Love Breakup ಆದಾಗ ಯಾವ ಜನ್ಮರಾಶಿಯವರ ವರ್ತನೆ ಹೇಗೆ?

ಎಲ್ಲರೂ ಒಂದಲ್ಲ ಒಂದು ಸಲ, ಅವರ ಯವ್ವನದಲ್ಲಿ ಲವ್ ಬ್ರೇಕಪ್ ಅನುಭವಿಸಲೇಬೇಕಲ್ವೇ? ಹಾಗೆ ಬ್ರೇಕಪ್ ಆದಾಗ ಯಾವ್ಯಾವ ಜನ್ಮರಾಶಿಯವರು ಹೇಗೆ ಹೇಗೆ ವರ್ತಿಸುತ್ತಾರೆ ಎಂದು ತಿಳಿಯಬಯಸುತ್ತೀರಾ?

 

How each zodiac born behave when love breakup

ನಿಮ್ಮ ಬಾಯ್‌ಫ್ರೆಂಡ್ ಅಥವಾ ಗರ್ಲ್‌ಫ್ರೆಂಡ್ ಕೈ ಕೊಟ್ಟರಾ? ನಿಮ್ಮ ಹೃದಯವನ್ನು ಒಡೆದು ಚೂರುಚೂರಾಯಿತಾ? ಸ್ನೇಹಿತರು ಮತ್ತು ಪ್ರೀತಿಪಾತ್ರರು ಕೈ ಕೊಟ್ಟಾಗ ಎದೆ ಒಡೆದುಹೋಗುವುದು ಸಹಜ. ಆದರೆ ಪ್ರತಿಯೊಬ್ಬ ವ್ಯಕ್ತಿಯೂ ಒಂದೊಂದು ರೀತಿಯಲ್ಲಿ ವರ್ತಿಸುತ್ತಾನೆ/ಳೆ. ಪ್ರತಿ ರಾಶಿಚಕ್ರದ ವ್ಯಕ್ತಿಯೂ ಭಗ್ನಪ್ರೇಮವನ್ನು ಹೇಗೆ ಎದುರಿಸುತ್ತಾರೆ ನೋಡೋಣ.

ಮೇಷ ರಾಶಿ (Aries)
ನೀವು ಕೈ ಕೊಟ್ಟ ನಿಮ್ಮ ಸಂಗಾತಿಯ ಮುಖಕ್ಕೆ ಗುದ್ದಿಬಿಡಬಹುದು. ಸಿಟ್ಟಿನಿಂದ ಕೂಗಾಡಬಹುದು. ತಾಳ್ಮೆಯನ್ನು ಕಳೆದುಕೊಳ್ಳಬಹುದು. ಇದು ನಿಮಗೆ ಆದ ಹತಾಶೆಯನ್ನು ತೋರಿಸುತ್ತದೆ. ಮೇಷ ರಾಶಿಯವರ ಎದುರಿಗೆ ಅವರ ಪ್ರೇಮ ಬ್ರೇಕ್ ಮಾಡಿದವರು ಸಿಗಬಾರದು. ಬೇರೊಬ್ಬರು ಅವರ ಪ್ರೇಮಕ್ಕೆ ಕಾರಣವಾದರಂತೂ ಅವರ ಕಾರನ್ನೇ ಇವರು ಒಡೆದುಹಾಕಬಹುದು! 

ವೃಷಭ ರಾಶಿ (Taurus)
ಇವರು ತಮ್ಮ ಪ್ರೇಮವನ್ನು ಸುಲಭವಾಗಿ ನಷ್ಟವಾಗಲು ಬಿಡುವುದಿಲ್ಲ. ಹೀಗಾಗಿ ಇವರಿಂದ ನಿಜವಾದ ಪ್ರತ್ಯೇಕತೆಯು ಕಷ್ಟಕರವಾಗಿರುತ್ತದೆ. ಆದರೆ, ಒಮ್ಮೆ ಇವರು ವಾಸ್ತವವನ್ನು ಒಪ್ಪಿಕೊಂಡರು ಎಂದರೆ, ಬಳಿಕ ಇವರಿಂದ ಯಾವುದೇ ಅಪಾಯವಿಲ್ಲ. ಇವರು ಸ್ವಲ್ಪ ಮೆಚ್ಯೂರ್ ಆಗಿ ಭಗ್ನಪ್ರೇಮವನ್ನು ಹ್ಯಾಂಡಲ್ ಮಾಡಲು ಕಲಿಯುತ್ತಾರೆ.

