Asianet Suvarna News Asianet Suvarna News

Interpretation of Dreams: ಸ್ವಪ್ನಕ್ಕೇನು ಅರ್ಥ?

ನಿದ್ದೆಯಲ್ಲಿ ಹಲವಾರು ರೀತಿಯ ಕನಸುಗಳು ಬೀಳುತ್ತವೆ. ಒಂದೊಂದು ಕನಸಿಗೂ ಒದೊಂದು ಅರ್ಥವಿರುತ್ತದೆ. ಕೆಲವು ಕನಸುಗಳು ನಷ್ಟವನ್ನುಂಟು ಮಾಡಿದರೆ, ಇನ್ನು ಕೆಲವರದ್ದು ಲಾಭವನ್ನು ತರುತ್ತದೆ. ಆದರೆ ಈ ರೀತಿಯ ಕನಸುಗಳು ಬಿದ್ದರೆ ನಿಮಗೆ ಧನಲಾಭ ನಿಶ್ಚಿತ. ಹಾಗಾದರೆ ಯಾವ ಕನಸುಗಳು ಎಂಬುದರ ಬಗ್ಗೆ ನೋಡೋಣ ಬನ್ನಿ...

How dreams of falling and climbing tree could interpret
Author
Bangalore, First Published Nov 27, 2021, 4:01 PM IST

ಕನಸು (Dream) ಯಾರಿಗೆ ಬೀಳುವುದಿಲ್ಲ ಹೇಳಿ ...? ಅದರಲ್ಲೂ ಕೆಲವು ಕನಸುಗಳಂತೂ ನೆನಪಿನಲ್ಲಿ (Memory) ಉಳಿದುಬಿಡುತ್ತವೆ. ಇನ್ನು ಕೆಲವು ಭಯಾನಕವಾಗಿ (Horrible) ಇರುತ್ತವೆ. ಮತ್ತೆ ಕೆಲವು ಅಸ್ಪಷ್ಟವಾಗಿ ಬಿದ್ದು ಮತ್ತೆ ನೆನಪಿಗೆ ಬರುವುದಿಲ್ಲ. ಎಷ್ಟೇ ನೆನಪು (Memory) ಮಾಡಿಕೊಂಡರೂ ಸಹ ಅದು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಕನಸಿಗೆ ಒಂದು ಅರ್ಥವಿರುತ್ತದೆ. ಭವಿಷ್ಯದಲ್ಲಿ (Future) ನಡೆಯುವ ವಿಚಾರದ ಬಗ್ಗೆ ತಿಳಿಸುವ ಒಂದು ಸಂಕೇತ (Symbol) ಎಂದೂ ಹೇಳಬಹುದು. ಸ್ವಪ್ನ ಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾಗಿದೆ. ಕನಸಿನಲ್ಲಿ ನಾವು ಕಂಡ ವಸ್ತು (Things), ದೃಶ್ಯಗಳು (View) ಭವಿಷ್ಯದಲ್ಲಿ ನಡೆಯುವ ವಿಷಯದ ಸೂಚಕ ಸಹ ಆಗಿರುತ್ತವೆ. ಕನಸಿನಲ್ಲಿ ಕೆಲವು ಬಾರಿ ಪ್ರಾಣಿಗಳು (Animal), ಇಲ್ಲವೇ ಕೆಲವು ವಸ್ತುಗಳನ್ನು ಕಂಡರೆ ಇನ್ನು ಕೆಲವು ಬಾರಿ ಸ್ವತಃ ನಾವೇ ಏನೋ ಮಾಡುತ್ತಿರುವಂತೆ ಕನಸು ಬೀಳುತ್ತವೆ. ಈ ರೀತಿಯ ಕನಸುಗಳು ಧನ (Money) ಲಾಭವನ್ನು (Profit) ತಂದುಕೊಡುತ್ತವೆ ಎನ್ನುತ್ತದೆ ಸ್ವಪ್ನ ಶಾಸ್ತ್ರ.

