Asianet Suvarna News Asianet Suvarna News

Rahu kaal: ರಾಹುಕಾಲದ ಬಗ್ಗೆ ನೀವು ತಿಳ್ಕೊಳ್ಬೇಕಾಗಿರೋದಿಷ್ಟು

ರಾಹು ಕಾಲ ಎಂಬ ಮಾತನ್ನು ಎಲ್ಲರೂ ಕೇಳಿಯೇ ಇರುತ್ತೇವೆ. ರಾಹು ಕಾಲದಲ್ಲಿ ಶುಭ ಕೆಲಸಗಳನ್ನು ಯಾರೂ ಮಾಡುವುದಿಲ್ಲ. ಆದರೆ, ಅದಕ್ಕಿಂತ ಹೆಚ್ಚು ರಾಹು ಕಾಲದ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಏನಿದು ರಾಹು ಕಾಲ?

Things You Need To Know About Rahu Kaal skr
Author
Bangalore, First Published Dec 5, 2021, 7:28 PM IST

ಹೊರಗೆ ಪ್ರವಾಸ ಹೊರಟರೆ ಹಿರಿಯರು, ಅಯ್ಯೋ ಈಗ ರಾಹು ಕಾಲ, ಸ್ವಲ್ಪ ಹೊತ್ತು ಬಿಟ್ಟು ಹೊರಡಿ ಎನ್ನುತ್ತಾರೆ. ಮದುವೆ, ಮುಂಜಿಗಂತೂ ಅರ್ಚಕರು ರಾಹುಕಾಲವನ್ನು ನೋಡಿಯೇ ಲಗ್ನವಿಡುತ್ತಾರೆ. ಜೀವನದ ಪ್ರಮುಖ ವಿಷಯಗಳಿಗೆ ಸಹಿ ಹಾಕುವಾಗ, ಪ್ರಮುಖರನ್ನು ಭೇಟಿಯಾಗುವಾಗ ರಾಹು ಕಾಲ ಕಳೆಯಲಿ ಎಂದು ಕಾಯುತ್ತೇವೆ. ಹಾಗಿದ್ದರೆ ಏನಿದು ರಾಹುಕಾಲ?

ರಾಹು ಯಾರು?
ಹಿಂದೂ ಪುರಾಣ(Hindu Mythology)ಗಳ ಪ್ರಕಾರ, ರಾಹುವು ದೇಹವಿಲ್ಲದ ಕೇವಲ ತಲೆಯನ್ನು ಹೊಂದಿದ ಸ್ವರ್ಭನು(Svarbhanu) ಹೆಸರಿನ ಒಬ್ಬ ರಾಕ್ಷಸ. ಈ ರಾಕ್ಷಸನು ಸೂರ್ಯ ಹಾಗೂ ಚಂದ್ರನನ್ನೇ ನುಂಗಿ ಗ್ರಹಣಗಳನ್ನು ಉಂಟು ಮಾಡುವ ದುಷ್ಟ. ಈತನ ತಲೆ ಮನುಷ್ಯನದ್ದಾಗಿದ್ದು, ದೇಹವು ಹಾವಿನದಾಗಿದೆ. 8 ಕಪ್ಪು ಕುದುರೆಗಳಿಂದ ಓಡುವ ರಥ ಈತನ ವಾಹನ. ರಾಹುವಿನ ಮತ್ತೊಂದು ಹೆಸರೇ ಭಯಾನಕ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ ಒಂಬತ್ತು ಗ್ರಹಗಳಲ್ಲಿ ರಾಹುವೂ ಒಂದು. ಉಳಿದೆಲ್ಲ ಗ್ರಹಗಳಿಗೆ ವಾರದಲ್ಲೊಂದು ದಿನವಿದ್ದರೆ, ರಾಹುವಿಗೆ ಪ್ರತಿ ದಿನದಲ್ಲಿ 90 ನಿಮಿಷಗಳ ಕಾಲ ಇರುತ್ತದೆ. ಇದೇ ಸಮಯವನ್ನು ರಾಹು ಕಾಲ ಎನ್ನುವುದು. 

Dharmasthala: ಜೈನ, ಶೈವರ ಜನಪ್ರಿಯ ದೇಗುಲ ಧರ್ಮಸ್ಥಳದ ಬಗ್ಗೆ ನಿಮಗೆಷ್ಟು ಗೊತ್ತು?

ರಾಹು ಕಾಲ(RahuKaal)
ಬೆಳಗ್ಗೆ ಸೂರ್ಯೋದಯದಿಂದ ಸಂಜೆ ಸೂರ್ಯಸ್ತದ ನಡುವಿನ ಸಮಯದಲ್ಲಿ ಒಂದೊಂದು ದಿನ ಒಂದೊಂದು ನಿರ್ದಿಷ್ಟ ಸಮಯದಲ್ಲಿ ಒಂದೂವರೆ ಗಂಟೆಗಳ ಕಾಲ ರಾಹು ಕಾಲ ಇರುತ್ತದೆ. ಹೊಸ ಕೆಲಸಗಳು, ವಿವಾಹ ಮಾತುಕತೆ, ಪ್ರವಾಸ, ಸಂದರ್ಶನ, ಉದ್ಯಮ ಒಪ್ಪಂದಗಳು(business deals), ಆಸ್ತಿ ಮಾರಾಟ ಅಥವಾ ಕೊಳ್ಳುವಿಕೆ ಈ ರಾಹು ಕಾಲದಲ್ಲಿ ಮಾಡಬಾರದು ಎಂದು ಜ್ಯೋತಿಷ್ಯ ಹೇಳುತ್ತದೆ. ಒಂದು ವೇಳೆ ಮಾಡಿದರೆ, ಅದರಿಂದ ಉತ್ತಮ ಫಲಿತಾಂಶ ಕಾಣಲು ಸಾಧ್ಯವಾಗದು ಎನ್ನಲಾಗುತ್ತದೆ. 

