ವಿವಾಹ ಮತ್ತು ಜೋಡಿ ಸ್ವರ್ಗದಲ್ಲಿಯೆ ನಿಶ್ಚಯವಾಗಿರುತ್ತದೆ ಎಂದು ಹೇಳುತ್ತಾರೆ. ವಿವಾಹ ಸ್ವರ್ಗದಲ್ಲಿ ನಿಶ್ಚಯವಾದರೂ ಸಹ ಸಮಯಕ್ಕೆ ಸರಿಯಾಗಿ ವಿವಾಹ ಆಗಬೇಕಿರುವುದು ಅಷ್ಟೇ ಮುಖ್ಯ. ಹಲವರ ವಿವಾಹ ಸಮಯಕ್ಕೆ ಸರಿಯಾಗಿ ಯಾವುದೇ ತೊಂದರೆ –ತಾಪತ್ರಯಗಳಿಲ್ಲದೆ ಸರಾಗವಾಗಿ ನಡೆದು ಹೋಗುತ್ತದೆ.

ಅದೇ ಕೆಲವರ ವಿವಾಹಕ್ಕೆ ವಿಘ್ನಗಳ ಸಾಲೇ ಇರುತ್ತದೆ. ಇನ್ನೇನು ಎಲ್ಲವು ಸರಿಹೊಂದಿ, ವಿವಾಹವಾಗಬೇಕೆನ್ನುವ ಸಮಯಕ್ಕೆ ಹೊಸ ತೊಂದರೆ ಎದುರಾಗಿರುತ್ತದೆ. ಇವೆಲ್ಲವಕ್ಕೆ ಜಾತಕದಲ್ಲಿರುವ ಗ್ರಹ, ನಕ್ಷತ್ರಗಳು ಕಾರಣವಾಗಿರುತ್ತವೆ.

ಜಾತಕದಲ್ಲಿ ಗ್ರಹ, ನಕ್ಷತ್ರಗಳು ಸರಿಯಾದ ಸ್ಥಿತಿಯಲ್ಲಿದ್ದು, ಗಂಡು- ಹೆಣ್ಣಿನ ಜಾತಕ ಹೊಂದಿಕೆಯಾದರೆ ಮದುವೆಗೆ ಯಾವುದೇ ವಿಘ್ನ ಎದುರಾಗುವುದಿಲ್ಲ. ಇಬ್ಬರಲ್ಲಿ ಒಬ್ಬರ ಜಾತಕದಲ್ಲಿ ಗ್ರಹದ ಸ್ಥಿತಿ ಸರಿಯಿಲ್ಲವಾದರೆ ಮದುವೆಗೆ ಅಡಚಣೆ ಉಂಟಾಗುತ್ತದೆ. ಮುಖ್ಯವಾಗಿ ಗುರು ಗ್ರಹದ ಸ್ಥಿತಿ ಚೆನ್ನಾಗಿದ್ದರೆ ಮದುವೆಯ ಯೋಗವಿದೆ ಎಂದೇ ಅರ್ಥ. ಗುರು ಬಲವಿದ್ದಾಗ ಮದುವೆ ಮಾಡಬೇಕೆಂದು ಶಾಸ್ತ್ರ ಹೇಳುತ್ತದೆ. 

ಹಾಗಾದರೆ ಮಹಿಳೆಯರಿಗೆ ವಿವಾಹ ಯೋಗ ಕೂಡಿ ಬರಲು ಮತ್ತು ವೈವಾಹಿಕ ಜೀವನಕ್ಕೆ ಗುರು ಗ್ರಹದ ಪಾತ್ರ ಎಷ್ಟಿರುತ್ತದೆ ?ಎಂಬುದನ್ನು ತಿಳಿಯೋಣ

ಇದನ್ನು ಓದಿ: ಜ.22ರಿಂದ ಶನಿಯ ನಕ್ಷತ್ರ ಪರಿವರ್ತನೆ; ಈ ರಾಶಿಗೆ ವರ್ಷವಿಡೀ ಕೆಡುಕು. 