ಮಿಥುನ ರಾಶಿ (Gemini)
ಇವರು ಸಾಕಷ್ಟು ಅನಿರೀಕ್ಷಿತ ಸ್ವಭಾವದ ವ್ಯಕ್ತಿಗಳು. ಆದ್ದರಿಂದ ಇವರು ಹತಾಶೆಯಿಂದ ಹುಚ್ಚರಂತಾಗಬಹುದು. ನೀವು ಅವರ ಮಾಜಿ ಸಂಗಾತಿಗಳಾಗಿದ್ದರೆ ನಿಮ್ಮನ್ನು ನೆರಳಿನಂತೆ ಹಿಂಬಾಲಿಸಬಹುದು. ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಗುಟ್ಟಾಗಿ ಹಿಂಬಾಲಿಸಿ, ನಿಮ್ಮ ರಹಸ್ಯಗಳನ್ನು ಬಹಿರಂಗಪಡಿಸಬಹುದು. ಸಾರ್ವಜನಿಕವಾಗಿ ಮುಜುಗರ ಉಂಟುಮಾಡಬಹುದು. 

ಕಟಕ ರಾಶಿ (Cancer) 
ಇವರು ಹೊಂಚುಹಾಕುವ ಬೆಕ್ಕುಗಳು ಇದ್ದಂತೆ. ಸುಮ್ಮನೇ ಜಪ್ಪಿಸಿ ಕುಳಿತಿರುತ್ತಾರೆ ಮತ್ತು ಯಾವುದೋ ಒಂದು ಕ್ಷಣದಲ್ಲಿ ನಿಮ್ಮ ಮೇಲೆ ಅಟ್ಯಾಕ್ ಮಾಡುತ್ತಾರೆ. ನೀವು ಅವರ ಹೃದಯವನ್ನು ಮುರಿದಿದ್ದೀರಿ ಎಂದು ನಿಮಗೆ ನೆನಪಿಸಲು ಸೂಕ್ತ ಕಾಲವೊಂದನ್ನು ಕಾಯ್ದು ಕುಳಿತು, ನೀವು ಬೆಚ್ಚಿ ಬೀಳುವಂತೆ ಮಾಡುತ್ತಾರೆ. ಪರವಾಗಿಲ್ಲ ಎಂಬಂತೆ ವರ್ತಿಸುತ್ತೇವೆ, ಆದರೆ ರಹಸ್ಯವಾಗಿ ನಿಮ್ಮ ನಾಶಕ್ಕಾಗಿ ಪ್ರಾರ್ಥಿಸುತ್ತಾರೆ.

Spirituality: ಆಧ್ಯಾತ್ಮ ಬಳಸಿ ನಕಾರಾತ್ಮಕ ಯೋಚನೆಗಳಿಗೆ ಬೈ ಹೇಳಿ..

ಸಿಂಹ ರಾಶಿ (Leo)
ಇವರು ಸಾಕಷ್ಟು ಬಿಂದಾಸ್. ಇವರು ಕಾಡಿನ ರಾಜ. ಭಗ್ನಪ್ರೇಮದಲ್ಲೂ ರಾಜ ಅಥವಾ ರಾಣಿಯ ಹಾಗೇ ಇರುತ್ತಾರೆ. ಲವ್ ಬ್ರೇಕಪ್‌ನಿಂದ ತತ್ತರಿಸಿದ ದೇವದಾಸ್ ಮಾಡಿದ ಹಾಗೇ ಎಲ್ಲವನ್ನೂ ವಿಜೃಂಭಣೆಯಿಂದ ಮಾಡುತ್ತಾರೆ. ಯಾವುದೋ ಒಂದು ಹಂತದಲ್ಲಿ ನಿಮ್ಮನ್ನೂ ನಿಮ್ಮ ಪ್ರೇಮವನ್ನೂ ಮರೆತು ಇನ್ನೊಂದು ಪ್ರೇಮದ ಬೆನ್ನು ಹತ್ತಿ ಹೋಗಿರುತ್ತಾರೆ. ಆದರೆ ನೀವು ಮತ್ತೆ ಬಳಿಗೆ ಹೋದರೆ ಕೆಂಡ ಕಾರುತ್ತಾರೆ.
 
