Asianet Suvarna News Asianet Suvarna News

Jupiter Transit : ಗುರು ಪರಿವರ್ತನೆಯಿಂದ 2022ಕ್ಕೆ 3 ರಾಶಿಗೆ ಲಕ್

ಗುರು ಗ್ರಹದ ರಾಶಿ ಪರಿವರ್ತನೆಯು 2022ರ ಏಪ್ರಿಲ್ ತಿಂಗಳಿನಲ್ಲಿ ಆಗಲಿದ್ದು, ಇದು ಅನೇಕರ ಜೀವನದ ಮೇಲೆ ಪರಿಣಾಮವನ್ನು ಬೀರಲಿದೆ. ಕೆಲವರಿಗೆ ಶುಭ ಪ್ರಭಾವ ಬೀರಿದರೆ ಮತ್ತೆ ಕೆಲವರಿಗೆ ಅಶುಭ ಪ್ರಭಾವವನ್ನು ಬೀರಲಿದೆ. ಇದರಲ್ಲಿ ಅತ್ಯಂತ ಮುಖ್ಯವಾಗಿ ವೃಶ್ಚಿಕ, ಧನು, ಕುಂಭ ರಾಶಿಯವರ ಅದೃಷ್ಟ ಹೇಗಿರಲಿದೆ ಎಂಬ ಬಗ್ಗೆ ನೋಡೋಣ...

Jupiter Transit give luck to Sagittarius Aquarius Scorpio
Author
Bangalore, First Published Dec 29, 2021, 9:22 AM IST
  • Facebook
  • Twitter
  • Whatsapp

ಇನ್ನೇನು ಹೊಸ ವರ್ಷಕ್ಕೆ (New Year) ದಿನಗಣನೆ ಆರಂಭವಾಗಿದೆ. ಎಲ್ಲರಿಗೂ ಹೊಸ ವರ್ಷ ಏನು ಕೊಡುಗೆ (Contribute) ನೀಡುತ್ತದೆ ಎಂಬ ಕುತೂಹಲ (Curiosity) ಇದ್ದೇ ಇರುತ್ತದೆ. 2021ರಲ್ಲಿ ಕೊರೋನಾ (Corona)  ಮಹಾಮಾರಿಯಿಂದ ಉದ್ಯೋಗ ಸೇರಿದಂತೆ ಆರ್ಥಿಕ ಚಟುವಟಿಕೆ ಮೇಲೆ ಭಾರಿ ಹೊಡೆತ ಬಿದ್ದಿತ್ತು. ಅಲ್ಲದೆ, ಜನರ ಆರೋಗ್ಯದ ಮೇಲೂ ದುಷ್ಪರಿಣಾಮವನ್ನು ಬೀರಿತ್ತು. ಈಗ ಬರುತ್ತಿರುವ ಹೊಸ ವರ್ಷವಾದರೂ ಒಳಿತನ್ನುಂಟು (Good) ಮಾಡುತ್ತದೆಯೇ..? ಆರ್ಥಿಕ (Economic) ಪರಿಣಾಮಗಳು ಏನಿರಬಹುದು..? ವೃತ್ತಿ ಜೀವನ (Profession), ವೈವಾಹಿಕ ಜೀವನ (Marriage life) ಹೀಗೆ ಹಲವು ಚಿಂತೆಗಳು ಸಹಜವಾಗಿಯೇ ಎಲ್ಲರನ್ನೂ ಕಾಡುತ್ತಿದೆ. ಆದರೆ, ಅದೃಷ್ಟ (Fortune) ಬಲವಾಗಲು ರಾಶಿ (Zodiac) ಸ್ಥಿತಿಗಳು ಸಹ ಪ್ರಮುಖ (Important) ಪಾತ್ರವನ್ನು ವಹಿಸುತ್ತವೆ. ಇದೀಗ ಗುರುವು (Jupiter) ಸ್ವರಾಶಿಯಾದ ಮೀನ ರಾಶಿಗೆ (Pisces) 2022ರ ಏಪ್ರಿಲ್ (April) 13ರಂದು ಪರಿವರ್ತನೆ (Transit) ಹೊಂದಲಿದೆ. ಇದರಿಂದಾಗಿ ಧನು (Sagittarius), ವೃಶ್ಚಿಕ (Scorpio) ಮತ್ತು ಕುಂಭ (Aquarius) ರಾಶಿಯ ವ್ಯಕ್ತಿಗಳಿಗೆ ಹೆಚ್ಚಿನ ಅದೃಷ್ಟವನ್ನು ತಂದುಕೊಡಲಿದೆ. 

