ಅಬ್ಬಾ, ಊಟದಲ್ಲಿ ಕೂದಲ ಸಿಕ್ಕಿದ್ರೆ ವಾಕ್ ಅನ್ನೋ ಹಾಗಾಗುತ್ತೆ, ಆದರಿದು ಲಕ್ಕಾ?
ಊಟದಲ್ಲಿ ಹುಳು ಸಿಕ್ಕಿದ್ರೆ, ಕೂದಲು ಸಿಕ್ಕಿದ್ರೆ ಕೋಪ ಬರೋದು ಸಾಮಾನ್ಯ. ಕೂದಲು ಸಿಕ್ಕುತ್ತಿದ್ದಂತೆ ಕೋಪಗೊಳ್ಳುವ ಬದಲು ಇನ್ಮುಂದೆ ಅದನ್ನು ಸೂಕ್ಷ್ಮವಾಗಿ ಗಮನಿಸಿ. ನಾಲ್ಕೈದು ದಿನದಲ್ಲಿ ಒಳ್ಳೆದಾಗುತ್ತಾ ಕಾದು ನೋಡಿ.
ನಮ್ಮ ಜೀವನದಲ್ಲಿ ನಿತ್ಯ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಅದರಲ್ಲಿ ಕೆಲವೊಂದು ಘಟನೆಗೆ ನಾವು ಹೆಚ್ಚಿನ ಮಹತ್ವವನ್ನು ನೀಡ್ತೇವೆ. ಮತ್ತೆ ಕೆಲ ಘಟನೆಗಳನ್ನು ನಿರ್ಲಕ್ಷ್ಯ ಮಾಡ್ತೇವೆ. ಊಟ ಮಾಡುವಾಗ ಕೂದಲು ಸಿಗೋದು ಕೂಡ ಸಾಮಾನ್ಯ ವಿಷ್ಯವಾಗಿದೆ. ಆದ್ರೆ ಅದ್ರ ಜೊತೆಯೂ ನಮ್ಮ ನಂಟಿದೆ.
ಊಟ ಮಾಡೋವಾಗ ಕೂದಲು ಸಿಕ್ಕಿದ್ರೆ, ಇದು ಇದ್ದಿದ್ದೆ…ವಾರದಲ್ಲಿ ಒಂದು ದಿನ ಆದ್ರೂ ಕೂದಲು ಸಿಗುತ್ತೆ. ಕೂದಲನ್ನು ಸರಿಯಾಗಿ ಬಾಚಿಕೊಂಡು ಅಡುಗೆ ಮಾಡೋಕೆ ಆಗಲ್ವಾ ಅಂತ ಗಂಡಸರು ಆಗಾಗ ಹೆಂಡ್ತಿಗೆ ಬೈತಿರ್ತಾರೆ. ತಲೆ ಸ್ನಾನ ಮಾಡಿದ ದಿನ ಅಥವಾ ಅಡುಗೆ ಮನೆಯಲ್ಲಿಯೇ ಕೂದಲು ಬಾಚಿದ್ರೆ ಸಾಮಾನ್ಯವಾಗಿ ಅಡುಗೆಯಲ್ಲಿ ಕೂದಲು ಸೇರುತ್ತೆ. ಅಡುಗೆ ಮಾಡುವಾಗ ಕಣ್ಣಿಗೆ ಕಾಣದ ಕೂದಲು ನೆಂಟರು ಬಂದಾಗ ಅವರ ಬಾಯಿಗೆ ಸಿಗೋದು ಮಾಮೂಲಿ. ಕೂದಲು ಸಿಗೋದು ಆಹಾರ ಸೇವನೆ ಮೂಡ್ ಹಾಳು ಮಾಡುತ್ತೆ. ಊಟ ಮಾಡೋವಾಗ ಕೂದಲು ಸಿಕ್ಕಿದ್ರೆ ನಾವು ನೀವೆಲ್ಲ ಮೊದಲು ವಾಕರಿಸಿಕೊಳ್ತೇವೆ. ಏನು ಕೊಳಕು ಇದು ಅಂತ ಗೊಣಗುತ್ತೇವೆ. ಕೆಲವರು ಅರ್ಧಕ್ಕೆ ಊಟ ಬಿಟ್ಟು ಹೋದ್ರೆ ಮತ್ತೆ ಕೆಲವರು ಕೂದಲನ್ನು ತೆಗೆದಿಟ್ಟು ಊಟ ಮಾಡ್ತಾರೆ. ಹೊಟೇಲ್ ನಲ್ಲಿ ಈ ಕೂದಲು ಸಿಕ್ಕಿದ್ರೆ ಅದನ್ನು ತೆಗೆದಿಟ್ಟು, ಊಟ ಮಾಡುವ ಪ್ರಶ್ನೆಯೇ ಇಲ್ಲ. ಸಣ್ಣ ಕೂದಲಿಗೂ ದೊಡ್ಡ ರಾದ್ದಾಂತ ಮಾಡಿ, ಇನ್ನೊಂದು ಪ್ಲೇಟ್ ತರಿಸಿ ತಿನ್ನುವವರೇ ಹೆಚ್ಚು.
ಕ್ರಿಕೆಟ್ ಗೆಲ್ಲಲು ಈ 2 ಮೂಢನಂಬಿಕೆಗಳನ್ನು ಅನುಸರಿಸ್ತಿದ್ರು ಎಂ ಎಸ್ ಧೋನಿ!
