ಹಣ ಗಳಿಸ್ಬೇಕೆನ್ನುವುದು ಅನೇಕರ ಕನಸು. ಮೊದಲು ಎಷ್ಟು ದುಡಿದ್ರೂ ಕೈನಲ್ಲಿ ನಿಲ್ಲದ ಹಣ, ಮದುವೆಯಾದ್ಮೇಲೆ ನಿಲ್ತಿದೆ ಎನ್ನುವವರಿದ್ದಾರೆ. ಮನೆ ಮೇಲೆ ಮನೆ ಕಟ್ಟುವವರಿದ್ದಾರೆ. ಇದಕ್ಕೆಲ್ಲ ಅದೃಷ್ಟವಂತ ಪತ್ನಿ ಕಾರಣ.
ಪ್ರತಿಯೊಬ್ಬ ವ್ಯಕ್ತಿ (person) ಯ ವ್ಯಕ್ತಿತ್ವ (Personality) ,ಸ್ವಭಾವ, ಇಷ್ಟ, ಆಸೆ, ಗುರಿ (Ambition) ಎಲ್ಲವೂ ಬೇರೆ ಬೇರೆಯಾಗಿರುತ್ತದೆ. ಒಬ್ಬ ವ್ಯಕ್ತಿ ಇದ್ದಂತೆ ಇನ್ನೊಬ್ಬ ವ್ಯಕ್ತಿ ಇರಲು ಸಾಧ್ಯವಿಲ್ಲ. ಬರೀ ಆಕಾರ (Shape) ದಲ್ಲಿ ಮಾತ್ರವಲ್ಲ ಮಾನಸಿಕವಾಗಿರೂ ಎಲ್ಲದರಲ್ಲೂ ಬದಲಾವಣೆಯಿರುತ್ತದೆ. ಜ್ಯೋತಿಷ್ಯ ಶಾಸ್ತ್ರ (Astrology) ದಲ್ಲಿ ವ್ಯಕ್ತಿಯ ದೇಹದ ಆಕಾರ ಹಾಗೂ ಆತನ ಸ್ವಭಾವ ಎಲ್ಲವನ್ನೂ ವಿಸ್ತಾರವಾಗಿ ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ವಿವಿಧ ವಿಷಯಗಳನ್ನು ರಾಶಿ ಆಧಾರದ ಮೇಲೆ ಗುರುತಿಸಲಾಗುತ್ತದೆ. ಸಮುದ್ರ ಶಾಸ್ತ್ರದ ಪ್ರಕಾರ, ವ್ಯಕ್ತಿಯ ದೇಹದ ಭಾಗಗಳ ರಚನೆಯ ಆಧಾರದ ಮೇಲೆ ಆತನ ಸ್ವಭಾವ, ಬಯಕೆ, ಆತನ ಭವಿಷ್ಯ ಇತ್ಯಾದಿಗಳನ್ನು ಹೇಳಬಹುದು. ಪ್ರತಿಯೊಬ್ಬ ವ್ಯಕ್ತಿಯ ದೇಹದ ಮೇಲೂ ಒಂದಿಷ್ಟು ಚಿಹ್ನೆ, ಮಚ್ಚೆಗಳು ಇರುತ್ತವೆ. ಈ ಮಚ್ಚೆ, ಗುರುತಿಗೂ ಆತನ ಭವಿಷ್ಯ (future) ಕ್ಕೂ ಸಂಬಂಧವಿದೆ. ದೇಹ (body ) ದ ಮೇಲೆ ರೂಪುಗೊಂಡ ಕೆಲವು ಚಿಹ್ನೆಗಳು ಮತ್ತು ಮಚ್ಚೆಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವು ಚಿಹ್ನೆಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದೇ ವೇಳೆ ಕೆಲವು ಚಿಹ್ನೆಗಳು ವ್ಯಕ್ತಿಗೆ ಅದೃಷ್ಟಶಾಲಿ ಎಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ ಮಹಿಳೆ (woman) ಯನ್ನು ಲಕ್ಷ್ಮಿ (Laxmi) ಗೆ ಹೋಲಿಕೆ ಮಾಡಲಾಗಿದೆ. ಮಹಿಳೆ ಮನೆಗೆ ಮಂಗಳಕರ ಎಂದು ಹೇಳಲಾಗುತ್ತದೆ. ಅದ್ರಲ್ಲೂ ಕೆಲ ಮಹಿಳೆಯರು ಅದೃಷ್ಟ ಹೊತ್ತು ತಂದಿರುತ್ತಾರೆ. ಅವರ ದೇಹದ ಆಕಾರ ಹಾಗೂ ಮಚ್ಚೆ, ಚಿಹ್ನೆಗಳ ಮೂಲಕವೇ ಅವರನ್ನು ನಾವು ಗುರುತಿಸಬಹುದು. ಯಾವ ಮಹಿಳೆ ಅದೃಷ್ಟವಂತೆ ಎಂಬುದನ್ನು ನಾವಿಂದು ಹೇಳ್ತೇವೆ.