ವೃಶ್ಚಿಕ ರಾಶಿ (Scorpio)
ಗುರುವು 2022ರ ಸಮಯದಲ್ಲಿ ಮೀನ ರಾಶಿಯನ್ನು ಪ್ರವೇಶಿಸುವುದರಿಂದ ವೃಶ್ಚಿಕ ರಾಶಿಯವರಿಗೆ ಉತ್ತಮ ಪ್ರಭಾವವನ್ನು (Good Effect) ಬೀರಲಿದೆ. ಹೀಗಾಗಿ ಈ ರಾಶಿಯ ವ್ಯಕ್ತಿಗಳಿಗೆ ಯಾವುದೇ ಕೆಲಸಗಳಾದರೂ (Work) ಕೈಗೂಡಲಿದ್ದು, ಆರ್ಥಿಕ (Economic) ಲಾಭಗಳಾಗುವ (Profit) ಸಾಧ್ಯತೆಗಳು ಬಹಳವೇ ಇದೆ. ಇನ್ನು ಪೂರ್ವಜರ ಆಸ್ತಿಯನ್ನು (Ancestor Property)  ಹೊಂದಿರುವವರು ದೊಡ್ಡ ಮಟ್ಟದ ನಿರೀಕ್ಷೆಯನ್ನು (Expectation)  ಇಟ್ಟುಕೊಳ್ಳಬಹುದಾಗಿದೆ. ವೃಶ್ಚಿಕ ರಾಶಿ ಹಾಗೂ ಗುರುಗ್ರಹದ ಮಿತ್ರ ರಾಶಿಯಾಗಿರುವ ಕಾರಣ ಈ ರಾಶಿಯವರು ವರ್ಷವಿಡೀ ಉತ್ತಮ ಲಾಭಗಳನ್ನು ನಿರೀಕ್ಷಿಸಬಹುದಾಗಿದೆ. 

ಇದನ್ನು ಓದಿ: ಅತ್ತೆ-ಸೊಸೆ ಜಗಳ ಹೆಚ್ಚಾಗಿದ್ರೆ ಈ Vaastu Tips ಪಾಲಿಸಿ ನೋಡಿ..

ಧನು ರಾಶಿ (Sagittarius) 
ಧನುರಾಶಿಯವರಿಗೆ 2022ನೇ ಸಾಲು ಅದೃಷ್ಟದ (Luck) ವರ್ಷವಾಗಿದೆ. ಈ ರಾಶಿಯವರ ಮೇಲೆ ಗುರು ಗ್ರಹವು ಪ್ರಭಾವ ಬಹಳ ಉತ್ತಮವಾಗಿರಲಿದೆ. ಉದ್ಯೋಗವನ್ನು (Job) ಬಯಸುತ್ತಿರುವವರಿಗೆ ಕೆಲಸ ಪಡೆಯಲು ಉತ್ತಮ ಅವಕಾಶಗಳು (Opportunity) ಲಭ್ಯವಾಗುತ್ತವೆ. ಇನ್ನು ಉದ್ಯೋಗದಲ್ಲಿರುವವರಿಗೆ ಬಡ್ತಿಗಳು (Promotion) ಸಿಗಬಹುದು. ಜೊತೆಗೆ ನಿಮ್ಮನ್ನು ಆರ್ಥಿಕವಾಗಿ (Financial) ಮತ್ತಷ್ಟು ಶಕ್ತಿವಂತರನ್ನಾಗಿ ಮಾಡಬಹುದಾಗಿದೆ. ನೀವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ನಿಮಗೆ ಅದೃಷ್ಟದ ಜೊತೆ ಜೊತೆಗೆ ಯಶಸ್ಸುಗಳು (Success) ಲಭ್ಯವಾಗುತ್ತಲೇ ಹೋಗುತ್ತವೆ. 2022ನೇ ವರ್ಷವು ವ್ಯವಹಾರಸ್ಥರಿಗೆ (Business)  ಲಾಭದಾಯಕವಾಗಿರಲಿದೆ. ಹೀಗಾಗಿ ಈ ವರ್ಷವಿಡೀ ಧನು ರಾಶಿಯವರ ಮೇಲೆ ಗುರು ಗ್ರಹವು ಶುಭ ಪರಿಣಾಮವನ್ನು ಬೀರಲಿದೆ. 