- ಗುರು ಬಲವಿಲ್ಲದೆ ಇದ್ದಾಗ ಮಹಿಳೆಯರಿಗೆ ವಿವಾಹವಾಗುವುದು ಅಸಾಧ್ಯ, ಅಕಸ್ಮಾತ್ ಜಾತಕವನ್ನು ನೋಡದೆ ವಿವಾಹವಾದಲ್ಲಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ.

- ಜಾತಕದಲ್ಲಿ ಗುರು ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ವಿವಾಹ ವಿಳಂಬವಾಗುತ್ತದೆ. ಅಷ್ಟೇ ಅಲ್ಲದೆ ಗುರು ಗ್ರಹ ಪ್ರಬಲವಾಗಿಲ್ಲದಿದ್ದರೆ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. 

- ಗುರುಗ್ರಹ ದೋಷವಿದ್ದರೆ ವಿವಾಹವಾಗ ಬೇಕಾದ ಮಹಿಳೆ ಕೆಟ್ಟದಾರಿ ಹಿಡಿಯುವ ಸಂಭವವಿರುತ್ತದೆ. ವಿನಾ ಕಾರಣ ಅಪವಾದಗಳು ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ.

- ಗುರು ಗ್ರಹ ಸ್ವಲ್ಪ ಮಟ್ಟಿಗೆ ಶುಭವನ್ನು ನೀಡುವ ಸ್ಥಿತಿಯಲ್ಲಿದ್ದರು ಸಹ ಮದುವೆಗೆ ಮತ್ತು ಮುಂದಿನ ಜೀವನಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ.


ಗುರುಗ್ರಹವನ್ನು ಬಲ ಪಡಿಸಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು :

- ಪ್ರತಿನಿತ್ಯ ಅರಿಶಿನ ಮಿಶ್ರಿತ ನೀರನ್ನು ಸೂರ್ಯನಿಗೆ ಅರ್ಪಿಸಬೇಕು.

- ನಿತ್ಯವೂ ವಿಷ್ಣು ಸಹಸ್ರನಾಮ ಪಠಿಸಬೇಕು. ಅಷ್ಟೇ ಅಲ್ಲದೆ ಸಾತ್ವಿಕ ಆಹಾರ ಸೇವನೆ ಮಾಡುವುದು ಮುಖ್ಯವಾಗಿರುತ್ತದೆ.

- ವಾರದಲ್ಲಿ ಒಂದು ದಿನವಾದರೂ ದೇವಸ್ಥಾನಕ್ಕೆ ಹೋಗಿ ಬರುವುದು ಉತ್ತಮ.

ಇದನ್ನು ಓದಿ: ನೀವು-ನಿಮ್ಮವರು ಜನವರಿಯಲ್ಲಿ ಹುಟ್ಟಿದ್ದರೆ, ಅವರ ಗುಣ ಸ್ವಭಾವ ಹೀಗಿರುತ್ತೆ..! 

ಪುರುಷರಿಗೆ ವಿವಾಹ ಯೋಗ ಕೂಡಿ ಬರಲು ಮತ್ತು ವೈವಾಹಿಕ ಜೀವನಕ್ಕೆ ಗುರು ಗ್ರಹದ ಪಾತ್ರ ಎಷ್ಟಿರುತ್ತದೆ ? ಎಂಬುದನ್ನು ತಿಳಿಯೋಣ

- ಮುಖ್ಯವಾಗಿ ಪುರುಷರ ವಿವಾಹವು ಶುಕ್ರ ಗ್ರಹದಿಂದ ಪ್ರಭಾವಿತವಾಗಿರುತ್ತದೆ. ಆದರೆ ಪತ್ನಿಯಾಗುವವಳ ಬಗ್ಗೆ ಯೋಗವನ್ನು ನೋಡುವಾಗ ಜಾತಕದಲ್ಲಿ ಗುರುಗ್ರಹದ ಸ್ಥಿತಿಯನ್ನು ನೋಡಲಾಗುತ್ತದೆ.

