Asianet Suvarna News Asianet Suvarna News

Zodiac Sign and Character: ಈ 4 ರಾಶಿಚಕ್ರದವರು ಹಣ ಉಳಿಸುವಲ್ಲಿ ನಿಸ್ಸೀಮರು..!

ಜೀವನದಲ್ಲಿ ಸುಖ-ಸಂತೋಷ ಇರಬೇಕಾದರೆ ಅಗತ್ಯಕ್ಕೆ ತಕ್ಕಷ್ಟು ಹಣವೂ ಇರಬೇಕಾಗುತ್ತದೆ. ಆದರೆ, ಕೆಲವರು ಎಷ್ಟೇ ಪ್ರಯತ್ನಪಟ್ಟರೂ ಹಣ ಉಳಿಸಲು ತೀರಾ ಕಷ್ಟಪಡುತ್ತಾರೆ. ಮತ್ತೆ ಕೆಲವರು ತುಂಬಾ ಯೋಜನಾಬದ್ಧರಾಗಿ ಹಣವನ್ನು ಉಳಿತಾಯ ಮಾಡಿಕೊಂಡು ಬರುತ್ತಾರೆ. ಈ ನಾಲ್ಕು ರಾಶಿಯವರು ಹಣವನ್ನು ಉಳಿಸುವಲ್ಲಿ ನಿಸ್ಸೀಮರಿದ್ದು, ಯಾವ ರಾಶಿಯವರು ಎಂಬ ಬಗ್ಗೆ ತಿಳಿಯೋಣ.

Libra Taurus Virgo born Zodiac Signpeople good at saving money
Author
Bangalore, First Published Nov 24, 2021, 7:50 AM IST

ಒಬ್ಬೊಬ್ಬರು ಒಂದೊಂದು ಥರ ಎಂಬುದು ಗೊತ್ತಿರುವ ವಿಚಾರ. ಕಾರಣ, ಐದೂ (Five) ಬೆರಳುಗಳು (Fingers) ಹೇಗೆ ಒಂದೇ ರೀತಿ ಇರುವುದಿಲ್ಲವೋ, ಹಾಗೆಯೇ ಮನುಷ್ಯನ ಗುಣ (Property) – ಸ್ವಭಾವಗಳೂ (Nature) ಸಹ. ಒಬ್ಬ ವ್ಯಕ್ತಿ ಇದ್ದ ಹಾಗೆ ಇನ್ನೊಬ್ಬ ಇರುವುದು ಬಹಳ ಕಷ್ಟ. ಇನ್ನು ಒಬ್ಬ ಬುದ್ಧಿವಂತನಿದ್ದರೆ (Clever), ಮತ್ತೊಬ್ಬ ದಡ್ಡ (Stupid), ಇನ್ನೊಬ್ಬ ಹೃದಯವಂತ (Hearty), ಸಿರಿವಂತ (Rich), ಬಡವ (Poor) ಹೀಗೆ ನಾನಾ ವರ್ಗದವರು ನಮಗೆ ಸಿಗುತ್ತಾರೆ. ಇನ್ನು ದುಡ್ಡು (Money) ಮಾಡಬೇಕು ಎಂಬ ಹಂಬಲ ಬಹುತೇಕ ಎಲ್ಲ ಮಂದಿಗೂ ಇರುತ್ತದೆ. ಇದಕ್ಕಾಗಿ ಸಾಕಷ್ಟು ಶ್ರಮವನ್ನೂ ಹಾಕುತ್ತಾರೆ. ಇಷ್ಟಾದರೂ ಹಣವನ್ನು ಉಳಿಸಲು ಕೆಲವರಿಗೆ ಸಾಧ್ಯವಾಗುವುದೇ ಇಲ್ಲ. ಆದರೆ, ಮತ್ತೆ ಕೆಲವರು ದುಡ್ಡನ್ನು ಸೇವಿಂಗ್ (Saving) ಮಾಡುವುದರಲ್ಲಿ ನಿಸ್ಸೀಮರು. ಆದರೆ, ಹೀಗೆ ದುಡ್ಡನ್ನು ಉಳಿಸುವ ಗುಣ, ಸ್ವಭಾವಗಳು ರಾಶಿಚಕ್ರಗಳ (Zodiac) ಅನುಸಾರ ವ್ಯಕ್ತಿಗಳಿಗೆ ಬಂದಿರುತ್ತದೆ. ಪ್ರತಿಯೊಂದು ರಾಶಿಚಕ್ರದ ಜನರು ಕೆಲವು ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಅದು ಅವರನ್ನು ಇತರರಿಗಿಂತ ಭಿನ್ನವಾಗಿಸುತ್ತದೆ. ಕೆಲವು ರಾಶಿಯವರು ಕಡಿಮೆ (Less) ಹಣ ಸಂಪಾದಿಸಲಿ, ಹೆಚ್ಚು (More) ಹಣವನ್ನು ಸಂಪಾದಿಸಲಿ (Earn) ಅವರು ಉಳಿತಾಯ ಮಾಡೇ ಮಾಡುತ್ತಾರೆ. ಅಂಥ ಗುಣ ಹುಟ್ಟಿನಿಂದಲೇ (Born) ಬಂದಿರುತ್ತದೆ. ಈ ಕಾರಣದಿಂದ ಅವರಿಗೆ ಎಂದೂ ಹಣದ ಕೊರತೆಯಾಗುವುದಿಲ್ಲ. ಎಂಥಾ ಕೆಟ್ಟ ಪರಿಸ್ಥಿತಿ ಎದುರಾದರೂ ಹಣ ಇವರ ಕೈ ಸೇರುತ್ತದೆ. ಹಾಗಾದರೆ ಅಂಥಹ ರಾಶಿಚಕ್ರಗಳಾವುವು..? ಎಂಬ ಬಗ್ಗೆ ತಿಳಿದುಕೊಳ್ಳೋಣ.. 

