Asianet Suvarna News Asianet Suvarna News

Haircut dream: ನಿಮ್ಮ ಕನಸಿನಲ್ಲಿ ತಲೆಗೂದಲು ಕತ್ತರಿಸೋ ದೃಶ್ಯ ಪದೇಪದೇ ಬರ್ತಿದೆಯಾ?

ನಿಮ್ಮ ತಲೆಕೂದಲನ್ನು ನೀವೇ ಕತ್ತರಿಸಿದಂತೆ, ಇನ್ಯಾರೋ ಕಟ್ ಮಾಡಿದಂತೆ, ಬೀಳುವ ಕನಸುಗಳು ಏನನ್ನು ಸೂಚಿಸುತ್ತವೆ ನಿಮಗೆ ಗೊತ್ತೇ?

 

 

How a dream of hair cutting can be interpreted and psychology of it
Author
Bengaluru, First Published Nov 12, 2021, 4:49 PM IST
  • Facebook
  • Twitter
  • Whatsapp

ತಲೆಕೂದಲನ್ನು ಕತ್ತರಿಸುವ ಕನಸು ನಿಮಗೆ ಆಗಾಗ ಬೀಳುತ್ತಿರಬಹುದು, ಅಥವಾ ಅಪರೂಪಕ್ಕೊಮ್ಮೆ ಬೀಳಬಹುದು. ಇದು ಯಾವಾಗಲೂ ಭಯಾನಕ ವಿಷಯಗಳನ್ನು ಸಂಕೇತಿಸುತ್ತದೆ ಎಂದು ಅರ್ಥವಲ್ಲ. ಕೇಶ ವಿನ್ಯಾಸಕರು ಅಥವಾ ಸಲೂನ್‌ನಲ್ಲಿ ಓಡಾಡುವವರಿಗೆ ಇದು ಸಾಮಾನ್ಯ ಕನಸು. ಆದರೆ ಸಂಬಂಧವಿಲ್ಲದ ಜನರಿಗೆ ಇದು ಬೀಳುವುದು ವಿಚಿತ್ರ. ನಿಮಗೆ ಅನೇಕ ರೀತಿಯಲ್ಲಿ ಈ ಕನಸು ಬೀಳಬಹುದು- ನಿಮ್ಮ ಕೂದಲನ್ನು ಬೇರೊಬ್ಬರು ಕತ್ತರಿಸುವ, ನೀವೇ ನಿಮ್ಮ ಕೂದಲನ್ನು ಕತ್ತರಿಸುವ, ನೀವು ಇನ್ನೊಬ್ಬರ ಕೂದಲನ್ನು ಕತ್ತರಿಸುವ, ಬೇರ್ಯಾರೋ ಇನ್ನೊಬ್ಬರ ತಲೆಕೂದಲು ಕತ್ತರಿಸುವ- ಹೀಗೆ. ಇದೆಲ್ಲಕ್ಕೂ ಬೇರೆ ಬೇರೆ ಅರ್ಥ. ಕೆಲವೊಮ್ಮೆ ಈ ಕನಸು ನೀವು ಇತ್ತೀಚೆಗೆ ಕೆಟ್ಟ ದಿನಗಳನ್ನು ಹೊಂದಿದ್ದೀರಿ ಎಂದು ಹೇಳುತ್ತದೆ. ನಿಮ್ಮ ಜೀವನದಲ್ಲಿ ನಡೆದ ಬದಲಾವಣೆಗಳಿಗೆ ಸಂಬಂಧಿಸಿರುತ್ತದೆ. ಈ ಕನಸುಗಳನ್ನು ಅರ್ಥೈಸುವಾಗ ನೀವು ನೋಡಿದ ಪ್ರತಿಯೊಂದು ವಿವರವನ್ನೂ ನೆನಪಿಟ್ಟುಕೊಳ್ಳಬೇಕು. ಇದು ನಿಮಗೆ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಇದರ ಅರ್ಥವೇನು? ಈ ಕನಸು ನಿಮ್ಮ ಪ್ರಸ್ತುತ ಜೀವನದ ಘಟನೆಗಳು ಮತ್ತು ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ.

