Asianet Suvarna News Asianet Suvarna News

Varshada Bhavishya 2022: ಯಾರಿಗಿದೆ ದೋಷ, ಯಾವ ಪೂಜೆ ಮಾಡಿದರೊಳಿತು?

ಹೊಸ ವರ್ಷ ಬರುತ್ತಿದೆ. ಹೊಸತೇನು ತರುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ, ಮನುಷ್ಯ ಬದುಕುವುದೇ ಭರವಸೆಗಳು ಈಡೇರುವ ಬಯಕೆಯಲ್ಲಿ ಅಲ್ಲವೇ? ಮದುವೆಯಾಗದವರಿಗೆ ದಾಂಪತ್ಯಕ್ಕೆ ಕಾಲಿಡುವ ಆಸೆ, ಮದುವೆಯಾದವರಿಗೆ ಮಕ್ಕಳು ಬೇಕೆಂಬ ಆಸೆ, ಮದ್ಯ ವಯಸ್ಕರಿಗೆ ಆಸ್ತಿ, ಮನೆ ಮಾಡಬೇಕೆಂಬ ಕನಸು, ಗುರಿ. ಒಟ್ಟಿನಲ್ಲಿ ಕೊರೋನಾ ಕಾಟದಿಂದ ಅನುಭವಿಸದ ಪ್ರತಿಯೊಬ್ಬರಿಗೂ ಈ ವರ್ಷ ಸಹಜವಾಗಿಯೇ ರೋಗದಿಂದ ಮುಕ್ತರಾಗುವ ನಿರೀಕ್ಷೆ. ಯಾವ ರಾಶಿಯವರ ಭವಿಷ್ಯ ಹೇಗಿದೆ? ದೋಷಗಳಿದ್ದರೆ ಪರಿಹಾರವೇನು? ಇಲ್ಲಿವೆ ಪ್ರಾಜ್ಞರ ಸಲಹೆ. 

Horoscope 2022 Astrological predictions for the new year of all zodiac signs
Author
Bengaluru, First Published Dec 31, 2021, 9:54 AM IST
  • Facebook
  • Twitter
  • Whatsapp

- ಶ್ರೀಕಂಠ ಶಾಸ್ತ್ರಿಗಳು, ಸುವರ್ಣ ನ್ಯೂಸ್ ಜ್ಯೋತಿಷಿಗಳು

ನಾವೀಗ ಪ್ಲವ ನಾಮ ಸಂವತ್ಸರದಲ್ಲಿದ್ದೇವೆ. ನಮ್ಮ ಹೈಂದವೀ ಧರ್ಮದ ಹೊಸ ವರ್ಷಕ್ಕೆ ಇನ್ನೂ ಮೂರು ತಿಂಗಳು ಬಾಕಿ ಇವೆ. ಆದರೂ ಹೊಸ ವರ್ಷ ಬಂದಿದೆ. ಇದು ಕ್ರೆöÊಸ್ತ ವರ್ಷಾರಂಭದ ದಿನ. ಇದನ್ನೂ ನಾವು ಪ್ರೀತಿಯಿಮದ ಸ್ವಾಗತಿಸೋಣ. ಈ ಸಂದರ್ಭದಲ್ಲಿ ನಮ್ಮ ದಿನಗಳು ಹೇಗಿರಲಿವೆ..? ನಮ್ಮ ಮೇಲೆ ಗ್ರಹಗಳ ಪ್ರಾಭಾವ ಹೇಗಿರಲಿದೆ..? ನಾವು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು ಇವುಗಳನ್ನ ಸ್ಥೂಲವಾಗಿ ಗಮನಿಸುವ ಪುಟ್ಟ ಪ್ರಯತ್ನವಿದು. ಜನವರಿಯಿಂದ ಮಾರ್ಚ್ ವರೆಗೆ ನಮ್ಮ ರಾಶಿ ಫಲಗಳು ಏನು ಹೇಳುತ್ತಿವೆ ಎಂಬುದನ್ನು ತಿಳಿದುಕೊಳ್ಳೋಣ. 