ವೃಷಭ ರಾಶಿ (Taurus)
ಈ ರಾಶಿಚಕ್ರದ ಜನರಿಗೆ ಹಣದ ಕೊರತೆ ಎಂದೂ ಸಹ ಕಾಡುವುದಿಲ್ಲ. ಇವರು ಸಂಪದ್ಭರಿತ ಜೀವನವನ್ನು (Life) ನಡೆಸುತ್ತಾರೆ. ಸದಾ ಸುಖ ಸಂಪತ್ತು (Wealth) ಇವರ ಬಾಳಲ್ಲಿ ತುಂಬಿರುತ್ತದೆ. ಶ್ರಮಜೀವಿಗಳಾದ ಇವರು, ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆ ಮೂಲಕ ಜೀವನದಲ್ಲಿ ಸಾಕಷ್ಟು ಹಣ ಗಳಿಸುತ್ತಾರೆ. ಇವರಿಗೆ ಹಣದ ನಿರ್ವಹಣೆಯನ್ನು ಹೇಗೆ ಮಾಡಬೇಕು ಎಂಬುದು ಬಹಳ ಚೆನ್ನಾಗಿ ಗೊತ್ತಿದೆ. ವೃಥಾ ಖರ್ಚು ಮಾಡುವುದನ್ನು ಇವರು ಇಷ್ಟಪಡುವುದಿಲ್ಲ. ಈ ರಾಶಿ ಚಕ್ರದ ವ್ಯಕ್ತಿಗಳು ತಮಗೆ ಅಗತ್ಯ ಇರುವುದಕ್ಕಷ್ಟೇ ಹಣವನ್ನು ಖರ್ಚು ಮಾಡುತ್ತಾರೆ. ಅಲ್ಲದೆ, ದುಬಾರಿ (Expensive) ವಸ್ತುಗಳನ್ನು ಖರೀದಿಸಲು ಇಷ್ಟಪಡುವ ಇವರು, ತಮ್ಮ ಬಜೆಟ್ (Budget) ಮೀರುವವರಲ್ಲ. 

ತುಲಾ ರಾಶಿ (Libra)
ಈ ರಾಶಿಚಕ್ರದಲ್ಲಿ ಜನಿಸಿದವರು ಹಣವನ್ನು ಬಹಳವೇ ಉಳಿಸುತ್ತಾರೆ. ಇವರು ಯಾವುದೇ ಖರ್ಚುಗಳನ್ನು ಮಾಡಲಿ ಅದಕ್ಕೊಂದು ಲೆಕ್ಕ (Accounting) ಇಟ್ಟಿರುತ್ತಾರೆ. ತಾವು ಹಾಕಿಕೊಂಡ ಬಜೆಟ್ ಅನುಸಾರವೇ ಹಣವನ್ನು ಖರ್ಚು ಮಾಡುತ್ತಾರೆ. ಹಾಗಂತ ಇವರು ತಮಗೇನೂ ಕೊರತೆ (Deficiency) ಮಾಡಿಕೊಳ್ಳುವವರಲ್ಲ. ತಮ್ಮ ಎಂದಿನ ಹವ್ಯಾಸಗಳನ್ನು (Hobbies) ಮುಂದುವರಿಸುವ ಇವರು, ಭವಿಷ್ಯದ ಬಗ್ಗೆ ಯೋಚಿಸುವವರು. ಇದಕ್ಕಾಗಿ ಹಣವನ್ನು ಕೂಡಿಡುತ್ತಾರೆ. ಹೀಗಾಗಿ ಈ ರಾಶಿಯವರು ಹಣಕಾಸಿನ ತೊಂದರೆಗಳನ್ನು (Trouble) ಎದುರಿಸುವುದು ಬಹಳ ಅಪರೂಪ. 

