Ganesh Chaturthi 2022; ಗಣೇಶ ಕೂರಿಸಲು ಹತ್ತು ಹಲವು ನಿಬಂಧನೆ ಸಿದ್ಧಪಡಿಸಿದ ಪೊಲೀಸ್
ಗಣೇಶ ಕೂರಿಸಲು ಏನೆಲ್ಲಾ ರೂಲ್ಸ್ ಪಾಲೋ ಮಾಡಬೇಕು ಎಂದು ಪೊಲೀಸ್ ಇಲಾಖೆಯಿಂದ ಹತ್ತಾರು ನಿಬಂಧನೆಗಳು ಸಿದ್ದವಾಗಿದೆ. ಆಯೋಜಕರು ಪೊಲೀಸರ ಸೂಚನೆಗಳನ್ನ ಕಟ್ಟುನಿಟ್ಟಾಗಿ ಪಾಲಿಸಲೇಬೇಕು.
ಗಣೇಶ ಕೂರಿಸಲು ಏನೆಲ್ಲಾ ರೂಲ್ಸ್ ಪಾಲೋ ಮಾಡಬೇಕು ಎಂದು ಪೊಲೀಸ್ ಇಲಾಖೆಯಿಂದ ಹತ್ತಾರು ನಿಬಂಧನೆಗಳು ಸಿದ್ದವಾಗಿದೆ. ಆಯೋಜಕರು ಪೊಲೀಸರ ಸೂಚನೆಗಳನ್ನ ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಧ್ವನಿವರ್ಧಕಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಗಣೇಶ ಪ್ರತಿಷ್ಠಾಪನೆ ಹಾಗೂ ಇತರೆ ಕಾರ್ಯಕ್ರಮಗಳ ಆಯೋಜನೆಗಾಗಿ ಬಲವಂತವಾಗಿ ಹಾಗೂ ಕಾನೂನು ಬಾಹಿರವಾಗಿ ವಂತಿಗೆಯನ್ನು ಸಂಗ್ರಹಿಸುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂಭ್ರಮ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಾಗೃತೆ ವಹಿಸಬೇಕೆಂದು ಎಚ್ಚರಿಕೆ ನೀಡಲಾಗಿದೆ. ಧ್ವನಿವರ್ಧಕಗಳ ಬಳಕೆಗೆ ನೀಡಿರುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ವಿಸರ್ಜನೆ ಮೆರವಣಿಗೆ ರಾತ್ರಿ 10 ರ ಒಳಗೆ ಮುಗಿಯುವಂತೆ ಆಯೋಜಕರು ನೋಡಿಕೊಳ್ಳಬೇಕು. ಮೆರವಣಿಗೆ ಸಮಯದಲ್ಲಿ ವಿದ್ಯುತ್ ವೈರ್‌ಗಳು, ಮರದ ಕೊಂಬೆಗಳ ಬಗ್ಗೆ ಗಮನಹರಿಸಬೇಕು. ಮೆರವಣಿಗೆ ಅಗತ್ಯವಾದ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಹೀಗೆ ಹತ್ತು ಹಲವು ನಿಬಂಧನೆಗಳನ್ನ ಪೊಲೀಸರು ಸಿದ್ದಪಡಿಸಿದ್ದಾರೆ.
ಹಾಗಾದ್ರೆ ಆ ನಿಬಂಧನೆಗಳು ಯಾವುದು ನೀವೇ ನೋಡಿ.
- ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಟಾಪನೆಗೆ ಬಿಬಿಎಂಪಿಯ ಏಕಗವಾಕ್ಷಿಯಲ್ಲಿ ಅನುಮತಿ ಪಡೆಯಬೇಕು.
- ಸದೃಢವಾಗಿ ಶಾಮಿಯಾನ ನಿರ್ಮಿಸಬೇಕು, ಶಾಮಿಯಾನಗೆ ಪ್ಲೆಕ್ಸ್ ಬ್ಯಾನರ್ ಬಂಟಿಂಗ್ಸ್ ಅಳವಡಿಸಬಹುದು. ಅದ್ರೆ ಶಾಮಿಯಾನ ಹೊರತುಪಡಿಸಿ ಬೇರೆಡೆ ಪ್ಲೆಕ್ಸ್ ಬ್ಯಾನರ್ ಬಂಟಿಂಗ್ ಅಳವಡಿಕೆಗೆ ಪ್ರತ್ಯೇಕ ಅನುಮತಿ ಪಡೆಯಬೇಕು.
- ಯಾವುದೇ ಕಾರಣಕ್ಕೂ ವಿವಾದಿತ ಸ್ಥಳದಲ್ಲಿ ಗಣೇಶ ಪ್ರತಿಷ್ಟಾಪನೆ ಮಾಡುವಂತಿಲ್ಲ. ಹಾಗೂ ಸ್ಥಳ ಮಾಲೀಕರು ಮತ್ತು ಬಿಬಿಎಂಪಿ ಏಕಗವಾಕ್ಷಿ ಅನುಮತಿ ಪಡೆಯಬೇಕು.
- ಗಣೇಶ ಪ್ರತಿಷ್ಟಾಪನೆ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು 24 ಗಂಟೆ ಆಯೋಜಕ ಕಾರ್ಯಕರ್ತರು ಇರಬೇಕು. ಅವರ ವಿವರ ಪೊಲೀಸರಿಗೆ ಕೊಡಬೇಕು.
- ಗಣೇಶ ಪ್ರತಿಷ್ಟಾಪನೆ ಸ್ಥಳದಲ್ಲಿ ಪೊಲೀಸ್ ಹಾಗೂ ಬಿಬಿಎಂಪಿ ನಿಯಮದಂತೆ ಸಿಸಿಟಿವಿಗಳ ಅಳವಡಿಕೆ ಮಾಡಬೇಕು.
