ಇಷ್ಟಾರ್ಥ ಸಿದ್ಧಿ ಆಗ್ಬೇಕಂದ್ರೆ ದೇವರ ಕೋಣೆಯಿಂದ ಈ ವಸ್ತು ತೆಗೆಯಿರಿ
ಪೂಜಾ ಗೃಹ ಪ್ರತಿಯೊಂದು ಮನೆಯಲ್ಲೂ ಇರುತ್ತದೆ. ಆದರೆ, ಎಲ್ಲರೂ ಈ ಸ್ಥಳವನ್ನು ನಿಯಮದಂತೆ ಇಟ್ಟುಕೊಳ್ಳುವುದಿಲ್ಲ. ಪೂಜಾಗೃಹ ವಾಸ್ತು ಪ್ರಕಾರವಾಗಿಯೂ, ಸ್ವಚ್ಛವಾಗಿಯೂ ಇರಬೇಕು. ಇಂದು ವಾಸ್ತು ಪ್ರಕಾರ ದೇವರ ಕೋಣೆಯಲ್ಲಿ ಯಾವೆಲ್ಲ ವಸ್ತು ಇಡಬೇಕು, ಯಾವುದು ಇಡಕೂಡದು ಎಂದು ತಿಳಿಸುತ್ತೇವೆ.
puja room
ಹಿಂದೂ ಧರ್ಮದ ಪ್ರಕಾರ, ಆರಾಧನೆಗಾಗಿ ಪ್ರತಿ ಮನೆಯಲ್ಲೂ ಪೂಜಾ ಗೃಹ(Pooja room) ಇರುತ್ತದೆ ಮತ್ತು ಅಲ್ಲಿ ಪ್ರಥಿದಿನ ಪೂಜೆ ನಡೆಯುತ್ತದೆ. ಪೂಜೆಯನ್ನು ಸರಿಯಾದ ಆಚರಣೆಯೊಂದಿಗೆ ಮಾಡಿದರೆ, ಆಗ ನಿಮ್ಮ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ತರಬಹುದು.
puja room
ಕೆಲ ಮನೆಗಳಲ್ಲಿ ದೇವರ ಕೋಣೆ ವಿಶಾಲವಾಗಿದ್ದರೆ ಮತ್ತೆ ಕೆಲ ಮನೆಗಳಲ್ಲಿ ಸಣ್ಣ ಕಪಾಟಿನ ಜಾಗದಲ್ಲೇ ದೇವರನ್ನಿರಿಸಿರುತ್ತಾರೆ. ಆದರೆ ಅನೇಕ ಬಾರಿ, ಮನೆಯಲ್ಲಿ ದೇವಾಲಯವನ್ನು ನಿರ್ಮಿಸುವಾಗ ಭಕ್ತರಿಗೆ ಕೆಲವು ವಿಷಯಗಳ ಬಗ್ಗೆ ತಿಳಿದಿರುವುದಿಲ್ಲ. ಹೀಗಾಗಿ, ಈ ವಿಷಯದಲ್ಲಿ ಕೆಲ ತಪ್ಪಿನಿಂದ ಮನೆಯಲ್ಲಿ ಶಾಂತಿಗೆ ಬದಲು, ಬಡತನ ಮತ್ತು ಅಶಾಂತಿ ಬರಬಹುದು.
puja room
ವಾಸ್ತು ಶಾಸ್ತ್ರದಲ್ಲಿ ಮನೆಯ ದೇವರ ಕೋಣೆಯ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದ್ದು, ಅದನ್ನು ಅನುಸರಿಸಬೇಕು ಎಂಬುದನ್ನು ಭಕ್ತರಿಗೆ ತಿಳಿಸಲಾಗಿದೆ. ಹೀಗೆ ಮಾಡಿದರೆ ಮಾತ್ರ ಮನೆಯಲ್ಲಿ ಶಾಂತಿ ಮತ್ತು ಸಕಾರಾತ್ಮಕ ಶಕ್ತಿ(Negative Energy) ನೆಲೆಸಲು ಸಾಧ್ಯವಾಗುತ್ತದೆ. ಜೊತೆಗೆ ಭಕ್ತರಿಗೆ ಪೂಜೆಯ ಶುಭ ಫಲಗಳನ್ನು ನೀಡುತ್ತದೆ.
puja room
ಹಿಂದೂ ಧರ್ಮದ ಪ್ರಕಾರ, ನೀವು ಪೂಜಾ ಗೃಹದಲ್ಲಿ ಗಣೇಶನ ವಿಗ್ರಹವನ್ನು(Lord Ganesh Idol) ಇಟ್ಟುಕೊಂಡಿದ್ದರೆ, ಆಗ ಗಣೇಶನ 3 ವಿಗ್ರಹಗಳನ್ನು ಇಡಬಾರದು ಎಂಬುದನ್ನು ನೆನಪಿನಲ್ಲಿಡಿ. ನಂಬಿಕೆಯ ಪ್ರಕಾರ, ಹಾಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಅಶಾಂತಿ ಉಂಟಾಗಬಹುದು. ಭಕ್ತರು ಬಯಸಿದರೆ ಒಂದು ಅಥವಾ ಎರಡು ವಿಗ್ರಹಗಳನ್ನು ದೇವರ ಕೋಣೆಯಲ್ಲಿ ಇಡಬಹುದು.
