Asianet Suvarna News Asianet Suvarna News

ಮಕ್ಕಳ ಹೆಸರಿನ ಸರಣಿ: A ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮತ್ತು ಗಂಡು ಮಗುವಿನ ಹೆಸರು..

ಯಾವುದೇ ಸಮಾರಂಭವಿರಲಿ, ಯಾವುದೇ ಸಂಪ್ರದಾಯವಿರಲಿ, ಪೋಷಕರು ತಮ್ಮ ಮಗುವಿಗೆ ಹೆಸರಿಡುವುದು ಬಹಳ ವಿಶೇಷವಾದ ಕ್ಷಣವಾಗಿದೆ. ಮಗುವಿಗೆ ಎ ಅಕ್ಷರದಿಂದ ಹೆಸರು ಹುಡುಕುತ್ತಿದ್ದೀರಾದರೆ ಇಲ್ಲಿವೆ ಕೆಲ ಅಪರೂಪದ, ಹೊಚ್ಚ ಹೊಸ ಹೆಸರುಗಳು ಮತ್ತು ಅವುಗಳ ಅರ್ಥ. 

Hindu Baby Boy and girl Names Starting With A skr
Author
Bangalore, First Published Aug 21, 2022, 12:29 PM IST

ಮಗುವಿಗೆ ಹೆಸರಿಡುವುದು ಒಂದು ದೊಡ್ಡ ನಿರ್ಧಾರ. ಮಗುವಿನ ಹೆಸರನ್ನು ಇಡುವುದು ಅತ್ಯಂತ ವಿಶೇಷ ವಿಷಯವಾಗಿದೆ. ಹೆಸರಿಡುವಾಗ ಅನೇಕ ವಿಷಯಗಳನ್ನು ಪರಿಗಣಿಸಬೇಕಾಗುತ್ತದೆ. ಕೆಲ ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕದಾದ, ಚೊಕ್ಕದಾದ, ಒತ್ತು, ಇಳಿ ಇಲ್ಲದ ಹೆಸರು ಬೇಕೆಂದು ಬಯಸುತ್ತಾರೆ. ಇದರಿಂದ ಆ ಹೆಸರನ್ನು ಯಾರೂ ಮೊಟಕುಗೊಳಿಸಿ ಕರೆಯಬಾರದು, ತಪ್ಪಾಗಿ ಕರೆಯಬಾರದು ಎಂಬುದು ಅವರ ಇಂಗಿತ. ಮತ್ತೆ ಕೆಲವರು ದೊಡ್ಡದಾಗಿದ್ದರೂ ಅರ್ಥಬದ್ಧವಾಗಿ, ವಿಶಿಷ್ಠವಾಗಿರಬೇಕೆಂದುಕೊಳ್ಳುತ್ತಾರೆ. ಇವೆಲ್ಲ ಏನೇ ಇದ್ದರೂ, ಹುಟ್ಟಿದ ಸಮಯ, ನಕ್ಷತ್ರಕ್ಕೆ ಹೊಂದುವ ಅಕ್ಷರದಿಂದ ಹೆಸರಿಡಬೇಕೆಂದು ಬಹುತೇಕ ಹಿಂದೂಗಳು ನಂಬುತ್ತಾರೆ. ದೇವರ ಹೆಸರು ಬೇಕೆಂದು ಕೆಲವರು ಬಯಸಿದರೆ, ಕಾವ್ಯಮಯವಾಗಿರಬೇಕೆಂದು ಆಶಿಸುವವರು ಕೆಲವರು. ಮಗುವಿನ ಹೆಸರು ತಂದೆ ತಾಯಿಯ ಹೆಸರಿನ ಮಿಳಿತವಾಗಿರುವಂತೆ ಹುಡುಕುವವರು ಮತ್ತೆ ಕೆಲವರು. 

ಅದೇನೇ ಇರಲಿ, ಹೆಸರು ಮಗುವಿನ ಜನ್ಮದುದ್ದಕ್ಕೂ ಗುರುತಾಗಿ ಉಳಿಯುವುದರಿಂದ ಈ ವಿಷಯದಲ್ಲಿ ಪೋಷಕರು ಹೆಚ್ಚು ಎಚ್ಚರ ವಹಿಸಬೇಕೆಂಬುದಂತೂ ನಿಜ. 

ಹೀಗೆ ಎ ಅಕ್ಷರದಿಂದ ನಿಮ್ಮ ಮಗುವಿಗೆ ಹೆಸರು ಹುಡುಕುತ್ತಿರುವ ಪೋಷಕರು ನೀವಾಗಿದ್ದಲ್ಲಿ ನಾವು ನಿಮಗೆ ಸಹಾಯ ಮಾಡಲು ಪ್ರಯತ್ನಿಸಿದ್ದೇವೆ. ಎ ಅಕ್ಷರದ ಹೆಸರುಗಳು ಜನಪ್ರಿಯ ಆಯ್ಕೆಯಾಗಿವೆ. ಈ ಲೆಟರ್‌ನಿಂದ ಮೊಗೆದಷ್ಟೂ ಹೆಸರುಗಳು ಸಿಗುತ್ತವೆ. ಇಲ್ಲಿ ಕೊಟ್ಟಿರುವ ಹಿಂದೂ ಗಂಡು ಮಕ್ಕಳ ಹೆಸರು ಹಾಗೂ ಹೆಣ್ಣುಮಕ್ಕಳ ಹೆಸರು ಎಲ್ಲವೂ ಸಾಂಪ್ರದಾಯಿಕ ಮತ್ತು ಆಧುನಿಕದ ಮಿಳಿತವಾಗಿವೆ. 

