Mythology and Navagraha: ನಮ್ಮನ್ನಾಳುವ ನವಗ್ರಹಗಳ ಬಗ್ಗೆ ನಿಮಗೆಷ್ಟು ಗೊತ್ತು?
ನವಗ್ರಹಗಳಲ್ಲಿ ಒಂದೊಂದು ಗ್ರಹದ್ದೂ ಒಂದೊಂದು ವಿಶಿಷ್ಠ ಕತೆ. ದೇವಸ್ಥಾನಗಳಲ್ಲಿ ನವಗ್ರಹಗಳೇಕೆ ಇರುತ್ತವೆ, ಇವುಗಳ ಕತೆಯೇನು, ಮನುಷ್ಯನ ಜೀವನದಲ್ಲಿ ನವಗ್ರಹಗಳ ಪಾತ್ರವೇನು?
ಗ್ರಹಗಳು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ತಮ್ಮದೇ ಆದ ಪ್ರಭಾವ ಬೀರುತ್ತವೆ. ಇದೇನು ಕೇವಲ ಜ್ಯೋತಿಷ್ಯದ ಮಾತಲ್ಲ, ವಿಜ್ಞಾನ ಕೂಡಾ ಈ ಮಾತನ್ನು ಒಪ್ಪಿಕೊಂಡಿದೆ. ಬಹುಜ್ಞಾನಿಗಳಾದ ನಮ್ಮ ಋಷಿಮುನಿಗಳು ಈ ಬ್ರಹ್ಮಾಂಡದ ಬಗ್ಗೆ ಬಹಳಷ್ಟನ್ನು ಅಧ್ಯಯನ ಮಾಡಿ ತಿಳಿದುಕೊಂಡಿದ್ದರು. ಈ ಕಾಸ್ಮೋಸ್ ಹಾಗೂ ಜೀವಿಗಳ ಮೇಲೆ ಅವುಗಳ ಪ್ರಭಾವವನ್ನರಿತ ಇವರೆಲ್ಲ ಬ್ರಹ್ಮಜ್ಞಾನಿಗಳೇ ಸರಿ. ಪರಾಶರ ಋಷಿ, ಜೈಮಿನಿ ಋಷಿಯಂಥ ಜ್ಞಾನಿಗಳು ವೇದಗಳ ಆಧಾರದ ಮೇಲೆ ಜ್ಯೋತಿಷ್ಯ ಶಾಸ್ತ್ರವನ್ನು ಸಂಪಾದಿಸಿದ್ದಾರೆ. ಈ ಜ್ಯೋತಿಷ್ಯ ಶಾಸ್ತ್ರ(Vedic Astrology)ದಲ್ಲಿ ನವಗ್ರಹಗಳಿಗೆ ಬಹಳ ಪ್ರಮುಖ ಸ್ಥಾನವಿದೆ. ನಾವೆಲ್ಲರೂ ನವಗ್ರಹಗಳ ಬಗ್ಗೆ ಕೇಳಿಯೇ ಇರುತ್ತೇವೆ. ಆದರೆ, ಅವುಗಳ ಕುರಿತ ಈ ಆಸಕ್ತಿಕರ ಮಾಹಿತಿಗಳು ನಿಮಗೆ ಗೊತ್ತಿರಲಿಕ್ಕಿಲ್ಲ.
- ರಾಹು ಹಾಗೂ ಕೇತುವನ್ನು ಹೊರತುಪಡಿಸಿ ನವಗ್ರಹ(Navagraha)ದಲ್ಲಿರುವ ಪ್ರತಿಯೊಂದು ಗ್ರಹವೂ ವಾರದ ಒಂದೊಂದು ದಿನವನ್ನು ಆಳುತ್ತವೆ.
- ಹಿಂದೂಗಳ ದೇವಾಲಯದಲ್ಲಿ ಉಪದೇವರಾಗಿ ನವಗ್ರಹಗಳನ್ನು ನಿರ್ಮಿಸಲಾಗಿರುತ್ತದೆ. ಎಲ್ಲರಿಗೂ ತಿಳಿದಿರುವಂತೆ ಎಲ್ಲಕ್ಕಿಂತ ಮೊದಲಿನ ಪೂಜೆ ಗಣೇಶನಿಗೆ. ಗಣಪತಿಯ ಪೂಜೆಯಾದ ಕೂಡಲೇ ನವಗ್ರಹ ಪೂಜೆ ನಡೆಸಲಾಗುತ್ತದೆ. ಹಿಂದೂ ದೇವಾಲಯ(temple)ಗಳಲ್ಲಿರುವ ನವಗ್ರಹಗಳ ಕೆಲಸವು ದೇವಾಲಯವನ್ನು ಹಾಗೂ ಅಲ್ಲಿಗೆ ಬರುವ ಭಕ್ತರನ್ನು ಕಾಪಾಡುವುದು. ನವಗ್ರಹಗಳನ್ನು ಬೇರೆ ಬೆೇರೆ ಮಂಟಪದಲ್ಲಿರಿಸುವುದಾದರೂ, ಒಂದೇ ಮಂಟಪದಲ್ಲಿ ಇರಿಸುವುದಾದರೂ, ಯಾವುದೇ ಎರಡು ಗ್ರಹಗಳು ಮುಖಾಮುಖಿಯಾಗಿರುವಂತಿಲ್ಲ.