ಕನಸಿನಲ್ಲಿ ಕಂಡದ್ದು ನಿಜವಾಗುತ್ತದೆ ಎಂಬ ಬಗ್ಗೆ ಕೇಳಿರುತ್ತೇವೆ. ಕನಸಿನ ಬಗ್ಗೆ ಚಿಂತಿಸುತ್ತೇವೆ. ಅದಕ್ಕೆ ಅರ್ಥವನ್ನು (Meaning) ಅಥವಾ ಸೂಚನೆ ಏನಿರಬಹುದು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ. ಕನಸಿನಿಂದ ಕೆಲವು ಬಾರಿ ಖುಷಿಯಾದರೆ (Happy), ಇನ್ನು ಕೆಲವು ಬಾರಿ ಗಾಬರಿಯಾಗುವಂತೆ (Shock) ಮಾಡುತ್ತದೆ. ಇಂಥವುಗಳಿಗೆ ಅನೇಕ ಸ್ಪಷ್ಟನೆಗಳನ್ನು (Clarification) ಕೊಟ್ಟುಕೊಂಡಿರುತ್ತೇವೆ. ಹಿಂದಿನ ದಿನ ಆ ವಸ್ತುಗಳನ್ನು ನೋಡಿದ್ದಕ್ಕೋ ಅಥವಾ ಆ ಬಗ್ಗೆ ಚರ್ಚೆಗೆ ಬಂದಿದ್ದಕ್ಕೋ ಈ ರೀತಿಯ ಕನಸುಗಳು ಬಿದ್ದಿವೆ ಎಂದು ನಾವು ಅಂದುಕೊಂಡಿರುತ್ತೇವೆ. ಆದರೂ ಆ ಕನಸು ನಮ್ಮನ್ನು ತುಂಬ ಕಾಡಿರುತ್ತದೆ.

ಕನಸಿನಲ್ಲಿ ಕಂಡ ವಸ್ತುಗಳು ಅಥವಾ ಘಟನೆಗಳು ಶುಭಾಶುಭಗಳ ಸಂಕೇತವಾಗಿರುತ್ತವೆ. ಹಾಗೆಯೇ ಕನಸಿನಲ್ಲಿ ಕೆಲವು ವಸ್ತುಗಳನ್ನು ಅಥವಾ ಇನ್ನಿತರ ಸಂದರ್ಭಗಳನ್ನು ಸ್ವತಃ ನಾವೇ ಕಂಡರೆ ಧನಲಾಭವಾಗುತ್ತದೆ ಎಂದು ಹೇಳಲಾಗಿದೆ. ಹಾಗಾದರೆ ಆ ದೃಶ್ಯಗಳು ಯಾವುವು ಎಂಬುದರ ಬಗ್ಗೆ ತಿಳಿಯೋಣ ಬನ್ನಿ...

ಅಳುತ್ತಿರುವ ದೃಶ್ಯ (Crying)
ಕನಸಿನಲ್ಲಿ ನಾವೇ ಅಳುತ್ತಿರುವಂತೆ ಕಂಡರೆ ಅತ್ಯಂತ ಶುಭವೆಂದು ಶಾಸ್ತ್ರ ಹೇಳುತ್ತದೆ. ಇದರಿಂದ ಜೀವನದಲ್ಲಿ ಬಹುಬೇಗ ಯಶಸ್ಸು (Success)  ಸಿಗುತ್ತದೆ. ಅಷ್ಟೇ ಅಲ್ಲದೆ ಬರಬೇಕಿದ್ದ ಹಣ ವಾಪಸ್ ಕೈಸೇರುತ್ತದೆ. ಹಾಗಾಗಿ ಅಯ್ಯೋ ನನಗೆ ಈ ರೀತಿ ಅಳುತ್ತಿರುವ ಕನಸು ಕಂಡೆ ಎಂದು ಧೃತಿಗೆಡುವುದು ಬೇಡ.

ಇದನ್ನು ಓದಿ: Zodiac Sign and Character: ಈ 4 ರಾಶಿಚಕ್ರದವರು ಹಣ ಉಳಿಸುವಲ್ಲಿ ನಿಸ್ಸೀಮರು..!

ನಕ್ಷತ್ರಗಳ ಮಧ್ಯೆ ಇದ್ದರೆ (If between stars)
ನಕ್ಷತ್ರಗಳ ಮಧ್ಯದಲ್ಲಿ ಇರುವಂತೆ ಕಂಡರೂ ಅಂತಹ ಕನಸು ಶುಭವನ್ನು (Good luck) ತರುತ್ತದೆ. ಇದರಿಂದ ಧನಲಾಭ ಉಂಟಾಗುವುದಲ್ಲದೆ ವ್ಯಾಪಾರ (Business) ಉದ್ಯೋಗದಲ್ಲಿ (Job) ಯಶಸ್ಸು ದೊರಕುತ್ತದೆ. ಈ ಮೂಲಕ ನಿಮ್ಮ ಸ್ಟಾರ್ ಬದಲಾಗುತ್ತದೆ.

