೂರುತ್ತಾರೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios