Pigeon Astrology: ಮನೆಯಲ್ಲಿ ಪಾರಿವಾಳ ಗೂಡು ಕಟ್ಟಿದರೆ ಒಳ್ಳೆಯದೋ ಕೆಟ್ಟದ್ದೋ?
ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳ ಅನೇಕ ಮಂಗಳಕರ ಮತ್ತು ಅಶುಭ ವಿಷಯಗಳ ಉಲ್ಲೇಖವಿದೆ. ಇದರ ಪ್ರಕಾರ, ಮನೆಯಲ್ಲಿ ಪಾರಿವಾಳ ಗೂಡು ಕಟ್ಟುವುದು ಶುಭವೇ ಅಶುಭವೇ? ಪಾರಿವಾಳದ ಕುರಿತ ಶಕುನಗಳು ಇಲ್ಲಿವೆ..
ಶಕುನ ಶಾಸ್ತ್ರದಲ್ಲಿ ಅನೇಕ ವಿಷಯಗಳು ಶುಭ ಅಥವಾ ಅಶುಭಗಳೊಂದಿಗೆ ಸಂಬಂಧ ಹೊಂದಿವೆ. ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸಂಬಂಧಿಸಿದ ಕೆಲ ಸಂಕೇತಗಳಿಗೆ ಜ್ಯೋತಿಷ್ಯದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಬಹಳಷ್ಟು ಪ್ರಾಣಿ ಪಕ್ಷಿಗಳು ಹಿಂದೂ ಧರ್ಮದಲ್ಲಿ ದೇವರ ವಾಹನಗಳಾಗಿ ಪ್ರಾತಿನಿಧ್ಯ ಹೊಂದಿವೆ. ಪಾರಿವಾಳಗಳ ವಿಷಯಕ್ಕೆ ಬಂದರೆ ಪಾರಿವಾಳವನ್ನು ಸಂತೋಷ ಮತ್ತು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೆಲವರು ಪಾರಿವಾಳವನ್ನು ಲಕ್ಷ್ಮಿ ದೇವಿಯ ಭಕ್ತ ಎಂದು ಪರಿಗಣಿಸುತ್ತಾರೆ ಮತ್ತು ಮನೆಯಲ್ಲಿ ಅದಿದ್ದರೆ ಶುಭವೆಂದು ಹೇಳುತ್ತಾರೆ. ಆದರೆ ಮತ್ತೆ ಕೆಲವರು ಮನೆಯಲ್ಲಿ ಪಾರಿವಾಳ ಗೂಡು ಕಟ್ಟುವುದು ದುರಾದೃಷ್ಟವನ್ನು ತರುತ್ತದೆ ಎಂದು ನಂಬುತ್ತಾರೆ. ಪಾರಿವಾಳವು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ತನ್ನ ಸ್ವಭಾವದಿಂದಲೇ ಪ್ರೀತಿ ಪಾತ್ರವಾಗಿರುವ ಪಕ್ಷಿ. ಪಾರಿವಾಳಕ್ಕೆ ಸಂಬಂಧಿಸಿದ ಶುಭ ಮತ್ತು ಅಶುಭ ಚಿಹ್ನೆಗಳ ಬಗ್ಗೆ ತಿಳಿಯೋಣ.
ಪಾರಿವಾಳದ ಗೂಡನ್ನು ನಿರ್ಮಿಸುವುದು ಅಶುಭ ಚಿಹ್ನೆ
ಸಾಮಾನ್ಯವಾಗಿ ಪಾರಿವಾಳಗಳು ಮನೆಯ ಬಾಲ್ಕನಿ, ಟೆರೇಸ್ ಅಥವಾ ಎಸಿ ಮೇಲೆ ಗೂಡು ಕಟ್ಟುತ್ತವೆ. ವಾಸ್ತು ಶಾಸ್ತ್ರದಲ್ಲಿ ಪಾರಿವಾಳಗಳು ಮನೆಯಲ್ಲಿ ಗೂಡು ಕಟ್ಟುವುದು ಶುಭವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಲ್ಲಿ ಪಾರಿವಾಳ ಗೂಡು ಕಟ್ಟುವುದು ಅಶುಭ(inauspecious)ವೆಂದು ಪರಿಗಣಿಸಲಾಗಿದೆ. ಪಾರಿವಾಳ ಗೂಡು ಕಟ್ಟುವುದು ಎಂದರೆ ಅದು ಮನೆಗೆ ದುರದೃಷ್ಟ ತರುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಆದಷ್ಟು ಬೇಗ ಪಾರಿವಾಳದ ಗೂಡು ತೆಗೆಯಿರಿ. ಪಾರಿವಾಳ ಗೂಡು ಕಟ್ಟುವುದು ಮನೆಯ ಸದಸ್ಯರ ಆರ್ಥಿಕ ಸ್ಥಿತಿ(financial status)ಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ.