ಬಡವರಾದಂತೆ ಕನಸು ಕಂಡರೆ (Poor)
ಕನಸಿನಲ್ಲಿ ಬಡವರಾದಂತೆ ಅಥವಾ ಕೈಯಲ್ಲಿ ಹಣವಿಲ್ಲದಂತೆ ಕನಸು ಬಿದ್ದರೆ ಅದು ಶುಭವನ್ನು ತರುವ ಸಂಕೇತ ಎಂದು ಹೇಳಲಾಗುತ್ತದೆ. ಇಂಥ ಕನಸು ವ್ಯಾಪಾರದಲ್ಲಿ ಅಥವಾ ಉದ್ಯೋಗದಲ್ಲಿ ಯಶಸ್ಸು ಸಿಗುವ ಮುನ್ಸೂಚನೆ (Forecast) ಆಗಿರುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಧನ - ಧಾನ್ಯ ವೃದ್ಧಿಸುತ್ತದೆ. 

ಇದನ್ನು ಓದಿ : Rituals: ಸಂಭೋಗಿಸಿ, ಸ್ನಾನ ಮಾಡದೇ ಪೂಜಿಸಿದರೆ ತಟ್ಟುತ್ತೆ ಶಾಪ!

ಎತ್ತರದಿಂದ ಬಿದ್ದರೆ (Fall from height)
ತಣ್ಣೀರಿನಲ್ಲಿ (Water) ಸ್ನಾನ (Bath) ಮಾಡುತ್ತಿದ್ದರೆ ಅಥವಾ ಎತ್ತರದಿಂದ ಬೀಳುತ್ತಿದ್ದಂತೆ ಕನಸು ಬಿದ್ದರೆ ಅಂತಹ ಕನಸು ಭವಿಷ್ಯದಲ್ಲಿ ಶುಭ ಪರಿಣಾಮವನ್ನು ಬೀರುತ್ತದೆ. ಅಷ್ಟೇ ಅಲ್ಲದೆ ಮಹಾಲಕ್ಷ್ಮಿ (Goddess Lakshmi)  ಪ್ರಸನ್ನಳಾಗುತ್ತಾಳೆಂಬ ಸೂಚನೆಯನ್ನೂ ಸಹ ಈ ರೀತಿಯ ಕನಸುಗಳು ಸೂಚಿಸುತ್ತವೆ. 

ಮರ ಹತ್ತಿದರೆ (Climbing tree)
ಕನಸಿನಲ್ಲಿ ಬೆಟ್ಟವನ್ನು (Mountain) ಅಥವಾ ಮರವನ್ನು ಹತ್ತುತ್ತಿದ್ದಂತೆ ಕಂಡರೆ ಇದು ಶುಭ ಸಂಕೇತವಾಗಿರುತ್ತದೆ. ವೃತ್ತಿ (Profession) ಕ್ಷೇತ್ರದಲ್ಲಿ ಯಶಸ್ಸು ಸಿಗುವ ಸಂಕೇತವನ್ನು ಈ ಕನಸು ಸೂಚಿಸುತ್ತದೆ. ಅಷ್ಟೇ ಅಲ್ಲದೆ ಐಷಾರಾಮಿ ವಸ್ತುಗಳನ್ನು ಹೊಂದುವ  ಸೂಚನೆಯೂ ಸಹ ಇದಾಗಿರುತ್ತದೆ. ಹಾಗಾಗಿ ನೀವು ಕನಸಿನಲ್ಲಿ ಬೆಟ್ಟವನ್ನು ಅಥವಾ ಮರವನ್ನು ಹತ್ತುತ್ತಿದ್ದರೆ ನಿಮಗೆ ಶುಭವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿರಿ.

ಇದನ್ನು ಓದಿ: Name and Personality: S ಅಕ್ಷರದಿಂದ ಸ್ಟಾರ್ಟ್ ಆಗೋ ಹುಡ್ಗೀರು ಹೇಗೆ ಗೊತ್ತಾ..?

ನಮಗೆ ನಾವೇ ಪೂಜಿಸಿಕೊಂಡರೆ (Ourselves)
ಕನಸಿನಲ್ಲಿ ನಮಗೆ ನಾವೇ ಪೂಜಿಸಿ (Worship) ಕೊಳ್ಳುತ್ತಿರುವಂತೆ ಕಂಡರೆ ಅದು ಸಹ ಶುಭ ಸಂಕೇತವಾಗಿರುತ್ತದೆ. ದೇವರ (God) ಕೃಪೆ ಲಭಿಸಿದೆ ಎಂಬುದರ ಅರ್ಥ ಇದಾಗಿರುತ್ತದೆ. 

Follow Us:
Download App:
  • android
  • ios