ಊಟದಲ್ಲಿ ಕೂದಲು ಸಿಕ್ಕಾಗ ಹಿರಿಯರು ಅದನ್ನು ಅನ್ನದ ಋಣ ಎನ್ನುತ್ತಾರೆ. ನೀವು ಊಟ ಮಾಡುವಾಗ ಕೂದಲು ಸಿಕ್ಕಿದ್ರೆ, ನೀವು ಎಲ್ಲಿ ಊಟ ಮಾಡ್ತಿದ್ರೋ ಆ ಮನೆಯ ಅನ್ನದ ಋಣ ಜಾಸ್ತಿ ಎನ್ನುತ್ತಾರೆ. ಮತ್ತೆ ಕೆಲವರು ಊಟದಲ್ಲಿ ಕೂದಲು ಸಿಗ್ತಿದ್ದಂತೆ ಅದನ್ನು ಅಶುಭ ಎಂದು ಭಾವಿಸ್ತಾರೆ. ಇದು ರಾಹು ದೋಷ ಹಾಗೂ ಪಿತೃದೋಷದ ಸಂಕೇತ ಎನ್ನುವವರಿದ್ದಾರೆ. ಆದ್ರೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಡಾಕ್ಟರ್ ಕಮಲಾಕ್ಷಿ ಊಟದಲ್ಲಿ ಕೂದಲು ಸಿಕ್ಕಿದ್ರೆ ಶುಭ ಎನ್ನುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.
ಇನ್ಸ್ಟಾಗ್ರಾಮ್ (Instagram) ನಲ್ಲಿ ಅವರು ಹಂಚಿಕೊಂಡಿರುವ ವಿಡಿಯೋ (Video) ದಲ್ಲಿ ಕೂದಲು ಸಿಗೋದನ್ನು ಶುಭ (Good Luck) ಎಂದು ಅವರು ಹೇಳಿದ್ದಾರೆ. ಕೂದಲು ಶುಕ್ರನ ಭಾಗವಾಗಿದೆ. ಶುಕ್ರ ಗ್ರಹ, ಪ್ರೀತಿ, ಪ್ರಣಯ, ಹಣ, ಸೌಂದರ್ಯ ಮತ್ತು ಕಲೆಯ ಗ್ರಹ. ಶುಕ್ರ ಗ್ರಹ ಬಲವಾಗಿದ್ದರೆ ನಿಮ್ಮ ಆಸೆಗಳು ಈಡೇರುತ್ತವೆ. ಸಂತೋಷದಿಂದ ನೀವು ಜೀವನ ಕಳೆಯುತ್ತೀರಿ ಎಂದು ನಂಬಲಾಗಿದೆ.
5079 ರಲ್ಲಿ ಜಗತ್ತು ಅಂತ್ಯಗೊಳ್ಳುತ್ತದೆ, 3797 ರಲ್ಲಿ ಭೂಮಿ ನಾಶವಾಗಲಿದೆ 'ಬಾಬಾ ವಂಗಾ' ಭವಿಷ್ಯವಾಣಿ
ಊಟದಲ್ಲಿ ಕೂದಲು ಸಿಕ್ಕಿದ್ರೆ ಏನಾಗುತ್ತೆ? : ಡಾಕ್ಟರ್ ಕಮಲಾಕ್ಷಿ ಪ್ರಕಾರ, ಊಟದಲ್ಲಿ ಕೂದಲು ಸಿಕ್ಕಾಗ ಅದು ನಮಗೆ ಒಂದು ಸೂಚನೆಯನ್ನು ನೀಡುತ್ತದೆ. ನಾವು ಎಲ್ಲಿ ಹೋದಾಗ, ಯಾವಾಗ ಕೂದಲು ಸಿಕ್ಕಿತ್ತು ಎಂದು ನೆನಪಿಟ್ಟುಕೊಳ್ಳೋದಿಲ್ಲ. ಸಿಕ್ಕ ಕೂದಲನ್ನು ಬದಿಗಿಟ್ಟು ಎಷ್ಟೋ ಬಾರಿ ಊಟ ಮಾಡಿರುತ್ತೇವೆ. ಆದ್ರೆ ಇನ್ಮುಂದೆ ನಿಮಗೆ ಊಟದಲ್ಲಿ ಕೂದಲು ಸಿಕ್ಕಿದ್ರೆ ಅದನ್ನು ನೆನಪಿಟ್ಟುಕೊಳ್ಳಿ. ಸೂಕ್ಷ್ಮವಾಗಿ ಗಮನಿಸಿ ಎನ್ನುತ್ತಾರೆ ಕಮಲಾಕ್ಷಿ. ಅವರ ಪ್ರಕಾರ, ನಿಮಗೆ ಕೂದಲು ಸಿಗೋದು ಶುಭ ಸಂಕೇತ. ನಿಮಗೆ ಕೂದಲು ಸಿಕ್ಕ ಮೂರ್ನಾಲ್ಕು ದಿನದಲ್ಲಿ ಅಥವಾ ಒಂದು ವಾರದಲ್ಲಿ ಇಲ್ಲ ಹದಿನೈದು ದಿನಗಳಲ್ಲಿ ನಿಮಗೆ ಒಳ್ಳೆ ಸುದ್ದಿಯೊಂದು ಸಿಗುವ ಅಥವಾ ನಿಮ್ಮ ಜೀವನದಲ್ಲಿ ಶುಭ ಘಟನೆ ನಡೆಯುತ್ತದೆ ಎನ್ನುತ್ತಾರೆ ಕಮಲಾಕ್ಷಿ. ನಿಮ್ಮ ನಿಮ್ಮ ಕರ್ಮಕ್ಕೆ ತಕ್ಕಂತೆ ನಿಮಗೆ ಸಣ್ಣ ಪ್ರಮಾಣದಲ್ಲಿಯಾದ್ರೂ ಶುಭವಾಗುತ್ತದೆ ಎನ್ನುತ್ತಾರೆ ಅವರು.