Navratri 2022 Day 7: ಅಕ್ಷರಾಭ್ಯಾಸಕ್ಕೆ ಸುದಿನ ಸರಸ್ವತಿ ಪೂಜೆಯ ದಿನ..
ಶುಭ ಸಂಕೇತ
ಗೂಡು ಇಲ್ಲದೆ ಪಾರಿವಾಳ ನಿಮ್ಮ ಮನೆಗೆ ಬರುತ್ತಿದ್ದರೆ, ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶಕುನಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು, ಮನೆಗೆ ಬಂದ ಪಾರಿವಾಳ(Pegion)ಕ್ಕೆ ಪಾರಿವಾಳವನ್ನು ತಿನ್ನಿಸಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರೀತಿ ಮಾಡುವುದರಿಂದ ಜಾತಕ(Horoscope)ದಲ್ಲಿ ಗುರು ಮತ್ತು ಬುಧ ಸ್ಥಾನವು ಬಲಗೊಳ್ಳುತ್ತದೆ. ಇದಲ್ಲದೇ ಈ ಪಾರಿವಾಳದ ಆಗಮನದಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. ಮುಂಜಾನೆ ಪಾರಿವಾಳದ ಸ್ವರ ಕೇಳಿದರೆ, ಅದು ಪ್ರಯೋಜನಗಳನ್ನು ಪಡೆಯುವ ಸಂಕೇತವಾಗಿದೆ.
ಪಾರಿವಾಳ ಜ್ಯೋತಿಷ್ಯ(Pegion Astrology)
ಮನೆಯಲ್ಲಿ ಪಾರಿವಾಳದ ಆಗಮನವು ಸಂತೋಷ ಮತ್ತು ಶಾಂತಿಯ ಬರುವಿಕೆಯನ್ನು ಸೂಚಿಸುತ್ತದೆ. ನೀವು ಕಡಿಮೆ ಸಮಯದಲ್ಲಿ ದೊಡ್ಡ ಯಶಸ್ಸನ್ನು ಪಡೆಯುತ್ತೀರಿ ಎಂದು ಇದು ತೋರಿಸುತ್ತದೆ.
ಪಕ್ಷಿಗಳಿಗೆ ಆಹಾರ ನೀಡುವುದರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ. ಆದರೆ ಪಾರಿವಾಳಗಳಿಗೆ ಮನೆಯ ಛಾವಣಿಯ ಮೇಲೆ ಧಾನ್ಯಗಳನ್ನು ಹಾಕಬಾರದು, ಅಂಗಳದಲ್ಲಿ ಧಾನ್ಯಗಳನ್ನು ಹಾಕಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಾರಿವಾಳಕ್ಕೆ ಆಹಾರ ಹಾಕುವುದರಿಂದ ರಾಹು ಗ್ರಹದ ದೋಷಗಳು ನಿವಾರಣೆಯಾಗುತ್ತದೆ.
ವ್ಯಕ್ತಿಯ ಜಾತಕದಲ್ಲಿ ಬುಧ ದುರ್ಬಲನಾಗಿದ್ದರೆ, ಅವನು ಖಂಡಿತವಾಗಿಯೂ ಪಾರಿವಾಳಕ್ಕೆ ಆಹಾರವನ್ನು ನೀಡಬೇಕು. ಹೀಗೆ ಮಾಡುವುದರಿಂದ ಬುಧಗ್ರಹದ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಬಹುದು.
ಪಾರಿವಾಳಗಳಿಗೆ ಆಹಾರ ನೀಡುವುದರಿಂದ ಹಣದ ಸಮಸ್ಯೆ ದೂರವಾಗುತ್ತದೆ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿಯ ಕೃಪೆ ಉಳಿಯುತ್ತದೆ.
Capricorn ಜೊತೆಗೆ ಡೇಟಿಂಗ್ ಮಾಡಲು ಇಲ್ಲಿವೆ ಟಿಪ್ಸ್!
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.