ಇದನ್ನು ಓದಿ: Name And Luck: ಈ ಅಕ್ಷರಗಳಿಂದ ಶುರುವಾಗುವ ಹುಡುಗಿಯರು ಸಖತ್ ಟ್ಯಾಲೆಂಟೆಡ್!

ಕುಂಭ ರಾಶಿ (Aquarius)
ಕುಂಭ ರಾಶಿಯವರಿಗೂ ಸಹ 2022 ಬಹಳ ಅದೃಷ್ಟವನ್ನು ನೀಡಲಿದೆ. ಈ ವರ್ಷದಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಲಭ್ಯವಾಗಲಿದೆ. ನಿಮಗೆ ಯಾವುದೇ ಕಾರಣಕ್ಕೂ ಹಣಕಾಸಿನ ತೊಂದರೆ (Problem) ಉಂಟಾಗುವುದಿಲ್ಲ. ನಿಮ್ಮ ಆರ್ಥಿಕ ಸ್ಥಿತಿಯು ವರ್ಷವಿಡೀ ಉತ್ತಮವಾಗಿಯೇ ಇರಲಿದೆ. ಈ ವರ್ಷ ನೀವು ಸಾಕಷ್ಟು ಹಣವನ್ನು ಸಂಗ್ರಹಿಸಿ (Store)  ಇಡಬಹುದಾಗಿದ್ದು, ಇದು ನಿಮ್ಮನ್ನು ಮುಂದೂ ಸಹ ಕಾಪಾಡಬಲ್ಲದು. ಹೊಸ (New) ವ್ಯಾಪಾರ – ವ್ಯವಹಾರಗಳಿಗೆ ಈ ವರ್ಷ ಅತ್ಯಂತ ಪ್ರಶಸ್ತವೆಂದು ಹೇಳಲಾಗುತ್ತಿದೆ. ಉತ್ತಮ ಘಳಿಗೆ (Time) ಹಾಗೂ ಮುಹೂರ್ತವನ್ನು ನೋಡಿಕೊಂಡು ನೀವು ಅಂಥ ಕೆಲಸಗಳಿಗೆ ಕೈ ಹಾಕಬೇಕಿದೆ. ಆರ್ಥಿಕ ಚಟುವಟಿಕೆ (Activities) ಸಂಬಂಧ ನೀವು ಮಾಡುವ ಹೂಡಿಕೆ (Investment)  ಕ್ಷೇತ್ರದಲ್ಲೂ (Sector) ಸಹ ನಿಮಗೆ ಸಾಕಷ್ಟು ಲಾಭಗಳು ಒದಗಿ ಬರಲಿದೆ. ಇವೆಲ್ಲದರ ಜೊತೆಗೆ ನಿಮಗೆ ಕುಟುಂಬದವರ (Family) ಸಹಾಯ (Help), ಸಹಕಾರ (Cooperation), ಬೆಂಬಲವೂ (Support) ಲಭ್ಯವಾಗಲಿದೆ. 

Follow Us:
Download App:
  • android
  • ios