ಕೂದಲು ಸ್ವತಃ ಪ್ರತಿಯೊಬ್ಬ ವ್ಯಕ್ತಿಯ ದೇಹದ ಸುಂದರ ಭಾಗವಾಗಿದೆ. ಒಳ್ಳೆಯ ತಲೆಕೂದಲನ್ನು ಸೌಂದರ್ಯದ ಉನ್ನತ ರೂಪವಾಗಿ ಪರಿಗಣಿಸಲಾಗುತ್ತದೆ. ತಲೆಕೂದಲಿನ ಕನಸು ಅಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಬಹಿರಂಗಪಡಿಸುತ್ತದೆ. ನೀವು ಸಾರ್ವಜನಿಕರ ಮುಂದೆ ನಿಮ್ಮನ್ನು ಹೇಗೆ ಕಾಣುತ್ತೀರಿ, ನೀವು ತೆಗೆದುಕೊಂಡ ನಿರ್ಧಾರಗಳು ಎಷ್ಟು ಗಟ್ಟಿ, ಅಥವಾ ನಿಮ್ಮ ಮಾನಸಿಕ ಪ್ರಬುದ್ಧತೆಯೇನು, ಎಂಬುದನ್ನೂ ಪ್ರತಿಬಿಂಬಿಸುತ್ತದೆ. ತಲೆಕೂದಲು ಕತ್ತರಿಸುವ ಚಿತ್ರ, ನೀವು ಹಿಂತಿರುಗಲು ಸಾಧ್ಯವಿಲ್ಲದ ಒಂದು ಬದಲಾವಣೆಯನ್ನು ಇತ್ತೀಚೆಗೆ ಕಂಡಿದ್ದೀರಿ ಎಂಬ ದ್ಯೋತಕ ಇರಬಹುದು.

ನಿಮ್ಮ ಹೇರ್‌ಕಟ್‌ ಕನಸು
ನಿಮ್ಮ ತಲೆಕೂದಲನ್ನು ನೀವು ಕತ್ತರಿಸುವುದು ಉತ್ತೇಜಕ ಮತ್ತು ಪ್ರಬುದ್ಧ ಕನಸು. ಈ ಕನಸು ನೀವು ಒಂದು ಪ್ರಮುಖ ನಿರ್ಧಾರವನ್ನು ಮಾಡಿದ್ದೀರಿ ಮತ್ತು ಅದನ್ನು ಸಂಪೂರ್ಣವಾಗಿ ಮನವರಿಕೆ ಮಾಡಿಕೊಂಡಿದ್ದೀರಿ ಎಂದು ಸೂಚಿಸುತ್ತದೆ. ಇದು ನಿಮಗೆ ಬಹಳ ಸಮಯ ತೆಗೆದುಕೊಂಡ ಪ್ರಕ್ರಿಯೆ. ಆದರೆ ನಿಮಗೆ ಯಾವುದು ಉತ್ತಮ ಎಂದು ನೀವು ತೀರ್ಮಾನಿಸಿದ್ದೀರಿ. ಅಂತೆಯೇ, ಈ ಕನಸು ನೀವು ಉತ್ತಮವಾಗಿ ಬದುಕಲು ಬದಲಾಗಬೇಕು ಎಂಬುದನ್ನೂ ನೆನಪಿಸುತ್ತದೆ. ನಿಮ್ಮೊಳಗೆ ಏನೋ ಇದೆ, ಅದು ಏನನ್ನೋ ಬದಲಾಯಿಸಲು ಹೇಳುತ್ತಿದೆ. ಹೊಸ ಮಾರ್ಗವನ್ನು ರೂಢಿಸಿಕೊಳ್ಳಲು ಇದು ಉತ್ತಮ ಸಮಯ. ಆದಾಗ್ಯೂ, ನೀವು ಯಾವ ಆಯ್ಕೆಗಳನ್ನು ಮಾಡುತ್ತೀರಿ ಎಂಬುದನ್ನು ಮೌಲ್ಯಮಾಪನ ಮಾಡಲು ಇದು ಸಹಾಯ ಮಾಡುತ್ತದೆ.

