Asianet Suvarna News Asianet Suvarna News

ಶುಭ ಗ್ರಹಗಳಿಂದ ಕೆಟ್ಟ ಫಲ! ಅಶುಭ ಗ್ರಹದಿಂದ ಶುಭ ಫಲ..!

ಏನೋ ರಾಜ ಯೋಗ ಬರುತ್ತಿದೆ. ಶುಕ್ರದೆಸೆಯಂತೆ. ಇನ್ನು ಆಗುವುದೆಲ್ಲವೂ ಶುಭವೇ. ಸೈಟು, ಮನೆ ಎಲ್ಲವೂ ಆಗುತ್ತೆ. ಕಂಡ ಕನಸು ನನಸಾಗುತ್ತೆ ಅಂತ ಕನಸು ಕಂಡವರಿಗೆ ಅಶುಭವೂ ಆಗಬಹುದು. ಏಕೆ?

Good Planets Bring Misfortune While Bad Planets Bring luck - A Belief Held by astrology
Author
First Published Jul 27, 2023, 5:07 PM IST | Last Updated Jul 27, 2023, 5:07 PM IST

- ಶ್ರೀಕಂಠ ಶಾಸ್ತ್ರಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಹೌದಾ? ಇದು ಸಾಧ್ಯವಾ? ಹೌದು ಇಂಥ ಒಂದು ಸಾಧ್ಯತೆ ಇರುತ್ತದೆ. ನವಗ್ರಹಗಳಲ್ಲಿ ಎರಡು ವಿಭಾಗ ಇವೆ. ಒಂದು ಶುಭ ಗ್ರಹಗಳು, ಮತ್ತೊಂದು ಅಶುಭ ಗ್ರಹಗಳು. ಶುಭಗ್ರಹಗಳು ಶುಭವನ್ನು ಕರುಣಿಸುತ್ತವೆ. ಅಶುಭ ಗ್ರಹಗಳು ಅಶುಭವನ್ನೇ ಕರುಣಿಸುತ್ತವೆ. ಇದು ಸಾಮಾನ್ಯರಿಗೂ ಗೊತ್ತಿರುವ ಸಂಗತಿ. ಇಷ್ಟೇ ಆಗಿದ್ದರೆ ಇದನ್ನು ಬರೆಯುವ ಅಗತ್ಯವೂ ಇರುತ್ತಿರಲಿಲ್ಲ. ನೀವು ಓದಬೇಕಾಗಿಯೂ ಇರಲಿಲ್ಲ. ಆದರೆ ಇಲ್ಲಿ ಒಂದು ಸೂಕ್ಷ್ಮ ವಿಚಾರವಿದೆ. ಎಷ್ಟೋಬಾರಿ ಜಾತಕದಲ್ಲಿ ಶುಭಗ್ರಹಗಳು ಶುಭ ಫಲಗಳನ್ನೇ ಕರುಣಿಸುತ್ತವೆ ಅಂದುಕೊಂಡಿರ್ತೇವೆ. ಇನ್ನೇನು ನಮ್ಮ ಜೀವನದಲ್ಲಿ ಶುಕ್ರದಶೆ ಶುರುವಾಯ್ತು. ಸೈಟು, ಮನೆ, ಗಾಡಿ, ಎಲ್ಲ ಬಂದ್ಬಿಡುತ್ತೆ ಅಂದು ಕೊಳ್ತೇವೆ. ಆದ್ರೆ ಶುಕ್ರದೆಶೆ ಶುರುವಾಗಿ 6 ತಿಂಗಳಾದ್ರೂ ಪರಿಸ್ಥಿತಿ ಬದಲಾಗಿರೋದಿಲ್ಲ. ಇದಕ್ಕೆ ಕಾರಣ ಏನು? ಶುಭಗ್ರಹ-ಅಶುಭ ಗ್ರಹ ಅಂತ ನಾವು ವಿಭಾಗ ಮಾಡ್ಕೊಂಡು ಆ ಹೆಸರಿನಿಂದಲೇ ತಬ್ಬಿಬ್ಬಾಗುವುದು ಹೆಚ್ಚು. ಆದರೆ ಶಾಸ್ತ್ರ ಬೇರೆಯದ್ದೇ ಸತ್ಯವನ್ನು ತೆರೆದಿಡುತ್ತದೆ. ಏನು ಆ ಸತ್ಯ?

