ತುಟಿಯ ಸುತ್ತ ಮಚ್ಚೆಯುಳ್ಳವರು ಆಕರ್ಷಕ ವ್ಯಕ್ತಿತ್ವ, ಅದೃಷ್ಟ, ಸಂತೋಷವನ್ನು ಹೊಂದಿರುತ್ತಾರೆ. ಆದರೆ, ಜೀವನದಲ್ಲಿ ಹೋರಾಟ, ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮಾನಸಿಕವಾಗಿ ಬಲಿಷ್ಠರಾಗಿ, ಕಷ್ಟಗಳನ್ನು ಧೈರ್ಯದಿಂದ ಎದುರಿಸುತ್ತಾರೆ. ಪ್ರೇಮ ಜೀವನ ನೋವಿನಿಂದ ಕೂಡಿರಬಹುದು. ಶ್ರದ್ಧಾ, ರೇಖಾ, ಕಿಯಾರಾ, ಅನಿತಾ ಇವರ ಜೀವನವೇ ಇದಕ್ಕೆ ಸಾಕ್ಷಿ.
ಅಡಿಯಿಂದ ಮುಡಿಯವರೆಗೆ ಇರುವ ಮಚ್ಚೆಗಳು ನಮ್ಮ ವ್ಯಕ್ವಿತ್ವವನ್ನು ತೋರಿಸುತ್ತವೆ. ಇವು ನಮ್ಮ ವ್ಯಕ್ತಿತ್ವ, ನಮ್ಮ ಭವಿಷ್ಯ, ನಮ್ಮ ಜೀವನದ ಕ್ರಮ, ಕಷ್ಟ-ಸುಖ ಎಲ್ಲವನ್ನೂ ಹೇಳುತ್ತದೆ ಎಂದು ಸಾಮುದ್ರಿಕ ಗ್ರಂಥಗಳಲ್ಲಿ ವಿವರಿಸಲಾಗಿದೆ. ಮಚ್ಚೆಗಳಲ್ಲಿಯೂ ವಿಭಿನ್ನ ರೀತಿಯ ಮಚ್ಚೆಗಳು ಇರುತ್ತವೆ. ಅವುಗಳ ಆಧಾರದ ಮೇಲೆ ಇವುಗಳನ್ನೆಲ್ಲಾ ಹೇಳಲಾಗುತ್ತದೆ. ದೇಹದ ವಿನ್ಯಾಸ ಮತ್ತು ದೇಹದಲ್ಲಿ ಇರುವ ಗುರುತುಗಳನ್ನು ನೋಡುವ ಮೂಲಕ ವ್ಯಕ್ತಿಯ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಹೇಳಬಹುದು ಎಂದೇ ಹೇಳಲಾಗುತ್ತದೆ. ದೇಹದ ಮೇಲೆ ಇರುವ ಕೆಲವು ಮಚ್ಚೆಗಳು ವ್ಯಕ್ತಿಯನ್ನು ಅದೃಷ್ಟವಂತರನ್ನಾಗಿ ಮಾಡಿದರೆ ಕೆಲವು ಮಚ್ಚೆಗಳು ನಿಮಗೆ ಅಶುಭಕರವೆಂದು ಸೂಚಿಸುತ್ತದೆ. ಇನ್ನು ತುಟಿಯ ಆಸುಪಾಸು ಇರುವ ಮಚ್ಚೆಗಳು ಏನನ್ನು ಹೇಳುತ್ತವೆ ಎನ್ನುವ ಬಗ್ಗೆ ಇದರಲ್ಲಿ ವಿವರಿಸಲಾಗಿದೆ.