- ಸೂರ್ಯನು ಆದಿತ್ಯರಲ್ಲಿ ಒಬ್ಬನಾಗಿದ್ದಾನೆ. ಕಶ್ಯಪ ಹಾಗೂ ಅದಿತಿ ದಂಪತಿಯ ಪುತ್ರ. ನಮ್ಮ ಕಣ್ಣಿಗೆ ಪ್ರತಿ ನಿತ್ಯ ಕಾಣುವ ದೇವರು ಎಂದೇ ಅವನನ್ನು ಪರಿಗಣಿಸಲಾಗುತ್ತದೆ. ಸೂರ್ಯನು ಉಳಿದ ಗ್ರಹಗಳಿಗೆ ನಾಯಕ(leader)ನಾಗಿದ್ದಾನೆ. ಭಾನುವಾರವು ಸೂರ್ಯ ಗ್ರಹದ ದಿನವಾಗಿದೆ.
- ಚಂದ್ರ(moon)ನು ಫಲವತ್ತತೆ(fertility)ಯ ದೇವರಾಗಿದ್ದಾನೆ. ದಕ್ಷ ಪ್ರಜಾಪತಿಯ ಹೆಣ್ಣುಮಕ್ಕಳನ್ನು ವಿವಾಹವಾಗಿರುವ ಅವನಿಗೆ 27 ಪತ್ನಿಯರಿದ್ದಾರೆ. ಈ 27 ಪತ್ನಿಯರು 27 ನಕ್ಷತ್ರ ಪುಂಜಗಳನ್ನು ಪ್ರತಿನಿಧಿಸುತ್ತಾರೆ. ಈ ಪತ್ನಿಯರಲ್ಲಿ ಕೇವಲ ರೋಹಿಣಿಗೆ ಮಾತ್ರ ಹೆಚ್ಚು ಪ್ರೀತಿ ತೋರುವ ಬಗ್ಗೆ ಉಳಿದ ಹೆಣ್ಣುಮಕ್ಕಳು ತಂದೆಯಲ್ಲಿ ದೂರುತ್ತಾರೆ. ಆಗ ದಕ್ಷ(Daksha)ನ ಶಾಪಕ್ಕೊಳಗಾದ ಚಂದ್ರ ದಿನೇ ದಿನೇ ಕ್ಷೀಣಿಸಲಾರಂಭಿಸುತ್ತಾನೆ. ನಂತರ ಶಿವನ ಅನುಗ್ರಹದಿಂದ ಈ ಶಾಪ ಸರಿದೂಗಿಸಲಾಗುತ್ತದೆ. ನಂತರದಲ್ಲಿ ಚಂದ್ರ 15 ದಿನ ಕ್ಷೀಣಿಸಿದರೆ, ಉಳಿದ 15 ದಿನ ವೃದ್ಧಿಯಾಗುತ್ತಾನೆ.
Career and Zodiacs: ನಿಮ್ಮ ರಾಶಿಗೆ ಯಾವ ವೃತ್ತಿ ಬೆಸ್ಟ್ ತಿಳ್ಕೊಳಿ..
- ಮಂಗಳ(Mars)ವು ಭೂಮಿಯ ಮಗನೆಂದೇ ಪರಿಗಣಿತವಾಗಿದೆ. ಅದಕ್ಕೇ ಮಂಗಳಕ್ಕೆ ಭೌಮ ಎಂಬ ಹೆಸರಿಡಲಾಗಿದೆ.
