Vastu Tips : ನಿಮ್ಮನ್ನು ಬೀದಿಗೂ ತಳ್ಬಹುದು ಮನೆಯಲ್ಲಿರುವ ಚಪ್ಪಲಿ
ಮನೆಯಲ್ಲಿ ಚಪ್ಪಲಿಗಳ ರಾಶಿ ಬಿದ್ದಿರುತ್ತದೆ. ಬೇಕಾಗಿದ್ದು, ಬೇಡವಾಗಿದ್ದು ಎಲ್ಲವನ್ನೂ ನಾವು ತುಂಬಿರ್ತೇವೆ. ಸ್ಟ್ಯಾಂಡ್ ತುಂಬಿ ಮನೆ ಹೊರಗೆ ಅಲ್ಲಲ್ಲಿ ಶೂ, ಚಪ್ಪಲಿ ಬಿದ್ದಿರುತ್ತದೆ. ಇದು ನೋಡಲು ಮನೆ ಅಂದ ಹಾಳು ಮಾಡುವುದಲ್ಲದೆ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ.
ಮನೆ (Home) ಯ ಸುಖ (Happy) – ಸಮೃದ್ಧಿಗೆ ವಾಸ್ತು ಶಾಸ್ತ್ರ ಬಹಳ ಮುಖ್ಯ. ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ವಾಸ್ತು ಅಡಿಯಲ್ಲಿ ಬರುತ್ತದೆ. ಅನೇಕ ಬಾರಿ ನಾವು ಮನೆಯ ಸಣ್ಣಪುಟ್ಟ ವಸ್ತುಗಳನ್ನು ನಿರ್ಲಕ್ಷ್ಯ ಮಾಡ್ತೇವೆ. ಅದನ್ನು ಇಡಬಾರದ ಜಾಗದಲ್ಲಿ ಇಡ್ತೇವೆ. ಇದ್ರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಯಶಸ್ಸು ನಮ್ಮನ್ನು ಸೇರುವುದಿಲ್ಲ. ನಾವು ಅನೇಕ ರೀತಿಯ ಚಪ್ಪಲಿ (Slippers) , ಶೂ ಖರೀದಿ ಮಾಡಿರ್ತೇವೆ. ಚಪ್ಪಲಿಯನ್ನು ಮನೆಯ ಹೊರಗೆ ಇಡುವ ಪದ್ಧತಿಯಿದೆ. ಇತ್ತೀಚಿನ ದಿನಗಳಲ್ಲಿ ಜನರು ಚಪ್ಪಲಿಯನ್ನು ಮನೆಯ ಒಳಗೆ ಹಾಗೂ ಬೀರುವಿನಲ್ಲೂ ಇಡ್ತಾರೆ. ಚಪ್ಪಲಿಯಿಂದ ಏನು ಸಾಧ್ಯ ಎಂದು ನಿರ್ಲಕ್ಷ್ಯ ಮಾಡುವವರೂ ಇದ್ದಾರೆ. ಆದ್ರೆ ಮನೆಯ ಹೊರಗಿರುವ ಹಾಗೂ ನಮ್ಮ ಪಾದಕ್ಕೆ ರಕ್ಷಣೆ ನೀಡುವ ಈ ಚಪ್ಪಲಿಗಳು ಕೂಡ ವಾಸ್ತು ಶಾಸ್ತ್ರಕ್ಕೆ ಒಳಪಡುತ್ತವೆ. ವಾಸ್ತು ಶಾಸ್ತ್ರದಲ್ಲಿ ಚಪ್ಪಲಿಯನ್ನು ಎಲ್ಲಿ ಇಡಬೇಕು ಎನ್ನುವ ಬಗ್ಗೆ ಕೆಲವು ನಿಯಮಗಳನ್ನು ಹೇಳಲಾಗಿದೆ. ಇಂದು ನಾವು ವಾಸ್ತು ಶಾಸ್ತ್ರ ಹಾಗೂ ಚಪ್ಪಲಿ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಚಪ್ಪಲಿ ಬಗ್ಗೆ ವಾಸ್ತು ಶಾಸ್ತ್ರ ಹೇಳೋದೇನು ? :
ಶನಿಯ ಪ್ರಭಾವ : ವಾಸ್ತು ಶಾಸ್ತ್ರದ ಪ್ರಕಾರ, ಶನಿ, ಪಾದಗಳ ಜೊತೆ ನೇರ ಸಂಬಂಧ ಹೊಂದಿದ್ದಾನೆ. ಚಪ್ಪಲಿಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದ ಈ ನಿಯಮಗಳನ್ನು ಪಾಲನೆ ಮಾಡದೆ ಹೋದ್ರೆ ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಇದ್ರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ನಕಾರಾತ್ಮಕ ಶಕ್ತಿ ಮನೆ ಪ್ರವೇಶ : ಸಾಮಾನ್ಯವಾಗಿ ನಾವು ಚಪ್ಪಲಿಯನ್ನು ಹೊರಗೆ ಬಿಚ್ಚಿ ಮನೆಯೊಳಗೆ ಬರ್ತೇವೆ. ಆದ್ರೆ ಚಪ್ಪಲಿ ಹೊರಗಿರುತ್ತೆ ಎನ್ನುವ ಕಾರಣಕ್ಕೆ ಅದನ್ನು ಗಮನಿಸುವುದಿಲ್ಲ. ಒಂದು ಚಪ್ಪಲಿ ಒಂದು ಕಡೆಯಿದ್ದರೆ ಇನ್ನೊಂದು ಚಪ್ಪಲಿ ಮತ್ತೆಲ್ಲೋ ಇರುತ್ತದೆ. ಎಲ್ಲ ಚಪ್ಪಲಿಗಳು ಮನೆ ಮುಂದೆ ಅಸ್ತವ್ಯಸ್ತವಾಗಿ ಬಿದ್ದಿರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಇದು ತಪ್ಪು. ಚಪ್ಪಲಿ ಅಸ್ತವ್ಯಸ್ತವಾಗಿ ಬಿದ್ದಿದ್ದರೆ ಮನೆಯೊಳಗೆ ಎಂದೂ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುವುದಿಲ್ಲ. ಸದಾ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ.