ಕನ್ಯಾ ರಾಶಿ (Virgo)
ಇವರು ತಮ್ಮ ಭಾವನೆಗಳೊಂದಿಗೆ ಸಾಕಷ್ಟು ಸಮತೋಲನದಲ್ಲಿ ಇರುವವರು. ಇವರಿಗೆ ಭಗ್ನಪ್ರೇಮದ ಹತಾಶೆ ರಂಪಾಟ ಇತ್ಯಾದಿ ನಾಟಕಗಳು ಇಷ್ಟವಾಗುವುದಿಲ್ಲ. ಸಾಕಷ್ಟು ಲೆಕ್ಕಾಚಾರ ಮಾಡುತ್ತಾರೆ. ಆದ್ದರಿಂದ ನೀವು ಕೊಟ್ಟ ಉಡುಗೊರೆಗಳು ಅವರು ನಿಮ್ಮ ಕಿಸೆಯಿಂದ ಇವರು ಹಾರಿಸಿದ ಪರ್ಸ್ ಅಥವಾ ಕ್ರೆಡಿಟ್ ಕಾರ್ಡ್  ಮತ್ತೆ ವಾಪಸ್ ನಿಮ್ಮ ಕಡೆಗೆ ಬಂದೀತು ಎಂಬ ನಿರೀಕ್ಷೆ ಬೇಡ!

ತುಲಾ ರಾಶಿ (Libra)
ಇವರು ಡೌನ್ ಟು ಅರ್ಥ್ ಮತ್ತು ಸೂಪರ್ ಪ್ರಾಕ್ಟಿಕಲ್. ಇವರ ಪ್ರೇಮವನ್ನ ಭಗ್ನಗೊಳಿಸಿದ ನಿಮ್ಮ ಬಗ್ಗೆ ಇವರು ಕೆಲಕ್ಷಣ ಮಾತ್ರವೇ ಯೋಚಿಸಬಹುದು. ನಂತರ ಇವರ ಪರಿಪೂರ್ಣವಾಗಿ ತಮ್ಮ ಜೀವನದಲ್ಲಿ ಮುಂದುವರಿಯುತ್ತಾರೆ. ತಮ್ಮ ಇನ್ನೊಂದು ಪ್ರೇಮದೊಂದಿಗೆ ನಿಮ್ಮ ಎದುರು ತಮ್ಮ ವಿಜಯಧ್ವಜವನ್ನು ಹಾರಾಡಿಸುತ್ತಾರೆ. ನೀವು ಏನನ್ನು ಕಳೆದುಕೊಂಡಿದ್ದೀರಿ ಎಂದು ತೋರಿಸುತ್ತಾರೆ.

ವೃಶ್ಚಿಕ ರಾಶಿ (Scorpio)
ಇವರು ಚೇಳಿನ ಸ್ವಭಾವದವರು, ನಿಮ್ಮನ್ನು ಕುಟುಕದೇ ಬಿಡುವುದಿಲ್ಲ. ಸಂಗಾತಿಗಳನ್ನು ಕುಟುಕದ ಇವರು ಮಾಜಿ ಸಂಗಾತಿಗಳನ್ನು ಕುಟುಕದೆ ಕ್ಷಮಿಸುವುದಿಲ್ಲ. ಸದಾ ನಿಮ್ಮನ್ನು ಘಾಸಿಗೊಳಿಸುವ ಲೆಕ್ಕಾಚಾರ ಮಾಡುತ್ತಿರುತ್ತಾರೆ. ರಹಸ್ಯವಾಗಿ ನಿಮ್ಮ ಎಲ್ಲ ಸ್ನೇಹಿತರನ್ನು ನಿಮ್ಮ ವಿರುದ್ಧ ತಿರುಗಿಸುತ್ತಾರೆ. ನೀವು ನಿರೀಕ್ಷಿಸದೇ ಇದ್ದ ಕ್ಷಣದಲ್ಲಿ ಕುಟುಕುತ್ತಾರೆ.

ಧನು ರಾಶಿ (sagittarius)
ಇವರು ಮುಕ್ತ ಆತ್ಮಗಳು. ಆದ್ದರಿಂದ ಇವರನ್ನು ನೀವು 'ಬಲಿಪಶು' ಮಾಡಲಾಗುವುದಿಲ್ಲ. ಇವರು ಸಂಬಂಧವನ್ನು ಉಳಿಸಲು ಪ್ರಯತ್ನ ಮಾಡುತ್ತಾರೆ. ಆದರೆ ಅದು ಸಾಧ್ಯವಾಗದಿದ್ದರೆ ಸಹಜವಾಗಿ ಅಲ್ಲಿಂದ ಮುಂದುವರಿಯುತ್ತಾರೆ. ಬೇರೆ ಯಾರನ್ನಾದರೂ ಹಿಡಿದುಕೊಳ್ಳುತ್ತಾರೆ. ನಿಮ್ಮನ್ನು ಎಲ್ಲ ಸೋಶಿಯಲ್ ಮೀಡಿಯಾಗಳಲ್ಲಿ ಬ್ಲಾಕ್ ಮಾಡಿ ಮುಂದೆ ಹೋಗುತ್ತಾರೆ.

