Name and Personality: S ಅಕ್ಷರದಿಂದ ಸ್ಟಾರ್ಟ್ ಆಗೋ ಹುಡ್ಗೀರು ಹೇಗೆ ಗೊತ್ತಾ..?
ಹೆಸರು ಎಂದರೆ ಒಬ್ಬರ ಐಡೆಂಟಿಟಿಯಾಗಿರುತ್ತದೆ. ಹೆಸರಿಗೆ ಸಾಕಷ್ಟು ಮಹತ್ವವೂ ಇದೆ. ಒಂದು ಹೆಸರನ್ನು ಇಡಬೇಕೆಂದರೆ ಸಾಕಷ್ಟು ವಿಚಾರ ಮಾಡುವುದುಂಟು. ಹುಡುಕಾಟವೂ ಅಷ್ಟೇ. ಅನೇಕರ ಬಳಿ ಕೇಳಿ, ಸಲಹೆಗಳನ್ನು ಪಡೆದೂ ಇಡಲಾಗುತ್ತದೆ. ಅಲ್ಲದೆ, ಕೆಲವು ಅಕ್ಷರಗಳಿಂದ ಶುರುವಾಗುವ ಹೆಸರುಗಳ ವ್ಯಕ್ತಿಗಳು ಬಹಳ ಶಕ್ತಿಶಾಲಿಗಳು. “ಎಸ್” ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರ ಬಗ್ಗೆ ತಿಳಿದುಕೊಳ್ಳೋಣ.
ಸಮಾಜದಲ್ಲಿ (Society) ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ. ಒಬ್ಬರು ತೀರಾ ಮಂದಮತಿಗಳಾಗಿದ್ದರೆ, ಮತ್ತೆ ಕೆಲವರು ಕುಶಾಗ್ರಮತಿಯರು. ತುಂಬಾ ಚುರುಕಾಗಿ (Smarter ) ಕೆಲಸ (Work), ಕಾರ್ಯಗಳನ್ನು ಮಾಡಿ ನಿರ್ವಹಿಸಿ ಜನಮೆಚ್ಚುಗೆ (Popular appreciation) ಗಳಿಸಿಬಿಡುತ್ತಾರೆ. ತಮ್ಮನ್ನೂ ತಮ್ಮವರನ್ನೂ ತುಂಬಾ ಪ್ರೀತಿಸುವ (Love) ಗುಣವನ್ನೂ ಹೊಂದಿರುತ್ತಾರೆ. ಜೊತೆಗೆ ಇಂಥವರನ್ನು ಎಲ್ಲರೂ ಇಷ್ಟ (Like) ಪಡುತ್ತಾರೆ. ಇವರ ಇಂತಹ ಸ್ವಭಾವಗಳು (Nature) ಹುಟ್ಟುತ್ತಲೇ ಬಂದಿರಬಹುದು. ಆದರೆ, ಅದಕ್ಕೆ ಅವರ ಹೆಸರಿನ ಕೊಡುಗೆಯೂ ಅಷ್ಟೇ ಪ್ರಮುಖವಾಗಿದೆ. ಅಂದರೆ ಒಂದೊಂದು ಪದಗಳಿಂದ ಶುರುವಾಗುವ ಹೆಸರಿನವರ ಗುಣ-ಸ್ವಭಾವಗಳು ಬೇರೆ ಬೇರೆಯಾಗಿರುತ್ತವೆ. ಹಾಗೆಯೇ ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಕೆಲವು ಹೆಸರಿನಿಂದ ಪ್ರಾರಂಭವಾಗುವ ಹುಡುಗಿಯರಿಗೆ ಲಕ್ಷ್ಮಿ ಮಾತೆಯ (Goddess Laxmi) ಆಶೀರ್ವಾದವೂ ಹಾಗೆಯೇ ಇರುತ್ತದೆ. ಇವರಿಗೆ ಎಂದೂ ಹಣದ (Money) ಕೊರತೆಯೂ (Deficiency) ಕಾಡುವುದಿಲ್ಲ. ಜೊತೆಗೆ ಇವರು ತುಂಬಾ ಮಹತ್ವಾಕಾಂಕ್ಷಿಗಳೂ ಆಗಿರುತ್ತಾರಂತೆ. ಜ್ಯೋತಿಷ್ಯದ ಅನುಸಾರ ವ್ಯಕ್ತಿಯ (Person) ಹೆಸರು ಅವರ ಜೀವನದ (life) ಮೇಲೆ ವಿಶೇಷ (Special) ಪರಿಣಾಮವನ್ನು ಬೀರುತ್ತದೆ. ಹೆಸರಿನ (Name) ಮೊದಲ ಅಕ್ಷರದ ಮೂಲಕ ಆ ವ್ಯಕ್ತಿಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ನಾವು ಅರಿತುಕೊಳ್ಳಬಹುದಾಗಿದೆ. ಇನ್ನು ಹೆಣ್ಣುಮಕ್ಕಳ (Girls) ಹೆಸರಿನಲ್ಲಿಯೂ ಸಹ ಇಂತಹ ಸಾಕಷ್ಟು ವಿಚಾರಗಳಿದ್ದು, ಅವುಗಳ ಬಗ್ಗೆ ತಿಳಿದುಕೊಳ್ಳೋಣ.