- ಗಣೇಶ ಪ್ರತಿಷ್ಟಾಪನೆ ಸ್ಥಳದಲ್ಲಿ ಬೆಂಕಿ ನಂದಿಸುವ ಉಪಕರಣಗಳು ಇರಬೇಕು. ಮರಳು ತುಂಬಿದ ಬಕೆಟ್, ನೀರಿನ ವ್ಯವಸ್ಥೆ ಇರಬೇಕು.
- ಗಣೇಶ ಪ್ರತಿಷ್ಟಾಪನೆ ಸ್ಥಳದಲ್ಲಿ ಅಡುಗೆ ಮಾಡುವ ಕಟ್ಟಿಗೆ, ಉರುವಲು, ಸೀಮೆಎಣ್ಣೆ ಇಡಬಾರದು.
- ಗಣೇಶ ಪ್ರತಿಷ್ಟಾಪನೆ ಸ್ಥಳದಲ್ಲಿ ಓರ್ವ ಎಲೆಕ್ಟ್ರಿಷಿನ್ ಇರಬೇಕು, ಸಮರ್ಪಕ ಬೆಳಕು, ವಿದ್ಯುತ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಶಾರ್ಟ್ ಸರ್ಕ್ಯೂಟ್, ಇತರ ಅವಘಡ ತಡೆಯಲು ಸನ್ನದ್ಧರಾಗಿರಬೇಕು.
- ಸಾರ್ವಜನಿಕರು ಬರಲು ಹೋಗಲು ಸಮರ್ಪಕ ಆಗಮನ ನಿರ್ಗಮನ ವ್ಯವಸ್ಥೆ ಇರಬೇಕು. ಬ್ಯಾರಿಕೇಡ್ ನಿರ್ಮಿಸಿ, ಸ್ವಯಂ ಸೇವಕರು ಇರಬೇಕು. ಜನ ಹೆಚ್ಚಾದರೆ ಖಾಸಗಿ ಭದ್ರತಾ ವ್ಯವಸ್ಥೆ ಮಾಡಿಕೊಳ್ಳುವುದು.
- ಗಣೇಶ ವಿಸರ್ಜನೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಆಯೋಜಕರು ಕ್ರಮ ವಹಿಸುವುದು.
- ಮನರಂಜನಾ ಕಾರ್ಯಕ್ರಮ, ಮೆರವಣಿಗೆ, ವಿಸರ್ಜನೆ ವೇಳೆ ಹೆಣ್ಣು ಮಕ್ಕಳಿಗೆ ಚುಡಾಯಿಸುವುದು ಕೀಟಲೆ ಮಾಡಿದಾಗ ಕೂಡಲೇ ಪೊಲೀಸರ ಸಂಪರ್ಕಿಸುವುದು.
Ganesh Chaturthi: ಗಣಪತಿ ಬಪ್ಪನ ದೊಡ್ಡ ಕಿವಿಯಲ್ಲಿದೆ ಜೀವನ ರಹಸ್ಯ
- ಸರ್ಕಾರ ಮತ್ತು ಹೈಕೋರ್ಟ್ ಆದೇಶದಂತೆ ಹಿರಿಯ ನಾಗರೀಕರು, ರೋಗಿಗಳಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿಯಮಿತವಾಗಿ ಬಳಸುವುದು.
- ಗಣೇಶ ಪ್ರತಿಷ್ಟಾಪನೆ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ತಮ್ಮ ವಿಳಾಸ ಮತ್ತು ಪೋನ್ ನಂಬರ್ ಸಂಬಂಧಪಟ್ಟ ಠಾಣಾಧಿಕಾರಿಗಳಿಗೆ ನೀಡುವುದು ಹಾಗೂ ಸ್ಥಳದಲ್ಲಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸುವುದು.
- ಯಾವುದೇ ರೀತಿಯ ಲೇಸರ್ ಪ್ರೊಜೆಕ್ಷನ್ ಮಾಡಬಾರದು. ಮೆರವಣಿಗೆ ಸೂಕ್ಷ್ಮ ಸ್ಥಳ, ಅತಿ ಸೂಕ್ಷ್ಮ ಸ್ಥಳದಲ್ಲಿ ಸಾಗುವಾಗ ಸಿಡಿಮದ್ದು ಪಟಾಕಿ ಸಿಡಿಸದಂತೆ ನೋಡಿಕೊಳ್ಳಬೇಕು.
ಹುಬ್ಬಳ್ಳಿ: ಗಣೇಶ ಹಬ್ಬಕ್ಕೆ ಡಿಜೆ ಹಾಕಂಗಿಲ್ಲಾ, ಬಾಡಿಗೆಗೆ ಕೊಡಂಗಿಲ್ಲ: ಖಾಕಿ ನೋಟಿಸ್
- ಗಣೇಶ ಪ್ರತಿಷ್ಟಾಪನೆ ಮತ್ತು ಕಾರ್ಯಕ್ರಮಕ್ಕೆ ಬಲವಂತವಾಗಿ ವಂತಿಗೆ ವಸೂಲಿ ಮಾಡಿದರೆ ಕಠಿಣ ಕ್ರಮ.
- ಆಯೋಜಕರು ಸ್ವಯಂ ಸೇವಕರಿಗೆ ಟೀ ಶರ್ಟ್ ಮತ್ತು ಗುರುತಿನ ಚೀಟಿ, ಕ್ಯಾಪ್ ಕೊಟ್ಟು ಅವರನ್ನ ಗುರುತಿಸಲು ಸಾಧ್ಯವಾಗಬೇಕು.