Asianet Suvarna News Asianet Suvarna News

ಕ್ರಿಕೆಟ್ ಗೆಲ್ಲಲು ಈ 2 ಮೂಢನಂಬಿಕೆಗಳನ್ನು ಅನುಸರಿಸ್ತಿದ್ರು ಎಂ ಎಸ್ ಧೋನಿ!

ಮಹೇಂದ್ರ ಸಿಂಗ್ ಧೋನಿ ಅವರನ್ನು ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಆದರೆ, ಅವರು ಕ್ರಿಕೆಟ್‌ನಲ್ಲಿ ಗೆಲ್ಲಲು ಕೆಲ ಮೂಢನಂಬಿಕೆಗಳನ್ನು ಆಚರಿಸುತ್ತಾರೆ ಎಂಬುದು ಅಚ್ಚರಿ ಉಂಟು ಮಾಡಬಹುದು. 

MS Dhonis Superstitions to win Cricket match skr
Author
First Published Jul 8, 2024, 4:29 PM IST

ಬಡವರಿಂದ ಶ್ರೀಮಂತರವರೆಗೆ, ಓದದವರಿಂದ ಭಾರೀ ಕಲಿತವರು ಕೂಡಾ ತಮ್ಮದೇ ಆದ ಕೆಲ ಮೂಢನಂಬಿಕೆಗಳನ್ನು ಹೊಂದಿರುತ್ತಾರೆ. ಎಲ್ಲಿಯವರೆಗೆ ನಮ್ಮ ನಂಬಿಕೆಗಳು(ಮೂಢ) ಮತ್ತೊಬ್ಬರಿಗೆ ತೊಂದರೆ ನೀಡುವುದಿಲ್ಲವೋ, ಅಲ್ಲಿಯವರೆಗೆ ಅವನ್ನು ಅನುಸರಿಸುವುದರಲ್ಲಿ ಸಮಸ್ಯೆ ಏನಿಲ್ಲ.  ಅಂಥದರಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಕೂಡಾ ಮೂಢನಂಬಿಕೆಗಳನ್ನು ಫಾಲೋ ಮಾಡುತ್ತಾರೆ ಎಂದರೆ ಅಚ್ಚರಿ ಏನಿಲ್ಲ.

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದರೆ ತಪ್ಪಿಲ್ಲ. ಅವರು ಶ್ರೇಷ್ಠ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಕೆಲವರು ಹೇಳಿದರೆ, ಭಾರತಕ್ಕೆ ಅವರಂತಹ ನಾಯಕ ಮತ್ತೆ ಸಿಗುವುದಿಲ್ಲ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ. ಸ್ಫೋಟಕ ಬ್ಯಾಟ್ಸ್‌ಮನ್ ಏಕದಿನದಲ್ಲಿ 10,773 ರನ್, ಟೆಸ್ಟ್‌ನಲ್ಲಿ 4,876 ಮತ್ತು ಟಿ20ಯಲ್ಲಿ 1,617 ರನ್ ಗಳಿಸಿದ್ದಾರೆ. ಇದುವರೆಗಿನ ಶ್ರೇಷ್ಠ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರಾಗಿರುವ ಅವರು ತಮ್ಮ ಪ್ರಸಿದ್ಧ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 634 ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದಾರೆ ಮತ್ತು 195 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ.

ಐಶ್ವರ್ಯಾ ರೈ ಯಿಂದ ಶಾಹೀದ್ ಕಪೂರ್‌ವರೆಗೆ.. ಬಿಟೌನ್ ಸೆಲೆಬ್ರಿಟಿಗಳ ಮೂಢನಂಬಿಕೆಗಳು ಒಂದೆರಡಲ್ಲ..
 

ಮಹೇಂದ್ರ ಸಿಂಗ್ ಧೋನಿ ಡಿಸೆಂಬರ್ 23, 2004 ರಂದು ಬಾಂಗ್ಲಾದೇಶದ ವಿರುದ್ಧ ಚಟ್ಟೋಗ್ರಾಮ್‌ನ ಎಂಎ ಅಜೀಜ್ ಕ್ರೀಡಾಂಗಣದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಚೊಚ್ಚಲ ಪಂದ್ಯವನ್ನು ಆಡಿದರು. ನಂತರ ಅವರು ಭಾರತದ ಅತ್ಯಂತ ಯಶಸ್ವಿ ನಾಯಕರಾಗಿ ನಿವೃತ್ತರಾದರು. 'ಕ್ಯಾಪ್ಟನ್ ಕೂಲ್' ನೇತೃತ್ವದಲ್ಲಿ, ಟೀಮ್ ಇಂಡಿಯಾ 2007 ICC T20 ವಿಶ್ವಕಪ್, 2011 ICC ಕ್ರಿಕೆಟ್ ವಿಶ್ವಕಪ್ ಮತ್ತು 2013 ICC ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ.