ನಟಿ ಶ್ರದ್ಧಾ ಕಪೂರ್, ರೇಖಾ, ಕಿಯಾರಾ ಅಡ್ವಾನಿ, ಅನಿತಾ ಹಸಾನಂದಾನಿ ರೆಡ್ಡಿ ಸೇರಿದಂತೆ ಹಲವು ನಟಿಯರ ಬಗ್ಗೆ ಇದರಲ್ಲಿ ಹೇಳಲಾಗಿದೆ. ಇವರೆಲ್ಲರಿಗೂ ತುಟಿಯ ಆಸುಪಾಸು ಮಚ್ಚೆಗಳಿವೆ. ಅಷ್ಟಕ್ಕೂ ಮಹಿಳೆಯರು ಮತ್ತು ಪುರುಷರಿಗೆ ಮಚ್ಚೆಗಳು ವಿಭಿನ್ನ ರೀತಿಯ ವ್ಯಕ್ತಿತ್ವವನ್ನು ಗುರುತಿಸುತ್ತವೆ. ಆದರೆ ಇಲ್ಲಿ ಮಹಿಳೆಯರ ಬಗ್ಗೆ ಹೇಳಲಾಗಿದೆ. ಶಾಸ್ತ್ರದಲ್ಲಿ ಹೇಳಿರುವಂತೆ ಮಹಿಳೆಯರಿಗೆ ತುಟಿಯ ಆಸುಪಾಸು ಮಚ್ಚೆ ಇದ್ದರೆ, ವಿಶೇಷವಾದ ಮೋಡಿ ಮಾಡುವವರು ಆಗಿರುತ್ತಾರೆ. ತುಟಿಯ ಆಸು ಪಾಸು ಮಚ್ಚೆ ಇದ್ದ ಮಹಿಳೆಯರಿಗೆ ಅದೃಷ್ಟ ಮತ್ತು ಸಂತೋಷವನ್ನು ಆಕರ್ಷಿಸುವ ಶಕ್ತಿಯನ್ನು ಅದು ನೀಡುತ್ತದೆ. ಆದರೆ ಅವರ ಜೀವನದ ಪಯಣ ಮೇಲ್ನೋಟಕ್ಕೆ ಎಲ್ಲರೂ ಅಂದುಕೊಂಡಿರುವಂತೆ ಚೆನ್ನಾಗಿರುವುದಿಲ್ಲ. ಸದಾ ಹಸನ್ಮುಖಿಗಳಾಗಿ ನೋಡುಗರ ಕಣ್ಣಿಗೆ ಆಹಾ, ಎಷ್ಟೊಂದು ಸುಖವಾಗಿದ್ದಾಳೆ ಎನ್ನಿಸಿದರೂ, ಆಕೆಯದ್ದು ಹೋರಾಟದ ಬದುಕೇ. ಜೀವನದ ಆರಂಭದ ದಿನಗಳಲ್ಲಿ ಹಲವು ಹೋರಾಟಗಳು ಮತ್ತು ಸವಾಲುಗಳು ಆಕೆಗೆ ಎದುರಾಗುತ್ತವೆ. ಆದರೆ ಇಂಥ ಹೆಣ್ಣುಮಕ್ಕಳಿಗೆ ಇರುವ ವರದಾನ ಏನೆಂದರೆ, ಎಷ್ಟೇ ಕಷ್ಟ ಬಂದರೂ, ಎಷ್ಟೇ ಸವಾಲುಗಳು ಬಂದರೂ ಎದೆಗುಂದದೇ, ಖಿನ್ನತೆಗೆ ಜಾರದೇ ಯಾವಾಗಲೂ ಇನ್ನಷ್ಟು ಬಲಶಾಲಿಯಾಗಿ ಹೊರಹೊಮ್ಮುತ್ತಲೇ ಸಾಗುತ್ತಾಳೆ. ಇಂಥ ಹೆಣ್ಣುಮಕ್ಕಳ ಪ್ರಯಾಣ ಸುಲಭವಲ್ಲ, ಆದರೆ ಪ್ರತಿ ಕ್ಷಣವೂ ಅಮೂಲ್ಯವಾಗಿದ್ದು, ಅದನ್ನು ಅನುಭವಿಸುತ್ತಾರೆ.
ಮೊಬೈಲ್ ನಂಬರ್ನ ಕೊನೆ ಸಂಖ್ಯೆಯಿಂದ ನಿಮ್ಮ ಗುಟ್ಟು ರಟ್ಟು! ಇಲ್ಲಿದೆ ನೋಡಿ ಡಿಟೇಲ್ಸ್
ತುಟಿಯ ಆಸುಪಾಸು ಮಚ್ಚೆ ಇರುವ ಹುಡುಗಿಯರ ವ್ಯಕ್ತಿತ್ವವು ಕಾಂತೀಯವಾಗಿರುತ್ತದೆ. ಅವರ ಭಾವನೆಗಳು ಎಂದಿಗೂ ಅಲುಗಾಡುವುದಿಲ್ಲ. ಕಷ್ಟಗಳ ಸಮಯದಲ್ಲಿ ಕಲ್ಲುಬಂಡೆಯಂತೆ ಇದ್ದು ಬಿಡುತ್ತಾರೆ. ತಮ್ಮ ನೋವನ್ನು ಸುಲಭದಲ್ಲಿ ಬೇರೆಯವರಿಗೆ ತೋರಿಸದೇ ಹೊರಗಡೆಯಲ್ಲಿ ಸದಾ ಸುಖಿಯಾಗಿರುವಂತೆಯೇ ನಾಟಕ ಮಾಡುತ್ತಿರುತ್ತಾರೆ. ಇನ್ನು ಪ್ರೀತಿಯ ವಿಷಯದಲ್ಲಿ ಹೇಳುವುದಾದರೆ, ಇವರ ಪ್ರೀತಿಯ ಜೀವನದ ಪ್ರಯಾಣ ಕೂಡ ಅಷ್ಟು ಸುಲಭವಲ್ಲ. ಇದು ನೋವಿನಿಂದ ಕೂಡಿರುವಂಥದ್ದು, ಪ್ರೀತಿಯ ಪ್ರಯಾಣ ಇವರ ಜೀವನದಲ್ಲಿ ಸ್ವಲ್ಪ ಹೆಚ್ಚೇ ಕಷ್ಟಕರವಾಗಿರಬಹುದು. ಇದನ್ನು ಕೂಡ ಎದುರಿಸುವ ತಾಕತ್ತು ಇಂಥ ಹೆಣ್ಣುಮಕ್ಕಳಿಗೆ ಆದರೆ. ಅಂತಿಮವಾಗಿ ಅವರು ಯಾವುದೇ ಷರತ್ತುಗಳಿಲ್ಲದೆ ಅವರನ್ನು ಪ್ರೀತಿಸುವ ಮತ್ತು ಬೆಂಬಲಿಸುವ ಸಂಗಾತಿ ಖಂಡಿತವಾಗಿಯೂ ಸಿಕ್ಕೇ ಸಿಗುತ್ತಾರೆ.
