Asianet Suvarna News Asianet Suvarna News

ಶ್ರಾವಣ ಮಾಸದಲ್ಲಿ ಕೂದಲು ಕತ್ತರಿಸಬಾರದು, ಯಾಕೆ ತಿಳಿದಿದೆಯೇ?

ಹಿಂದೂಗಳಲ್ಲಿ ಮಂಗಳವಾರ, ಶುಕ್ರವಾರ ಕೂದಲು ಕತ್ತರಿಸಬಾರದು ಎನ್ನುತ್ತಾರೆ. ಅಂತೆಯೇ ಶ್ರಾವಣ ಮಾಸದಲ್ಲಿ ಕೂಡಾ ಕೂದಲನ್ನು ಕತ್ತರಿಸುವುದು ನಿಷೇಧವೆನಿಸಿದೆ. ಈ ನಂಬಿಕೆ ತುಂಬಾ ಹಳೆಯದು. ಶ್ರಾವಣದಲ್ಲಿ ಕೂದಲೇಕೆ ಕತ್ತರಿಸಬಾರದು ಗೊತ್ತಾ?

Why We Should not get our hair cut in Sawan skr
Author
Bangalore, First Published Jul 20, 2022, 11:14 AM IST

ಶ್ರಾವಣ ಮಾಸ ಹತ್ತಿರದಲ್ಲಿದೆ. ಸಾಕಷ್ಟು ಹಬ್ಬಹರಿದಿನಗಳನ್ನು ಹೊಂದಿರುವ ಈ ಶ್ರೇಷ್ಠ ಮಾಸದಲ್ಲಿ ಕೆಲವೊಂದು ವಿಷಯಗಳಿಗೆ ನಿಷೇಧವಿದೆ. ಅದರಲ್ಲಿ ಹೆಚ್ಚು ಜನಜನಿತವಾಗಿರುವುದು ಶ್ರಾವಣದಲ್ಲಿ ಕೂದಲು ಕತ್ತರಿಸಬಾರದು ಎಂಬುದು. ಗಡ್ಡ ಮೀಸೆ, ತಲೆಕೂದಲು ಯಾವೊಂದನ್ನೂ ಈ ಮಾಸದಲ್ಲಿ ಕತ್ತರಿಸುವಂತಿಲ್ಲ. ವಾಸ್ತವವಾಗಿ ಈ ನಂಬಿಕೆಯು ತುಂಬಾ ಹಳೆಯದು, ಅದರ ಹಿಂದಿರುವ ಕಾರಣದ ಬಗ್ಗೆ ಇಂದು ತಿಳಿಯೋಣ. 

ಕೂದಲು ನೈಸರ್ಗಿಕವಾಗಿ ಬೆಳೆಯುತ್ತದೆ. ಕಾಲಕಾಲಕ್ಕೆ ಕೂದಲನ್ನು ಕತ್ತರಿಸುವುದು ಕೂಡ ಅಗತ್ಯವಿದೆ. ಇಲ್ಲದಿದ್ದರೆ, ಕೂದಲಿನ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೂದಲು ಕೂಡ ಉದುರುತ್ತದೆ. ಜೊತೆಗೆ ಕೆಲವರಿಗೆ ಡ್ಯಾಂಡ್ರಫ್ ಸಮಸ್ಯೆಯೂ ಇರುತ್ತದೆ. ಆದರೆ, ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಪವಿತ್ರ ಶ್ರಾವಣ ಮಾಸದಲ್ಲಿ ಕೂದಲು ಕತ್ತರಿಸಬಾರದು! ಅನೇಕ ಜನರು ಇದನ್ನು ಯುಗಗಳಿಂದ ತಿಳಿದಿದ್ದಾರೆ. ಆದರೆ ಕೂದಲನ್ನು ಏಕೆ ಕತ್ತರಿಸಬಾರದು ಎಂಬ ಕಾರಣವನ್ನು ಎಲ್ಲಿಯೂ ಬಹಿರಂಗಪಡಿಸಲಾಗಿಲ್ಲ. 

ಮನೆಯಿಂದ ಹೊರಟಾಗ ಈ ಕೆಲಸ ಮಾಡಿದ್ರೆ ಅದೃಷ್ಟ ಜೊತೆಗಿರೋದ್ರಲ್ಲಿ ಡೌಟೇ ಇಲ್ಲ!

ಧಾರ್ಮಿಕ ಕಾರಣಗಳನ್ನು ನೋಡುವುದಾದರೆ, ಶ್ರಾವಣ ಮಾಸ(Sawan 2022) ಹಬ್ಬಗಳ ಸರಣಿಯನ್ನೇ ಹೊಂದಿದೆ. ಈ ಸಮಯದಲ್ಲಿ ಶಿವ ಸ್ಮರಣೆಯಲ್ಲಿ, ಪೂಜೆಯಲ್ಲಿ, ವ್ರತಾಚರಣೆಯಲ್ಲಿ ಕಳೆಯಲಾಗುತ್ತದೆ. ಹಾಗೆ ಭಕ್ತಿಯ ಮಾಸವಾದ ಶ್ರಾವಣದಲ್ಲಿ ಸ್ವಂತದ ಅಂದಚೆಂದದ ಬಗ್ಗೆ ಗಮನ ಹರಿಸುವುದು ಸರಿಯಲ್ಲ ಎಂಬುದು ಒಂದಾದರೆ, ಮನೆಯಲ್ಲಿ ಸದಾ ಪೂಜೆಗಳು, ವ್ರತಗಳೇ ಇರುವಾಗ ಕೂದಲನ್ನು ಕತ್ತರಿಸಿದರೆ(hair cut) ಅದು ಲಕ್ಷ್ಮಿ ದೇವಿಗೆ ಮಾಡುವ ಅವಮಾನ ಎಂಬುದು ಮತ್ತೊಂದು. 