ಅದೃಷ್ಟವಂತ ಮಹಿಳೆಯರ ದೇಹದಲ್ಲಿರುತ್ತೆ ಈ ಗುರುತು :
ಕಾಲಿನ ಪಾದದ ಅಡಿಯಲ್ಲಿ ಈ ಗುರುತು : ಪಾದದಲ್ಲಿ ಕಮಲ, ಶಂಖ ಅಥವಾ ಚಕ್ರದ ಗುರುತು ಇರುವ ಮಹಿಳೆಯರು ತುಂಬಾ ಅದೃಷ್ಟವಂತರು ಎಂದು ಸಮುದ್ರ ಶಾಸ್ತ್ರದಲ್ಲಿ ನಂಬುತ್ತದೆ. ಈ ಮಹಿಳೆ ಹೋದಲ್ಲೆಲ್ಲ ಹಣದ ಹೊಳೆಯಾಗುತ್ತದೆ. ಆರ್ಥಿಕ ವೃದ್ಧಿಯಾಗುತ್ತದೆ. ಮಹಿಳೆ ಸದಾ ಸೌಭಾಗ್ಯವನ್ನು ತರ್ತಾಳೆ ಎಂದು ನಂಬಲಾಗಿದೆ.
ಉದ್ದವಾದ ಬೆರಳುಗಳನ್ನು ಹೊಂದಿರುವ ಮಹಿಳೆ : ಉದ್ದವಾದ ಬೆರಳುಗಳನ್ನು ಹೊಂದಿರುವ ಮಹಿಳೆಯರೂ ಅದೃಷ್ಟವಂತರು ಎಂದು ನಂಬಲಾಗಿದೆ. ಉದ್ದವಾದ ಬೆರಳುಗಳನ್ನು ಹೊಂದಿರುವ ಮಹಿಳೆಯರ ಗಂಡಂದಿರು ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ ಎಂದು ನಂಬಲಾಗಿದೆ. ಇಂಥ ಮಹಿಳೆಯನ್ನು ಮದುವೆಯಾಗುವ ಪುರುಷರ ಬಾಳಲ್ಲಿ ಹೊಸ ಜ್ಯೋತಿ ಮೂಡುತ್ತದೆ. ಕೆಲಸದಲ್ಲಿ ಯಶಸ್ಸು ಲಭಿಸುತ್ತದೆ. ಅದೃಷ್ಟ ದೇವತೆ ಅವರ ಕೈ ಹಿಡಿಯುತ್ತಾಳೆ ಎಂದು ನಂಬಲಾಗಿದೆ.
VASTU TIPS : ನಿಮ್ಮನ್ನು ಬೀದಿಗೂ ತಳ್ಬಹುದು ಮನೆಯಲ್ಲಿರುವ ಚಪ್ಪಲಿ
ಉದ್ದ ಕತ್ತಿನ ಮಹಿಳೆಯರು : ಉದ್ದನೆಯ ಕುತ್ತಿಗೆಯನ್ನು ಹೊಂದಿರುವ ಮಹಿಳೆಯರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ. ಅವರಿಗೆ ತಾಯಿಯ ಮನೆಯಲ್ಲಿ ಮಾತ್ರವಲ್ಲದೆ ಅತ್ತೆಯ ಮನೆಯಲ್ಲೂ ಸಾಕಷ್ಟು ಗೌರವ ಸಿಗುತ್ತದೆ ಎಂದು ನಂಬಲಾಗಿದೆ. ಹಾಗೆಯೇ ಈ ಮಹಿಳೆ ಗಂಡನ ಮನೆಯ ಯಶಸ್ಸಿಗೆ ಕಾರಣವಾಗ್ತಾಳೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಚೆಂದದ ಹೆಬ್ಬೆರಳು : ಇದಲ್ಲದೆ ಯಾವ ಮಹಿಳೆಯ ಹೆಬ್ಬೆರಳು ಅಗಲವಾಗಿದ್ದು, ದುಂಡಗಿದ್ದು, ಕೆಂಪು ಬಣ್ಣದಲ್ಲಿದ್ದರೆ ಆ ಮಹಿಳೆ ಕೂಡ ಅದೃಷ್ಟ ತರುತ್ತಾಳೆ ಎಂದು ಹೇಳಲಾಗುತ್ತದೆ. ದೊಡ್ಡ ಹೆಬ್ಬೆರಳನ್ನು ಹೊಂದಿರುವ ಮಹಿಳೆಯನ್ನು ವಿವಾಹವಾದ ಪುರುಷನ ಅದೃಷ್ಟ ಬದಲಾಗುತ್ತದೆ.
Bedroom vastu: ನಿಮ್ಮ ಕೆಲಸ ಹಾಗೂ ಗುರಿ ಸಾಧನೆಗೆ ಹೀಗಿದ್ದರೆ ಅನುಕೂಲ!
ಹಣೆಯ ಮೇಲೆ ಈ ಚಿಹ್ನೆ : ಸಮುದ್ರಶಾಸ್ತ್ರದ ಪ್ರಕಾರ, ಹಣೆಯ ಮೇಲೆ ತ್ರಿಶೂಲದ ಗುರುತು ಹೊಂದಿರುವ ಮಹಿಳೆಯರನ್ನು ಸಹ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಇಂಥ ಮಹಿಳೆ ಇರುವ ಮನೆಯಲ್ಲಿ ಎಂದಿಗೂ ಹಣದ ಕೊರತೆಯಾಗುವುದಿಲ್ಲ. ಹಾಗೆಯೇ ಎಂದೂ ಆಹಾರದ ಸಮಸ್ಯೆ ಈ ಕುಟುಂಬದ ಜನರಿಗೆ ಕಾಡುವುದಿಲ್ಲವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