ಮೇಷ (Aries)  - ದೈವಾನುಕೂಲ-ಗುರುಬಲದಿಂದ ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ, ಕಾರ್ಯದಲ್ಲಿ ದಕ್ಷತೆ, ವೃತ್ತಿಯಲ್ಲಿ ಶುಭಫಲವನ್ನು ಕಾಣಲಿದ್ದೀರಿ. ವಿವಾಹ-ಉಪನಯನಗಳಂಥ ಶುಭಕಾರ್ಯಗಳು ನಡೆಯಲಿವೆ. ಬಂಧುಗಳ ಸಾಹಚರ್ಯೆಯಿಂದ ಅನುಕೂಲ, ಶನಿಗ್ರಹದ ಬಲದಿಂದ ವೃತ್ತಿಯಲ್ಲಿ ಭದ್ರತೆ, ಬಲ ಇರಲಿದೆ. ಫೆಬ್ರುವರಿ ನಂತರ ಸ್ವಲ್ಪ ಅಸಮಧಾನದ ಫಲಗಳಿದ್ದಾವೆ. ತಂದೆ-ಮಕ್ಕಳಲ್ಲಿ ಕೊಂಚ ವಿರೋಧ ಭಾವ ಉಂಟಾಗಲಿದೆ, ವೃತ್ತಿಯಲ್ಲಿ ಒತ್ತಡ, ಅಸಮಧಾನ ಇರಲಿದೆ, ಮಾರ್ಚ್ ತಿಂಗಳಲ್ಲಿ ವಾಹನ-ಭೂ ಲಾಭದಂಥ ವಿಶೇಷ ಅನುಕೂಲಗಳಿದ್ದಾವೆ. ಸೈನ್ಯ-ಪೊಲೀಲ್ ಕ್ಷೇತ್ರ, ಎಲೆಕ್ಟಾçನಿಕ್ಸ್ ಕ್ಷೇತ್ರ, ಅಗ್ನಿ ಸಂಬAಧಿ ಕ್ಷೇತ್ರಗಳಲ್ಲಿ ಉತ್ಕೃಷ್ಟ ಫಲ, ತಾಮಸ ಆಹಾರದಿಂದ ಆರೋಗ್ಯ ಹಾನಿ. 

ಪರಿಹಾರ - ದುರ್ಗಾ ದೇವಸ್ಥಾನದಲ್ಲಿ ಗರಿಕೆ ಅರ್ಚನೆ ಮಾಡಿಸಿ

ವೃಷಭ (Taurus) - ಪ್ರಾರಂಭದ ದಿನಗಳಲ್ಲಿ ಆರೋಗ್ಯದ ಕಡೆ ಎಚ್ಚರವಹಿಸಿ, ಮುಖದಲ್ಲಿ ಕಲೆ, ಸೌಂದರ್ಯದಲ್ಲಿ ಅಸಮಧಾನ ಉಂಟಾಗಲಿದೆ, ವೃತ್ತಿಯಲ್ಲಿ ಬಲ ಇರಲಿದೆ, ಕೆಲಸಗಳು ಸುಲಲಿತವಾಗಿ ಸಾಗುತ್ತವೆ, ದಾಂಪತ್ಯದಲ್ಲಿ ಕೊಂಚ ಅಸಮಧಾನ ಇರಲಿದೆ. ಮನೆಯಲ್ಲಿ ಅಸಮಧಾನ, ಫೆಬ್ರುವರಿಯಿಂದ ಸೌಭಾಗ್ಯದ ಫಲಗಳು ಒದಗಿಬರಲಿವೆ, ಮಿತ್ರರಿಂದ ಸಹಾಯ, ದೇವತಾಕಾರ್ಯಗಳಲ್ಲಿ ಭಾಗಿಯಾಗುವಿರಿ, ತಂದೆ-ಮಕ್ಕಳಲ್ಲಿ ಸಾಮರಸ್ಯ ಉಂಟಾಗಲಿದೆ. ಮಾರ್ಚ್ ತಿಂಗಳಲ್ಲಿ ಉತ್ಕೃಷ್ಟ ಫಲಗಳಿದ್ದಾವೆ. ಸಂಗಾತಿಯ ಸಹಕಾರ, ವ್ಯಾಪಾರದಲ್ಲಿ ಅನುಕೂಲ, ಸೇನೆ-ಸಾಹಸ ಕಾರ್ಯಗಾರರಿಗೆ ಶುಭಫಲಗಳು ಉಂಟಾಗಲಿವೆ. ಆಡಳಿತ ವರ್ಗದಲ್ಲಿರುವವರಿಗೆ ದೈವಾನುಕೂಲ ಇರಲಿದೆ. 

