Asianet Suvarna News Asianet Suvarna News

Ganesh Chaturthi: ಗಣಪತಿ ಬಪ್ಪನ ದೊಡ್ಡ ಕಿವಿಯಲ್ಲಿದೆ ಜೀವನ ರಹಸ್ಯ

ಆಗಸ್ಟ್ 31ರಂದು ಈ ಬಾರಿ ಮನೆ ಮನೆಗೆ ಗಣಪತಿ ಬರ್ತಿದ್ದಾರೆ. ದೇಶದಾದ್ಯಂತ ವಿಜ್ರಂಭಣೆಯ ಗಣೇಶೋತ್ಸವಕ್ಕೆ ತಯಾರಿ ನಡೆದಿದೆ. ಗಣಪತಿ ಆರಾಧಿಸುವ ಭಕ್ತರಿಗೆ ಗಣೇಶನ ದೇಹದ ಅಂಗಗಳ ಬಗ್ಗೆ ತಿಳಿದಿದ್ದರೆ ಸುಖ ಬದುಕು ಸಾಧ್ಯ.
 

Meaning And Message Of Lord Ganesha Big Ear
Author
First Published Aug 26, 2022, 1:20 PM IST

ಮೋಷಿಕ ವಾಹನ ಗಣೇಶನ ಆರಾಧನೆಗೆ ಭಕ್ತರು ಸಿದ್ಧರಾಗಿದ್ದಾರೆ. ಆದಿಯಲ್ಲಿ ಮೊದಲು ಪೂಜಿಸ್ಪಡುವ ದೇವರು ಗಣಪತಿ. ಹಿಂದೂ ಧರ್ಮದಲ್ಲಿ ಗಣೇಶ ಚತುರ್ಥಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಪ್ರತಿ ವರ್ಷ ಭಾದ್ರಪದ ತಿಂಗಳ ಶುಕ್ಲ ಪಕ್ಷದ ಚತುರ್ಥಿ ದಿನ ಮನೆ ಮನೆಗೆ ಬರುವ ಗಣಪತಿ, ಚಕ್ಕಲಿ, ಮೋದಕ ತಿಂದು ಹೋಗ್ತಾನೆ. ಈ ಬಾರಿ ಗಣಪತಿ ಹಬ್ಬವನ್ನು ಆಗಸ್ಟ್ 31ನೇ ತಾರೀಕು ಆಚರಣೆ ಮಾಡಲಾಗ್ತಿದೆ. ಯಾವುದೇ ಒಂದು ಪೂಜೆಯಿರಲಿ ಮೊದಲು ಗಣೇಶನಿಗೆ ಪೂಜೆ ಮಾಡಿ, ವಿಘ್ನ ಬರದಂತೆ ಕಾಪಾಡು ಎಂದು ಭಕ್ತರು ಪ್ರಾರ್ಥನೆ ಮಾಡ್ತಾರೆ.  ಬುದ್ಧಿವಂತ ದೇವರು ಎಂದೇ ಹೆಸರು ಪಡೆದಿರುವ ಗಣೇಶ, ಸಂತೋಷ ಕರುಣಿಸುತ್ತಾನೆಂದು ಭಕ್ತರು ನಂಬಿದ್ದಾರೆ. ಸಾಮಾನ್ಯವಾಗಿ ಗಣೇಶನ ದೇಹ ಎಲ್ಲರ ಗಮನ ಸೆಳೆಯುತ್ತದೆ. ದೊಡ್ಡ ಕಿವಿ, ಆನೆ ಸೊಂಡಿಲು ಹಾಗೂ ದೊಡ್ಡ ಹೊಟ್ಟೆ. ಮಕ್ಕಳು ಗಣೇಶನನ್ನು ಡೊಳ್ಳು ಹೊಟ್ಟೆ ಗಣಪ ಎಂದೇ ಕರೆಯುತ್ತಾರೆ. ಗಣೇಶನ ದೇಹದ ಪ್ರತಿಯೊಂದು ಅಂಗ ವಿಶೇಷವಾಗಿರುವುದು ಮಾತ್ರವಲ್ಲ ಅನೇಕ ವಿಷ್ಯಗಳನ್ನು ನಮಗೆ ತಿಳಿಸುತ್ತದೆ. ಮನುಷ್ಯನಿಗೆ ಗಣೇಶನ ದೇಹ ಪಾಠ ಎನ್ನಬಹುದು. ಇಂದು ನಾವು ಗಣೇಶನ ದೊಡ್ಡ ಕಿವಿಯಿಂದ ನಾವು ಏನನ್ನು ತಿಳಿದುಕೊಳ್ಳಬಹುದು ಎಂಬುದನ್ನು ಹೇಳ್ತೇವೆ.