puja room
ಪ್ರತಿಯೊಂದು ಪೂಜಾ ಗೃಹದಲ್ಲಿಯೂ, ಜನರು ಶಂಖವನ್ನು(Shankh) ಇಡುತ್ತಾರೆ, ಇದು ತುಂಬಾ ಧನಾತ್ಮಕವೆಂದು ಪರಿಗಣಿಸಲಾಗಿದೆ. ಆದರೆ ಅದೇ ಶಂಖವನ್ನು ಯಾವಾಗಲೂ ಪೂಜಾಗೃಹದಲ್ಲಿ ಇಡಬೇಕು ಎಂಬುದನ್ನು ನೆನಪಿನಲ್ಲಿಡಬೇಕು. ಒಂದಕ್ಕಿಂತ ಹೆಚ್ಚು ಶಂಖವನ್ನು ಪೂಜಾಗೃಹದಲ್ಲಿಟ್ಟರೆ ಒಂದನ್ನು ತೆಗೆದು ಪವಿತ್ರ ನದಿಯಲ್ಲಿ ಎಸೆಯಿರಿ.
puja room
ಮನೆಯ ದೇವಾಲಯದಲ್ಲಿ ವಿಗ್ರಹಗಳಿಗೆ ಜೀವನ ಪ್ರತಿಷ್ಠೆ ಇಲ್ಲದ ಕಾರಣ ದೊಡ್ಡ ದೊಡ್ಡ ಮೂರ್ತಿಗಳನ್ನು ಇಲ್ಲಿ ಇಡಲೇಬಾರದು. ಹಿಂದೂ ಧರ್ಮದ ಪ್ರಕಾರ, ನೀವು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಶಿವಲಿಂಗವನ್ನು(Shivaling) ಇಡಲು ಬಯಸಿದರೆ, ಆಗ ಶಿವಲಿಂಗವು ಹೆಬ್ಬೆರಳಿನ ಗಾತ್ರಕ್ಕಿಂತ ದೊಡ್ಡದಾಗಿರಬಾರದು. ಹಾಗೆ ನಂಬಲಾಗಿದೆ.
puja room
ಒಡೆದ ವಿಗ್ರಹಗಳನ್ನು(Broken Idol) ಮರೆತೂ ಕೂಡ ದೇವಾಲಯದಲ್ಲಿ ಇಡಬಾರದು ಎಂದು ಎಲ್ಲ ಭಕ್ತರಿಗೆ ತಿಳಿದಿದೆ. ಏಕೆಂದರೆ ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ಇದು ಮನೆಯ ಕುಟುಂಬಕ್ಕೆ ಅಶುಭವೆಂದು ಪರಿಗಣಿಸಲಾಗಿದೆ. ಆದುದರಿಂದ ತುಂಡಾದ ಅಥವಾ ಒಡೆದ ವಿಗ್ರಹಗಳಿದ್ದರೆ ಕೂಡಲೇ ಅದನ್ನು ತೆಗೆದು ಹಾಕಿ.
puja room
ಭಕ್ತರು ದೇವರ ಮೂರ್ತಿಗೆ ಆರತಿ ಮಾಡುತ್ತಿದ್ದರೆ, ಆಗ ದೀಪದಲ್ಲಿ ತುಂಬಾ ತುಪ್ಪವನ್ನು(Ghee) ಇರಿಸಿ, ಪೂಜೆಯ ಮಧ್ಯದಲ್ಲಿ ದೀಪವನ್ನು ಆರಿಸಬಾರದು. ಹೀಗಾದಾಗ ಪೂಜೆಯ ಪೂರ್ಣ ಫಲಗಳು ಸಾಧ್ಯವಾಗುವುದಿಲ್ಲ ಎಂಬ ನಂಬಿಕೆ ಇದೆ. ಆರತಿ ಪೂರ್ತಿ ಆಗುವವರೆಗೆ ದೀಪ ಆರದಂತೆ ನೋಡಿಕೊಳ್ಳಿ.
puja room
ನೀವು ಪೂಜೆ ಮಾಡಿದಾಗಲೆಲ್ಲಾ, ಯಾವಾಗಲೂ ಪೂಜಾ ಮನೆಯಲ್ಲಿ ದೇವರಿಗೆ ತಾಜಾ ಹೂವುಗಳನ್ನು(Flowers) ಅರ್ಪಿಸಬೇಕು. ನಂಬಿಕೆಯ ಪ್ರಕಾರ ತುಳಸಿ ಎಲೆಗಳನ್ನು ದೇವರಿಗೆ ತಾಜಾವಾಗಿಯೇ ಅರ್ಪಿಸಬೇಕು, ಆದ್ದರಿಂದ ಪ್ರತಿದಿನ ಅದರ ಎಲೆಗಳ ಮೇಲೆ ನೀರನ್ನು ಚಿಮುಕಿಸುವ ಮೂಲಕ ನೀವು ಅದನ್ನು ದೇವರಿಗೆ ಅರ್ಪಿಸಬಹುದು.