ಪರಿಹಾರ - ವಿಷ್ಣು ಸಹಸ್ರನಾಮ - ಮಹಾಲಕ್ಷಿö್ಮÃ ಪ್ರಾರ್ಥನೆ ಮಾಡಿ

ಮಿಥುನ (Gemini) - ಗುರುಬಲವಿರುವುದರಿಂದ ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ಸಂಭ್ರಮದ ವಾತಾವರಣ ಇರಲಿದೆ. ಪ್ರಾರಂಭದ ದಿನಗಳಲ್ಲಿ ದಾಂಪತ್ಯ ಹಾಗೂ ವ್ಯಾಪಾರ ವಿಚಾರಗಳಲ್ಲಿ ಕೊಂಚ ಎಚ್ಚರ ವಹಿಸಿ. ನಷ್ಟಗಳು ಸಂಭವಿಸುವ ಸಾಧ್ಯತೆಕೂಡ ಇದೆ. ಫೆಬ್ರುವರಿ ತಿಂಗಳಲ್ಲಿ ಎಲ್ಲ ವಿಚಾರಗಳಲ್ಲೂ ಎಚ್ಚರವಾಗಿರಬೇಕು. ವ್ಯಾಪಾರಗಳಲ್ಲಿ ವಿರೋಧಗಳುಂಟಾಗುವ ಸಾಧ್ಯತೆ ಇದೆ. ಪ್ರೀತಿ-ಪ್ರೇಮ ವಿಚಾರಗಳಲ್ಲಿ ನಂಬಿಕೆ ಕುಸಿಯುವ ಸಾಧ್ಯತೆ ಇದೆ. ಮಾರ್ಚ್ ತಿಂಗಳು ನಿಮ್ಮ ಪಾಲಿಗೆ ಅದೃಷ್ಟದ ತಿಂಗಳು. ಬುದ್ಧಿ ಬಲದಿಂದ ಕಾರ್ಯ ಸಾಧನೆ, ತಂದೆ-ಮಕ್ಕಳಲ್ಲಿ ಪ್ರೀತಿ-ವಿಶ್ವಾಸಗಳು ಹೆಚ್ಚಾಗಲಿವೆ. ಸ್ನೇಹಿತರು-ಬಂಧುಗಳಲ್ಲಿ ಪ್ರಶಂಸೆ. ವಿದ್ಯಾರ್ಥಿಗಳಿಗೆ ಶುಭಫಲವಿರಲಿದೆ. ಅನುಕೂಲ ಇರಲಿದೆ.

ಹೊಸ ವರ್ಷ ಯಾರಿಗೆ ಸಿಹಿ, ಮತ್ಯಾರಿಗೆ ಕಹಿ?

ಪರಿಹಾರ - ವಿಷ್ಣು ಸಹಸ್ರನಾಮ ಪಠಿಸಿ, ನರಸಿಂಹ ಸ್ವಾಮಿಗೆ ತುಳಸಿ ಅರ್ಚನೆ ಮಾಡಿ

ಕರ್ಕಾಟಕ (Cancer) - ಗುರು ಬಲವಿಲ್ಲದ ಕಾರಣ ಮದುವೆ-ಮಂಗಳಕಾರ್ಯಗಳು ಸ್ವಲ್ಪ ಮುಂದೂಡಲ್ಪಡುತ್ತವೆ. ಬಂಧುಗಳಲ್ಲಿ-ದಾAಪತ್ಯ ಜೀವನ ಸ್ವಲ್ಪ ಅಸಮಧಾನದಿಂದ ಕೂಡಿರುತ್ತದೆ. ವ್ಯಾಪಾರಿಗಳಿಗೆ ಅನುಕೂಲವಿದೆ. ವಿದೇಶ ಪ್ರಯಾಣಗಳಲ್ಲಿ ಅನುಕೂಲ, ಫೆಬ್ರುವರಿಯಲ್ಲಿ ಶತ್ರುಗಳ ಕಾಟದಿಂದ ಬಳಲುವ ಸಾಧ್ಯತೆ, ಹಿತ ಶತ್ರುಗಳಿಂದ ಸಮಸ್ಯೆ. ವೃತ್ತಿ ಸ್ಥಳದಲ್ಲಿ ಸಾಲಬಾಧೆ. ವೃತ್ತಿ ಸ್ಥಳದಲ್ಲಿ ಕೊಂಚ ವಿರೋಧಗಳೂ ಇರಲಿವೆ. ಮಾರ್ಚ್ ತಿಂಗಳು ನಿಮ್ಮ ಪಾಲಿಗೆ ಅದೃಷ್ಟ ತಿಂಗಳಾಗಿರುತ್ತದೆ. ಆಡಳಿತ ವರ್ಗದಲ್ಲಿರುವವರಿಗೆ ವಿಶೇಷ ಫಲ, ಮಾತಿಗೆ ಮಾನ್ಯತೆ ಸಿಗಲಿದೆ. ನಿಮ್ಮ ಸಾಹಸ ಕಾರ್ಯಗಳಿಗೆ ಜಯ ಸಿಗಲಿದೆ. ಅಗ್ನಿ ಸಂಬAಧಿ-ಎಲೆಕ್ಟಾçನಿಕ್ಸ್-ಆಟೋಮೊಬೈಲ್ಸ್-ಮೆಕಾನಿಕಲ್ ಇತ್ಯಾದಿ ಕ್ಷೇತ್ರಗಳಲ್ಲಿ ದುಡಿಯುವವರಿಗೆ ಮಹಾಯಶಸ್ಸು. ವಿದ್ಯಾರ್ಥಿಗಳ ಮನಸ್ಸು ಚಂಚಲವಾಗಲಿದೆ. ತಾಳ್ಮೆ ಇರಲಿ. 