ದೊಡ್ಡ ಕಿವಿ (Big Ears) ಗಣಪ : ಜೀವನಕ್ಕೊಂದು ಸರಿ ದಾರಿ ತೋರಿಸುವಲ್ಲಿ ಗಣೇಶ (Ganesh)ನ ಕಿವಿ ನಮಗೆ ಸಹಕಾರಿ. ಗಣೇಶನ ಕಿವಿ ತುಂಬಾ ದೊಡ್ಡದಿದೆ. ಇದೇ ಕಾರಣಕ್ಕೆ ಭಕ್ತರು ಅವನನ್ನು ಗಜಕರ್ಣ (Gajakarna ) ಮತ್ತು ಶೂರ್ಪಕರ್ಣ ಎಂದು ಕರೆಯೋದನ್ನು ನೀವು ಕೇಳಿರಬಹುದು. ಶೂರ್ಪಕರ್ಣ ಅಂದ್ರೆ ಮೊರದಂತಹ ಕಿವಿ ಎಂದರ್ಥ. ವಿವೇಕ ಹಾಗೂ ಬುದ್ಧಿವಂತಿಕೆಗೆ ಹೆಸರಾಗಿರುವ ಗಣೇಶ, ಎಲ್ಲವನ್ನು ಕೇಳಿಸಿಕೊಳ್ತಾನೆ. ಆದ್ರೆ ನಿರ್ಧಾರವನ್ನು ಮಾತ್ರ ತನ್ನ ವಿವೇಕ ಹಾಗೂ ಬುದ್ಧಿವಂತಿಕೆಯಿಂದಲೇ ತೆಗೆದುಕೊಳ್ತಾನೆ. ಇದನ್ನೇ ಗಣೇಶನಿಂದ ನಾವು ಕಲಿಯಬೇಕಾಗಿದ್ದು. ನಾವು ಕೂಡ ಎಲ್ಲರ ಮಾತನ್ನು ಕೇಳ್ಬೇಕು. ಆದ್ರೆ ನಮ್ಮ ಬುದ್ಧಿವಂತಿಕೆಯಿಂದ ಹಾಗೂ ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ನೆನಪಿರಲಿ, ಯಾವತ್ತೂ ಬೇರೆಯವರ ಬುದ್ಧಿವಂತಿಕೆ ನಿಮಗೆ ತಾತ್ಕಾಲಿಕ ಯಶಸ್ಸು ತಂದು ಕೊಡುತ್ತದೆ. ನಿಮ್ಮ ಬುದ್ಧಿವಂತಿಕೆಯಿಂದ ಮಾಡಿದ ಕೆಲಸ ಮಾತ್ರ ಶಾಶ್ವತ. ಬೇರೆಯವರ ಬುದ್ಧಿ ಉಪಯೋಗಿಸಿ ನೀವು ಕೆಲಸ ಮಾಡಿದ್ರೆ ಯಶಸ್ಸು ನಿಮ್ಮದಾಗುವುದಿಲ್ಲ ಎಂಬುದನ್ನು ಗಣೇಶನ ದೊಡ್ಡ ಕಿವಿಯಿಂದ ನಾವು ತಿಳಿಯಬಹುದು. 
ಗಣಪತಿಯ ದೊಡ್ಡ ಕಿವಿಗಳನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಗಣೇಶ ತನ್ನ ದೊಡ್ಡ ಕಿವಿಯಿಂದಲೇ ಭಕ್ತರ ಎಲ್ಲ  ಪ್ರಾರ್ಥನೆಗಳನ್ನು ಆಲಿಸುತ್ತಾನೆ. ನಂತರ ತನಗೆ ಸೂಕ್ತ ಎನ್ನಿಸಿದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಗಣೇಶನಂತೆ ದೊಡ್ಡ ಕಿವಿ ಹೊಂದಿರುವ ವ್ಯಕ್ತಿಗಳನ್ನು ಇದೇ ಕಾರಣಕ್ಕೆ ವಿದ್ವಾಂಸ ಮತ್ತು ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. 