ಈ ವಿಡಿಯೋದಲ್ಲಿ ನಟಿ ಶ್ರದ್ಧಾ ಕಪೂರ್, ರೇಖಾ, ಕಿಯಾರಾ ಅಡ್ವಾಣಿ, ಅನಿತಾ ಹಸಾನಂದಾನಿ ರೆಡ್ಡಿ ಅವರ ಬಗ್ಗೆ ಸಾಂಕೇತಿಕವಾಗಿ ವಿವರಿಸಲಾಗಿದೆ. ಇವರ ಜೀವನದ ಆಳ ಹೊಕ್ಕು ನೋಡಿದಾಗ, ಇಲ್ಲಿ ಹೇಳಿರುವುದೆಲ್ಲವೂ ನಿಜ ಎನ್ನಿಸುವುದು ಉಂಟು. ಶ್ರದ್ಧಾ ಕಪೂರ್ ಅವರು ಕಳೆದ ವರ್ಷ ತಾವು ಅನುಭವಿಸುತ್ತಿದ್ದ ಹಿಂಸೆಯ ಕುರಿತು ಮಾತನಾಡಿದ್ದರು. ಕಳೆದ ಆರು ವರ್ಷಗಳಿಂದ ಮಾನಸಿಕ ಆತಂಕ, ವೇದನೆಯ ಜೊತೆಗೆ ಹೋರಾಡುತ್ತಿದ್ದೇನೆ. ಈಗಲೂ ಅಷ್ಟೇ ಆಂಗ್ಸೈಟಿಯೊಂದಿಗೆ ಹೋರಾಡುತ್ತಿದ್ದೇನೆ. ಮೊದಲಿಗಿಂತ ಈಗ ಪರ್ವಾಗಿಲ್ಲ. ಆ ಯಾತನೆಯನ್ನು ದ್ವೇಷಿಸಿ ದೂರ ಇಡಬೇಕು ಎಂದುಕೊಳ್ಳುವುದಕ್ಕಿಂತ ಸ್ವೀಕರಿಸಿ, ಪ್ರೀತಿಯಿಂದ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಆಗ ಸಮಸ್ಯೆಯ ಪರಿಹಾರದಲ್ಲಿ ಸಾಕಷ್ಟು ವ್ಯತ್ಯಾಸ ಕಾಣಿಸುತ್ತದೆ ಎನ್ನುವ ಮೂಲಕ ಜಯ ಸಾಧಿಸಿದ್ದರು. ಇನ್ನು ಕಿಯಾರಾ ಅಡ್ವಾಣಿ, ಅನಿತಾ ಹಸಾನಂದಾನಿ ರೆಡ್ಡಿ ಅವರ ಬದುಕು ಕೂಡ ಹಲವು ಏಳುಬೀಳುಗಳಿಂದ ಕೂಡಿದೆ. ರೇಖಾ ಅವರ ಲವ್ ಜೀವನ ಗೊತ್ತೇ ಇದೆ. ಅಮಿತಾಭ್ ಬಚ್ಚನ್ ಕೈಕೊಟ್ಟ ಬಳಿಕ ಅವರ ಎದುರಿಸುವ ನೋವುಗಳ ಬಗ್ಗೆ ಅವರ ಜೀವನ ತೆರೆದ ಪುಟವೇ.
ಈ ದಿನಾಂಕದಂದು ಹುಟ್ಟಿದವರಿಗೆ ಎರಡು ಮದುವೆ ಇಲ್ಲವೇ ಮತ್ತೊಂದು ಸಂಬಂಧ ಹೆಚ್ಚು! ಯಾವುದದು ಸಂಖ್ಯೆ?