ಪರಿಹಾರ - ಲಲಿತಾ ಸಹಸ್ರನಾಮ ಪಠಿಸಿ/ ಅಮ್ಮನವರಿಗೆ ಬಿಳಿ ಪುಷ್ಪಗಳಿಂದ ಅರ್ಚನೆ ಮಾಡಿಸಿ

ಸಿಂಹ (Leo) - ಗುರುಬಲವಿರುವುದರಿಂದ ಶುಭಕಾರ್ಯಗಳು ನೆರವೇರುತ್ತವೆ. ರಂಗಕರ್ಮಿಗಳಿಗೆ ಶುಭಯೋಗ, ಕಲಾವಿದರಿಗೆ ಉತ್ತಮ ಫಲಗಳಿದ್ದಾವೆ. ಪ್ರತಿಭೆಗೆ ಹೊಸ ಅವಕಾಶಸಿಗಲಿವೆ. ಭೂ ಲಾಭ, ವಾಹನ ಲಾಭದಂಥ ಶುಭ ಫಲಗಳಿದ್ದಾವೆ. ಸೇನೆ-ಸಾಹಸ ಕಾರ್ಯಗಳಲ್ಲಿರುವವರಿಗೆ ಅತ್ಯಂತ ಶುಭಫಲ. ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಲಾಭ. ಫೆಬ್ರುವರಿಯಲ್ಲಿ ಕೊಂಚ ಅಸಮಧಾನದ ಫಲಗಳಿದ್ದಾವೆ. ವಿದ್ಯಾರ್ಥಿಗಳಲ್ಲಿ ಸ್ವಭಾವ ಬದಲಾವಣೆ, ವ್ಯಸನದಿಂದ ವ್ಯಕ್ತಿತ್ವ ಹಾಳಾಗಲಿದೆ. ಮಾರ್ಚ್ನಲ್ಲಿ ಮತ್ತೆ ವಿಶೇಷ ಲಾಭ ಸಿಗಲಿದೆ. ಶತ್ರುಗಳನ್ನು ಮೆಟ್ಟಿನಿಲ್ಲುವ ದಿನ. ಶುಭಫಲಗಳನ್ನು ಕಾಣುತ್ತೀರಿ. ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. 
ಪತ್ರಿಕಾರಂಗದಲ್ಲಿರುವವರು-ಮಾಧ್ಯಮದಲ್ಲಿರುವವರು ಕೊಂಚ ಎಚ್ಚರವಾಗಿರಬೇಕು. ಆರೋಗ್ಯದಲ್ಲಿ ಏರುಪೇರಾಗಲಿದೆ. 