ಇದನ್ನೂ ಓದಿ: Name and Personality: S ಅಕ್ಷರದಿಂದ ಸ್ಟಾರ್ಟ್ ಆಗೋ ಹುಡ್ಗೀರು ಹೇಗೆ ಗೊತ್ತಾ..?

ಕನ್ಯಾ ರಾಶಿ (Virgo)
ಈ ರಾಶಿಚಕ್ರದಲ್ಲಿ ಜನಿಸಿದವರು ತೀರಾ ಸರಳ (Simple) ಸ್ವಭಾವದವರಾಗಿದ್ದಾರೆ. ಇವರು ಪಕ್ಕಾ ಲೆಕ್ಕಾಚಾರವಂತರು. ತಮ್ಮ ಬ್ಯಾಂಕ್ (Bank) ಬ್ಯಾಲೆನ್ಸ್ (Balance)  ಅನ್ನು ಬಹಳ ಚೆನ್ನಾಗಿಯೇ ಬ್ಯಾಲೆನ್ಸ್ ಮಾಡುವ ಇವರು, ಸದಾ ಹಣವನ್ನು ಕೂಡಿಟ್ಟಿರುತ್ತಾರೆ. ತಮಗೆ ಅಗತ್ಯವಿರುವ ವಿಷಯಗಳಿಗೆ ಮಾತ್ರ ಹಣ ಖರ್ಚು ಮಾಡುವ ಇವರು, ಎಂದಿಗೂ ತಮ್ಮ ಬಜೆಟ್ ಮೀರುವವರಲ್ಲ. ಇವರ ಈ ವರ್ತನೆ ಕೆಲವೊಮ್ಮೆ ಕೆಲವರಿಗೆ ಕಿರಿಕಿರಿ (Irritation) ಆಗುವುದುಂಟು. ಅದಕ್ಕಾಗಿ ಇವರನ್ನು ಜಿಪುಣ ಎಂದೂ ಕರೆಯಬಹುದು. ಆದರೆ, ಇವರ ಲೆಕ್ಕಾಚಾರವೇ ಬೇರೆ ಇರುತ್ತದೆ. ತಮ್ಮ ಹಣವನ್ನು ಬಹಳ ಎಚ್ಚರಿಕೆಯಿಂದ ಖರ್ಚು ಮಾಡುತ್ತಾರೆ. 

ಇದನ್ನೂ ಓದಿ: Vaastu Tips: ಮದುವೆ ಲೇಟ್ ಆಗುತ್ತಿದ್ಯಾ? ಇಲ್ಲಿದೆ ಪರಿಹಾರ!

ಕುಂಭ ರಾಶಿ (Aquarius)
ಈ ರಾಶಿಚಕ್ರದವರು ತುಂಬಾ ಬುದ್ಧಿವಂತರು (Intelligent) ಹಾಗೂ ಗಂಭೀರ (Serious) ಸ್ವಭಾವದವರಾಗಿರುತ್ತಾರೆ. ಇವರಿಗೆ ಮುಂದಾಲೋಚನೆ ಬಹಳವೇ ಇರುತ್ತದೆ. ಸದಾ ಹೂಡಿಕೆ (Investment) ಬಗ್ಗೆ ಆಸಕ್ತಿಯನ್ನು (Interest) ಹೊಂದಿರುವ ಇವರು, ಯಾವುದರಲ್ಲಿ ಹೂಡಿಕೆ ಮಾಡಿದರೆ ಲಾಭ (profit) ಹೆಚ್ಚು, ರಿಸ್ಕ್ (Risk) ಕಡಿಮೆ ಎಂಬುದನ್ನು ಗಮನಿಸಿ ಮಾಡುತ್ತಾರೆ. ಅಲ್ಲದೆ, ಭವಿಷ್ಯದಲ್ಲಿ ಆಪತ್ಕಾಲ ಎದುರಾದರೆ ಎಂಬ ದೃಷ್ಟಿಯಿಂದ ಹಣವನ್ನು ಕೂಡಿಡುವ ಪರಿಪಾಠವನ್ನು ಬೆಳೆಸಿಕೊಂಡಿರುತ್ತಾರೆ. 

Follow Us:
Download App:
  • android
  • ios