ಆರಂಭಕ್ಕಷ್ಟೇ
ರಾಹು ಕಾಲವು ಆರಂಭಕ್ಕಷ್ಟೇ ಸೀಮಿತವಾಗಿದೆ. ಅಂದರೆ, ಶುಭ ಲಗ್ನದಲ್ಲಿ ಆರಂಭಿಸಿದ ವಿಷಯವನ್ನು ರಾಹು ಕಾಲ ಬಂದ ನಂತರ ಮುಂದುವರೆಸಲು ತೊಂದರೆ ಇಲ್ಲ. ಉದಾಹರಣೆಗೆ ಮನೆ ಕಟ್ಟಲು ಭೂಮಿ ಪೂಜೆ ಮಾಡುವಾಗ ಶುಭಲಗ್ನ ನೋಡಬೇಕು. ನಂತರ ಮನೆ ಕಟ್ಟಲು ರಾಹುಕಾಲದ ಬಾಧೆ ಇರುವುದಿಲ್ಲ. 

health benefits peepal tree: ಅರಳಿಯಲ್ಲಡಗಿದೆ ಇಂಪೊಟೆನ್ಸಿಗೆ ಮದ್ದು!

ಮೋಹಿನಿ ತಲೆ ಕಡಿದಳು!
ಸಮುದ್ರ ಮಂಥನದ ಸಮಯದಲ್ಲಿ, ಅಸುರನಾದ ರಾಹುವಿಗೆ ಸ್ವಲ್ಪ ಅಮೃತ ದೊರಕಿತು. ಅವನದನ್ನು ಕುಡಿದನು. ಆದರೆ ಅಮೃತವು ಆತನ ಗಂಟಲಿನ ಮೂಲಕ ದೇಹ(body)ಕ್ಕೆ ಹಾದು ಹೋಗುವಷ್ಟರಲ್ಲಿ, ವಿಷ್ಣುವು ಮೋಹಿನಿಯ ಅವತಾರದಲ್ಲಿ ಬಂದು ಆತನ ತಲೆ ಕತ್ತರಿಸಿ ಹಾಕಿದಳು. ಆದರೆ ಅಷ್ಟರಲ್ಲಾಗಲೇ ತಲೆ ಭಾಗಕ್ಕೆ ಅಮೃತ ತಾಕಿದ್ದರಿಂದ ತಲೆ(head)ಯ ಭಾಗವು ಸಾವಿಲ್ಲದೆ ಅಮರವಾಯಿತು. 
ಈತ ರಾಕ್ಷಸ(demon)ನಾದ್ದರಿಂದ ಅಧರ್ಮೀಯ, ಕಠಿಣ ಮಾತು, ಭ್ರಾಂತಿಕಾರಕತೆ, ಸುಳ್ಳು, ಅಶುಚಿತ್ವ, ಹೊಟ್ಟೆಯ ಹುಣ್ಣುಗಳು, ಮೂಳೆಗಳು, ಹಾಗು ದೇಹಾಂತರ ವೇಷಧಾರಿ ರೂಪವನ್ನು ಪ್ರತಿನಿಧಿಸುತ್ತಾನೆ. ರಾಹು, ಕೆಟ್ಟವರ ಶಕ್ತಿಯನ್ನು ಬಲಪಡಿಸುವುದಲ್ಲದೆ, ಒಬ್ಬ ಸ್ನೇಹಿತನನ್ನೇ ಶತ್ರುವನ್ನಾಗಿ ಬದಲಿಸಬಲ್ಲ. 

ರಾಹುದೋಷ ಪರಿಹಾರ
ಹಾಗಂಥ ರಾಹುವಿಗೂ ಕೊಂಚ ಒಳ್ಳೆ ಮುಖವುಂಟು. ವಿಷಭರಿತ ಹಾವು(snake) ಕಡಿದಾಗ ರಾಹುವನ್ನು ಪೂಜಿಸಲಾಗುತ್ತದೆ. ರಾಹುವಿನಿಂದ ಪ್ರಭಾವಿತ ತೊಂದರೆಗಳು ಆಂಜನೇಯ(Hanuman)ನ ಆರಾಧನೆಯಿಂದ ಶಮನಗೊಳ್ಳುತ್ತವೆ.
ರಾಹುವಿನಿಂದ ಕೆಡುಕನ್ನು ಅನುಭವಿಸುತ್ತಿರುವ ವ್ಯಕ್ತಿಯು ದೋಷ ಪರಿಹಾರಕ್ಕಾಗಿ ಭಾನುವಾರ ಬೆಳಗ್ಗೆ ಹೊತ್ತಿನಲ್ಲಿ ಮೂಲಂಗಿ, ಸಾಸಿವೆ, ಕಂಬಳಿ, ಎಳ್ಳು, ಕಲ್ಲಿದ್ದಲು, ಕೇಸರಿ, ಸೀಸವನ್ನು ದಾನ ಮಾಡಬೇಕು. 

Follow Us:
Download App:
  • android
  • ios