ಪರಿಹಾರ - ಶಿವ ಕವಚ ಪಠಿಸಿ /  ಆದಿತ್ಯ ಹೃದಯ ಪಠಣ ಮಾಡಿ

ಕನ್ಯಾ (Virgo) - ಗುರುಬಲವಿಲ್ಲದ ಕಾರಣ ಮನೆಯಲ್ಲಿ ವಾತಾವರಣ ಮಂಕಾಗಿರುತ್ತದೆ. ಅದರ ಹೊರತಾಗಿ ಸಹೋದರರ ಸಹಕಾರ ಇರಲಿದೆ. ಧೈರ್ಯ-ಸಾಯಸ ಕಾರ್ಯಗಳಲ್ಲಿ ಜಯ ಸಿಗಲಿದೆ. ಮಿತ್ರರ ಸಹಕಾರ ಇರಲಿದೆ. ಮನೆಯಲ್ಲಿ ಮಕ್ಕಳ ಸಹಾಯ ಇರಲಿದೆ. ಸೇವಕರು ನಿಮ್ಮ ಕೆಲಸಗಳಲ್ಲಿ ಸಹಕರಿಸುತ್ತಾರೆ. ಪ್ರತಿಭಾಶಕ್ತಿಯಿಂದ ಉನ್ನತ ಶಿಕ್ಷಣದಲ್ಲಿ ಸಾಧನೆ. ಬಂಧುಗಳಿಗಾಗಿ ಹಾಗೂ ಸ್ತಿçÃಯರ ಸಲುವಾಗಿ ಹೆಚ್ಚಿನ ವ್ಯಯ. ಮಾರ್ಚ್ ತಿಂಗಳಲ್ಲಿ ಸಂತಾನ ಫಲ ಸೂಚನೆ ಸಿಗಲಿದೆ. ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲಿವೆ. ಭೂವ್ಯವಹಾರದಲ್ಲಿ ಲಾಭ. ಕಳೆದುಹೋದ ವಸ್ತು ಮರಳಿ ಸಿಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಚರ್ಮ ಸಂಬAಧಿ ಸಮಸ್ಯೆಗಳಾಗುವ ಸಾಧ್ಯತೆ ಇದೆ. ಧರ್ಮ ಕಾರ್ಯಗಳಲ್ಲಿ ಶ್ರದ್ಧೆ ಕಡಿಮೆಯಾಗಲಿದೆ.

ಪರಿಹಾರ - ಬುಧ ಕವಚ ಪಠಿಸಿ / ದುರ್ಗಾ ಸಪ್ತಶತಿ ಪಾರಾಯಣ ಮಾಡಿ

ತುಲಾ (Libra) - ಗುರುಬಲ ಇರುವುದರಿಂದ ಶುಭ ಕಾರ್ಯಗಳು ನಡೆಯಲಿವೆ. ಸಹೋದರರ ಸಹಕಾರ ಇರಲಿದೆ. ಲಾಭ ಸಮೃದ್ಧಿ, ಸಿವಿಲ್ ಕೆಲಸಗಳಲ್ಲಿ ಹೆಚ್ಚಿನ ಅನುಕೂಲ, ಶ್ರಮ ಜೀವಿಗಳಿಗೆ ವಿಶೇಷ ಲಾಭ, ಶ್ರಮಿಕರಿಗೆ ಅನುಕೂಲ. ಫೆಬ್ರುವರಿ ತಿಂಗಳಲ್ಲಿ ಕೊಂಚ ಅನಾನುಕೂಲ ಇರಲಿದೆ. ಟೆಕ್ನಿಕಲ್ ಕ್ಷೇತ್ರದ ಕೆಲಸಗಾರರಿಗೆ ವಿಶೇಷ ಫಲ ಸಿಗಲಿದೆ. ಸಾಹಸ ಕಾರ್ಯಗಳಲ್ಲಿ ಮಾನ್ಯತೆ ಸಿಗಲಿದೆ. ಮಾರ್ಚ್ ತಿಂಗಳಲ್ಲಿ ಸಮೃದ್ಧಿಯ ಫಲಗಳನ್ನು ಕಾಣುತ್ತೀರಿ. ವಾಹನ ಸೌಖ್ಯ, ಭೂ ಲಾಭದಂಥ ಅನುಕೂಲಗಳು ನೆರವೇರಲಿವೆ. ಕಲಹಗಳು ಮುಗಿದು ಶಾಂತಿ ವಾತಾವರಣ ಇರಲಿದೆ. ಆರೋಗ್ಯದ ಕಡೆ ಕೊಂಚ ಗಮನಹರಿಸಿ. ವಿದ್ಯಾರ್ಥಿಗಳಿಗೆ ಅನುಕೂಲ ಇರಲಿದೆ. 

