Asianet Suvarna News Asianet Suvarna News

Capricorn ಜೊತೆಗೆ ಡೇಟಿಂಗ್ ಮಾಡಲು ಇಲ್ಲಿವೆ ಟಿಪ್ಸ್!

ನೀವು ಮಕರ ರಾಶಿಯವರ ಜೊತೆ ಡೇಟಿಂಗ್ ಹೋಗಲು ಬಯಸಿದರೆ ಇದು ನಿಮ್ಮನ್ನು ಖಂಡಿತವಾಗಿಯೂ ರೋಮಾಂಚನಕಾರಿಯಾಗಿಸುತ್ತದೆ. ಡೇಟಿಂಗ್ ಮಾರ್ಗದರ್ಶನಕ್ಕೆ ಸಂಬಂಧಿಸಿದಂತೆ, ಇವರೊಂದಿಗೆ ಡೇಟಿಂಗ್ ಮಾಡುವಾಗ ನೀವು ಪರಿಗಣಿಸಬೇಕಾದ ಕೆಲವು ಮುಖ್ಯ ಅಂಶಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. 

 

Tips to date with Capricorns!
Author
First Published Oct 1, 2022, 12:24 PM IST

ಮಕರ ರಾಶಿಯ ಜನರು ಡೇಟಿಂಗ್ ಹೋಗಲು ಇಷ್ಟ ಪಡುತ್ತಾರೆ. ಜೊತೆಗೆ ಇವರ ಆಸಕ್ತಿಗಳ ವಿಚಾರಕ್ಕೆ ಬಂದಾಗ ಇತರರಿಗೆ ಇವರು ಸಡಿಲವಾದ ಅಥವಾ ಅರ್ಥಹೀನ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ಅನಿಸಬಹುದು. ಇವರು ಸದಾಕಾಲ ಭವಿಷ್ಯವನ್ನು ನಿರೀಕ್ಷಿಸುತ್ತಿರುವುದರಿಂದ, ಉತ್ತಮ ವ್ಯಕ್ತಿತ್ವ ಹೊಂದಿರುವ ಜನರೊಂದಿಗೆ ಭೇಟಿ ಮಾಡಲು ಇಷ್ಟಪಡುತ್ತಾರೆ ಈ ವಿಚಾರದಲ್ಲಿ ಬೇರೆ ಎಲ್ಲಾ ರಾಶಿ ಚಿಹ್ನೆಗೆ ಹೋಲಿಸಿದರೆ ಇವರೇ ಮುಂಚೂಣಿಯಲ್ಲಿರುತ್ತಾರೆ.

ಮಕರ ರಾಶಿಯವರಿಗೆ ಸಂಗಾತಿಯ ಅಗತ್ಯವಿರುತ್ತದೆ, ಅವರು ವಿಷಯಗಳಲ್ಲಿ ಆತುರಪಡುವುದಿಲ್ಲ ಆದರೆ ಆತುರದ ಪ್ರಣಯಕ್ಕಿಂತ ಹೆಚ್ಚಾಗಿ ಪರಸ್ಪರ ನಂಬಿಕೆಯ (Trust) ಮೇಲೆ ನಿರ್ಮಿಸಲಾದ ಪಾಲುದಾರಿಕೆಗೆ ಬದ್ಧರಾಗುತ್ತಾರೆ. ಇವರ ಮನವೊಲಿಸಲು ಇಲ್ಲಿ ಕೆಲವು ಟಿಪ್ಸ್ ಗಳಿವೆ.

 ಇದನ್ನೂ ಓದಿ: Breakup ನೋವನ್ನು ಎದುರಿಸಲು ಸಿಂಹ ರಾಶಿಯವರಿಗೆ ಇಲ್ಲಿವೆ ಟಿಪ್ಸ್!

ನಿಮ್ಮ ಮೊದಲ ಡೇಟಿಂಗ್ ನಲ್ಲಿ, ನಿಮ್ಮನ್ನು ನೀವು ಉತ್ತಮವಾಗಿ ಪ್ರಸ್ತುತಪಡಿಸಿಕೊಳ್ಳಿ (Present)..