Name Astrology: ಈ ಹೆಸರಿನ ಮಕ್ಕಳ ಮೆದುಳು ಕಂಪ್ಯೂಟರ್‌ಗಿಂತ ಫಾಸ್ಟ್!

ಮಕರ ರಾಶಿ (Capricorn)
ಇವರು ರಾಶಿಚಕ್ರದ ಅತ್ಯಂತ ತಾರ್ಕಿಕ ವ್ಯಕ್ತಿಗಳು. ಹೀಗಾಗಿ ನಿಮ್ಮ ಬ್ರೇಕಪ್ ಬಗ್ಗೆ ನೀವು ಇವರನ್ನು ಕನ್‌ವಿನ್ಸ್ ಮಾಡಲಾರಿರಿ. ನೀವು ಮುದುಕರಾಧ ಬಳಿಕ ಸಿಕ್ಕಿದರೂ, ಅಂದು ನೀವು ಬ್ರೇಕಪ್ ಮಾಡಿದ್ದು ಸರಿಯಲ್ಲ ಎಂದೇ ಲಾಜಿಕ್ ತೆಗೆಯಬಲ್ಲರು. ಇವರು ವಾಸ್ತವವನ್ನು ಬಹಳ ನಿಧಾನವಾಗಿ ಒಪ್ಪಿಕೊಳ್ಳುವವರು. ವಾಸ್ತವವನ್ನು ಬದಲಾಯಿಸಲೂ ಯತ್ನಿಸಬಲ್ಲರು. 

ಕುಂಭ ರಾಶಿ (Aquarius)
ಇವರು ಎಲ್ಲವನ್ನೂ ವಿಧಿ ಅಥವಾ ಕರ್ಮಕ್ಕೆ ಬಿಡುತ್ತಾರೆ. ಇವರು ಸ್ವಲ್ಪ ಧಾರ್ಮಿಕ ಸ್ವಭಾವದ ವ್ಯಕ್ತಿಗಳು ಆದ್ದರಿಂದ ದೇವರ ಮೇಲೆ ಭಾರ ಹಾಕಿ ಮುಂದೆ ಹೋಗುತ್ತಾರೆ. ಇವರನ್ನು ಬಹಳ ಸುಲಭವಾಗಿ ವಂಚಿಸಬಹುದು ಹಾಗೂ ದಕ್ಕಿಸಿಕೊಳ್ಳಬಹುದು. ಆದರೆ ಇವರ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಕಷ್ಟವಾಗುತ್ತದೆ. ಆದ್ದರಿಂದ ಕೊರಗೆಲ್ಲ ಇವರನ್ನು ವಂಚಿಸಿದವರಿಗೇ.

ಮೀನ ರಾಶಿ (pisces)
ಇವರು ಇವರದೇ ಆದ ಸಂತೋಷದಾಯಕ, ಸಿಹಿ ಜಗತ್ತಿನಲ್ಲಿ ವಾಸಿಸುತ್ತಾರೆ. ಮೀನ ರಾಶಿಯವರು ಸಂವೇದನಾಶೀಲ ಆತ್ಮಗಳು. ಆದ್ದರಿಂದ ಇವರೊಂದಿಗೆ ಬ್ರೇಕಪ್ ಮಾಡುವಾಗ ಇವರನ್ನು ಚೆನ್ನಾಗಿ ಕನ್‌ವಿನ್ಸ್ ಮಾಡಿಸಬೇಕು. ಇಲ್ಲವಾದರೆ ಅಸಹ್ಯಕರವಾದ ಜಗಳಕ್ಕೆ ಇಳಿದುಬಿಡಬಹುದು. ಸಾರ್ವಜನಿಕವಾಗಿ ನಿಮ್ಮನ್ನು ಶೇಪೌಟ್ ಮಾಡಬಹುದು. 

Latest Videos
Follow Us:
Download App:
  • android
  • ios