- ಬುಧನು ಚಂದ್ರ ಹಾಗೂ ತಾರಾ ಜೋಡಿಯ ಮಗನಾಗಿದ್ದಾನೆ. ತಾರಾ ಪತಿ ಬೃಹಸ್ಪತಿಯಾಗಿದ್ದರೂ, ಚಂದ್ರನಿಗೆ ಜನಿಸಿದವ ಬುಧ. ಇದೇ ಕಾರಣಕ್ಕೆ ಹುಟ್ಟುವ ಮೊದಲೇ ಬೃಹಸ್ಪತಿಯ ಶಾಪಕ್ಕೊಳಗಾಗಿ ಹೆಣ್ಣೂ ಅಲ್ಲದ, ಗಂಡೂ ಅಲ್ಲದ ತೃತೀಯ ಲಿಂಗಿ(transgender)ಯಾಗುತ್ತಾನೆ ಬುಧ. ಬುಧವಾರವು ಬುಧ ಗ್ರಹದ ದಿನ. ಬೃಹಸ್ಪತಿ ಎಂದರೆ ಗುರು ಗ್ರಹ. ಅತಿಯಾದ ಜ್ಞಾನಿಯಾದ ಈತ ದೇವತೆಗಳ ಗುರು. ಹಾಗಾಗಿಯೇ ಈತನಿಗೆ ಗುರು ಹೆಸರು ಬಂದಿದೆ. ಗುರುವಾರವು ಗುರು ಗ್ರಹದ ದಿನ.
Rahu kaal: ರಾಹುಕಾಲದ ಬಗ್ಗೆ ನೀವು ತಿಳ್ಕೊಳ್ಬೇಕಾಗಿರೋದಿಷ್ಟು
- ಶುಕ್ರನು ಒಬ್ಬ ವ್ಯಕ್ತಿಯ ಜಾತಕದಲ್ಲಿ 20 ವರ್ಷಗಳ ಕಾಲ ಚಟುವಟಿಕೆಯಿಂದಿರುತ್ತಾನೆ. ಈ ಸಂದರ್ಭವನ್ನೇ ಶುಕ್ರದೆಶೆ ಎನ್ನುವುದು. ಯಾರ ಜಾತಕದಲ್ಲಿ ಶುಕ್ರದೆಶೆ ನಡೆಯುತ್ತಿರುತ್ತದೋ ಆ ಸಂದರ್ಭದಲ್ಲಿ ವ್ಯಕ್ತಿಯ ಜೀವನದಲ್ಲಿ ಸಂಪತ್ತು(fortune), ಧನ, ಲಕ್ಷುರಿಗಳು ಧಾರಾಳವಾಗಿ ದೊರಕುತ್ತವೆ. ಶುಕ್ರ ಎಂದರೆ ಶುಕ್ರಾಚಾರ್ಯರು. ಇವರೂ ಕೂಡಾ ಗುರುವೇ, ಆದರೆ ರಾಕ್ಷಸರಿಗೆ.
- ಶನಿಯು ಸೂರ್ಯ ಹಾಗೂ ಛಾಯಾ ದಂಪತಿಯ ಪುತ್ರನಾಗಿದ್ದಾನೆ. ಶನಿಯ ಅಣ್ಣ ಯಮನು ವ್ಯಕ್ತಿಯು ಸತ್ತ ಬಳಿಕ ಅವರ ಸರಿ ತಪ್ಪುಗಳನ್ನು ಲೆಕ್ಕ ಹಾಕಿ ಶಿಕ್ಷಿಸಿದರೆ, ಶನಿಯು ವ್ಯಕ್ತಿ ಬದುಕಿರುವಾಗಲೇ ಆತನ ಕರ್ಮಗಳಿಗೆ ಶಿಕ್ಷೆ ವಿಧಿಸುತ್ತಾನೆ.
- ರಾಹು ಹಾಗೂ ಕೇತುಗಳು ಗ್ರಹಗಳಲ್ಲ. ಅವು ಚಂದ್ರನ ಏರಿಕೆ ಹಾಗೂ ಇಳಿಕೆಯ ಬಿಂದುಗಳು. ಸಮುದ್ರ ಮಂಥನದ ಸಂದರ್ಭದಲ್ಲಿ ರಾಹುವು ಸ್ವಲ್ಪ ಅಮೃತವನ್ನು ಕುಡಿಯುತ್ತಾನೆ. ಅದು ಅವನ ಗಂಟಲಿಗೆ ಸೇರುವ ಮುಂಚೆಯೇ ವಿಷ್ಣುವು ಮೋಹಿನಿ ಅವತಾರದಲ್ಲಿ ಬಂದು ರಾಹುವಿನ ತಲೆ ಕಡೆಯುತ್ತಾಳೆ. ಆದರೆ, ಆತನ ತಲೆಯದಾಗಲೇ ಅಮೃತ ಕುಡಿದಿದ್ದರಿಂದ ಅಮರವಾಗುತ್ತದೆ. ಆತನ ಉಳಿದ ದೇಹವೇ ಕೇತುವಾಗಿದೆ.