ಪರಿಹಾರ - ದುರ್ಗಾ ಕವಚ ಪಠಿಸಿ / ಅಮ್ಮನವರ ಸನ್ನಿಧಾನದಲ್ಲಿ ತುಪ್ಪದ ದೀಪ ಹಚ್ಚಿ

ವೃಶ್ಚಿಕ (Scorpio) - ಸಾಹಸಕಾರ್ಯಗಳಲ್ಲಿ ಬಲ, ತೋಳ್ಬಲ ಹೆಚ್ಚಲಿದೆ. ಧೈರ್ಯ-ಸಾಹಸ ಕಾರ್ಯಗಳಲ್ಲಿ ವಿಶೇಷ ಅನುಕೂಲ. ಪೊಲೀಸ್-ಸೇನೆ-ಅಗ್ನಿ ಸಂಬAಧಿ ವ್ಯವಹಾರಗಳಲ್ಲಿ ಲಾಭ ಫಲ. ಫೆಬ್ರುವರಿ ತಿಂಗಳಲ್ಲಿ ಹಣಕಾಸಿನ ವ್ಯತ್ಯಾಸ ಉಂಟಾಗಲಿದೆ. ಅಧಿಕ ಖರ್ಚು ಉಂಟಾಗಲಿದೆ. ಟೆಕ್ನೀಷಿಯನ್ಸ್ ಸ್ವಲ್ಪ ಎಚ್ಚರ ವಹಿಸಬೇಕು. ಸಹೋದರರ ಸಹಕಾರ ಇರಲಿದೆ. ನೆಮ್ಮದಿಯ ವಾತಾವರಣ ಇರಲಿದೆ ಆತಂಕ ಬೇಡ. ವೃತ್ತಿಯಲ್ಲಿ ಬಲ ಇರಲಿದೆ ಆದರೆ ಕೊಂಚ ವಿರೋಧ ಬರುವ ಸಾಧ್ಯತೆ ಇದೆ. ಮನಸ್ಸಿಗೆ ನೋವುಂಟಾಗಲಿದೆ. ಮಾರ್ಚ್ ತಿಂಗಳಲ್ಲಿ ಧೈರ್ಯ ಸಾಹಸ ಕಾರ್ಯಗಳಲ್ಲಿ ಅನುಕೂಲವಾಗಲಿದೆ. ಹಾಸ್ಪಿಟಲ್-ಔಷಧಿ ಇತ್ಯಾದಿ ಕ್ಷೇತ್ರದಲ್ಲಿರುವವರಿಗೆ ಸ್ವಲ್ಪ ಅಸಮಧಾನದ ಫಲಗಳಿವೆ. ಕ್ರಮೇಣ ಅನುಕೂಲವೂ ಇರಲಿದೆ. ಭೂ ವ್ಯವಹಾರ-ವಾಹನ ಲಾಭ ಹಾಗೂ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಅನುಕೂಲ ಇರಲಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಇರಲಿದೆ. 

ಯಾವ ರಾಶಿಯವರಿಗೆ 2022ರಲ್ಲಿ ಕಲ್ಯಾಣ ಪ್ರಾಪ್ತಿಯಾಗುತ್ತೆ?