“ಎಸ್” ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರು ಬಿಂದಾಸ್ ಸ್ವಭಾವವನ್ನು ಹೊಂದಿದವರಾಗಿದ್ದಾರೆ. ಇವರು ಶಾಂತ (Calm) ಸ್ವಭಾವದವರಾಗಿದ್ದು, ಹೆಚ್ಚು ತಾಳ್ಮೆಯನ್ನು (Patience) ಹೊಂದಿದವರಾಗಿದ್ದಾರೆ. ಇವರು ಸ್ನೇಹ (Friendship) ಹಾಗೂ ರಕ್ತಸಂಬಂಧಕ್ಕೆ ಬಹಳ ಒತ್ತು ನೀಡುವುದಲ್ಲದೆ, ಅದನ್ನು ಕಾಪಾಡಿಕೊಳ್ಳುವಲ್ಲಿ ನಿರಂತರ ಶ್ರಮವನ್ನು ಹಾಕುತ್ತಾರೆ. ಸದಾ ಉಲ್ಲಾಸಭರಿತರಾಗಿರುವ (Exhilaration) ಇವರು ಕ್ರಿಯಾಶೀಲರು (Active). ಯಾವುದೇ ಕೆಲಸ ಇರಲಿ ಶ್ರಮ ಹಾಕಿ ದುಡಿಯುತ್ತಾರೆ. ಸಮಾಜದಲ್ಲಿ ಉತ್ತಮ ಹೆಸರನ್ನು ಗಳಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸುತ್ತಾರೆ.
ಇದನ್ನು ಓದಿ: A, K, P, R ನಿಂದ ಶುರುವಾಗೋ ಹೆಸರಿನ ಹುಡುಗರು ತುಂಬಾ ಕೇರಿಂಗ್..!
ಮುಕ್ತ ಮನಸ್ಸಿನವರು
“ಎಸ್” (S) ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರು ನಿರ್ಭೀತ (Fearless) ಸ್ವಭಾವದವರಾಗಿದ್ದು, ಸಾಕಷ್ಟು ಧೈರ್ಯವನ್ನು (Courage) ಹೊಂದಿದವರಾಗಿದ್ದಾರೆ. ಅವರು ವಿಷಯಜ್ಞಾನಿಗಳಾಗಿದ್ದು, ಇವರ ಜೊತೆಗೆ ಯಾರೇ ಮಾತನಾಡಿದರೂ ಬಹುಬೇಗ ಅವರತ್ತ ಆಕರ್ಷಿತರಾಗುತ್ತಾರೆ. ಇವರ ಮಾತುಗಳು ಯಾಂತ್ರಿಕವಾಗಿರದೇ ಹೃದಯದಾಳದಿಂದ (Heart) ಬರುತ್ತದೆ. ಮುಕ್ತ ಮನಸ್ಸಿನವರಾದ ಇವರು, ಶಾಂತ ಮನಸ್ಥಿತಿಯನ್ನು ಹೆಚ್ಚು ಬಯಸುತ್ತಾರೆ. ಆದರೆ, ಇವರು ಕೋಪಗೊಂಡಾಗ ಯಾರ ಮಾತನ್ನೂ ಕೇಳುವುದಿಲ್ಲ. ಚಿಂತನಶೀಲರಾಗಿದ್ದು, ಏನನ್ನೂ ಮಾಡುವ ಸಾಧಿಸುವ ಛಲವನ್ನು ಹೊಂದಿದ್ದಾರೆ.