ಕೆಟ್ಟ ಕ್ಷೌರದ ಕನಸು
ಈ ಪರಿಸ್ಥಿತಿ ನಿಮಗೆ ಕನಸಿನಲ್ಲಿ ಬಂದಾಗ, ಅದು ನಿಜ ಜೀವನದಲ್ಲಿ ಸಂಭವಿಸಿದಂತೆಯೇ. ಆ ಸ್ಥಿತಿಯು ನಿಮ್ಮಲ್ಲಿ ಜಗತ್ತಿಗೆ ಮುಂದೆ ತೋರಿಸಲಾಗದ ಅವಮಾನ ಮತ್ತು ಹೇಡಿತನದ ಭಾವನೆಗಳಿವೆ ಎನ್ನುತ್ತದೆ. ಕಳೆದ ಕೆಲವು ದಿನಗಳಲ್ಲಿ ನೀವು ದುರದೃಷ್ಟಕರ ಪರಿಸ್ಥಿತಿಯನ್ನು ಎದುರಿಸಿರಬಹುದು. ಆ ಬಗ್ಗೆ ನೀವು ನಿಮ್ಮೊಳಗೆ ಕೆಟ್ಟ ಭಾವನೆ ಹೊಂದಿದ್ದೀರಿ ಮತ್ತು ನಿಮ್ಮ ಮುಖವನ್ನು ಮರೆಮಾಡಲು ಬಯಸುತ್ತಿದ್ದೀರಿ. ನೀವು ಯೋಜಿಸಿದ್ದು ನೀವು ನಿರೀಕ್ಷಿಸಿದಂತೆ ಕೆಲಸ ಮಾಡಲಿಲ್ಲ ಎಂದು ಇದು ಸೂಚಿಸುತ್ತದೆ.

ಕನಸಿನಲ್ಲಿ ಕೆಟ್ಟ ಹೇರ್‌ಕಟ್, ನಿಮ್ಮ ಜೀವನದಲ್ಲಿ ಭದ್ರತೆಯ ಕೊರತೆಯಿದೆ ಎಂದು ಬಹಿರಂಗಪಡಿಸುತ್ತದೆ. ಕೂದಲು ನಿಮ್ಮ ಸ್ವಾಭಿಮಾನದ ಭಾಗವಾಗಿರುವುದರಿಂದ ನಿಮ್ಮ ದೇಹದ ಬಗ್ಗೆ ನೀವು ಹೇಗೆ ಭಾವಿಸುತ್ತೀರಿ ಎಂಬುದರ ಪ್ರತಿಬಿಂಬವೂ ಆಗಿದೆ. ನಾನು ಸುಂದರ ವ್ಯಕ್ತಿ ಎಂಬ ಭಾವನೆಯನ್ನು ಕಳೆದುಕೊಂಡಿರಬಹುದು, ನಿಮ್ಮ ದೇಹತೂಕ ಹೆಚ್ಚಾಗಿರಬಹುದು ಅಥವಾ ಕಳೆದುಕೊಂಡಿರಬಹುದು, ಏನು ಮಾಡಬೇಕೆಂದು ನಿಮಗೆ ತಿಳಿಯುತ್ತಿಲ್ಲ.

ನೀವು ನಿದ್ದೆ ಮಾಡುವಾಗ ಅಥವಾ ನೀವು ಎದ್ದಾಗ ನಿಮಗೆ ಹೇಗೆ ಅನಿಸುತ್ತದೆ ಎಂಬುದರ ಬಗ್ಗೆ ಗಮನ ಕೊಡಿ. ನಿಮಗೆ ಕಿರಿಕಿರಿಯೆನಿಸುತ್ತಿದ್ದರೆ, ಪರಿಹಾರವನ್ನು ಕಂಡುಕೊಳ್ಳಬೇಕು ಎನಿಸುತ್ತಿದ್ದರೆ, ಶಾಂತವಾಗಿರಿ. ನೀವು ಏನನ್ನು ಅನುಭವಿಸುತ್ತಿದ್ದೀರೋ ಆ ಸನ್ನಿವೇಶ ಸುಧಾರಿಸಲಿದೆ.