ಶಾಸ್ತ್ರದಲ್ಲಿ ಕೆಲವೊಮ್ಮೆ ಶುಭಗ್ರಹಗಳೂ ಕೆಡುಕನ್ನ ಮಾಡಬಲ್ಲವು. ಪಾಪಗ್ರಹಗಳೂ ಶುಭವನ್ನು ಉಂಟು ಮಾಡಬಲ್ಲರು ಎಂಬುದನ್ನ ಶಾಸ್ತ್ರಕಾರರು ಆಧಾರ ಸಹಿತ ತೋರಿಸಿದ್ದಾರೆ. ಹೇಗೆ..? ಯಾವ ಸಂದರ್ಣದಲ್ಲಿ ಇದು ಸಾಧ್ಯ ತಿಳಿಯೋಣ.

ಅಧಿಕ ಮಾಸದಲ್ಲಿ ಏನು ಮಾಡಬೇಕು, ಮಾಡಬಾರದು ?

'ಪಾಪೋಪಿ ಸ್ವಗೃಹಸ್ಥಶ್ಚೇದ್ಭಾವವೃದ್ಧಿಂ ಕರೋತ್ಯಲಮ್' ಈ ಒಂದು ಸೂತ್ರ ಹೇಳುವ ಹಾಗೆ ಪಾಪ ಗ್ರಹ ತನ್ನ ರಾಶಿಯಲ್ಲಿ ಹಾಗೂ ತನ್ನದೇ ಉಚ್ಛ ರಾಶಿ ಸಂಚರಿಸುವಾಗ ಹೆಚ್ಚಿನ ಶುಭವನ್ನುಂಟು ಮಾಡುತ್ತವೆ. ಉದಾಹರಣೆಗೆ ಶನೈಶ್ಚರ ಒಂದು ಪಾಪಗ್ರಹ ಆದರೆ ಶನೈಶ್ಚರ ಮಕರ-ಕುಂಭ-ತುಲಾ ರಾಶಿಗಳಲ್ಲಿ ಸಂಚರಿಸುವಾಗ ಶುಭವನ್ನೇ ತರುತ್ತಾನೆ.

ಇನ್ನೊಂದು ಸೂತ್ರ ಗಮನಿಸೋಣ :
'ಸ್ವೋಚ್ಚಸ್ಥೋಪಿ ಶೂಭೋ ಭಾವಹಾನಿಂ ದು:ಸ್ಥಾನಪೋ ಯದಿ' ಈ ಸೂತ್ರದ ಅರ್ಥ, ಶುಭ ಗ್ರಹಗಳು ಉಚ್ಚ ಸ್ಥಾನದಲ್ಲಿದ್ದರೂ, ಒಂದು ವೇಳೆ ಅವರು ದು:ಸ್ಥಾನದ ಅಧಿಪತಿಗಳಾಗಿದ್ದರೆ, ಫಲವನ್ನು ನಾಶ ಮಾಡುತ್ತಾರೆ ಎಂಬುದು ಇದರರ್ಥ. ಉದಾಹರಣೆಗೆ ಮೇಷ ಲಗ್ನದ ಜಾತಕದಲ್ಲಿ ವ್ಯಯಾಧಿಪತಿಯಾದ ಗುರುವು ಧನಸ್ಥಾನದಲ್ಲಿದ್ದರೆ, ಶುಭಗ್ರಹ ಎನಿಸಿಕೊಂಡ ಗುರುವೂ ವ್ಯಯವನ್ನೂ ಧನನಾಶ ಫಲವನ್ನೂ ತರುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ.

ಶನೈಶ್ಚರ ಗ್ರಹ ದೋಷ ತರುತ್ತೆವಾತ ಸಂಬಂಧಿ ಅನಾರೋಗ್ಯ: ಪರಿಹಾರ ಹೇಳ್ತಾರೆ ಶ್ರೀಕಂಠ ಶಾಸ್ತ್ರಿಗಳು

ಇದೆಲ್ಲಕ್ಕಿಂತ ಮುಖ್ಯವಾಗಿ ಜಾತಕದಲ್ಲಿ ಯಾರು ಬಲಿಷ್ಠವಾಗಿದ್ದಾರೋ ,ಅವರ ದಶಾ-ಭುಕ್ತಿ ಕಾಲಗಳು ನಡೆಯುತ್ತಿರಬೇಕು. ಗೋಚಾರದಲ್ಲೂ ಆ ಗ್ರಹಗಳು ಬಲಿಷ್ಠ ಸ್ಥಾನಗಳಲ್ಲಿ ಇರಬೇಕು. ಆಗ ಮಾತ್ರವೇ ಶುಭ ಫಲಗಳನ್ನು ಮನಷ್ಯರು ಕಾಣಲಿಕ್ಕೆ ಸಾಧ್ಯ.

Latest Videos
Follow Us:
Download App:
  • android
  • ios