ಚಪ್ಪಲಿಯನ್ನು ಸರಿಯಾಗಿ ಜೋಡಿಸಿ : ಮನೆಗೆ ನಕಾರಾತ್ಮಕ ಶಕ್ತಿ (Negative Energy) ಪ್ರವೇಶವಾಗಬಾರದು ಎನ್ನುವವರು ಚಪ್ಪಲಿಯನ್ನು ಸರಿಯಾಗಿಡಿ. ನೀವು ಚಪ್ಪಲಿ ಇಡಲು ರ್ಯಾಕ್ ಬಳಸಬಹುದು. ಅದು ಸಾಧ್ಯವಿಲ್ಲ ಎನ್ನುವವರು ಮನೆ ಮುಂದೆ ನೀಡಾಗಿ ಚಪ್ಪಲಿ ಜೋಡಿಸಿಡಬೇಕು.
ಪಶ್ಚಿಮ ದಿಕ್ಕು ಸೂಕ್ತ : ಚಪ್ಪಲಿಯಾಗಿರಲಿ ಇಲ್ಲ ಚಪ್ಪಲಿ ರ್ಯಾಕ್ ಆಗಿರಲಿ, ಅದನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ಇದ್ರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ದಕ್ಷಿಣ ದಿಕ್ಕಿನಲ್ಲಿ ಚಪ್ಪಲಿಯನ್ನು ಸರಿಯಾಗಿ ಜೋಡಿಸಿಡಲು ಮರೆಯಬೇಡಿ.
ಹರಿದ, ಹಾಳಾದ ಚಪ್ಪಲಿ : ಅನೇಕರ ಮನೆಯಲ್ಲಿ ಹರಿದ, ಹಾಳಾದ ಚಪ್ಪಲಿಗಳು ಹಾಗೆಯೇ ಇರುತ್ತವೆ. ಮುಂದೊಮ್ಮೆ ಬೇಕಾಗಬಹುದು ಎನ್ನುವ ಕಾರಣಕ್ಕೆ ಅದನ್ನು ಇಟ್ಟುಕೊಳ್ಳುವವರಿದ್ದಾರೆ. ಉದ್ದೇಶ ಏನೇ ಇರಲಿ, ಮನೆಯಲ್ಲಿ ಹರಿದ, ಹಾಳಾದ ಚಪ್ಪಲಿಯನ್ನು ಇಡಬೇಡಿ. ಇದ್ರಿಂದ ಮಾನಸಿಕ ಹಾಗೂ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ.
ರ್ಯಾಕ್ (Rack) ಇಲ್ಲಿಡಬೇಡಿ : ಚಪ್ಪಲಿ ಇಡಲು ರ್ಯಾಕ್ ಬಳಸಿದ್ದರೆ ಅಪ್ಪಿತಪ್ಪಿಯೂ ರ್ಯಾಕನ್ನು ಅಡುಗೆ ಮನೆಗೆ ಅಂಟಿಕೊಂಡ ಗೋಡಗೆ ಅಥವಾ ದೇವರ ಮನೆಗೆ ಟಚ್ ಆಗಿರುವ ಗೋಡೆಗೆ ಇಡಬೇಡಿ. ಅಡುಗೆ ಮನೆ ಹಾಗೂ ದೇವರ ಕೋಣೆಯಿಂದ ಚಪ್ಪಲಿಯನ್ನು ದೂರವಿಡಿ.
ಈ ದಿಕ್ಕಿನಲ್ಲಿ ಚಪ್ಪಲಿ ಬೇಡ : ಪೂರ್ವ ದಿಕ್ಕು, ಈಶಾನ್ಯ ದಿಕ್ಕು ಹಾಗೂ ಆಗ್ನೇಯ ದಿಕ್ಕಿಗೆ ಅಪ್ಪಿತಪ್ಪಿಯೂ ಚಪ್ಪಲಿಯನ್ನು ಇಡಬೇಡಿ.
ಅನಾರೋಗ್ಯಕ್ಕೆ (Illness) ಇದು ಕಾರಣ : ಮನೆಯ ಬೆಡ್ ಒಳಗೆ ಅಥವಾ ಬೆಡ್ ಕೆಳಗೆ ಅನೇಕರು ಚಪ್ಪಲಿ ಇಡ್ತಾರೆ. ಇದು ಕೂಡ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.