ದ್ರೌಪದಿಗೆ ಐದು ಜನ ಗಂಡಂದಿರು ಅನ್ನೋದರ ಅರ್ಥವೇನು?

ತುಂಬಾ ಚಿಕ್ಕ ಹೇರ್‌ಕಟ್‌ ಕನಸು
ಕೂದಲು ಶಕ್ತಿ ಮತ್ತು ಧೈರ್ಯದ ಸಂಕೇತವಾಗಿದೆ. ಆದ್ದರಿಂದ, ಕನಸಿನಲ್ಲಿ, ನಿಮ್ಮ ಕೂದಲು ತುಂಬಾ ಉದ್ದವಾಗಿದ್ದು ನಂತರ ನೀವು ಅದನ್ನು ಕತ್ತರಿಸಿದರೆ, ನೀವು ಕೆಟ್ಟ ಕಿರಿಕಿರಿ ಅನುಭವಿಸುತ್ತೀರಿ. ಇದು ಎಚ್ಚರಿಕೆಯ ಸಂಕೇತವಾಗಿರಬಹುದು. ಈ ಕನಸು ನಿಮ್ಮ ಹೆಮ್ಮೆಯನ್ನು ನೋಯಿಸಿದೆ ಮತ್ತು ನೀವು ಅದನ್ನು ದ್ವೇಷಿಸುತ್ತೀರಿ. ಏನೋ ಸಂಭವಿಸಿದೆ; ಇದು ನಿಮ್ಮ ವಿಷಯಗಳನ್ನು ಮರುಚಿಂತನೆ ಮಾಡುವಂತೆ ಮಾಡುತ್ತದೆ. ನೀವು ಈ ಪರಿಸ್ಥಿತಿಯನ್ನು ಇಷ್ಟಪಡುವುದಿಲ್ಲ, ಆದ್ದರಿಂದ ನೀವು ದುರ್ಬಲರಾಗುತ್ತೀರಿ.

ಮತ್ತೊಂದೆಡೆ, ನಿಮ್ಮ ಉದ್ದನೆಯ ಕೂದಲನ್ನು ಕತ್ತರಿಸುವುದನ್ನು ನೀವು ನೋಡಿದರೆ, ಅದು ನಿಮಗೆ ಪರಿಹಾರವನ್ನು ನೀಡುತ್ತದೆ. ಆಗ ಆ ಕನಸು ಒಳ್ಳೆಯ ಸಂಕೇತ. ನೀವು ಶೀಘ್ರದಲ್ಲೇ ತೂಕವನ್ನು ಕಳೆದುಕೊಳ್ಳುತ್ತೀರಿ ಎಂದು ಇದು ತೋರಿಸುತ್ತದೆ. ನೀವು ಪರಿಗಣಿಸುತ್ತಿರುವ ನಿರ್ಧಾರವು ಉತ್ತಮವಾಗಿದೆ ಎಂದರ್ಥ.

ಕನಸಿನಲ್ಲಿ ಸಣ್ಣ ಕೂದಲು ಅನಿರೀಕ್ಷಿತ ಮತ್ತು ಹೊಸ ವಿಷಯಗಳಿಗೆ ಹೊಂದಿಕೊಳ್ಳುವ ನಿಮ್ಮ ಸಾಮರ್ಥ್ಯಕ್ಕೆ ಸಂಬಂಧಿಸಿದೆ. ಇದು ಹತ್ತಿರದಲ್ಲಿರುವ ಭವಿಷ್ಯದ ಘಟನೆಗಳ ಬಗ್ಗೆ ನಿಮಗೆ ತೋರಿಸುತ್ತದೆ. ಹೊಸ ಕಾರ್ಯಗಳು ನಿಮ್ಮನ್ನು ಉತ್ತಮಗೊಳಿಸುತ್ತವೆ. ನೀವು ಮಾಡಲಿರುವ ಪ್ರಯಾಣ ಅಥವಾ ಸಾಹಸವು ಪ್ರಯೋಜನಕಾರಿಯಾಗಿದೆ ಮತ್ತು ನೀವು ಹಿಂದೆಂದೂ ನೋಡಿರದ ವಿಷಯಗಳನ್ನು ನೀವು ನೋಡುತ್ತೀರಿ ಎಂದರ್ಥ.