ಪರಿಹಾರ - ಈಶ್ವರ ಪ್ರಾರ್ಥನೆ ಮಾಡಿ / ರುದ್ರಾಭಿಷೇಕ ಮಾಡಿಸಿ

ಧನುಸ್  (Sagittarius) - ದೈವಾನುಕೂಲದಿಂದ ವಿಶೇಷ ಲಾಭ ಪ್ರಾಪ್ತಿ. ತಂದೆ-ಮಕ್ಕಳಲ್ಲಿ ಸಾಮರಸ್ಯ ಇರಲಿದೆ. ಸರ್ಕಾರಿ ಕೆಲಸಗಳಲ್ಲಿ ಅನುಕೂಲ. ವಿದ್ಯಾರ್ಥಿಗಳಿಗೆ ಅನುಕೂಲ. ಮಕ್ಕಳಿಗೆ ಆಂಜನೇಯ ಸ್ತೋತ್ರ ಹೇಳಿಕೊಡಿ. ಫೆಬ್ರುವರಿಯಲ್ಲಿ ಆರೋಗ್ಯದ ಸಲುವಾಗಿ ಅಧಿಕ ಖರ್ಚು. ಉಷ್ಣ ಪ್ರಕೃತಿಯಿಂದ ಆರೋಗ್ಯದಲ್ಲಿ ತೊಂದರೆ. ಮಿತ್ರರ ಸಹಕಾರ ಇರಲಿದೆ. ವೃತ್ತಿಯಲ್ಲಿ ಒಳ್ಳೆಯ ಸ್ಥಾನ-ಮಾನ ಸಿಗಲಿದೆ. ಮಕ್ಕಳಿಂದ ಸಹಕಾರ. ಭೂ ಖರೀದಿ-ವಾಹನ ಖರೀದಿಯಂಥ ಶುಭಫಲಗಳಿದ್ದಾವೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಯಜ್ಞ-ಯಾಗಾದಿಗಳಲ್ಲಿ ಭಾಗಿಯಾಗುತ್ತೀರಿ. ಕುಟುಂಬದಲ್ಲಿ ಕೊಂಚ ಅಸಮಧಾನದ ಘಟನೆಗಳು ನಡೆಯಲಿವೆ. ಸಮಾಧಾನದಿಂದ ಇರಬೇಕು ಉಪನ್ಯಾಸಕರು-ವಿದ್ಯಾರ್ಥಿಗಳಿಗೆ ತಾಳ್ಮೆ ಮುಖ್ಯ. ಹಾಲು-ಹೈನು ವ್ಯಾಪಾರಿಗಳಿಗೆ ಅನುಕೂಲ ವಾತಾವರಣ. ವಸ್ತç ವ್ಯಾಪಾರಿಗಳಿಗೆ ಲಾಭ. 

ಪರಿಹಾರ - ದತ್ತಾತ್ರೇಯ ಸ್ತೋತ್ರ ಪಠಿಸಿ / ಗೋವಿಗೆ ಗ್ರಾಸ ಕೊಡಿ

ಮಕರ:(Capricorn) - ಶಶಯೋಗದಿಂದ ಲಾಭ ಸಮೃದ್ಧಿ. ಉತ್ಕೃಷ್ಟ ಫಲವನ್ನು ಅನುಭವಿಸುತ್ತೀರಿ. ಕಾರ್ಯಗಳು ಸುಲಲಿತವಾಗಿ ನಡೆಯಲಿವೆ. ಸಿವಿಲ್ ಕೆಲಸಗಾರರಿಗೆ ಲಾಭ. ಜೊತೆಗೆ ಅಧಿಕ ವ್ಯಯವೂ ಇದೆ. ವಿದೇಶದಿಂದ ಸುವಾರ್ತೆ. ಆರೋಗ್ಯದಲ್ಲಿ ಕೊಂಚ ವ್ಯತ್ಯಾಸಗಳುಂಟಾಗಲಿವೆ ಎಚ್ಚರವಾಗಿರಿ. ಅಣ್ಣಂದಿರ ಸಹಕಾರ ಇರಲಿದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ಅನುಕೂಲದ ವಾತಾವರಣ ಇರಲಿದೆ. ಗುರುವಿನ ಅನುಗ್ರಹದಿಂದ ಅನುಕೂಲ. ಫೆಬ್ರುವರಿ ನಂತರ ಹೊಸ ಅವಕಾಶಗಳು ದೊರೆಯಲಿವೆ. ವಸ್ತç-ವಿನ್ಯಾಸ-ಡಿಸೈನಿಂಗ್ ಕ್ಷೇತ್ರದಲ್ಲಿರುವವರಿಗೆ ಹಾಗೂ ಹರಳು ವ್ಯಾಪಾರಿಗಳಿಗೆ ಶುಭಫಲ, ಸಾಹಸ-ಶ್ರಮ ಕಾರ್ಯಗಳಿಗೆ ವಿಶೇಷ ಫಲ ಸಿಗಲಿದೆ. ಆರೋಗ್ಯದ ಕಡೆ ಗಮನಹರಿಸಿ. 