ನೋಟಕ್ಕೆ (Look) ಸಂಬಂಧಿಸಿದಂತೆ, ಮಕರ ರಾಶಿಯ ಜನರು ತಮ್ಮ ಸಂಗಾತಿಯು ಹೆಚ್ಚು ಆತ್ಮವಿಶ್ವಾಸವುಳ್ಳ ಹಾಗೂ ಗಮನಾರ್ಹವಾಗಿ ಕಾಣಿಸಿಕೊಳ್ಳುವಂತಹ ವ್ಯಕ್ತಿತ್ವ ಇರುವ ಜನರನ್ನು ಹೆಚ್ಚು ಇಷ್ಟಪಡುತ್ತಾರೆ. ಅವರ ಅಭಿರುಚಿಗಳು ಕೂಡ ವಿಭಿನ್ನವಾಗಿ ಮತ್ತು ಉತ್ತಮ ಇರುವುದರಿಂದ ಅವರು ಕೂಡ ತಮ್ಮ ನೋಟವನ್ನು ಹಾಗೆಯೇ ಕಾಪಾಡಿಕೊಳ್ಳುತ್ತಾರೆ ಹಾಗೂ ಇತರರ ಸೌಂದರ್ಯವನ್ನು (Beauty) ಕೂಡ ಮೆಚ್ಚಿಕೊಳ್ಳುತ್ತಾರೆ. ನಿಮ್ಮ ಡೇಟಿಂಗ್ ದಿನ ಉಡುಪನ್ನು (Dress) ನೀವು ಸಿದ್ಧಪಡಿಸುವಾಗ ಅವರ ಮತ್ತು ನಿಮ್ಮ ಆಯ್ಕೆಯ ವಿಚಾರಗಳು ಹೊಂದುತ್ತವೆ ಎಂದು ಅವರಿಗೆ ಅನಿಸುವ ವಿಶ್ವಾಸದ ಅಗತ್ಯವಿರುತ್ತದೆ ಎಂಬುದನ್ನು ನೆನಪಿಡಿ. ಇದು ಕೆಲಸದ ದಿನವಾಗಿದ್ದರೆ ನಿಮ್ಮ ಅತ್ಯುತ್ತಮ ಉದ್ಯೋಗದ ಉಡುಪು ಅಥವಾ ಗರಿಗರಿಯಾದ, ಕಟ್ ಫಿಟ್ ಅನ್ನು ಧರಿಸಿ. ಅಲ್ಲದೆ ವಾರಾಂತ್ಯದಲ್ಲಿ, ಈ ಸಂದರ್ಭದಲ್ಲಿ ನೀವು ನಿಮ್ಮ ವಾರ್ಡ್ರೋಬ್ನಲ್ಲಿ ತೆಳುವಾದ ಕಪ್ಪು ಉಡುಪನ್ನು ಧರಿಸಿಕೊಂಡು ಸುಂದರವಾಗಿ ಕಾಣಬಹುದು.