ನಿಮ್ಮಿಷ್ಟದ ಬಣ್ಣದಲ್ಲಿದೆ ವ್ಯಕ್ತಿತ್ವದ ರಹಸ್ಯ !!

ಯಾರಾದರೂ ನಿಮ್ಮ ಹೇರ್‌ಕಟ್ ಮಾಡಿದರೆ
ಜನರು ತಲೆಕೂದಲನ್ನು ಸೌಂದರ್ಯ ಮತ್ತು ಪರಿಣತಿಯ ಸಂಕೇತವೆಂದು ಗುರುತಿಸುತ್ತಾರೆ. ನೀವು ಸಾಕಷ್ಟು ಉದ್ದವಾದ ಕೂದಲನ್ನು ಹೊಂದಿದ್ದರೆ ಅದು ನಿಮ್ಮ ಇಷ್ಟ. ಆದರೆ ಇನ್ಯಾರಾದರೂ ಅದನ್ನು ಕತ್ತರಿಸಿದರೆ, ಮುಂಬರಲಿರುವ ಪರಿಸ್ಥಿತಿಯೊಂದಿಗೆ ನೀವು ಆರಾಮದಾಯಕ ಮತ್ತು ಸಂತೋಷವಾಗಿರುವಿರಿ ಎಂದು ತೋರಿಸುವ ಮಾರ್ಗವಾಗಿದೆ. ಮುಂದಿನ ದಿನಗಳಲ್ಲಿ ಏನಾದರೂ ಸಂಭವಿಸಿದರೆ, ಇತರರು ನಿಮಗಾಗಿ ನಿರ್ಧಾರಗಳನ್ನು ತೆಗೆದುಕೊಂಡರೆ, ನೀವು ಅದನ್ನು ಇಷ್ಟಪಡದೇ ಇರಬಹುದು. ಆದರೆ ಅವರು ನಿಧಾನವಾಗಿ ನಿಮ್ಮ ನಿಯಂತ್ರಣವನ್ನು ಪಡೆಯುತ್ತಾರೆ.

ನೀವು ಚಿಂತೆ ಮಾಡುವಂಥದ್ದೇನೂ ನಡೆಯದೇ ಹೋದರೂ, ನಿಮ್ಮ ಹಿಡಿತದಲ್ಲಿ ಕೆಲವು ಸಂಗತಿಗಳು ಉಳಿಯುವುದಿಲ್ಲ ಎಂದು ಈ ಕನಸು ತೋರಿಸುತ್ತದೆ. ನಿಮ್ಮ ಸಮಯ ಈಗ ಸಾಕಷ್ಟು ಉತ್ತಮವಾಗಿಲ್ಲದೆ ಇರಬಹುದು. ನೀವು ಕೆಳಮಟ್ಟಕ್ಕೆ ತಲುಪಿದ್ದೀರಿ ಎಂದು ನೀವು ಭಾವಿಸಿರಬಹುದು. ಆದರೂ ಈ ಕನಸು ನಿಮಗೆ ಬೇಕಾದುದನ್ನು ಪಡೆಯಲು ನಿಮ್ಮನ್ನು ಹೋರಾಡುವಂತೆ ಆಹ್ವಾನಿಸುತ್ತದೆ.

ಈ ಜನ್ಮರಾಶಿಯಲ್ಲಿ ಜನಿಸಿದವರು ನಿಮ್ಮನ್ನು ಬಿಟ್ಟುಬಿಡಲು ಹೇಸುವುದಿಲ್ಲ!

Follow Us:
Download App:
  • android
  • ios