ಕ್ರೀಡೆಯಲ್ಲಿ ಮೂಢನಂಬಿಕೆಗಳು
ಕ್ರೀಡೆಗಳಲ್ಲಿ ಮೂಢನಂಬಿಕೆಗಳು ತುಂಬಾ ಸಾಮಾನ್ಯವಾಗಿವೆ. ಸಚಿನ್ ತೆಂಡೂಲ್ಕರ್ ಯಾವಾಗಲೂ ತಮ್ಮ ಎಡ ಪ್ಯಾಡ್ ಅನ್ನು ಮೊದಲು ಧರಿಸುವುದರಿಂದ ಹಿಡಿದು, ಜಹೀರ್ ಖಾನ್ ಯಾವಾಗಲೂ ಹಳದಿ ಕರವಸ್ತ್ರವನ್ನು ಜೇಬಿನಲ್ಲಿ ಇಟ್ಟುಕೊಳ್ಳುವವರೆಗೆ ಹಲವರು ಹಲ ನಂಬಿಕೆಗಳನ್ನು ಹೊಂದಿದ್ದಾರೆ. ಅಂತೆಯೇ ಮಹೇಂದ್ರ ಸಿಂಗ್ ಧೋನಿ ಕೂಡ ತಮ್ಮ ಆಟದ ದಿನಗಳಲ್ಲಿ ಕೆಲವು ಮೂಢನಂಬಿಕೆಗಳನ್ನು ಹೊಂದಿದ್ದರು. ಇಂದು ನಾವು ಅವರ ಸುಪ್ರಸಿದ್ಧ ವೃತ್ತಿಜೀವನದಲ್ಲಿ ಅನುಸರಿಸಿದ ಎರಡು ಮೂಢನಂಬಿಕೆಗಳ ಬಗ್ಗೆ ಹೇಳುತ್ತೇವೆ.

ಕಿಚಡಿ ಮತ್ತು ಗೆಲುವು
2011ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಕೇವಲ ಒಂದು ಆಹಾರವನ್ನು ಮಾತ್ರ ಸೇವಿಸಿದ್ದಾರೆ ಎಂದು ವೀರೇಂದ್ರ ಸೆಹ್ವಾಗ್ ಬಹಿರಂಗಪಡಿಸಿದ್ದಾರೆ. ಶ್ರೀಲಂಕಾವನ್ನು ಆರು ವಿಕೆಟ್‌ಗಳಿಂದ ಸೋಲಿಸಿದ ನಂತರ ಭಾರತೀಯ ಕ್ರಿಕೆಟ್ ತಂಡವು 2011 ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಫೈನಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ 79 ಎಸೆತಗಳಲ್ಲಿ 91 ರನ್ ಗಳಿಸಿದರು. 28 ವರ್ಷಗಳ ಕಾಯುವಿಕೆಯ ನಂತರ ವಿಶ್ವಕಪ್ ಟ್ರೋಫಿಯನ್ನು ಮನೆಗೆ ತರಲು ವಾಂಖೆಡೆ ಸ್ಟೇಡಿಯಂನಲ್ಲಿ ಆ ಐಕಾನಿಕ್ ಸಿಕ್ಸರ್ ಅನ್ನು ಹೊಡೆದವರು ಅವರು. ಈ ವಿಶ್ವಕಪ್ ವೇಳೆ ಮಹೇಂದ್ರ ಸಿಂಗ್ ಧೋನಿ ವಿಚಿತ್ರ ಮೂಢನಂಬಿಕೆಯನ್ನು ಅನುಸರಿಸಿದ್ದರು. ಅದೆಂದರೆ, ಇಡೀ ಟೂರ್ನಮೆಂಟ್‌ನಲ್ಲಿ ಎಂಎಸ್ ಧೋನಿ ಒಂದೇ ಒಂದು ಆಹಾರವನ್ನು ಸೇವಿಸಿದ್ದರು, ಅದು 'ಖಿಚಡಿ'. ಈ ಮೂಢನಂಬಿಕೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳುತ್ತಿದ್ದರಂತೆ. 

ತಂದೆ ಆಸ್ತಿ ಅಡ ಇಟ್ಟಿದ್ರು, ತಾಯಿ ಒಡವೆ ಮಾರಿದ್ರು; ಬಾಲ್ಯದಲ್ಲಿ ಅವಮಾನ ತಿಂದ ಈ ಸ್ಟಾರ್ ಕಿಡ್ ಆಸ್ತಿ ಇಂದು 1800 ಕೋಟಿ!
 

ಸಹ ಆಟಗಾರರಿಗೆ ವಿಶ್ ಮಾಡಿದ್ರೆ ಗೆಲ್ಲೋಲ್ಲ!
ಮಹೇಂದ್ರ ಸಿಂಗ್ ಧೋನಿ ಅವರು ಆಡುವ ದಿನಗಳಲ್ಲಿ ಅನುಸರಿಸಿದ ಮತ್ತೊಂದು ಕುತೂಹಲಕಾರಿ ಮೂಢನಂಬಿಕೆಯೆಂದರೆ, ಅವರು ತಮ್ಮ ಪಂದ್ಯಗಳಿಗೆ ಮುಂಚಿತವಾಗಿ ತಮ್ಮ ಸಹ ಆಟಗಾರರಿಗೆ 'ಶುಭವಾಗಲಿ' ಎಂದು ವಿಶ್ ಮಾಡುತ್ತಿರಲಿಲ್ಲವಂತೆ. ಹಾಗೆ ವಿಶ್ ಮಾಡಿದರೆ ಅವರ ಅದೃಷ್ಟ ಕೊನೆಗೊಳ್ಳುತ್ತದೆ ಎಂದವರು ನಂಬಿದ್ದರಂತೆ! ಆದ್ದರಿಂದ, ಎಂಎಸ್ ಧೋನಿ ಪಂದ್ಯಗಳಿಗೆ ಮೊದಲು ತಮ್ಮ ಸಹ ಆಟಗಾರರಿಗೆ ಶುಭ ಹಾರೈಸದಿರಲು ನಿರ್ಧರಿಸಿದ್ದರು. 
 

Latest Videos
Follow Us:
Download App:
  • android
  • ios