ಶ್ರಾವಣದಲ್ಲೇ ಈ 6 ಗಿಡ ನೆಡಿ; ನಿಮ್ಮ ಆಸ್ತಿ ಹೆಚ್ಚುವುದು ನೋಡಿ..

Aಯಿಂದ ಪ್ರಾರಂಭವಾಗುವ ಹಿಂದೂ ಗಂಡು ಮಕ್ಕಳ ಹೆಸರುಗಳು ಮತ್ತು ಅದರ ಅರ್ಥವನ್ನೊಳಗೊಂಡ ಪಟ್ಟಿ ಇಲ್ಲಿದೆ.

ಆಧುನಿಕ್ - ಪ್ರಗತಿಪರ ಅಥವಾ ಹೊಸದು
ಆದಿ- ಆರಂಭ
ಆಹಾನ್- ಬೆಳಕಿನ ಮೊದಲ ಕಿರಣ, ಮುಂಜಾನೆ
ಆಕಾರ್-  ವಸ್ತುವಿನ ರೂಪ
ಆಕಾಶ್- ಆಕಾಶ, ವಿಸ್ತಾರವಾದುದು
ಆಲಾಪ್- ಹಾಡಿನ ಪ್ರಾರಂಭದ ಹಂತ, ರಾಗ
ಆರವ್- ಶಾಂತ
ಆರೋಹ- ಏರುವಿಕೆ
ಆತಿಶ್- ಪ್ರಗತಿಪರ
ಆಯುಷ್- ದೀರ್ಘಾಯುಷ್ಯ
ಅಭೀಕ್- ನಿರ್ಭಯ
ಅಭಿನಂದನ್- ಅಭಿನಂದನೆ, ಸಂಭ್ರಮಾಚರಣೆ
ಅಭಿನಯ್- ಅಭಿವ್ಯಕ್ತಿ
ಅದ್ವೈತ್- ವಿಶಿಷ್ಟ ವ್ಯಕ್ತಿ
ಅಗ್ನಿವೇಶ್- ದ್ರೋಣಾಚಾರ್ಯರ ಗುರು
ಅಭಿಮನ್ಯು- ಅರ್ಜುನನ ಮಗ, ನಿರ್ಭೀತ ಯೋಧ
ಆರುಷ್- ಚಳಿಗಾಲದ ಸೂರ್ಯನ ಮೊದಲ ಕಿರಣಗಳು
ಆಶುತೋಷ್- ಮನಸ್ಸಿಗೆ ಆಹ್ಲಾದಕರ

ಅಮೆರಿಕದಲ್ಲಿ ಸಾಮೂಹಿಕ ಭಗವದ್ಗೀತೆ ಪಾರಾಯಣ; ಗಿನ್ನೆಸ್ ದಾಖಲೆ

Aಯಿಂದ ಪ್ರಾರಂಭವಾಗುವ ಹಿಂದೂ ಹೆಣ್ಣು ಮಗುವಿನ ಹೆಸರುಗಳ ಪಟ್ಟಿ ಇಲ್ಲಿದೆ. 

ಆಧಿಯಾ- ಪರಿಪೂರ್ಣ ಅಥವಾ ಆದರ್ಶ. 
ಆದ್ವಿಕಾ- ಪ್ರಪಂಚ, ಅನನ್ಯ ಬೆಚ್ಚಗಿನ
ಆಕೃತಿ- ಆಕಾರ, ಮುಗ್ಧತೆ
ಅಂಶಿ- ದೇವರ ಕೊಡುಗೆ
ಆಂಚಲ್- ತಂಪಾದ ಆಶ್ರಯ
ಅಹಾನಾ- ಬೆಳಕಿನ ಮೊದಲ ಕಿರಣ, ಮುಂಜಾನೆ
ಆರಾಧನಾ- ಆರಾಧನೆ
ಆರವಿ- ಶಾಂತ
ಆರೋಹಿ- ಏರುವಿಕೆ
ಆರುಷಿ- ಚಳಿಗಾಲದ ಸೂರ್ಯನ ಮೊದಲ ಕಿರಣಗಳು
ಆದಿತಾ- ಮೊದಲ ಮೂಲ
ಆತಿಶಿ- ಪ್ರಗತಿಪರ
ಆಯುಷಿ- ದೀರ್ಘಾಯುಷ್ಯ
ಆರಿಣಿ- ಸಾಹಸಮಯ
ಅಮಿಶಾ- ಪ್ರಾಮಾಣಿಕ
ಆದ್ಯಾ- ಭೂಮಿ
ಆರ್ವಿ- ಶಾಂತಿ, 
ಅನ್ವಿಕಾ- ಶಕ್ತಿಯುತ ಮತ್ತು ಬಲಶಾಲಿ

A ಯಿಂದ ಪ್ರಾರಂಭವಾಗುವ ನಮ್ಮ ಅನನ್ಯ ಮತ್ತು ಟ್ರೆಂಡಿಂಗ್ ಬೇಬಿ ಹೆಸರುಗಳ ಸಂಕಲನದಿಂದ ನಿಮ್ಮ ಮಗುವಿಗೆ ನೀವು ಪರಿಪೂರ್ಣ ಹೆಸರನ್ನು ಕಂಡುಕೊಂಡಿದ್ದೀರಿ ಎಂದು ನಾವು ಭಾವಿಸುತ್ತೇವೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.


 

Follow Us:
Download App:
  • android
  • ios