 ಇವರು ಮಾಡುವ ಅಸಾಮಾನ್ಯ ಫ್ಲರ್ಟಿಂಗ್ (Flirt) ವಿಧಾನಗಳಿಗೆ ಸಿದ್ಧರಾಗಿರಬೇಕು 

ಮಕರ ರಾಶಿಯವರು ನಿಮ್ಮನ್ನು ಚೆನ್ನಾಗಿ ತಿಳಿದುಕೊಳ್ಳಲು ಮತ್ತು ನಿಮ್ಮೊಂದಿಗೆ ನಿಕಟ ಬಂಧವನ್ನು ಬೆಳೆಸಲು ಫ್ಲರ್ಟಿಂಗ್ ಅನ್ನು ಬಳಸುತ್ತಾರೆ. ಅವರು ನಿಮ್ಮನ್ನು ಇಷ್ಟಪಟ್ಟರೆ, ಅವರು ನಿಜವಾಗಿಯೂ ಮೂರ್ಖರಾಗಬಹುದು ಅಥವಾ ಸಂಜೆಯ (Evening) ನಂತರ ಕಚ್ಚಾ ಹಾಸ್ಯಗಳನ್ನು ಮಾಡಲು ಪ್ರಾರಂಭಿಸಬಹುದು. ನಿಮ್ಮ ಹಾಸ್ಯದ ಪ್ರತ್ಯುತ್ತರಗಳು ಈ ರಾಶಿಯ ಜನರ ಹೃದಯಕ್ಕೆ ನೇರವಾಗಿ ಹಾರಿಸಲಾದ ಮನ್ಮಥನ ಬಾಣಗಳಾಗಿ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದು ನಿಮ್ಮ ಕೆಲಸವಾಗಿರುತ್ತದೆ. ಇದಕ್ಕಾಗಿ ಸಿದ್ದರಾಗಿರಿ.

ಇದನ್ನೂ ಓದಿ:ಈ zodiacs ಸಂಬಂಧದಲ್ಲಿ ಹೊಣೆಗಾರಿಕೆ ತೆಗೆದುಕೊಳ್ಳುವಲ್ಲಿ ಮೊದಲಿಗರು!

ಅವರಿಗೆ ಪ್ರೀತಿ (Love) ಬಹಳ ಮುಖ್ಯ

ಮಕರ ರಾಶಿಯವರಿಗೆ ಪ್ರೀತಿ ಬಹಳ ಮುಖ್ಯವಾದ ವಿಷಯವಾಗಿದೆ. ಅವರು ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಸಂಗಾತಿಯನ್ನು ಇಷ್ಟಪಡುತ್ತಾರೆ ಜೊತೆಗೆ ಅಷ್ಟೇ ಅವರ ಸಂಗಾತಿಯನ್ನು ಕೂಡಾ ಆರೈಕೆ ಮಾಡುತ್ತಾರೆ. ಅವರ ಸಂಗಾತಿಯ ವಿಚಾರದಲ್ಲಿ ಅವರ ಬೇಕು ಬೇಡಗಳನ್ನು ವಿಚಾರಿಸಿಕೊಳ್ಳುತ್ತಾ ಅವರಿಗೆ ಮಾರ್ಗದರ್ಶನ ನೀಡುತ್ತಾ ಸಂಗಾತಿಗೆ ಸಹಾಯ (Help) ಮಾಡಲು ಇಷ್ಟಪಡುತ್ತಾರೆ. ಹೀಗೆ ನಿಮ್ಮಿಬ್ಬರ ನಡುವೆ ಬಾಂಧವ್ಯ ಹೆಚ್ಚಿ, ನೀವು ಅವರ ಸ್ಥಳದಲ್ಲಿ ಹೆಚ್ಚಾಗಿ ಇರಲು ಪ್ರಾರಂಭಿಸಿದಾಗ, ನಿಮ್ಮ ಒಡನಾಡಿ ಶೀಘ್ರದಲ್ಲೇ ಸಂಪೂರ್ಣವಾಗಿ ನಿಮ್ಮೊಂದಿಗೆ ವಾಸಿಸಲು ಒತ್ತಾಯಿಸುತ್ತಾರೆ. ಅವರು ನಿಮ್ಮೊಂದಿಗೆ ಸೇರಿಕೊಂಡು ಕೆಲಸಗಳನ್ನು ಮಾಡುವುದನ್ನು ಆನಂದಿಸುತ್ತಾರೆ ಮತ್ತು ಅವರು ನಿಮಗೆ ಉತ್ತಮ ಜೀವನ ಸಲಹೆಯನ್ನು (Suggetion) ನೀಡಲು ಗಂಟೆಗಳ ಕಾಲ ಕಳೆಯುತ್ತಾರೆ.

Follow Us:
Download App:
  • android
  • ios