- ಮಡದಿಯಾಗುವವಳ ಬಗ್ಗೆ ಅಂದರೆ ಬಣ್ಣ, ರೂಪ, ಸ್ವಭಾವ ಮತ್ತು ಹೊಂದಾಣಿಕೆಯ ವಿಚಾರಗಳು ಹುಡುಗನ ಜಾತಕದಲ್ಲಿ ಗುರುಗ್ರಹದ ಸ್ಥಿತಿಯಿಂದ ತಿಳಿಯಬಹುದಾಗಿರುತ್ತದೆ.

ಪುರುಷರು ಜಾತಕದಲ್ಲಿ ಗುರುಗ್ರಹವನ್ನು ಬಲ ಪಡಿಸಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು: 

- ನಿತ್ಯ ಮುಂಜಾನೆ ಬೇಗ ಎದ್ದು, ಸೂರ್ಯನಿಗೆ ನಮಿಸುವುದನ್ನು ರೂಢಿ ಮಾಡಿಕೊಳ್ಳುವುದು ಉತ್ತಮ.

- ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ 108 “ನಮಃ ಶಿವಾಯ”  ಜಪ ಮಾಡುವುದು.

- ಸಾತ್ವಿಕ ಆಹಾರ ಸೇವನೆ ಮಾಡುವುದು ಉತ್ತಮ.

ಇದನ್ನು ಓದಿ: ಹಲ್ಲಿಯಿಂದ ತಿಳಿಯಬಹುದು ಭವಿಷ್ಯ...ಹಲ್ಲಿಗೆ ಸಂಬಂಧಿಸಿದ ಶುಭ-ಅಶುಭ ವಿಚಾರಗಳು...

ವಿವಾಹ ಯೋಗ ಕೂಡಿಬರಲು ಹೀಗೆ ಮಾಡಿ

ಮುಂಜಾನೆ ಅಥವಾ ಸಂಧ್ಯಾಕಾಲದಲ್ಲಿ ಹಳದಿ ವಸ್ತ್ರ ಧರಿಸಿ ಪೂಜಾ ಸ್ಥಳದಲ್ಲಿ ಕುಳಿತುಕೊಳ್ಳಬೇಕು. ನಂತರ ಬೃಹಸ್ಪತಿಗೆ ಕೆಂಪು ಮತ್ತು ಹಳದಿ ಹೂವುಗಳಿಂದ ತಯಾರಿಸಿದ ಮಾಲೆಯನ್ನು ಅರ್ಪಿಸಬೇಕು. ನಂತರ ಬೃಹಸ್ಪತಿ ಮಂತ್ರವನ್ನು ಜಪಿಸಿ, ಸಿಹಿಯನ್ನು ನೈವೇದ್ಯ ಮಾಡಬೇಕು. ಅಷ್ಟೇ ಅಲ್ಲದೆ ಬಾಳೆ ಮರಕ್ಕೆ ಅರಿಶಿಣ ಮಿಶ್ರಿತ ನೀರನ್ನು ಹಾಕಬೇಕು. ಬೃಹಸ್ಪತಿ ದೇವನಲ್ಲಿ ಬೇಗ ವಿವಾಹವಾಗುವಂತೆ ಪ್ರಾರ್ಥಿಸಿಕೊಳ್ಳಬೇಕು. ಇದೇ ರೀತಿ ಮೂರು ಗುರುವಾರಗಳ ಕಾಲ ಮಾಡಿದರೆ, ಇಷ್ಟಾರ್ಥ ಸಿದ್ಧಿಸುತ್ತದೆಂದು ಹೇಳಲಾಗುತ್ತದೆ.