ಪರಿಹಾರ - ಆದಿತ್ಯ ಹೃದಯ ಪಠಿಸಿ / ಶಿವ ಸಹಸ್ರನಾಮ ಪಠಿಸಿ

ಕುಂಭ (Aquarius) - ವೃತ್ತಿಯಲ್ಲಿ ಬಲವಿದೆ. ಭೂಲಾಭದಂಥ ಶುಭಫಲಗಳಿದ್ದಾವೆ. ಟೆಕ್ನಿಕಲ್ ಕ್ಷೇತ್ರದಲ್ಲಿರುವವರಿಗೆ, ಸೇನೆ-ಪೊಲೀಸ್-ಇತ್ಯಾದಿ ಶ್ರಮ ಜೀವಿಗಳಿಗೆ ಲಾಭ ಸಮೃದ್ಧಿ. ಆಡಳಿತ ವ್ಯವಸ್ಥೆಯಲ್ಲಿರುವವರಿಗೂ ಅನುಕೂಲದ ಫಲಗಳಿದ್ದಾವೆ. ಹೋಟೆಲ್ ವ್ಯಾಪಾರಿಗಳಿಗೆ ಲಾಭ, ಹೊಸ ಅವಕಾಶಗಳು ಸಿಗುವ ಸಾಧ್ಯತೆ. ದಿನವೂ ಲಾಭ ಇರಲಿದೆ. ಶ್ರಮಕ್ಕೆ ದುಪ್ಪಟ್ಟು ಫಲ. ವಾಹನ ಖರೀದಿ ಸಾಧ್ಯತೆ. ಗೃಹ ನಿರ್ಮಾಣದಂಥ ಫಲಗಳಿದ್ದಾವೆ. ಹೆಚ್ಚಿನ ಖರ್ಚಿಲ್ಲದೆ ಜೀವನ ನಿರ್ವಹಣೆಯಾಗಲಿದೆ. ಫೆಬ್ರುವರಿ ನಂತರ ಸ್ವಲ್ಪ ಜಾಗ್ರತೆ ಬೇಕು. ದಾಂಪತ್ಯದಲ್ಲಿ ಕೊಂಚ ಅಸಮಧಾನ, 
ಆಪ್ತತೆ ಕಡಿಮೆಯಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಇರಲಿದೆ. ನಷ್ಟವಸ್ತು ಪ್ರಾಪ್ತಿ. ಸಹೋದರರಲ್ಲಿ ಸಾಮರಸ್ಯ ಇರಲಿದೆ. 

ಪರಿಹಾರ - ಸೌಂದರ್ಯ ಲಹರಿ ಪಠಿಸಿ / ವಿಷ್ಣು ಸಹಸ್ರನಾಮ ಪಠಿಸಿ

ಮೀನ (Pisces) - ಶುಭ ಫಲಗಳಿದ್ದಾವೆ. ಶ್ರಮಕ್ಕೆ ದುಪ್ಪಟ್ಟು ಫಲ. ದೈವಾನುಕೂಲ ಇರಲಿದೆ. ತಂದೆ-ಮಕ್ಕಳಲ್ಲಿ ಸಾಮರಸ್ಯ ಇರಲಿದೆ. ದೇಶ ಸೇವೆಗೆ ಪ್ರೇರಣೆಯಾಗಲಿದೆ. ಯಜ್ಞ-ಯಾಗಾಗಳಲ್ಲಿ ಭಾಗಿಯಾಗುವ ಸಾಧ್ಯತೆ. ವೃತ್ತಿಯಲ್ಲಿ ಕೊಂಚ ಕಿರಿಕಿರಿ, ಒತ್ತಡದ ಕಾರ್ಯಗಳು. ನಂತರ ಕ್ರಮೇಣ ಅನುಕೂಲ ಉಂಟಾಗಲಿದೆ. ಲಾಭವೂ ಇರಲಿದೆ. 
ಸೇನೆ-ಪೊಲೀಸ್ ಇಲಾಖೆಯಲ್ಲಿರುವವರಿಗೆ ಉತ್ತಮ ಫಲವಿದೆ. ಸಾಹಸಿಗಳಿಗೆ ಶುಭಫಲ. ಮಾರ್ಚ್ನಲ್ಲಿ ಧನಲಾಭ. ಸಂತೋಷದ ವಾತಾವರಣ ಇರಲಿದೆ. ಅನಿರೀಕ್ಷಿತ ಲಾಭ ಇರಲಿದೆ. ಫೆಬ್ರುವರಿ ನಂತರ ಬಂಗಾರದ ಫಲಗಳಿದ್ದಾವೆ. ಆತಂಕ ಬೇಡ. 

ಪರಿಹಾರ - ದತ್ತಾತ್ರೇಯ ಪ್ರಾರ್ಥನೆ ಮಾಡಿ / ಗುರು ಸೇವೆ ಮಾಡಿ

ಗುರು ಪರಿವರ್ತನೆಯಿಂದ 3 ರಾಶಿಯವರಿಗೆ ಲಕ್

Follow Us:
Download App:
  • android
  • ios