ಗಣೇಶ ಚತುರ್ಥಿ 2022: ಬಪ್ಪನ ನೆಚ್ಚಿನ ರಾಶಿಚಕ್ರಗಳಿವು.. ಅವನ ಆಶೀರ್ವಾದ ಇವರ ಮೇಲೆ ನಿರಂತರ..

ಅರ್ಧ ಮಾತು ಕೇಳ್ಬೇಡಿ : ಗಣೇಶನ ದೊಡ್ಡ ಕಿವಿಯು ಇನ್ನೊಂದು ಸಂದೇಶವನ್ನು ಕೂಡ ನೀಡುತ್ತದೆ. ಎಂದಿಗೂ ಅರ್ಧ ಮಾತು ಕೇಳ್ಬೇಡಿ ಎಂಬುದನ್ನು. ಯಾವುದೇ ವಿಷ್ಯವಿರಲಿ ಮೊದಲು ಆಳಕ್ಕೆ ಇಳಿದು, ಸಂಪೂರ್ಣ ತಿಳಿದುಕೊಳ್ಳಿ. ಅರ್ಧ ಮಾತು ಕೇಳಿದ್ರೆ ತಪ್ಪು ತಿಳಿವಳಿಕೆ  ಉಂಟಾಗುತ್ತದೆ. ಎಂದಿಗೂ ಸರಿಯಾಗಿ ತಿಳಿಯದೆ ಅರ್ಧಂಬರ್ಧ ತಿಳಿದು ಮಾತನಾಡಬಾರದು ಎಂದು ಗಣೇಶ ತನ್ನ ದೊಡ್ಡ ಕಿವಿ ಮೂಲಕ ಭಕ್ತರಿಗೆ ಸಂದೇಶ ಸಾರುತ್ತಾನೆ. 

ಆದಾಯಕ್ಕಿಂತ ಖರ್ಚು ಹೆಚ್ಚಾ? ಈ ವಾಸ್ತು ನಿಯಮ ಪಾಲಿಸಿದ್ರೆ ಹಣ ಉಳಿತಾಯ ಸಾಧ್ಯ!

ಕೆಟ್ಟ ವಿಷ್ಯವನ್ನು ದೂರವಿಡಿ : ಗಣಪತಿಯ ದೊಡ್ಡ ಕಿವಿ ಇದನ್ನೂ ಭಕ್ತರಿಗೆ ಹೇಳುತ್ತದೆ. ಕೆಟ್ಟ ವಿಷ್ಯಗಳನ್ನು ಹೊರಗೆ ಹಾಕಿ ಹಾಗೂ ಒಳ್ಳೆಯ ವಿಷ್ಯವನ್ನು ಮಾತ್ರ ತೆಗೆದುಕೊಳ್ಳಿ ಎಂಬುದನ್ನು. ಕೆಟ್ಟ ವಿಷ್ಯಗಳು ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಸುಖ, ಸಂತೋಷವನ್ನು ಹಾಳು ಮಾಡುತ್ತವೆ. ಹಾಗಾಗಿ ಸದಾ ಒಳ್ಳೆಯ ವಿಷ್ಯವನ್ನು ಮಾತ್ರ ಕೇಳಿ ಎಂಬುದು ಗಣೇಶನ ದೊಡ್ಡ ಕಿವಿಯ ಅರ್ಥವಾಗಿದೆ. 

Follow Us:
Download App:
  • android
  • ios