ಸ್ವಲ್ಪ ಡಾಮಿನೇಟ್ (Domination)
ಅವರ ಪ್ರೀತಿಯ ಜೀವನವೂ ಉತ್ತಮವಾಗಿದ್ದು, ಸಂಗಾತಿಯಾದವರನ್ನು (Partner) ಅಪಾರವಾಗಿ ಪ್ರೀತಿಸುವ ಗುಣವನ್ನು ಹೊಂದಿರುತ್ತಾರೆ. ಸಂಬಂಧದ ಬಗ್ಗೆಯೂ ಬಹಳ ಪ್ರಾಮುಖ್ಯತೆಯುನ್ನು (Importance) ಕೊಡುವ ಇವರು ಪ್ರೀತಿಪಾತ್ರರೊಂದಿಗೆ ಪ್ರಾಮಾಣಿಕತೆಯನ್ನು (Honesty) ಉಳಿಸಿಕೊಂಡಿದ್ದಾರೆ. ಆದರೆ, ಸ್ವಲ್ಪ ಡಾಮಿನೇಟಿಂಗ್ ಸ್ವಭಾವ ಇವರದ್ದಾಗಿರುತ್ತದೆ.
ಇದನ್ನು ಓದಿ: ಈ ದಿನ ಹುಟ್ಟಿದ ಹುಡುಗಿಯರಿಂದ ಗಂಡಂದಿರಿಗೆ ಅದೃಷ್ಟ..!
ಲಕ್ಷ್ಮೀ ಮಾತೆಯ ಆಶೀರ್ವಾದ
ಈ ಹೆಣ್ಣು ಮಕ್ಕಳು ಲಕ್ಷ್ಮೀ ಮಾತೆಯ ಆಶೀರ್ವಾದವನ್ನು ಹೊಂದಿರುತ್ತಾರೆ. ಹೀಗಾಗಿ ಇವರ ಕೈಯಲ್ಲಿ ಸದಾ ಕಾಂಚಾಣ ಓಡಾಡುತ್ತಿರುತ್ತದೆ. ಹಣದ ಕೊರತೆಯು ಇವರಿಗೆ ಎಂದೂ ಆಗದು. ಆದರೆ, ಬಹಳ ಮಹತ್ವಾಕಾಂಕ್ಷೆಯುಳ್ಳವರಾಗಿರುವ (Ambition) ಇವರು ಶ್ರಮಪಟ್ಟು ಕೆಲಸ ಮಾಡುತ್ತಾರೆ.
ಕಾರ್ಯಸಾಧಕರು ಇವರು
ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ (Good) ಸ್ಥಾನವನ್ನು ಏರುತ್ತಾರೆ. ಯಾವುದೇ ಕೆಲಸ ಕಾರ್ಯಗಳು ಇರಲಿ, ಅದರ ಯಶಸ್ಸಿಗೆ ಕೈಮೀರಿ ಶ್ರಮಿಸುತ್ತಾರೆ. ಈ ಹುಡುಗಿಯರ ಮಾತೇ (Talk) ಬಲು ಚಂದ. ಇವರು ತಮ್ಮ ಮಾತುಗಳಿಂದ ಯಾರ ಹೃದಯವನ್ನು ಬೇಕಿದ್ದರೂ ಲೂಟಿ (Looting) ಹೊಡೆದುಬಿಡುತ್ತಾರೆ. ತಮ್ಮವರು ಎಂದು ಇವರು ಒಂದು ಬಾರಿ ಫಿಕ್ಸ್ ಆದರೆ ಮುಗಿಯಿತು. ಅವರೊಂದಿಗೆ ವಿಶೇಷ ಬಾಂಧವ್ಯವನ್ನು (Attachment) ಹೊಂದುತ್ತಾರೆ.
ಬಹಳ ಪ್ರಾಮಾಣಿಕರು
ಇವರು ತುಂಬಾ ಪ್ರಾಮಾಣಿಕರಾಗಿದ್ದು, ಎಲ್ಲ ಕೆಲಸಗಳನ್ನು ಜವಾಬ್ದಾರಿಯಿಂದ (Responsibility) ನಿರ್ವಹಣೆ ಮಾಡುತ್ತಾರೆ. ಈ ಹೆಸರಿನ ಹುಡುಗಿಯರು ಯಾರಿಗೂ ಮೋಸ (Cheating) ಮಾಡುವುದಿಲ್ಲ. ಅಲ್ಲದೆ, ಎಲ್ಲ ವಿಷಯದಲ್ಲೂ ಪರಿಪೂರ್ಣತೆಯನ್ನು (Perfection) ಇಷ್ಟಪಡುತ್ತಾರೆ.