ವೈಜ್ಞಾನಿಕವಾಗಿ ಕಾರಣ ನೋಡೋಣ(Scientific reason)
ಹಿಂದಿನ ಕಾಲದಲ್ಲಿ ವಿದ್ಯುತ್ ಇರಲಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಟ್ರಿಮ್ಮರ್‌ಗಳಂತಹ ಆಧುನಿಕ ಉಪಕರಣಗಳೂ ಇರಲಿಲ್ಲ. ಇದರಿಂದ ಕೂದಲು ಕತ್ತರಿಸುವಾಗ ಚೂಪಾದ ಉಪಕರಣದಿಂದ ನೆತ್ತಿಗೆ ಹೇಗೋ ಗಾಯವಾದರೆ ಅದರಿಂದ ನಾನಾ ಸಮಸ್ಯೆಗಳು ಉಂಟಾಗುವ ಅಪಾಯವಿರುತ್ತಿತ್ತು. ತಜ್ಞರ ಪ್ರಕಾರ, ಮಳೆಗಾಲದ ಆರ್ದ್ರ ವಾತಾವರಣವು ರೋಗಾಣುಗಳ ಪ್ರಸರಣಕ್ಕೆ ಪರಿಪೂರ್ಣವಾಗಿದೆ. ಪರಿಣಾಮವಾಗಿ, ಗಾಯವು ಹೇಗಾದರೂ ಬ್ಯಾಕ್ಟೀರಿಯಾದಿಂದ ದಾಳಿಗೊಳಗಾದರೆ ಸೋಂಕು ಮತ್ತು ಸೆಪ್ಟಿಕ್ ಅಪಾಯವಿತ್ತು. ಮೇಲಾಗಿ ಹಿಂದಿನ ದಿನಗಳಲ್ಲಿ ವೈದ್ಯಕೀಯ ವ್ಯವಸ್ಥೆ ಅಷ್ಟೊಂದು ಮುಂದುವರಿದಿರಲಿಲ್ಲ. ಬಹುಶಃ ಹಿಂದಿನ  ಅಸುರಕ್ಷಿತ ಕತ್ತರಿಗಳು, ಬ್ಲೇಡ್‌ಗಳು ಮಳೆಗಾಲದಲ್ಲಿ ತುಕ್ಕು ಹಿಡಿದಿರುತ್ತಿದ್ದವು. ಅವುಗಳಿಂದ ಕೂದಲನ್ನು ಕತ್ತರಿಸುವುದು ರೂಢಿಯಲ್ಲಿದ್ದಾಗ, ಒಬ್ಬ ವ್ಯಕ್ತಿಯು ಸದಾ ಇಂಥ ಅಪಾಯ ಎದುರಿಸಲೇಬೇಕಿತ್ತು. ಅಂದಿನಿಂದ ಮಳೆಗಾಲದಲ್ಲಿ ಕೂದಲು ಕಟ್ ಮಾಡದಿರುವ ಪದ್ಧತಿ ಜಾರಿಗೆ ಬಂದಿದೆ.

Vastu Tips: ಇಷ್ಟ್ ಮಾಡಿ ಸಾಕು, ಸಂಪತ್ತು ಸರಸರಾಂತ ನಿಮ್ಮತ್ತ ಹರಿದು ಬರುತ್ತೆ..

ಶ್ರಾವಣ ಎಂದು ನೀವು ಕೂಡಾ ಕೂದಲನ್ನು ಕತ್ತರಿಸದಿದ್ದರೆ ಅದನ್ನು ಈ ಮಲೆಗಾಲದಲ್ಲಿ ಹೇಗೆ ನೋಡಿಕೊಳ್ಳಬೇಕೆಂದು ನಾವು ಹೇಳುತ್ತೇವೆ. 

  • ಮಳೆಯಲ್ಲಿ ಕೂದಲು ಒದ್ದೆಯಾದ ನಂತರ ಕೂದಲನ್ನು ತೊಳೆದು ಗಾಳಿಯಲ್ಲಿ ಒಣಗಿಸಿ.
  • ಸ್ನಾನಕ್ಕೆ 15 ನಿಮಿಷಗಳ ಮೊದಲು ವಾರಕ್ಕೆ ಎರಡು ಬಾರಿ ತೆಂಗಿನ ಎಣ್ಣೆ(Coconut oil) ಹಚ್ಚಿ.
  • ಕೂದಲನ್ನು ದಪ್ಪವಾಗಿಸಲು, ಪ್ರೋಟೀನ್, ವಿಟಮಿನ್ ಇ ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ತೆಗೆದುಕೊಳ್ಳಿ.
  • ಕೂದಲಿಗೆ ಒರಟಾದ ಹಲ್ಲಿನ ಮರದ ಬಾಚಣಿಗೆ ಬಳಸಿ.
  • ಸೋಂಕನ್ನು ತಪ್ಪಿಸಲು, ಆಗಾಗ ಕೂದಲಿಗೆ ಅರಿಶಿನ ಮತ್ತು ಬೇವಿನ ಪ್ಯಾಕ್ ಹಾಕಿಕೊಳ್ಳಿ.
  • ಕೂದಲಿಗೆ ಬಣ್ಣವನ್ನು ಅನ್ವಯಿಸುವುದನ್ನು ತಪ್ಪಿಸಿ.
  • ಕೂದಲನ್ನು ತುಂಬಾ ತೆರೆದಿಡಬೇಡಿ. ಸದಾ ಜೆಡೆ ಹೆಣೆದುಕೊಳ್ಳಿ. ಹುಡುಗರು ಟೊಪ್ಪಿ ಧರಿಸಬಹುದು.

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
Follow Us:
Download App:
  • android
  • ios